• Home
  • »
  • News
  • »
  • state
  • »
  • Karnataka Dams Water Level: ರಾಜ್ಯದ ಹಲವೆಡೆ ಮತ್ತೆ ಅಬ್ಬರಿಸಿದ ಮಳೆರಾಯ, ಹೆಚ್ಚಿದ ಜಲಾಶಯಗಳ ಒಳಹರಿವು

Karnataka Dams Water Level: ರಾಜ್ಯದ ಹಲವೆಡೆ ಮತ್ತೆ ಅಬ್ಬರಿಸಿದ ಮಳೆರಾಯ, ಹೆಚ್ಚಿದ ಜಲಾಶಯಗಳ ಒಳಹರಿವು

ಭೀಮಾ ನದಿ

ಭೀಮಾ ನದಿ

Karnataka Reservoir Water Level: ಮಲೆನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿಯೂ ಈ ಬಾರಿ ಮಳೆ ಮುಂದುವರಿದಿದೆ. ಮಳೆಯ ವೇಗ ಕಡಿಮೆಯಾದ್ರೂ ನಿರಂತರವಾಗಿ ಜಡಿ ಮಳೆ ಬೀಳುತ್ತಿದೆ. 

  • Share this:

ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ 4 ದಿನಗಳ ಕಾಲ ಮಳೆಯಾಗುವ (Karnataka Weather Report) ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಲೆನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿಯೂ ಈ ಬಾರಿ ಮಳೆ ಮುಂದುವರಿದಿದೆ. ಮಳೆಯ ವೇಗ ಕಡಿಮೆಯಾದ್ರೂ ನಿರಂತರವಾಗಿ ಜಡಿ ಮಳೆ ಬೀಳುತ್ತಿದೆ.  ಮತ್ತೊಂದೆಡೆ ಅಂದ್ರೆ ಬೆಂಗಳೂರು, ಬೆಳಗಾವಿ, ದಾವಣಗೆರೆ, ಕೊಪ್ಪಳ, ಚಿತ್ರದುರ್ಗ, ರಾಮನಗರ, ಮಂಡ್ಯ ಭಾಗದಲ್ಲಿ ಮಳೆ ಬಹುತೇಕ ಕಡಿಮೆ ಇದ್ದು, ಒಣಹವೆ ಇರಲಿದೆ.ಹೀಗಾಗಿ ಜಲಾಶಯಗಳಲ್ಲಿ (Karnataka Dams Water Level) ಮತ್ತೆ ನೀರಿನ ಹರಿವು ಹೆಚ್ಚಾಗುವ ಸಂಭವ ಇದೆ. ಈ ವರ್ಷ ವರುಣನ ಕೃಪೆ ರಾಜ್ಯದ ಮೇಲೆ ಉತ್ತಮವಾಗಿದ್ದು, ಈ ಹಿನ್ನೆಲೆಯಿಂದಾಗಿ ಜಲಾಶಯಗಳು ತುಂಬಿ ಹರಿದಿವೆ.


ಪ್ರಸ್ತುತ ಮಳೆ ಪ್ರಮಾಣ ಇಳಿಕೆಯಾಗುತ್ತಿದ್ದು, ಸಹಜವಾಗಿಯೇ ಜಲಾಶಯಗಳ ಒಳಹರಿವಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದ್ದು ಅದರಂತೆ ಹೊರಹರಿವಿನ ಪ್ರಮಾಣದಲ್ಲೂ ನಿಧಾನವಾಗಿ ಇಳಿಕೆಯಾಗಿರುವುದನ್ನು ಗಮನಿಸಬಹುದು.


ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ
ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ. ಇನ್ನೊಂದು ವಿಶೇಷವೆಂದರೆ ಈ ಬಾರಿ ರಾಜ್ಯದ ಮುಖ್ಯ ಜಲಾಶಯಗಳಲ್ಲೊಂದಾದ ಲಿಂಗನಮಕ್ಕಿ ಸಾಕಷ್ಟು ಭರ್ತಿಯಾಗಿದೆ.


ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿ
ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ.


ವಾಡಿಕೆಗಿಂತ ಹೆಚ್ಚು ಮಳೆ
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿಯೇ ಕಂಡುಬಂದಿದೆ. ಕಳೆದ ಹತ್ತು ದಿನಗಳಲ್ಲಿ ಉತ್ತರ ಭಾಗವೂ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿದಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಇದರಿಂದ ಕೆಲ ಪ್ರದೇಶಗಳಲ್ಲಿ ಭೂಮಿ ಊಳಿ ಅನ್ನ ಬೆಳೆಯುವ ರೈತನ ಮೊಗದಲ್ಲಿ ನೆಮ್ಮದಿಯ ನಗು ಬಂದಿದ್ದರೆ ಕೆಲವೆಡೆ ಪ್ರವಾಹ ಉಂಟಾಗಿ ಕೃಷಿ ಭೂಮಿ ಜಲಾವೃತವಾಗಿ ಬೆಳೆ ನಾಶವಾಗಿದ್ದು ಹಲವು ರೈತರು ಕಂಗಾಲಾಗಿದ್ದು ಸಹ ಸುಳ್ಳಲ್ಲ.


ಪ್ರಸ್ತುತ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ.
ಕೆಆರ್​ಎಸ್​ ಜಲಾಶಯ - KRS Dam
ಗರಿಷ್ಠ ಮಟ್ಟ - 124.80 ಅಡಿ
ಒಟ್ಟು ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ - 47.93 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 36.43 ಟಿಎಂಸಿ
ಇಂದಿನ ಒಳಹರಿವು - 5,484 ಕ್ಯೂಸೆಕ್ಸ್​
ಇಂದಿನ ಹೊರಹರಿವು - 4,915 ಕ್ಯೂಸೆಕ್ಸ್​


ತುಂಗಭದ್ರಾ ಜಲಾಶಯ - Tungabhadra Dam
ಗರಿಷ್ಠ ನೀರಿನ ಮಟ್ಟ - 1,633 ಅಡಿ
ಒಟ್ಟು ಸಾಮರ್ಥ್ಯ- 105.79 ಟಿಎಂಸಿ
ಇಂದಿನ ನೀರಿನ ಮಟ್ಟ - 105.79 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 100.86 ಟಿಎಂಸಿ
ಇಂದಿನ ಒಳಹರಿವು - 28,961 ಕ್ಯೂಸೆಕ್ಸ್​
ಇಂದಿನ ಹೊರಹರಿವು - 28,961 ಕ್ಯೂಸೆಕ್ಸ್​


ಕಬಿನಿ ಜಲಾಶಯ - Kabini Dam
ಗರಿಷ್ಠ ನೀರಿನ ಮಟ್ಟ - 2,284 ಅಡಿ
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಮಟ್ಟ - 18.45 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 17.06 ಟಿಎಂಸಿ
ಇಂದಿನ ಒಳಹರಿವು - 1,067 ಕ್ಯೂಸೆಕ್ಸ್​
ಇಂದಿನ ಹೊರಹರಿವು - 1,550 ಕ್ಯೂಸೆಕ್ಸ್​


ಆಲಮಟ್ಟಿ ಜಲಾಶಯ - Almatti Dam
ಗರಿಷ್ಠ ಮಟ್ಟ - 1,704 ಅಡಿ
ಒಟ್ಟು ಸಾಮರ್ಥ್ಯ - 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 123.01 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 123.08 ಟಿಎಂಸಿ
ಇಂದಿನ ಒಳಹರಿವು- 13,951 ಕ್ಯೂಸೆಕ್ಸ್​
ಇಂದಿನ ಹೊರಹರಿವು - 13,951 ಕ್ಯೂಸೆಕ್ಸ್​


ಭದ್ರಾ ಜಲಾಶಯ - Bhadra Dam
ಗರಿಷ್ಠ ಮಟ್ಟ - 657.73 ಮೀಟರ್
ಒಟ್ಟು ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ-71.30 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ-71.12 ಟಿಎಂಸಿ
ಇಂದಿನ ಒಳಹರಿವು- 3,617 ಕ್ಯೂಸೆಕ್ಸ್​
ಇಂದಿನ ಹೊರಹರಿವು - 897 ಕ್ಯೂಸೆಕ್ಸ್​


ಘಟಪ್ರಭಾ ಜಲಾಶಯ - Ghataprabha Dam
ಗರಿಷ್ಠ ಮಟ್ಟ - 662.91 ಮೀಟರ್
ಒಟ್ಟು ಸಾಮರ್ಥ್ಯ - 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 50.86 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 51.00 ಟಿಎಂಸಿ
ಇಂದಿನ ಒಳಹರಿವು - 1,863 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 2,202 ಕ್ಯೂಸೆಕ್ಸ್


ಮಲಪ್ರಭಾ ಜಲಾಶಯ - Malaprabha Dam
ಗರಿಷ್ಠ ಮಟ್ಟ-633.80 ಮೀಟರ್
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಮಟ್ಟ - 37.73 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 37.03 ಟಿಎಂಸಿ
ಇಂದಿನ ಒಳಹರಿವು - 1,794 ಕ್ಯೂಸೆಕ್ಸ್​
ಇಂದಿನ ಹೊರಹರಿವು - 1,794 ಕ್ಯೂಸೆಕ್ಸ್​


ಹೇಮಾವತಿ ಜಲಾಶಯ - Hemavathi Dam
ಗರಿಷ್ಠ ಮಟ್ಟ - 2,922 ಅಡಿ​
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 36.59 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 28.96 ಟಿಎಂಸಿ
ಇಂದಿನ ಒಳಹರಿವು -3,128 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 3,067 ಕ್ಯೂಸೆಕ್ಸ್​


ಇದನ್ನೂ ಓದಿ: ಕಡಿಮೆಯಾಗ್ತಿಲ್ಲ ಮಳೆರಾಯನ ಅಬ್ಬರ; ಇಂದಿನ ಹವಾಮಾನ ವರದಿ


ವರಾಹಿ ಜಲಾಶಯ - Varahi Dam
ಗರಿಷ್ಠ ಮಟ್ಟ - 594.36 ಮೀಟರ್
​ಒಟ್ಟು ಸಾಮರ್ಥ್ಯ - 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 23.00 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 19.45 ಟಿಎಂಸಿ
ಇಂದಿನ ಒಳಹರಿವು - 188 ಕ್ಯೂಸೆಕ್ಸ್​
ಇಂದಿನ ಹೊರಹರಿವು - 752 ಕ್ಯೂಸೆಕ್ಸ್​


ಹಾರಂಗಿ ಜಲಾಶಯ - Harangi Dam
ಗರಿಷ್ಠ ಮಟ್ಟ - 871.38 ಮೀಟರ್
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 6.92 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 8.17 ಟಿಎಂಸಿ
ಇಂದಿನ ಒಳಹರಿವು - 312 ಕ್ಯೂಸೆಕ್ಸ್​
ಇಂದಿನ ಹೊರಹರಿವು - 1,650 ಕ್ಯೂಸೆಕ್ಸ್​​


ಲಿಂಗನಮಕ್ಕಿ ಜಲಾಶಯ - Linganamakki Dam
ಗರಿಷ್ಠ ಮಟ್ಟ - 554.44 ಮೀಟರ್
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 138.59 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 142.3 ಟಿಎಂಸಿ
ಇಂದಿನ ಒಳಹರಿವು - 2,219 ಕ್ಯೂಸೆಕ್ಸ್​
ಇಂದಿನ ಹೊರಹರಿವು - 7,019ಕ್ಯೂಸೆಕ್ಸ್


ಸೂಪಾ ಜಲಾಶಯ - Supa Dam
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ - 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 104.38 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 116.3 ಟಿಎಂಸಿ
ಇಂದಿನ ಒಳಹರಿವು - 1,092 ಕ್ಯೂಸೆಕ್ಸ್​
ಇಂದಿನ ಹೊರಹರಿವು - 2,356 ಕ್ಯೂಸೆಕ್ಸ್​


ಇದನ್ನೂ ಓದಿ: Tippu Express ಇನ್ಮುಂದೆ ಒಡೆಯರ್ ಎಕ್ಸ್​ಪ್ರೆಸ್; ಹೆಸರು ಬದಲಾವಣೆಗೆ ಯಾರು, ಏನು ಹೇಳಿದ್ರು?


ನಾರಾಯಣಪುರ ಜಲಾಶಯ - Narayanapura Dam
ಗರಿಷ್ಠ ಮಟ್ಟ - 492.25 ಮೀಟರ್
ಒಟ್ಟು ಸಾಮರ್ಥ್ಯ - 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 32.74 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 33.03 ಟಿಎಂಸಿ
ಇಂದಿನ ಒಳಹರಿವು - 20,397 ಕ್ಯೂಸೆಕ್ಸ್​
ಇಂದಿನ ಹೊರಹರಿವು - 18,773 ಕ್ಯೂಸೆಕ್ಸ್

Published by:Sandhya M
First published: