DCM Laxman Savadi: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಿರಿಯ ಮಗ ಚಿದಾನಂದ ಸವದಿ ಸೇರಿ 12 ಜನ ನಿನ್ನೆ 2 ಕಾರಿನಲ್ಲಿ ಪ್ರವಾಸಕ್ಕೆ ತೆರಳಿ ಮರಳುತ್ತಿದ್ದರು. ವಿಜಯಪುರ ಮಾರ್ಗವಾಗಿ ತೆರಳುತ್ತಿದ್ದ ಚಿದಾನಂದ ಸವದಿಯ ಕಾರು ಹೊಲದಿಂದ ಬೈಕಿನಲ್ಲಿ ವಾಪಸಾಗುತ್ತಿದ್ದ ರೈತ ಕೂಡಲೆಪ್ಪನ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾನೆ. ಈ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಹಾಗು ಅವನ ಸ್ನೇಹಿತರು ಸೇರಿಕೊಂಡು ಅಂಜನಾದ್ರಿ ಬೆಟ್ಟಕ್ಕೆ ಹೋಗಿದ್ರು. ಹೋಗಿ ಬರುವಾಗ ಅಪಘಾತ ನಡೆದಿದೆ. ನನ್ನ ಬಗ ಚಿದಾನಂದ ಡ್ರೈವ್ ಮಾಡಲ್ಲ, ಹನುಮಂತ ಎಂಬ ಡ್ರೈವರ್ ಇದ್ರು. ಆತನೇ ಕಾರ್ ಚಲಾಯಿಸಿದ್ದ. ಅಪಘಾತ ಮಾಡಿರುವ ಗಾಡಿಯಲ್ಲಿ ನನ್ನ ಮಗ ಚಿದಾನಂದ ಇರಲಿಲ್ಲ. ಎಂದಿದ್ದಾರೆ.
ಚಿದಾನಂದ ಫಾರ್ಚುನರ್ ಗಾಡಿಯಲ್ಲಿ ಪ್ರಯಾಣ ಮಾಡ್ತಿದ್ದ, ಅವರ ಗಾಡಿ ಮುಂದಿತ್ತು. ಸ್ನೇಹಿತರಿರುವ ಗಾಡಿ ಅಪಘಾತಕ್ಕಿಡಾಗಿದೆ. ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ನಾನು ಆ ಕುಟುಂಬದವರಿಗೆ ಪರಿಹಾರ ಕೊಡ್ತೇನೆ. ಅದು ನಮ್ಮ ಧರ್ಮ.. ಖುದ್ದು ನಾನೇ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳ್ತೇನೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಚಿದು ಫಾರ್ಚುನರ್ ಗಾಡಿಯಲ್ಲಿದ್ದ, ನಮ್ಮ ಮಗ ಹಲವು ದಿನಗಳಿಂದ ಅವರು ಸ್ನೇಹಿತರ ಜೊತೆಗೂಡಿ ಪರಿಹಾರದ ಕಿಟ್ ಹಂಚಿಕೆ ಮಾಡಿದ್ರು. ಹೀಗಾಗಿ ಕೊಪ್ಪಳ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಾಪಸ್ ಬರ್ತಿದ್ರು. ಚಿದಾನಂದ ಮುಂದಿನ ಗಾಡಿಯಲ್ಲಿದ್ದ, ಆದರೆ ಅವನ ಸ್ನೇಹಿತರು ಗಾಡಿ ಆಕ್ಸಿಡೆಂಟ್ ಆಗಿದೆ ಎಂದು ಡಿಸಿಎಂ ಹೇಳಿದ್ದಾರೆ. ಅಪಘಾತವಾದ ಗಾಡಿಯ ನಂಬರ್ ಪ್ಲೇಟ್ ಬದಲಾಯಿಸಲಾಗಿದೆ ಎನ್ನುವ ಸುದ್ದಿಗಳೂ ಸಾಕಷ್ಟು ಹರಿದಾಡುತ್ತಿವೆ. ಇದಕ್ಕೂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: HDK-BSY: ಮಾಜಿ ಸಿಎಂ ಕುಮಾರಸ್ವಾಮಿ- ಸಿಎಂ ಯಡಿಯೂರಪ್ಪ ಭೇಟಿ ಅಸಲಿಯತ್ತು ಇದೇನಾ?
ನಂಬರ್ ಪ್ಲೇಟ್ ಹಾಳು ಮಾಡೋ ಅವಶ್ಯಕತೆ ಏನಿದೆ..? ಸಾವನ್ನಪ್ಪಿದ ವ್ಯಕ್ತಿಯ ಮನೆಯವರ ಜೊತೆಗೆ ನಾನಿದ್ದೇನೆ. ಈ ವಿಚಾರಗಳನ್ನು ಫೋನ್ ನಲ್ಲಿ ಮಾತನಾಡೋದು ಸರಿಯಲ್ಲ. ಹಾಗಾಗಿ ಖುದ್ದಾಗಿ ನಾನೇ ನಾಳೆ ಅವರ ಕುಟುಂಬಸ್ಥರ ಭೇಟಿ ಮಾಡ್ತೇನೆ. ಆಕ್ಸಿಡೆಂಟ್ ಆಗ್ತಿದ್ದಂತೆ ಗೆಳೆಯರು ಫೋನ್ ಮಾಡಿದ್ದಾರೆ. ಆಗ ಮುಂದಿನ ವಾಹನದಲ್ಲಿದ್ದ ಚಿದಾನಂದ ವಾಪಸ್ಸು ಹೋಗಿದ್ದಾನೆ. ಅವನೇ ಅಂಬ್ಯುಲೆನ್ಸ್ ಗೆ ಫೋನ್ ಮಾಡಿ ಆಸ್ಪತ್ರೆ ಸೇರಿಸಿ ಮನೆಗೆ ಹೋಗಿದಾನೆ. ರಾತ್ರಿ ಸಾವಾಗಿದೆ ಅಂತ ನನಗೆ ಮಾಹಿತಿ ಬಂತು. ಸದ್ಯ ಪೊಲೀಸರಿಂದ ತನಿಖೆ ನಡೆಯುತ್ತದೆ. ಮಂತ್ರಿ ಮಗ ಅಂದಾಗ ಇಂತಹ ಊಹಾಪೋಹಗಳೆಲ್ಲ ಸಹಜ. ಈ ವಿಚಾರದಲ್ಲಿ ಸುಳ್ಳು ಯಾಕೆ ಹೇಳಬೇಕು, ನನ್ನ ಮಗ ಡ್ರೈವಿಂಗ್ ಮಾಡಿಲ್ಲ. ಹನುಮಂತ ಅಂತ ಖಾಯಂ ಡ್ರೈವರ್ ಇದಾನೆ, ನಿನ್ನೆ ಅವನೇ ಡ್ರೈವ್ ಮಾಡ್ತಾ ಇದ್ದಿದ್ದು. ಚಿದಾನಂದ ಆ ಗಾಡಿಯಲ್ಲಿ ಇರಲೇ ಇಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಅಪಘಾತದಲ್ಲಿ ತನ್ನ ಮಗನ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ