• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Dams Water Level: ಕರ್ನಾಟಕದಲ್ಲಿ ಮುಂದುವರಿದ ಮಳೆ; ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Dams Water Level: ಕರ್ನಾಟಕದಲ್ಲಿ ಮುಂದುವರಿದ ಮಳೆ; ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಬಸವಸಾಗರ ಡ್ಯಾಂ

ಬಸವಸಾಗರ ಡ್ಯಾಂ

ಉತ್ತರ ಕನ್ನಡದ ಶಿರಸಿ, ಕುಮಟಾ, ಕಾರವಾರ, ಅಂಕೋಲದಲ್ಲಿ ಉತ್ತಮ ಮಳೆಯಾಗಿದೆ. ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲೂ ಮಳೆಯ ಪ್ರಮಾಣ ಹೆಚ್ಚಾಗಿದೆ.

  • Share this:

    Karnataka Rain Updates: ಕರ್ನಾಟಕದಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಅಲರ್ಟ್​ ಆಗಿರುವಂತೆ ಘೋಷಿಸಲಾಗಿದೆ. ಹಾಗೇ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಉತ್ತರ ಕನ್ನಡದ ಶಿರಸಿ, ಕುಮಟಾ, ಕಾರವಾರ, ಅಂಕೋಲದಲ್ಲಿ ಉತ್ತಮ ಮಳೆಯಾಗಿದೆ. ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲೂ ಮಳೆಯ ಪ್ರಮಾಣ ಹೆಚ್ಚಾಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ...


    ಲಿಂಗನಮಕ್ಕಿ ಜಲಾಶಯ
    ಗರಿಷ್ಠ ಮಟ್ಟ- 1,819 ಅಡಿ
    ಇಂದಿನ ಮಟ್ಟ- 1,770.10 ಅಡಿ
    ಕಳೆದ ವರ್ಷದ ಮಟ್ಟ- 1761 ಅಡಿ
    ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ
    ಇಂದಿನ ನೀರು ಸಂಗ್ರಹ- 39.72 ಟಿಎಂಸಿ
    ಇಂದಿನ ಒಳಹರಿವು- 16,326 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು-3537 ಕ್ಯೂಸೆಕ್ಸ್​


    ವರಾಹಿ ಜಲಾಶಯ
    ಗರಿಷ್ಠ ಮಟ್ಟ- 1,949.50 ಅಡಿ
    ಇಂದಿನ ಮಟ್ಟ- 1,890 ಅಡಿ
    ಕಳೆದ ವರ್ಷದ ಮಟ್ಟ- 1883 ಅಡಿ
    ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
    ಇಂದಿನ ನೀರು ಸಂಗ್ರಹ- 6.51 ಟಿಎಂಸಿ
    ಇಂದಿನ ಒಳಹರಿವು- 2,317ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 0 ಕ್ಯೂಸೆಕ್ಸ್​


    ಹಾರಂಗಿ ಜಲಾಶಯ
    ಗರಿಷ್ಠ ಮಟ್ಟ- 2,859 ಅಡಿ
    ಇಂದಿನ ಮಟ್ಟ- 2854 ಅಡಿ
    ಕಳೆದ ವರ್ಷದ ಮಟ್ಟ- 2,815 ಅಡಿ
    ಗರಿಷ್ಠ ಸಾಮರ್ಥ್ಯ- 8.7 ಟಿಎಂಸಿ
    ಇಂದಿನ ನೀರು ಸಂಗ್ರಹ- 5.50 ಟಿಎಂಸಿ
    ಇಂದಿನ ಒಳಹರಿವು- 2992 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 1366 ಕ್ಯೂಸೆಕ್ಸ್​


    ಹೇಮಾವತಿ ಜಲಾಶಯ
    ಗರಿಷ್ಠ ಮಟ್ಟ- 2,922 ಅಡಿ
    ಇಂದಿನ ಮಟ್ಟ- 2894 ಅಡಿ
    ಕಳೆದ ವರ್ಷದ ಮಟ್ಟ- 2878 ಅಡಿ
    ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
    ಇಂದಿನ ನೀರು ಸಂಗ್ರಹ- 14.97 ಟಿಎಂಸಿ
    ಇಂದಿನ ಒಳಹರಿವು- 7,032 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 2300 ಕ್ಯೂಸೆಕ್ಸ್​


    ಕೆಆರ್​ಎಸ್​ ಜಲಾಶಯ
    ಗರಿಷ್ಠ ಮಟ್ಟ- 124.80 ಅಡಿ
    ಇಂದಿನ ಮಟ್ಟ- 106 ಅಡಿ
    ಕಳೆದ ವರ್ಷದ ಮಟ್ಟ- 86.85 ಅಡಿ
    ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
    ಇಂದಿನ ನೀರು ಸಂಗ್ರಹ- 23.53 ಟಿಎಂಸಿ
    ಇಂದಿನ ಒಳಹರಿವು- 16,781 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 3,657 ಕ್ಯೂಸೆಕ್ಸ್​


    ಕಬಿನಿ ಜಲಾಶಯ
    ಗರಿಷ್ಠ ಮಟ್ಟ- 2,284 ಅಡಿ
    ಇಂದಿನ ಮಟ್ಟ- 2274 ಅಡಿ
    ಕಳೆದ ವರ್ಷದ ಮಟ್ಟ- 2265 ಅಡಿ
    ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
    ಇಂದಿನ ನೀರು ಸಂಗ್ರಹ-10.19 ಟಿಎಂಸಿ
    ಇಂದಿನ ಒಳಹರಿವು- 11,578 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 1500 ಕ್ಯೂಸೆಕ್ಸ್​


    ತುಂಗಾ ಜಲಾಶಯ
    ಗರಿಷ್ಠ ಮಟ್ಟ- 1,633 ಅಡಿ
    ಇಂದಿನ ಮಟ್ಟ- 1,605 ಅಡಿ
    ಗರಿಷ್ಠ ಸಾಮರ್ಥ್ಯ- 100.86 ಟಿಎಂಸಿ
    ಇಂದಿನ ನೀರು ಸಂಗ್ರಹ- 15.62 ಟಿಎಂಸಿ
    ಇಂದಿನ ಒಳಹರಿವು- 17,138 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 289 ಕ್ಯೂಸೆಕ್ಸ್​


    ಘಟಪ್ರಭಾ ಜಲಾಶಯ
    ಗರಿಷ್ಠ ಮಟ್ಟ- 2,175 ಅಡಿ
    ಇಂದಿನ ಮಟ್ಟ- 2,132 ಅಡಿ
    ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
    ಇಂದಿನ ನೀರು ಸಂಗ್ರಹ- 20.97ಟಿಎಂಸಿ
    ಇಂದಿನ ಒಳಹರಿವು- 89754 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 108 ಕ್ಯೂಸೆಕ್ಸ್​


    ಮಲಪ್ರಭಾ ಜಲಾಶಯ
    ಗರಿಷ್ಠ ಮಟ್ಟ- 2079.50 ಅಡಿ
    ಇಂದಿನ ಮಟ್ಟ- 2059 ಅಡಿ
    ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
    ಇಂದಿನ ನೀರು ಸಂಗ್ರಹ- 12.39 ಟಿಎಂಸಿ
    ಇಂದಿನ ಒಳಹರಿವು- 2587 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 364ಕ್ಯೂಸೆಕ್ಸ್​


    ಆಲಮಟ್ಟಿ ಜಲಾಶಯ
    ಗರಿಷ್ಠ ಮಟ್ಟ- 1,704 ಅಡಿ
    ಇಂದಿನ ಮಟ್ಟ- 1,697 ಅಡಿ
    ಗರಿಷ್ಠ ಸಾಮರ್ಥ್ಯ- 119.26 ಟಿಎಂಸಿ
    ಇಂದಿನ ನೀರು ಸಂಗ್ರಹ- 83.28 ಟಿಎಂಸಿ
    ಇಂದಿನ ಒಳಹರಿವು- 47,612 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 45,785 ಕ್ಯೂಸೆಕ್ಸ್​

    Published by:Rajesh Duggumane
    First published: