• Home
  • »
  • News
  • »
  • state
  • »
  • Karnataka Dam Water Level: ಜುಲೈ ಕಳೆದರೂ ಸುರಿಯುತ್ತಿಲ್ಲ ಮಳೆ; ಇಂದಿನ ಜಲಾಶಯಗಳ ನೀರಿನ ಮಟ್ಟ ಹೀಗಿದೆ

Karnataka Dam Water Level: ಜುಲೈ ಕಳೆದರೂ ಸುರಿಯುತ್ತಿಲ್ಲ ಮಳೆ; ಇಂದಿನ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಜಲಾಶಯ

ಜಲಾಶಯ

ಉತ್ತರ ಒಳನಾಡು ಪ್ರದೇಶಗಳ ಪೈಕಿ ಬೆಳಗಾವಿ ಅತಿಹೆಚ್ಚಿನ ಮಳೆ ಬೀಳುವ ಪ್ರದೇಶ. ಆದರೆ, ಈ ವರ್ಷ ಮುಂಗಾರು ಕೈಕೊಟ್ಟಿದ್ದು ಈವರೆಗೆ ಶೇ.50ರಷ್ಟು ಮಳೆಯಾಗಿಲ್ಲ ಎಂದು ವರದಿಯಾಗಿದೆ.

  • Share this:

     ಬೆಂಗಳೂರು (ಜು.28):  ಆಗಸ್ಟ್​ ಸಮೀಪಿಸಿದರೂ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೇನು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅಲ್ಲದೆ, ರಾಜ್ಯದ ಎಲ್ಲಾ ಜಲಾಶಯಗಳು ಅಂದುಕೊಂಡ ಮಟ್ಟಿಗೆ ಭರ್ತಿ ಆಗಿಲ್ಲ. ಕೊಡಗು, ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಇಷ್ಟೊತ್ತಿಗಾಗಲೇ ಸರಾಸರಿಯಾಗಿ 4.5 ರಿಂದ 5 ಸಾವಿರ ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಈವರೆಗೆ ಶೇ.60ರಷ್ಟು ಮಳೆಯಾಗಿಲ್ಲ. ಇನ್ನೂಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ನಿರೀಕ್ಷಿತ ಮಳೆಯಾಗಿಲ್ಲ.


    ದಕ್ಷಿಣದಲ್ಲಿ ಹಾಸನ ಮೈಸೂರು ಸೇರಿದಂತೆ ಕಾವೇರಿ ಕೊಳ್ಳ ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ರೈತರಿಗೆ ಅನುಕೂಲ. ಆದರೆ, ಮೈಸೂರು ಹಾಸನಕ್ಕಿಂತ ಬೆಂಗಳೂರು ನಗರ ಪ್ರದೇಶದಲ್ಲೇ ಅಧಿಕ ಮಳೆಯಾಗಿರುವ ಕಾರಣ ಕಾವೇರಿ ಆಶ್ರಿತ ಅಣೆಕಟ್ಟೆಗಳು ಈ ವರ್ಷ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.


    ಉತ್ತರ ಒಳನಾಡು ಪ್ರದೇಶಗಳ ಪೈಕಿ ಬೆಳಗಾವಿ ಅತಿಹೆಚ್ಚಿನ ಮಳೆ ಬೀಳುವ ಪ್ರದೇಶ. ಆದರೆ, ಈ ವರ್ಷ ಮುಂಗಾರು ಕೈಕೊಟ್ಟಿದ್ದು ಈವರೆಗೆ ಶೇ.50ರಷ್ಟು ಮಳೆಯಾಗಿಲ್ಲ ಎಂದು ವರದಿಯಾಗಿದೆ. ಈ ನಡುವೆ ಯಾದಗಿರಿ, ಕೊಪ್ಪಳ ಮತ್ತು ರಾಯಚೂರು ಪ್ರದೇಶಗಳಲ್ಲಿ ಈ ವರ್ಷ ನಿಗದಿಗಿಂತ ಉತ್ತಮ ಮಳೆಯಾಗಿರುವುದು ಸಾಮಾನ್ಯವಾಗಿ ಈ ಭಾಗದ ರೈತರಿಗೆ ಖುಷಿ ನೀಡಿದೆ.


    ಲಿಂಗನಮಕ್ಕಿ ಜಲಾಶಯ
    ಗರಿಷ್ಠ ಮಟ್ಟ-554.4 ಮೀಟರ್​
    ಇಂದಿನ ಮಟ್ಟ- 539.78 ಮೀಟರ್​
    ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ
    ಇಂದಿನ ನೀರು ಸಂಗ್ರಹ- 40.85 ಟಿಎಂಸಿ
    ಇಂದಿನ ಒಳಹರಿವು- 6,556 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು-3159ಕ್ಯೂಸೆಕ್ಸ್​


    ವರಾಹಿ ಜಲಾಶಯ
    ಗರಿಷ್ಠ ಮಟ್ಟ-594.36 ಮೀಟರ್​
    ಇಂದಿನ ಮಟ್ಟ- 576.40 ಮೀಟರ್​
    ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
    ಇಂದಿನ ನೀರು ಸಂಗ್ರಹ-6.56  ಟಿಎಂಸಿ
    ಇಂದಿನ ಒಳಹರಿವು- 645 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 1,838 ಕ್ಯೂಸೆಕ್ಸ್​


    ಹಾರಂಗಿ ಜಲಾಶಯ
    ಗರಿಷ್ಠ ಮಟ್ಟ-871.42 ಮೀಟರ್​
    ಇಂದಿನ ಮಟ್ಟ- 870.81 ಮೀಟರ್​
    ಗರಿಷ್ಠ ಸಾಮರ್ಥ್ಯ- 8.50 ಟಿಎಂಸಿ
    ಇಂದಿನ ನೀರು ಸಂಗ್ರಹ-7.81 ಟಿಎಂಸಿ
    ಇಂದಿನ ಒಳಹರಿವು- 1,171 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 50ಕ್ಯೂಸೆಕ್ಸ್​


    ಹೇಮಾವತಿ ಜಲಾಶಯ
    ಗರಿಷ್ಠ ಮಟ್ಟ-890.63 ಮೀಟರ್​
    ಇಂದಿನ ಮಟ್ಟ- 882.74 ಮೀಟರ್​
    ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
    ಇಂದಿನ ನೀರು ಸಂಗ್ರಹ- 17.48  ಟಿಎಂಸಿ
    ಇಂದಿನ ಒಳಹರಿವು- 1,746ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 500 ಕ್ಯೂಸೆಕ್ಸ್​


    ಕೆಆರ್​ಎಸ್​ ಜಲಾಶಯ
    ಗರಿಷ್ಠ ಮಟ್ಟ-38.4 ಮೀಟರ್​
    ಇಂದಿನ ಮಟ್ಟ- 32.55 ಮೀಟರ್​
    ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
    ಇಂದಿನ ನೀರು ಸಂಗ್ರಹ- 28.63 ಟಿಎಂಸಿ
    ಇಂದಿನ ಒಳಹರಿವು- 3029ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 6132 ಕ್ಯೂಸೆಕ್ಸ್​


    ಕಬಿನಿ ಜಲಾಶಯ
    ಗರಿಷ್ಠ ಮಟ್ಟ-696.16 ಮೀಟರ್​
    ಇಂದಿನ ಮಟ್ಟ- 694.01 ಮೀಟರ್​
    ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
    ಇಂದಿನ ನೀರು ಸಂಗ್ರಹ-15.31 ಟಿಎಂಸಿ
    ಇಂದಿನ ಒಳಹರಿವು- 2476ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 2500ಕ್ಯೂಸೆಕ್ಸ್​


    ತುಂಗಾ ಜಲಾಶಯ
    ಗರಿಷ್ಠ ಮಟ್ಟ-497.74 ಮೀಟರ್​
    ಇಂದಿನ ಮಟ್ಟ- 491.36  ಮೀಟರ್​
    ಗರಿಷ್ಠ ಸಾಮರ್ಥ್ಯ- 103.16 ಟಿಎಂಸಿ
    ಇಂದಿನ ನೀರು ಸಂಗ್ರಹ- 39.32 ಟಿಎಂಸಿ
    ಇಂದಿನ ಒಳಹರಿವು- 8810  ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 1432 ಕ್ಯೂಸೆಕ್ಸ್​


    ಘಟಪ್ರಭಾ ಜಲಾಶಯ
    ಗರಿಷ್ಠ ಮಟ್ಟ-662.94 ಮೀಟರ್​
    ಇಂದಿನ ಮಟ್ಟ- 651.99  ಮೀಟರ್​
    ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
    ಇಂದಿನ ನೀರು ಸಂಗ್ರಹ- 39.32ಟಿಎಂಸಿ
    ಇಂದಿನ ಒಳಹರಿವು- 3107​ಕ್ಯೂಸೆಕ್ಸ್
    ಇಂದಿನ ಹೊರ ಹರಿವು- 120 ಕ್ಯೂಸೆಕ್ಸ್​


    ಮಲಪ್ರಭಾ ಜಲಾಶಯ
    ಗರಿಷ್ಠ ಮಟ್ಟ-633.83 ಮೀಟರ್​
    ಇಂದಿನ ಮಟ್ಟ- 628.14  ಮೀಟರ್​
    ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
    ಇಂದಿನ ನೀರು ಸಂಗ್ರಹ- 17.22 ಟಿಎಂಸಿ
    ಇಂದಿನ ಒಳಹರಿವು- 2,055 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 164ಕ್ಯೂಸೆಕ್ಸ್​


    ಆಲಮಟ್ಟಿ ಜಲಾಶಯ
    ಗರಿಷ್ಠ ಮಟ್ಟ-519.63ಮೀಟರ್​
    ಇಂದಿನ ಮಟ್ಟ- 517.25 ಮೀಟರ್​
    ಗರಿಷ್ಠ ಸಾಮರ್ಥ್ಯ- 119.26 ಟಿಎಂಸಿ
    ಇಂದಿನ ನೀರು ಸಂಗ್ರಹ- 87.23 ಟಿಎಂಸಿ
    ಇಂದಿನ ಒಳಹರಿವು- 17,070 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 6,746 ಕ್ಯೂಸೆಕ್ಸ್​

    Published by:Rajesh Duggumane
    First published: