Karnataka Rains: ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜು. 9ರವರೆಗೆ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ...

Monsoon 2020: ನಿನ್ನೆ ಸುರಿದ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಕುಮಾರಧಾರಾ, ಫಲ್ಗುಣಿ ನದಿಗಳು ತುಂಬಿ ಹರಿಯುತ್ತಿವೆ. ಉಡುಪಿಯಲ್ಲಿ ಶನಿವಾರ ಧಾರಾಕಾರ ಮಳೆಯಾಗಿದ್ದು, ಕಾಪುವಿನಲ್ಲಿ ಸಮುದ್ರದ ಅಲೆಗಳು ರೌದ್ರಾವತಾರ ತಾಳಿವೆ.

ಉಡುಪಿಯಲ್ಲಿ ಸುರಿದ ಮಳೆಯಿಂದ ಜಲಾವೃತವಾಗಿರುವ ಮನೆ

ಉಡುಪಿಯಲ್ಲಿ ಸುರಿದ ಮಳೆಯಿಂದ ಜಲಾವೃತವಾಗಿರುವ ಮನೆ

  • Share this:
ಕರ್ನಾಟಕದ ಕರಾವಳಿ ಭಾಗದಲ್ಲಿ ಜು. 9ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ನಿನ್ನೆ ಸುರಿದ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಕುಮಾರಧಾರಾ, ಫಲ್ಗುಣಿ ನದಿಗಳು ತುಂಬಿ ಹರಿಯುತ್ತಿವೆ. ಉಡುಪಿಯಲ್ಲಿ ಶನಿವಾರ ಧಾರಾಕಾರ ಮಳೆಯಾಗಿದ್ದು, ಕಾಪುವಿನಲ್ಲಿ ಸಮುದ್ರದ ಅಲೆಗಳು ರೌದ್ರಾವತಾರ ತಾಳಿವೆ. ಉತ್ತರ ಕನ್ನಡದ ಕಾರವಾರ, ಚಿಕ್ಕಮಗಳೂರಿನ ಕಳಸ, ಕೊಟ್ಟಿಗೆಹಾರ, ಮೂಡಿಗೆರೆಯಲ್ಲೂ ಭಾರೀ ಮಳೆಯಾಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ...

ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ- 1,819 ಅಡಿ
ಇಂದಿನ ಮಟ್ಟ- 1,755 ಅಡಿ
ಕಳೆದ ವರ್ಷದ ಮಟ್ಟ- 1748 ಅಡಿ
ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ
ಇಂದಿನ ನೀರು ಸಂಗ್ರಹ- 23.59 ಟಿಎಂಸಿ
ಇಂದಿನ ಒಳಹರಿವು- 10,954 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 5231 ಕ್ಯೂಸೆಕ್ಸ್​

ವರಾಹಿ ಜಲಾಶಯ
ಗರಿಷ್ಠ ಮಟ್ಟ- 1,949.50 ಅಡಿ
ಇಂದಿನ ಮಟ್ಟ- 1,876 ಅಡಿ
ಕಳೆದ ವರ್ಷದ ಮಟ್ಟ- 1876 ಅಡಿ
ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
ಇಂದಿನ ನೀರು ಸಂಗ್ರಹ- 3.39 ಟಿಎಂಸಿ
ಇಂದಿನ ಒಳಹರಿವು- 1131 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 144 ಕ್ಯೂಸೆಕ್ಸ್​

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ- 2,859 ಅಡಿ
ಇಂದಿನ ಮಟ್ಟ- 2,841 ಅಡಿ
ಕಳೆದ ವರ್ಷದ ಮಟ್ಟ- 2,809 ಅಡಿ
ಗರಿಷ್ಠ ಸಾಮರ್ಥ್ಯ- 8.7 ಟಿಎಂಸಿ
ಇಂದಿನ ನೀರು ಸಂಗ್ರಹ- 3.94 ಟಿಎಂಸಿ
ಇಂದಿನ ಒಳಹರಿವು- 1511 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 30 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ- 2,922 ಅಡಿ
ಇಂದಿನ ಮಟ್ಟ- 2844 ಅಡಿ
ಕಳೆದ ವರ್ಷದ ಮಟ್ಟ- 2,868 ಅಡಿ
ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
ಇಂದಿನ ನೀರು ಸಂಗ್ರಹ- 10.03 ಟಿಎಂಸಿ
ಇಂದಿನ ಒಳಹರಿವು- 2640 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 300 ಕ್ಯೂಸೆಕ್ಸ್​

ಕೆಆರ್​ಎಸ್​ ಜಲಾಶಯ
ಗರಿಷ್ಠ ಮಟ್ಟ- 124.80 ಅಡಿ
ಇಂದಿನ ಮಟ್ಟ- 97.82 ಅಡಿ
ಕಳೆದ ವರ್ಷದ ಮಟ್ಟ- 80.20 ಅಡಿ
ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
ಇಂದಿನ ನೀರು ಸಂಗ್ರಹ- 16.75 ಟಿಎಂಸಿ
ಇಂದಿನ ಒಳಹರಿವು- 2251 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 444 ಕ್ಯೂಸೆಕ್ಸ್​

ಕಬಿನಿ ಜಲಾಶಯ
ಗರಿಷ್ಠ ಮಟ್ಟ- 2,284 ಅಡಿ
ಇಂದಿನ ಮಟ್ಟ- 2262 ಅಡಿ
ಕಳೆದ ವರ್ಷದ ಮಟ್ಟ- 2257 ಅಡಿ
ಗರಿಷ್ಠ ಸಾಮರ್ಥ್ಯ- 15.67 ಟಿಎಂಸಿ
ಇಂದಿನ ನೀರು ಸಂಗ್ರಹ- 4.55 ಟಿಎಂಸಿ
ಇಂದಿನ ಒಳಹರಿವು- 4997 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1500 ಕ್ಯೂಸೆಕ್ಸ್​

ಭದ್ರಾ ಜಲಾಶಯ
ಗರಿಷ್ಠ ಮಟ್ಟ- 2,158 ಅಡಿ
ಇಂದಿನ ಮಟ್ಟ- 2,112 ಅಡಿ
ಕಳೆದ ವರ್ಷದ ಮಟ್ಟ- 2096 ಅಡಿ
ಗರಿಷ್ಠ ಸಾಮರ್ಥ್ಯ- ​ 63.04 ಟಿಎಂಸಿ
ಇಂದಿನ ನೀರು ಸಂಗ್ರಹ- ​18.56 ಟಿಎಂಸಿ
ಇಂದಿನ ಒಳಹರಿವು- 4769 ಕ್ಯೂಸೆಕ್ಸ್
ಇಂದಿನ ಹೊರ ಹರಿವು- 162 ಕ್ಯೂಸೆಕ್ಸ್

ತುಂಗಾ ಜಲಾಶಯ
ಗರಿಷ್ಠ ಮಟ್ಟ- 1,633 ಅಡಿ
ಇಂದಿನ ಮಟ್ಟ- 1,591 ಅಡಿ
ಕಳೆದ ವರ್ಷದ ಮಟ್ಟ- 1573 ಅಡಿ
ಗರಿಷ್ಠ ಸಾಮರ್ಥ್ಯ- 100.86 ಟಿಎಂಸಿ
ಇಂದಿನ ನೀರು ಸಂಗ್ರಹ- 10.82 ಟಿಎಂಸಿ
ಇಂದಿನ ಒಳಹರಿವು- 951 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 287 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ- 2,175 ಅಡಿ
ಇಂದಿನ ಮಟ್ಟ- 2,105 ಅಡಿ
ಕಳೆದ ವರ್ಷದ ಮಟ್ಟ- 2,078 ಅಡಿ
ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
ಇಂದಿನ ನೀರು ಸಂಗ್ರಹ- 9.46 ಟಿಎಂಸಿ
ಇಂದಿನ ಒಳಹರಿವು- 3145 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 105 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ- 2079.50 ಅಡಿ
ಇಂದಿನ ಮಟ್ಟ- 2053 ಅಡಿ
ಕಳೆದ ವರ್ಷದ ಮಟ್ಟ- 2034 ಅಡಿ
ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
ಇಂದಿನ ನೀರು ಸಂಗ್ರಹ- 8.59 ಟಿಎಂಸಿ
ಇಂದಿನ ಒಳಹರಿವು- 200 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 964 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ- 1,704 ಅಡಿ
ಇಂದಿನ ಮಟ್ಟ- 1,692 ಅಡಿ
ಕಳೆದ ವರ್ಷದ ಮಟ್ಟ- 1,670 ಅಡಿ
ಗರಿಷ್ಠ ಸಾಮರ್ಥ್ಯ- 119.26 ಟಿಎಂಸಿ
ಇಂದಿನ ನೀರು ಸಂಗ್ರಹ- 66.45 ಟಿಎಂಸಿ
ಇಂದಿನ ಒಳಹರಿವು- 10,528 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1130 ಕ್ಯೂಸೆಕ್ಸ್​
Published by:Sushma Chakre
First published: