Kitturu Utsava: ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ

ಕಾರ್ಯಕ್ರಮದಲ್ಲಿ ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಇದಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

Seema.R | news18-kannada
Updated:October 24, 2019, 9:00 AM IST
Kitturu Utsava: ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ
ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ ಡಿಸಿಎಂ ಲಕ್ಷಣ ಸವದಿ
  • Share this:
ಬೆಳಗಾವಿ (ಅ.23): ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಕಿತ್ತೂರು ಉತ್ಸವಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅದ್ಧೂರಿ ಚಾಲನೆ ನೀಡಿದರು. 

ನಗರದ ಐತಿಹಾಸಿಕ ಕಿತ್ತೂರು ಕೋಟೆಯ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಇನ್ನು ಉತ್ಸವ ಸಂದರ್ಭದಲ್ಲಿ ಜಿಲ್ಲೆ ಪ್ರವಾಹಕ್ಕೆ ನುಲುಗಿದ್ದು, ಈ ವೇಳೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವುದು ಸರ್ಕಾರ ಜವಬ್ದಾರಿ ಎಂಬ ಆಶಯದೊಂದಿಗೆ ಪುಟ್ಟ ಮನೆಯ ಪ್ರತಿಕೃತಿ ನಿರ್ಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಇದಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ರಾಣಿ ಚೆನ್ನಮ್ಮ ಕೇವಲ ರಾಜ್ಯಕ್ಕೆ, ಒಂದು ಸಮುದಾಯಕ್ಕೆ ಸೀಮಿತ ಆಗಬಾರದು. ದೇಶಕ್ಕೆ ಮಾದರಿಯಾದ ಸ್ವತಂತ್ರ ಹೋರಾಟಗಾರ್ತಿ ಆಗಬೇಕು. ಸರ್ಕಾರದ ಇನ್ನೂ ಅನೇಕ ಯೋಜನೆಗಳಿಗೆ ರಾಣಿ ಚೆನ್ನಮ್ಮನ ಹೆಸರು ಇಡಬೇಕು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಎರಡು ನೂರು ಕೋಟಿ ರೂಪಾಯಿ ಅನುದಾನ ಬೇಕಾಗಿದೆ. ಈ ಕುರಿತು ಮನವಿ ಮಾಡಲು ಸಚಿವರು, ಶಾಸಕರ ನಿಯೋಗದೊಂದಿಗೆ ಸಿಎಮ್ ಭೇಟಿಯಾಗುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

kitturu
ಸಾಮೂಹಿಕ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದ ಕಲಾತಂಡ


ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲಾಗಿದೆ. ಆದರೆ ಪ್ರಾಧಿಕಾರಕ್ಕೆ ನೀಡುವ ಅನುದಾನ ಕಬಳಿಸುವ ಕೆಲಸ ನಡೆಯುತ್ತಿದೆ. ಪ್ರಾಧಿಕಾರಗಳಿಗೆ ಉದ್ಯಮದ ಸ್ವರೂಪ ಕೊಡಬೇಕು. ಪ್ರತಿ ಸಂದರ್ಭದಲ್ಲಿಯೂ ಸರ್ಕಾರವೇ ಆರ್ಥಿಕ ನೆರವು ಕೊಡಲು ಆಗಲ್ಲ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಸಿ.ಟಿ. ರವಿ, ಶಶಿಕಲಾ ಜೊಲ್ಲೆ ಹಾಗೂ ಅನಂತಕುಮಾರ್ ಹೆಗಡೆ, ಅಣ್ಣಾಸಾಹೇಬ್ ಜೊಲ್ಲೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಇನ್ನು ಸಮಾರಂಭದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ರಾಣಿ ಚೆನ್ನಮ್ಮನ ವಿಜಯೋತ್ಸವಕ್ಕೆ ಐತಿಹಾಸಿಕ ಮಹತ್ವವಿದೆ. ಹೀಗಾಗಿ ನೆರೆಯಿದ್ದರೂ ಕಿತ್ತೂರು ಉತ್ಸವ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಸ್ವಾಭಿಮಾನ, ತ್ಯಾಗ ನಮಗೆ ಸ್ಪೂರ್ತಿ ತುಂಬುತ್ತದೆ.  ಕಿತ್ತೂರು ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು. ಹೊಸ ಕೈಗಾರಿಕಾ ನೀತಿಯಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಮುಂಬಯಿ ಕರ್ನಾಟಕವನ್ನು ಇನ್ನುಮುಂದೆ ಕಿತ್ತೂರು ಕರ್ನಾಟಕ ಎಂದು ಕರೆಯೋಣ ಎಂದರು.

(ವರದಿ : ಪರಶುರಾಮ್​ ತಹಶೀಲ್ದಾರ್​) 


.
First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ