ತೀರ್ಪು ಸ್ವಾಗತಿಸುತ್ತೇವೆ; ಸಂಜೆಯೊಳಗೆ ಮುಂದಿನ ನಡೆ ಕುರಿತು ನಿರ್ಧಾರ; ಅನರ್ಹ ಶಾಸಕರು

ಸುಪ್ರೀಂಕೋರ್ಟ್​ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ ಅನರ್ಹ ಶಾಸಕರು ತೀರ್ಪನ್ನು ಸ್ವಾಗತಿಸಿದ್ದು, ತಮ್ಮ ಮುಂದಿನ ನಡೆ ಕುರಿತು ಸಂಜೆಯೊಳಗೆ ಚರ್ಚೆ ನಡೆಸಿ ನಿರ್ಧಾರ ಕೈಕೊಳ್ಳುತ್ತೇವೆ ಎಂದಿದ್ದಾರೆ. 

Disqualified MLAs

Disqualified MLAs

  • Share this:
ನವದೆಹಲಿ (ನ.13): ತಮ್ಮ ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋದ 17 ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದ್ದು, ಅವರು ಚುನಾವಣೆಗೆ ಸ್ಪರ್ಧಿಸುವ ಅವಕಾಶ ಹೊಂದಿದ್ದಾರೆ ಎನ್ನುವ ಮೂಲಕ ಅನರ್ಹಶಾಸಕರಿಗೆ ಸರ್ವೋಚ್ಛ ನ್ಯಾಯಾಲ ದೊಡ್ಡ ರಿಲೀಫ್​ ನೀಡಿದೆ. 

ಸುಪ್ರೀಂಕೋರ್ಟ್​ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ ಅನರ್ಹ ಶಾಸಕರು ತೀರ್ಪನ್ನು ಸ್ವಾಗತಿಸಿದ್ದು, ತಮ್ಮ ಮುಂದಿನ ನಡೆ ಕುರಿತು ಸಂಜೆಯೊಳಗೆ ಚರ್ಚೆ ನಡೆಸಿ ನಿರ್ಧಾರ ಕೈಕೊಳ್ಳುತ್ತೇವೆ ಎಂದಿದ್ದಾರೆ.

ಈ ಕುರಿತು ನ್ಯೂಸ್​ 18ನೊಂದಿಗೆ ಪ್ರತಿಕ್ರಿಯಿಸಿದ ಎಚ್​ ವಿಶ್ವನಾಥ್​. ತೀರ್ಪನ್ನು ಸ್ವಾಗತಿಸುತ್ತೇವೆ. ರಾಜೀನಾಮೆ ನೀಡಿದ ಬಳಿಕ ಸ್ಪೀಕರ್​ ನಮ್ಮನ್ನು ಅನರ್ಹಗೊಳಿಸಿದ್ದರು. ಈ ಕ್ರಮ ಪ್ರಶ್ನಿಸಿ ನಾವು ಕೋರ್ಟ್​ ಮೆಟ್ಟಿಲೇರಿದ್ಧೆವು. ಈಗ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಈ ಹಿನ್ನೆಲೆ ಈ ಕುರಿತು ಸ್ನೇಹಿತರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.

ಇನ್ನು ತೀರ್ಪು ಸ್ವಾಗತಿಸಿ ಮಾತನಾಡಿದ ಮಸ್ಕಿ ಅನರ್ಹ ಶಾಸಕ ಪ್ರತಾಪ್​ ಗೌಡ, ಬಿಜೆಪಿ ಸೇರುವ ಕುರಿತು ಎಲ್ಲಾ 17 ಜನ ಸ್ನೇಹಿತರು ಇಂದು ಕುಳಿತು ನಿರ್ಣಯ ಕೈಗೊಳ್ಳುತ್ತೇವೆ ಎಂದರು.

ರಾಣೆಬೆನ್ನೂರು ಅನರ್ಹ ಶಾಸಕ ಶಂಕರ್​ ಮಾತನಾಡಿ, ನಮ್ಮ ಅನರ್ಹತೆ ರದ್ದಾಗಬೇಕಿತ್ತು. ಬಿಜೆಪಿ ಸೇರುವ ಕುರಿತು ಎಲ್ಲಾರು ಒಟ್ಟಿಗೆ ಕುಳಿತು ನಿರ್ಧರಿಸುತ್ತೇವೆ ಎಂದರು.

ಹಿರೇಕೆರೂರು ಶಾಸಕ ಬಿಸಿ ಪಾಟೀಲ್​ ಮಾತನಾಡಿ, ಸುಪ್ರೀಂ ಆದೇಶವನ್ನು ಗೌರವದಿಂದ ಸ್ವಾಗತಿಸುತ್ತೇವೆ. ನಮ್ಮ ಮುಂದಿನ ನಡೆ ಏನು ಎಂಬ ಬಗ್ಗೆ 17 ಜನರು ಕುಳಿತು ಚರ್ಚೆ ನಡೆಸುತ್ತೇವೆ. 17 ಜನಕ್ಕೂ ಸ್ಪರ್ಧಿಸಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ . ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಇದನ್ನು ಓದಿ: ಅನರ್ಹರಿಗೆ ಟಿಕೆಟ್​ ನೀಡುವ ಕುರಿತು ಬಿಜೆಪಿ ಕೋರ್​​ ಕಮಿಟಿ ಸಭೆಯಲ್ಲಿ ಚರ್ಚೆ; ನಳಿನ್​ ಕುಮಾರ್​ ಕಟೀಲ್​

 

ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಶಿವಾಜಿನಗರ ಅನರ್ಹ ಶಾಸಕ ರೋಷನ್​ ಬೇಗ್​, ತೀರ್ಪಿನ ಕುರಿತು ಹರ್ಷ ವ್ಯಕ್ತಪಡಿಸಿದರು. ಇನ್ನು ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕು. ನಾನಾ, ನನ್ನ ಮಗನ ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು

ಯಲ್ಲಾಪುರ ಅನರ್ಹಶಾಸಕ ಶಿವರಾಮ್​ ಹೆಬ್ಬಾರ್​ ಮಾತನಾಡಿ, ಸುಪ್ರೀಂ ಆದೇಶವನ್ನು ನಾವು ಪಾಲಿಸುತ್ತೇವೆ  ಇಂದು ಸಂಜೆಯೊಳಗೆ ನಮ್ಮ ಮುಂದಿನ ರಾಜಕೀಯ ನಿರ್ಧಾರ ಕುರಿತು ತೀರ್ಮಾನ ಮಾಡುತ್ತೇವೆ ಎಂದರು.

 
First published: