• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Araga Jnanendra: ಡಿಜಿಪಿ ಪ್ರವೀಣ್​ ಸೂದ್​​ ವಿರುದ್ಧ ಡಿಕೆಶಿ ಕೆಂಡ; ಕೆಪಿಸಿಸಿ ಅಧ್ಯಕ್ಷರಿಗೆ ಗೃಹ ಸಚಿವ ಆರಗ ತಿರುಗೇಟು

Araga Jnanendra: ಡಿಜಿಪಿ ಪ್ರವೀಣ್​ ಸೂದ್​​ ವಿರುದ್ಧ ಡಿಕೆಶಿ ಕೆಂಡ; ಕೆಪಿಸಿಸಿ ಅಧ್ಯಕ್ಷರಿಗೆ ಗೃಹ ಸಚಿವ ಆರಗ ತಿರುಗೇಟು

ಸಚಿವ ಆರಗ ಜ್ಞಾನೇಂದ್ರ/ ಡಿಕೆ ಶಿವಕುಮಾರ್​

ಸಚಿವ ಆರಗ ಜ್ಞಾನೇಂದ್ರ/ ಡಿಕೆ ಶಿವಕುಮಾರ್​

ಟಿಪ್ಪು ಸುಲ್ತಾನ್ ಸಾವಿಗೆ ಕಾರಣರಾದ ಎನ್ನಲಾದ ಉರಿಗೌಡ ಹಾಗೂ ನಂಜೇಗೌಡರನ್ನು ಬೆಂಬಲಿಸಿ ಹಾಕಿದ ಫ್ಲೆಕ್ಸ್ ಅನ್ನು, ಉಲ್ಲೇಖಿಸಿ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರನ್ನು ನಿಂದಿಸಿರುವುದು ಖಂಡನೀಯ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹತ್ತಿರವಾಗುತ್ತಿದ್ದಂತೆ ಉರಿಗೌಡ, ನಂಜೇಗೌಡ (Uri Gowda, Nanje Gowda) ಕುರಿತಂತೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಈ ಹೆಸರುಗಳು ಸಖತ್ ಸದ್ದು ಮಾಡುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi ) ಅವರು ಮಂಡ್ಯ (Mandya) ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ (BJP) ಅಳವಡಿಸಿದ್ದ ಉರಿಗೌಡ, ನಂಜೇಗೌಡ ಮಹಾದ್ವಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಏಕಾಏಕಿ ಉರಿಗೌಡ, ನಂಜೇಗೌಡ ಫ್ಲೆಕ್ಸ್ ಮಾಡಲಾಗಿತ್ತು. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ರಾಜ್ಯ ಕಾಂಗ್ರೆಸ್ (Congress)​ ನಾಯಕರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಈ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪ್ರಧಾನಿ ಮೋದಿಗೆ ಮಂಡ್ಯ ಜನ ನೀಡಿದ್ದ ಸ್ವಾಗತ ಕಾಂಗ್ರೆಸ್​ ನಾಯಕರ ನಿದ್ದೆಗೆಡಿಸಿದೆ


ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಜಿಲ್ಲೆಗೆ ಭೇಟಿ ನೀಡಿ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಸಂದರ್ಭದಲ್ಲಿ ಅಲ್ಲಿನ ಜನತೆ ನೀಡಿದ ಅಭೂತಪೂರ್ವ ಸ್ವಾಗತ, ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.




ಈ ಕಾರಣದಿಂದಲೇ ಹತಾಶರದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಟಿಪ್ಪು ಸುಲ್ತಾನ್ ಸಾವಿಗೆ ಕಾರಣರಾದ ಎನ್ನಲಾದ ಉರಿಗೌಡ ಹಾಗೂ ನಂಜೇಗೌಡರನ್ನು ಬೆಂಬಲಿಸಿ ಹಾಕಿದ ಫ್ಲೆಕ್ಸ್ ಅನ್ನು, ಉಲ್ಲೇಖಿಸಿ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರನ್ನು ನಿಂದಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.


ಇದನ್ನೂ ಓದಿ: V Somanna: ವಿಜಯೇಂದ್ರ ಯಾರ್​ ರೀ? ನನಗೆ 72, ಅವರಿಗೆ 42 ವರ್ಷ; ಬೆಂಕಿಯುಗುಳಿದ ಸೋಮಣ್ಣ


ರಾಜ್ಯ ಪೊಲೀಸ್ ಮುಖ್ಯಸ್ಥರ ಮೇಲೆ ವಿನಾ ಕಾರಣ, ಆಪಾದನೆ ಮಾಡಿ ಪೊಲೀಸರ ನೈತಿಕ ಸ್ಥೈರ್ಯ ಕುಂದಿಸುವ ಪ್ರಯತ್ನವನ್ನು ಕೆಪಿಸಿಸಿ ಅಧ್ಯಕ್ಷರು ಮಾಡಿದ್ದಾರೆ. ಅಧಿಕಾರಕ್ಕೆ ಬರುವ ಯಾವುದೇ ಗ್ಯಾರಂಟಿ ಇರದ, ಕಾಂಗ್ರೆಸ್ ನಾಯಕರು ಟಿಪ್ಪುವಿನ ಬಗ್ಗೆ ಕಾಳಜಿ ತೋರಿಸಿ, ಉರಿಗೌಡರ ಬಗ್ಗೆ ದ್ವೇಷ ಸಾರುವ, ಅವರ ಪಕ್ಷದ ನೀತಿಗೆ, ಅನುಗುಣವಾಗಿಯೇ ಇದೆ. ಕೀಳು ಮಟ್ಟದ ರಾಜಕೀಯ ಎಂದು ಆಕ್ರೋಶ ಹೊರ ಹಾಕಿದ್ದಾರೆ.




ಡಿಜಿಪಿ ಪ್ರವೀಣ್​ ಸೂದ್​ ವಿರುದ್ಧ ಡಿಕೆ ಶಿವಕುಮಾರ್ ಕೆಂಡಾಮಂಡಲ


ಡಿಜಿಪಿ ಪ್ರವೀಣ್​ ಸೂದ್​ ಒಬ್ಬ ನಾಲಾಯಕ್​​​, ಆಡಳಿತ ರೂಢ ಬಿಜೆಪಿಯನ್ನು ರಕ್ಷಿಸುವ ಕೆಲಸ ಮಾಡಿ, ನಮ್ಮ ಪಕ್ಷದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ತಕ್ಷಣವೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು. ಚುನಾವಣಾ ಆಯೋಗ ಅವರನ್ನು ಹುದ್ದೆಯಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದರು.


ನಮ್ಮ ಪಕ್ಷದ ನಾಯಕರ ವಿರುದ್ಧ 25 ಪ್ರಕರಣ ದಾಖಲಿಸಿದ್ದಾರೆ. ನಾವು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಅವರ ಮೂರು ವರ್ಷಗಳ ಸೇವಾವಧಿ ಕೊನೆಗೊಂಡಿದೆ. ಆದರೂ ಎಷ್ಟು ದನ ಹುದ್ದೆಯಲ್ಲಿ ಇಟ್ಟಿಕೊಂಡು ಪೂಜಿಸಬೇಕೆಂದಿದ್ದೀರಿ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದರು.



ಇದನ್ನೂ ಓದಿ: Kusuma Shivalli: ದಿಢೀರ್ ಸಿಎಂ ಭೇಟಿಗೆ ಮುಂದಾದ ‘ಕೈ’ ಶಾಸಕಿ; 3ನೇ ಬಾರಿಗೆ ಕುಂದಗೋಳದಲ್ಲಿ ಪ್ರಜಾಧ್ವನಿ ಯಾತ್ರೆ ರದ್ದು


‘ರಾಮನಗರದಿಂದ ಸ್ಪರ್ಧಿಸಲ್ಲ’


ನನಗೆ ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ಅದರಲ್ಲೂ ಉಪಚುನಾವಣೆ ಬಗ್ಗೆ ನಾನು ಬೇಸತ್ತು ಹೋಗಿದ್ದೇನೆ ಎಂದು ಸಂಸದ ಡಿಕೆ ಸುರೇಶ್ (DK Suresh) ಹೇಳಿದ್ದಾರೆ. ರಾಮನಗರದಿಂದ (Ramanagara) ಡಿಕೆ ಸುರೇಶ್ ಸ್ಪರ್ಧಿಸ್ತಾರೆ ಎಂಬ ಸುದ್ದಿ ಹಬ್ಬಿತ್ತು.


ಅದರ ಬಗ್ಗೆ ಮಾತಾಡಿದ ಡಿಕೆ ಸುರೇಶ್, ಜನರ ದುಡ್ಡು ಪೋಲು ಮಾಡಲು ನನಗೆ ಇಷ್ಟ ಇಲ್ಲ. ರಾಮನಗರ ಸೇರಿದಂತೆ 10 ಕ್ಷೇತ್ರಗಳಲ್ಲಿ ನಿಲ್ಲುವಂತೆ ನನಗೆ ಒತ್ತಾಯ ಇದೆ. ಸದ್ಯ ನನಗೆ ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಜನ ಈಗಾಗಲೇ ನನ್ನನ್ನು ಸಂಸದರಾಗಿ ಮಾಡಿದ್ದಾರೆ.. ಸದ್ಯ ನನಗೆ ಇದೇ ಸ್ಥಾನಮಾನ ಸಾಕು ಎಂದಿದ್ದಾರೆ.

Published by:Sumanth SN
First published: