Karnataka Dams Water Level: ರಾಜ್ಯದಲ್ಲಿ ವ್ಯಾಪಕ ಮಳೆ: ಜಲಾಶಯಗಳಲ್ಲಿ ಎಷ್ಟಿದೆ ಒಳಹರಿವಿನ ಮಟ್ಟ?

Karnataka Reservoir Water Level: ಕೆಲ ದಿನಗಳಿಂದ ಮಳೆ ಕಡಿಮೆಯಾಗುತ್ತಿದ್ದು ಕೆಲವು ಸ್ಥಳಗಳಲ್ಲಿ ಪ್ರವಾಹದಿಂದಾಗಿ ಮುಳುಗಿ ಹೋಗಿದ್ದ ಚಿಕ್ಕ ಪುಟ್ಟ ಸೇತುವೆಗಳು ಮತ್ತೆ ಕಾಣತೊಡಗಿವೆ. ಒಟ್ಟಿನಲ್ಲಿ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಉತ್ತಮವಾಗಿದ್ದು ಈಗಾಗಲೇ ಕೆಲ ಜಲಾಶಯಗಳು ಭರ್ತಿಯಾಗಿವೆ.

ಯರಗೋಳ ಜಲಾಶಯ

ಯರಗೋಳ ಜಲಾಶಯ

  • Share this:
    ಈ ಬಾರಿ ರಾಜ್ಯದಲ್ಲಿ ( (State) ಮಳೆ ಸಾಕಷ್ಟು ಸುರಿದಿದ್ದು (Heavy Rain) ಪ್ರಮುಖ ಜಲಾಶಯಗಳಲ್ಲಿ ನೀರು ಸಮೃದ್ಧವಾಗಿ ಸಂಗ್ರಹಣೆಗೊಂಡಿದೆ. ಅಲ್ಲದೆ, ಕೆಲ ಜಲಾಶಯಗಳಿಂದ ಹೆಚ್ಚುವರಿಯಾದ ನೀರನ್ನು (Water) ಈಗ ಹೊರಬಿಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಮಳೆಯ ಆರ್ಭಟ ಹೆಚ್ಚಾಗಿದ್ದು, ಮತ್ತೆ ಕೆಲ ಜಲಾಶಯಗಳ (Dams) ಒಳ ಹರಿವು ಹೆಚ್ಚಾಗಿದೆ. ಆದಾಗ್ಯೂ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ.

    ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ.

    ಹೇಗಿದೆ ಪರಿಸ್ಥಿತಿ? 

    ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಕೆಲ ಪ್ರದೇಶಗಳಲ್ಲಿ ಭೂಮಿ ಊಳಿ ಅನ್ನ ಬೆಳೆಯುವ ರೈತನ ಮೊಗದಲ್ಲಿ ನೆಮ್ಮದಿಯ ನಗು ಬಂದಿದ್ದರೆ ಕೆಲವೆಡೆ ಪ್ರವಾಹ ಉಂಟಾಗಿ ಕೃಷಿ ಭೂಮಿ ಜಲಾವೃತವಾಗಿ ಬೆಳೆ ನಾಶವಾಗಿದ್ದು ಹಲವು ರೈತರು ಕಂಗಾಲಾಗಿದ್ದು ಸಹ ಸುಳ್ಳಲ್ಲ. ಕೆಲ ದಿನಗಳಿಂದ ಮಳೆ ಕಡಿಮೆಯಾಗುತ್ತಿದ್ದು ಕೆಲವು ಸ್ಥಳಗಳಲ್ಲಿ ಪ್ರವಾಹದಿಂದಾಗಿ ಮುಳುಗಿ ಹೋಗಿದ್ದ ಚಿಕ್ಕ ಪುಟ್ಟ ಸೇತುವೆಗಳು ಮತ್ತೆ ಕಾಣತೊಡಗಿವೆ. ಒಟ್ಟಿನಲ್ಲಿ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಉತ್ತಮವಾಗಿದ್ದು ಈಗಾಗಲೇ ಕೆಲ ಜಲಾಶಯಗಳು ಭರ್ತಿಯಾಗಿವೆ.

    ಇಂದು ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ.
    ಕೆಆರ್ಎಸ್ ಜಲಾಶಯ - KRS Dam
    ಗರಿಷ್ಠ ಮಟ್ಟ - 124.80 ಅಡಿ
    ಒಟ್ಟು ಸಾಮರ್ಥ್ಯ - 49.45 ಟಿಎಂಸಿ
    ಇಂದಿನ ನೀರಿನ ಮಟ್ಟ – 48.48 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ – 38.11 ಟಿಎಂಸಿ
    ಇಂದಿನ ಒಳಹರಿವು –24,193 ಕ್ಯೂಸೆಕ್ಸ್
    ಇಂದಿನ ಹೊರಹರಿವು - 32,383 ಕ್ಯೂಸೆಕ್ಸ್

    ಇದನ್ನೂ ಓದಿ: Karnataka Weather Report: ಇಂದು ಎಲ್ಲೆಲ್ಲಿ ಮಳೆ ಸುರಿಯಲಿದೆ? ಹೇಗಿರಲಿದೆ ನಿಮ್ಮೂರ ಹವಾಮಾನ?

    ತುಂಗಭದ್ರಾ ಜಲಾಶಯ - Tungabhadra Dam
    ಗರಿಷ್ಠ ನೀರಿನ ಮಟ್ಟ - 1,633 ಅಡಿ
    ಒಟ್ಟು ಸಾಮರ್ಥ್ಯ- 105.79 ಟಿಎಂಸಿ
    ಇಂದಿನ ನೀರಿನ ಮಟ್ಟ – 103.66 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 100.32 ಟಿಎಂಸಿ
    ಇಂದಿನ ಒಳಹರಿವು – 98,850 ಕ್ಯೂಸೆಕ್ಸ್
    ಇಂದಿನ ಹೊರಹರಿವು – 1,04,891 ಕ್ಯೂಸೆಕ್ಸ್

    ಕಬಿನಿ ಜಲಾಶಯ-Kabini Dam
    ಗರಿಷ್ಠ ನೀರಿನ ಮಟ್ಟ - 2,284 ಅಡಿ
    ಒಟ್ಟು ಸಾಮರ್ಥ್ಯ - 19.52 ಟಿಎಂಸಿ
    ಇಂದಿನ ನೀರಿನ ಮಟ್ಟ – 19.24 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ – 17.15 ಟಿಎಂಸಿ
    ಇಂದಿನ ಒಳಹರಿವು – 15,177 ಕ್ಯೂಸೆಕ್ಸ್
    ಇಂದಿನ ಹೊರಹರಿವು – 14,675 ಕ್ಯೂಸೆಕ್ಸ್

    ಆಲಮಟ್ಟಿ ಜಲಾಶಯ-Almatti Dam
    ಗರಿಷ್ಠ ಮಟ್ಟ - 1,704 ಅಡಿ
    ಒಟ್ಟು ಸಾಮರ್ಥ್ಯ - 123.08 ಟಿಎಂಸಿ
    ಇಂದಿನ ನೀರಿನ ಮಟ್ಟ- 105.40 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ-123.08 ಟಿಎಂಸಿ
    ಇಂದಿನ ಒಳಹರಿವು- 39,201 ಕ್ಯೂಸೆಕ್ಸ್
    ಇಂದಿನ ಹೊರಹರಿವು – 39,201 ಕ್ಯೂಸೆಕ್ಸ್

    ಭದ್ರಾ ಜಲಾಶಯ-Bhadra Dam
    ಗರಿಷ್ಠ ಮಟ್ಟ - 657.73 ಮೀಟರ್
    ಒಟ್ಟು ಸಾಮರ್ಥ್ಯ - 71.54 ಟಿಎಂಸಿ
    ಇಂದಿನ ನೀರಿನ ಮಟ್ಟ- 70.65 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 70.78 ಟಿಎಂಸಿ
    ಇಂದಿನ ಒಳಹರಿವು- 11,082 ಕ್ಯೂಸೆಕ್ಸ್
    ಇಂದಿನ ಹೊರಹರಿವು – 8,644 ಕ್ಯೂಸೆಕ್ಸ್

    ಘಟಪ್ರಭಾ ಜಲಾಶಯ-Ghataprabha Dam
    ಗರಿಷ್ಠ ಮಟ್ಟ - 662.91 ಮೀಟರ್
    ಒಟ್ಟು ಸಾಮರ್ಥ್ಯ - 51.00 ಟಿಎಂಸಿ
    ಇಂದಿನ ನೀರಿನ ಮಟ್ಟ- 51.00 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 51.00 ಟಿಎಂಸಿ
    ಇಂದಿನ ಒಳಹರಿವು – 2,458 ಕ್ಯೂಸೆಕ್ಸ್
    ಇಂದಿನ ಹೊರಹರಿವು – 2,458 ಕ್ಯೂಸೆಕ್ಸ್

    ಮಲಪ್ರಭಾ ಜಲಾಶಯ-Malaprabha Dam
    ಗರಿಷ್ಠ ಮಟ್ಟ-633.80 ಮೀಟರ್
    ಒಟ್ಟು ಸಾಮರ್ಥ್ಯ - 37.73 ಟಿಎಂಸಿ
    ಇಂದಿನ ನೀರಿನ ಮಟ್ಟ – 37.73 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ – 36.62 ಟಿಎಂಸಿ
    ಇಂದಿನ ಒಳಹರಿವು – 3,894 ಕ್ಯೂಸೆಕ್ಸ್
    ಇಂದಿನ ಹೊರಹರಿವು – 3,894 ಕ್ಯೂಸೆಕ್ಸ್

    ಹೇಮಾವತಿ ಜಲಾಶಯ-Hemavathi Dam
    ಗರಿಷ್ಠ ಮಟ್ಟ - 2,922 ಅಡಿ
    ಒಟ್ಟು ಸಾಮರ್ಥ್ಯ - 37.01 ಟಿಎಂಸಿ
    ಇಂದಿನ ನೀರಿನ ಮಟ್ಟ- 30.72 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 30.76 ಟಿಎಂಸಿ
    ಇಂದಿನ ಒಳಹರಿವು – 8,653 ಕ್ಯೂಸೆಕ್ಸ್
    ಇಂದಿನ ಹೊರಹರಿವು – 9,150 ಕ್ಯೂಸೆಕ್ಸ್

    ವರಾಹಿ ಜಲಾಶಯ-Varahi Dam
    ಗರಿಷ್ಠ ಮಟ್ಟ - 594.36 ಮೀಟರ್
    ಒಟ್ಟು ಸಾಮರ್ಥ್ಯ - 31.10 ಟಿಎಂಸಿ
    ಇಂದಿನ ನೀರಿನ ಮಟ್ಟ- 21.64 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 18.01 ಟಿಎಂಸಿ
    ಇಂದಿನ ಒಳಹರಿವು – 751 ಕ್ಯೂಸೆಕ್ಸ್
    ಇಂದಿನ ಹೊರಹರಿವು – 0 ಕ್ಯೂಸೆಕ್ಸ್

    ಹಾರಂಗಿ ಜಲಾಶಯ-Harangi Dam
    ಗರಿಷ್ಠ ಮಟ್ಟ - 871.38 ಮೀಟರ್
    ಒಟ್ಟು ಸಾಮರ್ಥ್ಯ - 8.50 ಟಿಎಂಸಿ
    ಇಂದಿನ ನೀರಿನ ಮಟ್ಟ- 7.67 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 8.29 ಟಿಎಂಸಿ
    ಇಂದಿನ ಒಳಹರಿವು – 1,632 ಕ್ಯೂಸೆಕ್ಸ್
    ಇಂದಿನ ಹೊರಹರಿವು – 1,600 ಕ್ಯೂಸೆಕ್ಸ್

    ಲಿಂಗನಮಕ್ಕಿ ಜಲಾಶಯ-Linganamakki Dam
    ಗರಿಷ್ಠ ಮಟ್ಟ - 554.44 ಮೀಟರ್
    ಒಟ್ಟು ಸಾಮರ್ಥ್ಯ - 151.75 ಟಿಎಂಸಿ
    ಇಂದಿನ ನೀರಿನ ಮಟ್ಟ- 137.65 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ – 133.9 ಟಿಎಂಸಿ
    ಇಂದಿನ ಒಳಹರಿವು – 5,223 ಕ್ಯೂಸೆಕ್ಸ್
    ಇಂದಿನ ಹೊರಹರಿವು – 5,102 ಕ್ಯೂಸೆಕ್ಸ್

    ಸೂಪಾ ಜಲಾಶಯ-Supa Dam
    ಗರಿಷ್ಠ ಮಟ್ಟ- 564.00 ಮೀಟರ್
    ಒಟ್ಟು ಸಾಮರ್ಥ್ಯ - 145.33 ಟಿಎಂಸಿ
    ಇಂದಿನ ನೀರಿನ ಮಟ್ಟ- 94.82 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 110.3 ಟಿಎಂಸಿ
    ಇಂದಿನ ಒಳಹರಿವು – 3,081 ಕ್ಯೂಸೆಕ್ಸ್
    ಇಂದಿನ ಹೊರಹರಿವು – 8,664 ಕ್ಯೂಸೆಕ್ಸ್

    ನಾರಾಯಣಪುರ ಜಲಾಶಯ- Narayanapura Dam
    ಗರಿಷ್ಠ ಮಟ್ಟ - 492.25 ಮೀಟರ್
    ಒಟ್ಟು ಸಾಮರ್ಥ್ಯ - 33.31 ಟಿಎಂಸಿ
    ಇಂದಿನ ನೀರಿನ ಮಟ್ಟ- 29.70 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ – 31.50 ಟಿಎಂಸಿ
    ಇಂದಿನ ಒಳಹರಿವು – 107,098 ಕ್ಯೂಸೆಕ್ಸ್
    ಇಂದಿನ ಹೊರಹರಿವು – 1,39,677 ಕ್ಯೂಸೆಕ್ಸ್
    Published by:Kavya V
    First published: