Karnataka Dams Water Level: ಬಸವ ಸಾಗರ ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್​ ನೀರು ಹೊರಕ್ಕೆ; ಉಳಿದ ಡ್ಯಾಂಗಳಲ್ಲಿ ನೀರಿನ ಮಟ್ಟ ಎಷ್ಟಿದೆ?

ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದುಮ ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ.

ಬಸವ ಸಾಗರ ಜಲಾಶಯ

ಬಸವ ಸಾಗರ ಜಲಾಶಯ

  • Share this:
ರಾಜ್ಯದೆಲ್ಲೆಡೆ ಮಳೆ (Karnataka Rains) ಅಬ್ಬರ ಜೋರಾಗಿದೆ. ಹಳ್ಳ, ಕೆರೆ, ಜಲಪಾತಗಳೆಲ್ಲಾ ಧುಮ್ಮಿಕ್ಕಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ನದಿಗಳಿಗೆ  (Rivers) ಬಾಗೀನ ಸಹ ಅರ್ಪಿಸಲಾಗುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದುಮ ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಜಲಾಶಯಗಳು ಭರ್ತಿಯಾದ ಹಿನ್ನೆಲೆ ನದಿಗೆ ಲಕ್ಷ ಕ್ಯೂಸೆಕ್ ಗಳಲ್ಲಿ ನೀರು ಹೊರ ಬಿಡಲಾಗುತ್ತಿದೆ. ಅಲಮಟ್ಟಿ, ನಾರಾಯಣಪುರ ಮತ್ತು ತುಂಗಭದ್ರಾ ಜಲಾಶಯಗಳಿಂದ ಅತಿ ಹೆಚ್ಚು ಪ್ರಮಾಣದ ನೀರು ಹೊರ ಬಿಡಲಾಗ್ತಿದೆ.  ನೀರು, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ (Agriculture) ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ.

ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು (Water) ಒದಗಿಸುವುದು ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ.

ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

ಇಂದು ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ.

ಕೆಆರ್ ಎಸ್ ಜಲಾಶಯ - KRS Dam
ಗರಿಷ್ಠ ಮಟ್ಟ - 124.80 ಅಡಿ
ಒಟ್ಟು ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ – 49 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 32.91ಟಿಎಂಸಿ
ಇಂದಿನ ಒಳಹರಿವು – 72,466 ಕ್ಯೂಸೆಕ್ಸ್
ಇಂದಿನ ಹೊರಹರಿವು – 81,930 ಕ್ಯೂಸೆಕ್ಸ್

ಇದನ್ನೂ ಓದಿ:  National Highway: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಸಂಪೂರ್ಣ ಬಂದ್

ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)
ಗರಿಷ್ಠ ಮಟ್ಟ- 2175.00 ಅಡಿ
ಇಂದಿನ ಮಟ್ಟ- 2141.00 ಅಡಿ
ಒಳ‌ ಹರಿವು- 28,791 ಕ್ಯೂಸೆಕ್
ಹೊರ ಹರಿವು- 132 ಕ್ಯೂಸೆಕ್
ಸಂಗ್ರಹಣಾ ಸಾಮರ್ಥ್ಯ- 51 ಟಿಎಂಸಿ
ಇಂದಿನ ಸಂಗ್ರಹ- 27.572 ಟಿಎಂಸಿ

ನವಿಲುತೀರ್ಥ ಜಲಾಶಯ (ಮಲಪ್ರಭಾ‌ ನದಿ)
ಗರಿಷ್ಠ ಮಟ್ಟ- 2079.50 ಅಡಿ
ಇಂದಿನ ಮಟ್ಟ- 2065.30 ಅಡಿ
ಒಳ‌ ಹರಿವು- 17,150 ಕ್ಯೂಸೆಕ್
ಹೊರ ಹರಿವು- 194 ಕ್ಯೂಸೆಕ್
ಸಂಗ್ರಹಣಾ ಸಾಮರ್ಥ್ಯ- 37.731 ಟಿಎಂಸಿ
ಇಂದಿನ ಸಂಗ್ರಹ- 21.178 ಟಿಎಂಸಿ

ಆಲಮಟ್ಟಿ ಜಲಾಶಯದ (ಕೃಷ್ಣಾ ನದಿ)
ಗರಿಷ್ಠ ಮಟ್ಟ - 1,704 ಅಡಿ
ಒಟ್ಟು ಸಾಮರ್ಥ್ಯ - 123.08 ಟಿಎಂಸಿ
ಒಳಹರಿವು: 133611 ಕ್ಯೂಸೆಕ್.
ಹೊರಹರಿವು: 148367 ಕ್ಯೂಸೆಕ್.
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ.
ಇಂದಿನ ನೀರಿನ ಸಂಗ್ರಹ: 86.717 ಟಿಎಂಸಿ

ಕಬಿನಿ ಜಲಾಶಯ-Kabini Dam
ಗರಿಷ್ಠ ನೀರಿನ ಮಟ್ಟ - 2,284 ಅಡಿ
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಮಟ್ಟ – 18.28 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 16.31 ಟಿಎಂಸಿ
ಇಂದಿನ ಒಳಹರಿವು – 33,455 ಕ್ಯೂಸೆಕ್ಸ್
ಇಂದಿನ ಹೊರಹರಿವು – 30,458 ಕ್ಯೂಸೆಕ್ಸ್

ಹಾರಂಗಿ ಜಲಾಶಯ-Harangi Dam
ಗರಿಷ್ಠ ಮಟ್ಟ - 871.38 ಮೀಟರ್
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 6.76 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 6.39 ಟಿಎಂಸಿ
ಇಂದಿನ ಒಳಹರಿವು – 13,602 ಕ್ಯೂಸೆಕ್ಸ್
ಇಂದಿನ ಹೊರಹರಿವು – 15,520 ಕ್ಯೂಸೆಕ್ಸ್

ಇದನ್ನೂ ಓದಿ:  Kodagu Rains: ತೋಟ, ಗದ್ದೆಗಳು ಜಲಾವೃತ; ರಸ್ತೆಗಳ ಮೇಲೆ ಹರಿಯುತ್ತಿರುವ ಕಾವೇರಿ ಪ್ರವಾಹ

ಹೇಮಾವತಿ ಜಲಾಶಯ-Hemavathi Dam
ಗರಿಷ್ಠ ಮಟ್ಟ - 2,922 ಅಡಿ
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 35.55 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 19.22 ಟಿಎಂಸಿ
ಇಂದಿನ ಒಳಹರಿವು – 41,420 ಕ್ಯೂಸೆಕ್ಸ್
ಇಂದಿನ ಹೊರಹರಿವು – 40,250 ಕ್ಯೂಸೆಕ್ಸ್

ತುಂಗಭದ್ರಾ ಜಲಾಶಯ - Tungabhadra Dam
ಗರಿಷ್ಠ ನೀರಿನ ಮಟ್ಟ - 1,633 ಅಡಿ
ಒಟ್ಟು ಸಾಮರ್ಥ್ಯ- 100.86 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 36.37 ಟಿಎಂಸಿ
ಇಂದದಿನ ನೀರಿನ ಮಟ್ಟ- 95.925 ಟಿಎಂಸಿ
ಇಂದಿನ ಒಳಹರಿವು – 1.60 ಲಕ್ಷ ಕ್ಯೂಸೆಕ್ಸ್
ಇಂದಿನ ಹೊರಹರಿವು – 1.50 ಲಕ್ಷ ಕ್ಯೂಸೆಕ್ಸ್

ನಾರಾಯಣಪುರ ಜಲಾಶಯ- Narayanapura Dam
ಗರಿಷ್ಠ ಮಟ್ಟ - 492.25 ಮೀಟರ್
ಒಟ್ಟು ಸಾಮರ್ಥ್ಯ - 33.31 ಟಿಎಂಸಿ
ಇಂದಿನ ಒಳಹರಿವು – 1,60,000 ಕ್ಯೂಸೆಕ್ಸ್
ಇಂದಿನ ಹೊರಹರಿವು – 1,74,576 ಕ್ಯೂಸೆಕ್ಸ್
Published by:Mahmadrafik K
First published: