• Home
  • »
  • News
  • »
  • state
  • »
  • Karnataka Dams Water Level: ಲಿಂಗನಮಕ್ಕಿ, ಆಲಮಟ್ಟಿ ಸೇರಿ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

Karnataka Dams Water Level: ಲಿಂಗನಮಕ್ಕಿ, ಆಲಮಟ್ಟಿ ಸೇರಿ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

  • Share this:

    ಕಳೆದ ಎರಡು ದಿನಗಳಿಂದ ರಾಜ್ಯದ ಬಹುತೇಕ ಎಲ್ಲೆಡೆ ಮಳೆ ನಿಂತಿದೆ. ಈ ಪರಿಣಾಮ ಈ ಹಿಂದೆ ರಾಜ್ಯದ ಹಲವು ಪ್ರಮುಖ ಜಲಾಶಯಗಳಲ್ಲಿ (Karnataka Dams Water Level) ಕಂಡುಬರುತ್ತಿದ್ದ ನೀರಿನ ಒಳ ಹಾಗೂ ಹೊರ ಹರಿವಿನ ಪ್ರಮಾಣ ಈಗ ಗಮನಾರ್ಹವಾಗಿ ತಗ್ಗಿದೆ ಎಂದೇ ಹೇಳಬಹುದು. ಅಷ್ಟಕ್ಕೂ ಈ ಬಾರಿ ವಾಡಿಕೆಗಿಂತ ತುಸು ಹೆಚ್ಚಾಗಿಯೇ ಮಳೆಯಾಗಿದ್ದು (Karnatak Rains) ರಾಜ್ಯದ ಹಲವು ಪ್ರಮುಖ ಜಲಾಶಯಗಳೆಲ್ಲವೂ ಸಾಕಷ್ಟು ಭರ್ತಿಯಾಗಿವೆ. ಈ ಹಿಂದೆ ಹರಿದು ಬರುತ್ತಿದ್ದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣಕ್ಕೆ ಹೋಲಿಸಿದರೆ ಪ್ರಸ್ತುತ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದ್ದು ಅದರಂತೆ ಹೊರಹರಿವಿನ ಪ್ರಮಾಣದಲ್ಲೂ ನಿಧಾನವಾಗಿ ಇಳಿಕೆ ಇರುವುದನ್ನು ಗಮನಿಸಬಹುದು.


    ಸದ್ಯ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ. ಇನ್ನೊಂದು ವಿಶೇಷವೆಂದರೆ ಈ ಬಾರಿ ರಾಜ್ಯದ ಮುಖ್ಯ ಜಲಾಶಯಗಳಲ್ಲೊಂದಾದ ಲಿಂಗನಮಕ್ಕಿ ಸಾಕಷ್ಟು ಭರ್ತಿಯಾಗಿದೆ.


    ಜಲಾಶಯಗಳ ಪಾತ್ರ ಅತಿ ಮಹತ್ವದ್ದು
    ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.


    ಪ್ರಸ್ತುತ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ. (10-11-2022 ರಂತೆ)


    ಕೆಆರ್​ಎಸ್​ ಜಲಾಶಯ - KRS Dam
    ಗರಿಷ್ಠ ಮಟ್ಟ - 124.80 ಅಡಿ
    ಒಟ್ಟು ಸಾಮರ್ಥ್ಯ - 49.45 ಟಿಎಂಸಿ
    ಇಂದಿನ ನೀರಿನ ಮಟ್ಟ - 48.42 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 49.45 ಟಿಎಂಸಿ
    ಇಂದಿನ ಒಳಹರಿವು - 4743 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 7118 ಕ್ಯೂಸೆಕ್ಸ್​


    ತುಂಗಭದ್ರಾ ಜಲಾಶಯ - Tungabhadra Dam
    ಗರಿಷ್ಠ ನೀರಿನ ಮಟ್ಟ - 1,633 ಅಡಿ
    ಒಟ್ಟು ಸಾಮರ್ಥ್ಯ- 105.79 ಟಿಎಂಸಿ
    ಇಂದಿನ ನೀರಿನ ಮಟ್ಟ - 101.50 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 98.82 ಟಿಎಂಸಿ
    ಇಂದಿನ ಒಳಹರಿವು - 4296 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 10713 ಕ್ಯೂಸೆಕ್ಸ್​


    ಕಬಿನಿ ಜಲಾಶಯ - Kabini Dam
    ಗರಿಷ್ಠ ನೀರಿನ ಮಟ್ಟ - 2,284 ಅಡಿ
    ಒಟ್ಟು ಸಾಮರ್ಥ್ಯ - 19.52 ಟಿಎಂಸಿ
    ಇಂದಿನ ನೀರಿನ ಮಟ್ಟ - 16.85 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 19.52 ಟಿಎಂಸಿ
    ಇಂದಿನ ಒಳಹರಿವು - 211 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 2050 ಕ್ಯೂಸೆಕ್ಸ್​


    ಆಲಮಟ್ಟಿ ಜಲಾಶಯ - Almatti Dam
    ಗರಿಷ್ಠ ಮಟ್ಟ - 1,704 ಅಡಿ
    ಒಟ್ಟು ಸಾಮರ್ಥ್ಯ - 123.08 ಟಿಎಂಸಿ
    ಇಂದಿನ ನೀರಿನ ಮಟ್ಟ- 123.08 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 109.13 ಟಿಎಂಸಿ
    ಇಂದಿನ ಒಳಹರಿವು- 1476 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 1476 ಕ್ಯೂಸೆಕ್ಸ್​


    ಭದ್ರಾ ಜಲಾಶಯ - Bhadra Dam
    ಗರಿಷ್ಠ ಮಟ್ಟ - 657.73 ಮೀಟರ್
    ಒಟ್ಟು ಸಾಮರ್ಥ್ಯ - 71.54 ಟಿಎಂಸಿ
    ಇಂದಿನ ನೀರಿನ ಮಟ್ಟ- 69.63 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 70.65 ಟಿಎಂಸಿ
    ಇಂದಿನ ಒಳಹರಿವು- 844 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 3400 ಕ್ಯೂಸೆಕ್ಸ್​


    ಘಟಪ್ರಭಾ ಜಲಾಶಯ - Ghataprabha Dam
    ಗರಿಷ್ಠ ಮಟ್ಟ - 662.91 ಮೀಟರ್
    ಒಟ್ಟು ಸಾಮರ್ಥ್ಯ - 51.00 ಟಿಎಂಸಿ
    ಇಂದಿನ ನೀರಿನ ಮಟ್ಟ- 51 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 46.65 ಟಿಎಂಸಿ
    ಇಂದಿನ ಒಳಹರಿವು - 194 ಕ್ಯೂಸೆಕ್ಸ್​​
    ಇಂದಿನ ಹೊರಹರಿವು - 194 ಕ್ಯೂಸೆಕ್ಸ್


    ಮಲಪ್ರಭಾ ಜಲಾಶಯ - Malaprabha Dam
    ಗರಿಷ್ಠ ಮಟ್ಟ-633.80 ಮೀಟರ್
    ಒಟ್ಟು ಸಾಮರ್ಥ್ಯ - 37.73 ಟಿಎಂಸಿ
    ಇಂದಿನ ನೀರಿನ ಮಟ್ಟ - 37.24 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 34.49 ಟಿಎಂಸಿ
    ಇಂದಿನ ಒಳಹರಿವು - 0 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 394 ಕ್ಯೂಸೆಕ್ಸ್​


    ಹೇಮಾವತಿ ಜಲಾಶಯ - Hemavathi Dam
    ಗರಿಷ್ಠ ಮಟ್ಟ - 2,922 ಅಡಿ​
    ಒಟ್ಟು ಸಾಮರ್ಥ್ಯ - 37.10 ಟಿಎಂಸಿ
    ಇಂದಿನ ನೀರಿನ ಮಟ್ಟ- 34.43 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 26.02 ಟಿಎಂಸಿ
    ಇಂದಿನ ಒಳಹರಿವು - 549 ಕ್ಯೂಸೆಕ್ಸ್​​
    ಇಂದಿನ ಹೊರಹರಿವು - 3125 ಕ್ಯೂಸೆಕ್ಸ್​


    ವರಾಹಿ ಜಲಾಶಯ - Varahi Dam
    ಗರಿಷ್ಠ ಮಟ್ಟ - 594.36 ಮೀಟರ್
    ​ಒಟ್ಟು ಸಾಮರ್ಥ್ಯ - 31.10 ಟಿಎಂಸಿ
    ಇಂದಿನ ನೀರಿನ ಮಟ್ಟ- 21.11 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 18.24 ಟಿಎಂಸಿ
    ಇಂದಿನ ಒಳಹರಿವು - 46 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 749 ಕ್ಯೂಸೆಕ್ಸ್​


    ಹಾರಂಗಿ ಜಲಾಶಯ - Harangi Dam
    ಗರಿಷ್ಠ ಮಟ್ಟ - 871.38 ಮೀಟರ್
    ಒಟ್ಟು ಸಾಮರ್ಥ್ಯ - 8.50 ಟಿಎಂಸಿ
    ಇಂದಿನ ನೀರಿನ ಮಟ್ಟ- 5.61 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 8.09 ಟಿಎಂಸಿ
    ಇಂದಿನ ಒಳಹರಿವು - 265 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 1700 ಕ್ಯೂಸೆಕ್ಸ್​​


    ಲಿಂಗನಮಕ್ಕಿ ಜಲಾಶಯ - Linganamakki Dam
    ಗರಿಷ್ಠ ಮಟ್ಟ - 554.44 ಮೀಟರ್
    ಒಟ್ಟು ಸಾಮರ್ಥ್ಯ - 151.75 ಟಿಎಂಸಿ
    ಇಂದಿನ ನೀರಿನ ಮಟ್ಟ- 126.61 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 134.8 ಟಿಎಂಸಿ
    ಇಂದಿನ ಒಳಹರಿವು - 1704 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 6134 ಕ್ಯೂಸೆಕ್ಸ್


    ಸೂಪಾ ಜಲಾಶಯ - Supa Dam
    ಗರಿಷ್ಠ ಮಟ್ಟ- 564.00 ಮೀಟರ್
    ಒಟ್ಟು ಸಾಮರ್ಥ್ಯ - 145.33 ಟಿಎಂಸಿ
    ಇಂದಿನ ನೀರಿನ ಮಟ್ಟ- 102.20 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 111.99 ಟಿಎಂಸಿ
    ಇಂದಿನ ಒಳಹರಿವು - 376 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 2040 ಕ್ಯೂಸೆಕ್ಸ್​


    ನಾರಾಯಣಪುರ ಜಲಾಶಯ - Narayanapura Dam
    ಗರಿಷ್ಠ ಮಟ್ಟ - 492.25 ಮೀಟರ್
    ಒಟ್ಟು ಸಾಮರ್ಥ್ಯ - 33.31 ಟಿಎಂಸಿ
    ಇಂದಿನ ನೀರಿನ ಮಟ್ಟ- 29.32 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 28.45 ಟಿಎಂಸಿ
    ಇಂದಿನ ಒಳಹರಿವು - 3138 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 7547 ಕ್ಯೂಸೆಕ್ಸ್

    Published by:ಗುರುಗಣೇಶ ಡಬ್ಗುಳಿ
    First published: