HOME » NEWS » State » KARNATAKA DAM WATER LEVEL LESS WATER IN KARNATAKA RESERVOIR DUE TO LESS RAIN RMD

Karnataka Dam Water Level: ಆಗಸ್ಟ್​ ಬಂದರೂ ಸುರಿಯುತ್ತಿಲ್ಲ ಮಳೆ; ಇಂದಿನ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಜೂನ್​ ಹಾಗೂ ಜುಲೈ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗಿತ್ತು. ಆದರೆ, ನಂತರ ಮಳೆ ಆಗಲೇ ಇಲ್ಲ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ನಿರೀಕ್ಷಿತ ಮಳೆಯಾಗಿಲ್ಲ.

news18-kannada
Updated:August 1, 2020, 9:17 AM IST
Karnataka Dam Water Level: ಆಗಸ್ಟ್​ ಬಂದರೂ ಸುರಿಯುತ್ತಿಲ್ಲ ಮಳೆ; ಇಂದಿನ ಜಲಾಶಯಗಳ ನೀರಿನ ಮಟ್ಟ ಹೀಗಿದೆ
ಕರ್ನಾಟಕ ಡ್ಯಾಮ್
  • Share this:
ಬೆಂಗಳೂರು (ಆ.1):  ಆಗಸ್ಟ್​ ತಿಂಗಳು ಆರಂಭಗೊಂಡಿದೆ.ಕಳೆದ ವರ್ಷ ಈ ಹೊತ್ತಿಗೆ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಬಾರಿ ಮಳೆ ಇಲ್ಲದೆ ಜನ ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೇಸಿಗೆ ಸಮಯದಲ್ಲಿ ನೀರಿಗೆ ಹಾಹಾಕಾರ ಏಳುವುದು ಗ್ಯಾರಂಟಿ . ಏಕೆಂದರೆ ಈಗ ಅಂದುಕೊಂಡ ಮಟ್ಟಕ್ಕೆ ಜಲಾಶಯಗಳು ತುಂಬುತ್ತಿಲ್ಲ.

ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಜೂನ್​ ಹಾಗೂ ಜುಲೈ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗಿತ್ತು. ಆದರೆ, ನಂತರ ಮಳೆ ಆಗಲೇ ಇಲ್ಲ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ನಿರೀಕ್ಷಿತ ಮಳೆಯಾಗಿಲ್ಲ.

ದಕ್ಷಿಣದಲ್ಲಿ ಹಾಸನ ಮೈಸೂರು ಸೇರಿದಂತೆ ಕಾವೇರಿ ಕೊಳ್ಳ ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ರೈತರಿಗೆ ಅನುಕೂಲ. ಆದರೆ, ಮೈಸೂರು, ಹಾಸನಕ್ಕಿಂತ ಬೆಂಗಳೂರು ನಗರ ಪ್ರದೇಶದಲ್ಲೇ ಅಧಿಕ ಮಳೆಯಾಗಿರುವ ಕಾರಣ ಕಾವೇರಿ ಆಶ್ರಿತ ಅಣೆಕಟ್ಟೆಗಳು ಈ ವರ್ಷ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ-554.4 ಮೀಟರ್​
ಇಂದಿನ ಮಟ್ಟ- 539.78 ಮೀಟರ್​
ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿಇಂದಿನ ನೀರು ಸಂಗ್ರಹ- 40.85 ಟಿಎಂಸಿ
ಇಂದಿನ ಒಳಹರಿವು- 3,940 ಕ್ಯೂಸೆಕ್ಸ್​
ಇಂದಿನ ಹೊರ ಹರಿವು-4922 ಕ್ಯೂಸೆಕ್ಸ್​

ವರಾಹಿ ಜಲಾಶಯ
ಗರಿಷ್ಠ ಮಟ್ಟ-594.36 ಮೀಟರ್​
ಇಂದಿನ ಮಟ್ಟ- 576.36 ಮೀಟರ್​
ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
ಇಂದಿನ ನೀರು ಸಂಗ್ರಹ-6.53  ಟಿಎಂಸಿ
ಇಂದಿನ ಒಳಹರಿವು- 450  ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 450 ಕ್ಯೂಸೆಕ್ಸ್​

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ-871.42 ಮೀಟರ್​
ಇಂದಿನ ಮಟ್ಟ- 870.87 ಮೀಟರ್​
ಗರಿಷ್ಠ ಸಾಮರ್ಥ್ಯ- 8.50 ಟಿಎಂಸಿ
ಇಂದಿನ ನೀರು ಸಂಗ್ರಹ-7.87 ಟಿಎಂಸಿ
ಇಂದಿನ ಒಳಹರಿವು- 775 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1,575 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ-890.63 ಮೀಟರ್​
ಇಂದಿನ ಮಟ್ಟ- 881.65 ಮೀಟರ್​
ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
ಇಂದಿನ ನೀರು ಸಂಗ್ರಹ- 15.47  ಟಿಎಂಸಿ
ಇಂದಿನ ಒಳಹರಿವು- 1, 521 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 500 ಕ್ಯೂಸೆಕ್ಸ್​

ಕೆಆರ್​ಎಸ್​ ಜಲಾಶಯ​
ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
ಇಂದಿನ ನೀರು ಸಂಗ್ರಹ- 27.86 ಟಿಎಂಸಿ
ಇಂದಿನ ಒಳಹರಿವು- 1589 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 4,553 ಕ್ಯೂಸೆಕ್ಸ್​

ಕಬಿನಿ ಜಲಾಶಯ
ಗರಿಷ್ಠ ಮಟ್ಟ-696.16 ಮೀಟರ್​
ಇಂದಿನ ಮಟ್ಟ- 694.13 ಮೀಟರ್​
ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
ಇಂದಿನ ನೀರು ಸಂಗ್ರಹ-15.43 ಟಿಎಂಸಿ
ಇಂದಿನ ಒಳಹರಿವು- 4459 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 2,500 ಕ್ಯೂಸೆಕ್ಸ್​

ತುಂಗಾ ಜಲಾಶಯ
ಗರಿಷ್ಠ ಮಟ್ಟ-497.74 ಮೀಟರ್​
ಇಂದಿನ ಮಟ್ಟ- 491.49  ಮೀಟರ್​
ಗರಿಷ್ಠ ಸಾಮರ್ಥ್ಯ- 103.16 ಟಿಎಂಸಿ
ಇಂದಿನ ನೀರು ಸಂಗ್ರಹ- 40.24 ಟಿಎಂಸಿ
ಇಂದಿನ ಒಳಹರಿವು- 8085 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 4,119 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ-662.94 ಮೀಟರ್​
ಇಂದಿನ ಮಟ್ಟ- 652.48  ಮೀಟರ್​
ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
ಇಂದಿನ ನೀರು ಸಂಗ್ರಹ- 27.38 ಟಿಎಂಸಿ
ಇಂದಿನ ಒಳಹರಿವು- 2,663 ​ಕ್ಯೂಸೆಕ್ಸ್
ಇಂದಿನ ಹೊರ ಹರಿವು- 144 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ-633.83 ಮೀಟರ್​
ಇಂದಿನ ಮಟ್ಟ- 628.23 ಮೀಟರ್​
ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
ಇಂದಿನ ನೀರು ಸಂಗ್ರಹ- 17.47 ಟಿಎಂಸಿ
ಇಂದಿನ ಒಳಹರಿವು- 1,148 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 164ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ-519.63ಮೀಟರ್​
ಇಂದಿನ ಮಟ್ಟ- 517.42 ಮೀಟರ್​
ಗರಿಷ್ಠ ಸಾಮರ್ಥ್ಯ- 119.26 ಟಿಎಂಸಿ
ಇಂದಿನ ನೀರು ಸಂಗ್ರಹ- 89.40 ಟಿಎಂಸಿ
ಇಂದಿನ ಒಳಹರಿವು- 9,346 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1,922 ಕ್ಯೂಸೆಕ್ಸ್​
Published by: Rajesh Duggumane
First published: August 1, 2020, 9:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories