Karnataka Weather Report: 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಬೆಂಗಳೂರಿನಲ್ಲಿ ಮತ್ತೆ ಮಳೆ ಆರಂಭ

ಇವತ್ತು ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ತುಂತುರು ಮಳೆಯಾಗ್ತಿದೆ. ಇಂದು ಬೆಂಗಳೂರು ನಗರದಲ್ಲಿ (Bengaluru Weather) ಗರಿಷ್ಠ 24 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್​​ ತಾಪಮಾನ ದಾಖಲಾಗಲಿದೆ.

ಬೆಂಗಳೂರು ಮಳೆ ಎಫೆಕ್ಟ್

ಬೆಂಗಳೂರು ಮಳೆ ಎಫೆಕ್ಟ್

  • Share this:
ರಾಜ್ಯದಲ್ಲಿ ಇಂದು ಮತ್ತು ನಾಳೆ ಮಳೆಯಾಗುವ (Karnataka Rains) ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ (IMD) ಹೇಳಿದೆ. ನಿನ್ನೆ ಒಂದು ದಿನ ಬಹುತೇಕ ಭಾಗಗಳಲ್ಲಿ ವರುಣ (Rainfall) ಕೊಂಚ ಬ್ರೇಕ್ ನೀಡಿದ್ದನು. ಇಂದು ಮತ್ತೆ ತನ್ನ ಲಯಕ್ಕೆ ಮರಳಲಿರುವ ವರುಣ ದೇವ, ಅಬ್ಬರಿಸುವ ಸಾಧ್ಯತೆಗಳಿವೆ. ಇನ್ನು ಕೆಲವು ಭಾಗಗಳಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಗಳಿವೆ. ರಾಜಧಾನಿ ಬೆಂಗಳೂರಿನ (Bengaluru Rains) ಜನರು ಭಾನುವಾರ ಸುರಿದ ಮಳೆಯಿಂದಾದ ಅನಾಹುತದಿಂದ ಇನ್ನು ಹೊರ ಬಂದಿಲ್ಲ. ಈ ನಡುವೆ ಮತ್ತು ಐದು ದಿನ ಗಾರ್ಡನ್ ಸಿಟಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂಬ ಆತಂಕದ ಮಾಹಿತಿಯನ್ನು ಹವಾಮಾನ ಇಲಾಖೆ ಹೇಳಿದೆ. ಇವತ್ತು ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ತುಂತುರು ಮಳೆಯಾಗ್ತಿದೆ. ಇಂದು ಬೆಂಗಳೂರು ನಗರದಲ್ಲಿ (Bengaluru Weather) ಗರಿಷ್ಠ 24 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್​​ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​​ಗಳಲ್ಲಿ)

ಬೆಂಗಳೂರು 24-20, ಮೈಸೂರು 27-21, ಚಾಮರಾಜನಗರ 27-21, ರಾಮನಗರ 33-26, ಮಂಡ್ಯ 27-21, ಬೆಂಗಳೂರು ಗ್ರಾಮಾಂತರ 24-20, ಚಿಕ್ಕಬಳ್ಳಾಪುರ 25-19, ಕೋಲಾರ 26-21, ಹಾಸನ 23-19, ಚಿತ್ರದುರ್ಗ 28-21, ಚಿಕ್ಕಮಗಳೂರು 23-19, ದಾವಣಗೆರೆ 27-22, ಶಿವಮೊಗ್ಗ 26-21, ಕೊಡಗು 22-18, ತುಮಕೂರು 25-21, ಉಡುಪಿ 27-24, ಮಂಗಳೂರು 27-24

ಉತ್ತರ ಕನ್ನಡ 26-22, ಧಾರವಾಡ 27-21, ಹಾವೇರಿ 27-22, ಹುಬ್ಬಳ್ಳಿ 27-22, ಬೆಳಗಾವಿ 26-21, ಗದಗ 28-22, ಕೊಪ್ಪಳ 28-23, ವಿಜಯಪುರ 28-22, ಬಾಗಲಕೋಟ 28-23, ಕಲಬುರಗಿ 29-23, ಬೀದರ್ 28-22, ಯಾದಗಿರಿ 29-23, ರಾಯಚೂರ 29-23 ಮತ್ತು ಬಳ್ಳಾರಿ 29-23

karnataka dam water level today september 8th 2022 mrq
ಬೆಂಗಳೂರು ಮಳೆ


ಎಲ್ಲೆಲ್ಲಿ ಮಳೆಯ ಎಚ್ಚರಿಕೆ

ರಾಯಚೂರು, ಬಳ್ಳಾರಿ, ಬೆಂಗಳೂರು ಸಿಟಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರಿಗೆ ಮಳೆ ಅಲರ್ಟ್ ಕೊಡಲಾಗಿದೆ.

ಎಲ್ಲೆಲ್ಲಿ ಯೆಲ್ಲೊ ಅಲರ್ಟ್ ಘೋಷಣೆ?

ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ದಾವಣಗೆರೆ, ಹಾಸನಕ್ಕೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಲ್ಕನೇ ದಿನ ಪಶ್ಚಿಮ ಘಟ್ಟದ ಜಿಲ್ಲೆಗಳು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನಕ್ಕೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

ಎಲ್ಲೆಲ್ಲಿ ಆರೆಂಜ್ ಅಲರ್ಟ್?

ಇಂದು ದಕ್ಷಿಣ ಒಳನಾಡಿನ ಹಾಸನ ಕೊಡಗು ಭಾಗಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಮೈಸೂರು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಳೆ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ

ಈಶಾನ್ಯ ಹಾಗು ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ ಸಮುದ್ರ ಮಟ್ಟದಲ್ಲಿ 5.8 ಕಿಮೀ ಎತ್ತರದವರೆಗೂ ಮೇಲ್ಮೈ ಸುಳಿಗಾಳಿ ಎದ್ದಿದೆ. ಹೀಗಾಗಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:  North Karnataka Film: ಈತ ಗಿರಿನಾಡ್ ಪ್ರೇಮಿ! ಉತ್ತರ ಕರ್ನಾಟಕದ ಪ್ರತಿಭೆಗಳ ಹೊಸ ಸಿನಿಮಾ

ಯಾದಗಿರಿಯಲ್ಲಿ ಮಳೆ ಅಬ್ಬರಕ್ಕೆ ಸೇತುವೆಗಳು ಜಲಾವೃತಗೊಂಡಿದೆ. ಗೆದ್ದಲಮರಿ-ಬಲಶೆಟ್ಟಿಹಾಳ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಊರಿಗೆ ತೆರಳಲು ಶಾಲೆ ವಿದ್ಯಾರ್ಥಿಗಳು ಹಾಗೂ ಜನರು ಸಂಕಷ್ಟ ಅನುಭವಿಸುವಂತಾಗಿತ್ತು.

karnataka dam water level today september 8th 2022 mrq
ಬೆಂಗಳೂರು ಮಳೆ


ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ

ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಮುಂದುವರಿದಿದ್ದು ಆಲ್ದೂರು ಬಳಿ ಹವ್ವಳ್ಳಿ ಬಳಿ ಹುಲಿ ಹಳ್ಳ ಸಂಪರ್ಕ ಕುಸಿದಿದೆ. ಬಾಳೆಹೊನ್ನೂರು ಸಮೀಪದ ಹೆದ್ದಾರಿ ಬದಿಯಲ್ಲಿ ಮರವೊಂದು ನೆಲಕ್ಕುರು ಳಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಮರವನ್ನು ತೆರವುಗೊಳಿಸಿದರು.

ಇದನ್ನೂ ಓದಿ:  Uttara Kannada: ಭಾರತ vs ಶ್ರೀಲಂಕಾ ಮ್ಯಾಚ್​​ಲ್ಲಿ ಉತ್ತರ ಕನ್ನಡಿಗರ ಹೋರಾಟ!

ಅಜ್ಜಂಪುರ, ಹೊಸಕೆರೆ, ಮೇಗರಮಕ್ಕಿ, ನರಸಿಂಹರಾಜಪುರ, ಬುಕ್ಕಾಂಬುದಿ, ಕೊಟ್ಟಿಗೆಹಾರ ಕಳಸ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಕಳಸ ಸಮೀಪದ ಗ್ರಾಮವೊಂದರ ಗದ್ದೆಯ ಮೇಲೆ ಮಳೆನೀರು ಉಕ್ಕಿ ಹರಿದಿದ್ದು, ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಶಿವನಿ ಅನುವನಹಳ್ಳಿ ನಾರಾಯಣಪುರ ಸೇತವೆ ಮೇಲೆ ಮಳೆನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು.
Published by:Mahmadrafik K
First published: