ಅಬ್ಬರದ ಮಳೆ ಮುಂದುವರಿದರೆ ಇನ್ನು ಮೂರೇ ದಿನಕ್ಕೆ KRS ಜಲಾಶಯ ಭರ್ತಿ; ಡ್ಯಾಂ ಕೆಳ ಭಾಗದ ಜನರಲ್ಲಿ ಹೆಚ್ಚಿದ ಆತಂಕ

ಜಲಾಶಯದ ಸುರಕ್ಷತಾ ದೃಷ್ಟಿಯಿಂದ ಜಲಾಶಯದ ಅಧಿಕಾರಿಗಳು ಈಗಾಗಲೇ ಡ್ಯಾಂ ನಿಂದ ನದಿಗೆ 30 ಸಾವಿರ ಕ್ಯೂಸೆಕ್  ನೀರು ಹರಿಯ ಬಿಟ್ಟಿದ್ದಾರೆ.ಅಲ್ಲದೆ,  ಜಲಾಶಯದ ನದೀ ಪಾತ್ರದ ಜನತೆ ನದಿ ಬಳಿ ತೆರದಂತೆ ಎಚ್ಚರಿಕೆ ನೀಡಿದ್ದಾರೆ.

news18-kannada
Updated:August 8, 2020, 7:41 AM IST
ಅಬ್ಬರದ ಮಳೆ ಮುಂದುವರಿದರೆ ಇನ್ನು ಮೂರೇ ದಿನಕ್ಕೆ KRS ಜಲಾಶಯ ಭರ್ತಿ; ಡ್ಯಾಂ ಕೆಳ ಭಾಗದ ಜನರಲ್ಲಿ ಹೆಚ್ಚಿದ ಆತಂಕ
ಕೆಆರ್​ಎಸ್​
  • Share this:
ಮಂಡ್ಯ (ಆಗಸ್ಟ್​ 8): ಮಂಡ್ಯ, ಮೈಸೂರು ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದೆ. ಕೆ.ಆರ್.ಎಸ್. ಡ್ಯಾಂ ಮೇಲ್ಭಾಗದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ  ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬಹುತೇಕ ಭರ್ತಿಯಾಗುವ ಸಂತಸ ಒಂದು ಕಡೆಯಾದರೆ, ಡ್ಯಾಂನ ಕೆಳ ಭಾಗದಲ್ಲಿ ಜನರಿಗೆ ಪ್ರವಾಹದ ಆತಂಕ ಮತ್ತೊಂದು ಕಡೆಯಾಗಿದೆ.

ಹೌದು! ಕೊಡಗು ಸೇರಿದಂತೆ KRSಡ್ಯಾಂನ ಮೇಲ್ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರಿಂದಾಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ.124.80 ಗರಿಷ್ಟ ಅಡಿ ಎತ್ತರದ KRS ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಹರಿದು ಬರುತ್ತಿದ್ದು,ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ‌. ಈಗಾಗಲೇ  ಜಲಾಶಯದ ನೀರಿನ‌ ಮಟ್ಟ116 ಅಡಿ ದಾಟಿದೆ. ಇದೇ ರೀತಿ ನೀರಿನ‌ಮಟ್ಟ ಹೆಚ್ಚಾದ್ರೆ  ಇನ್ನೆರಡು ಮೂರು ದಿನದಲ್ಲಿ ಜಲಾಶಯ ಭರ್ತಿಯಾಗಲಿದೆ.

ಜಲಾಶಯದ ಸುರಕ್ಷತಾ ದೃಷ್ಟಿಯಿಂದ ಜಲಾಶಯದ ಅಧಿಕಾರಿಗಳು ಈಗಾಗಲೇ ಡ್ಯಾಂ ನಿಂದ ನದಿಗೆ 30 ಸಾವಿರ ಕ್ಯೂಸೆಕ್  ನೀರು ಹರಿಯ ಬಿಟ್ಟಿದ್ದಾರೆ.ಅಲ್ಲದೆ,  ಜಲಾಶಯದ ನದೀ ಪಾತ್ರದ ಜನತೆ ನದಿ ಬಳಿ ತೆರದಂತೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಕೆ.ಆರ್.ಎಸ್. ಜಲಾಶಯದಿಂದ ನದಿಗೆ  30 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದು  ಜಿಲ್ಲೆಯ ಡ್ಯಾಂ ಕೆಳಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೆ, ಡ್ಯಾಂ ಒಳಹರಿವು ಹೆಚ್ಚಾದ್ರೆ 50  ಸಾವಿರ ಕ್ಕೂ ಹೆಚ್ಚು ಕ್ಯೂಸೆಕ್  ನೀರು ಬಿಡುಗಡೆ ಮಾಡಲಿರುವ ಬಗ್ಗೆ ಕಾವೇರಿ ನೀರಾವರಿ ಅಧಿಕಾರಿಗಳು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಈಗಾಗಲೇ ಸ್ಥಳೀಯ ತಾಲೂಕು ಆಡಳಿತದ ಅಧಿಕಾರಿ ಅಗತ್ಯ ಮುನ್ನೇಚ್ಚರಿಕೆ ಕ್ರಮ ಕೈಗೊಂಡಿದ್ದು ನದೀ ಪಾತ್ರದ ಹಳ್ಳಿಗಳಲ್ಲಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಪ್ರವಾಹದ ನಿರಾಶ್ರಿತರಿಗೆ ಗಂಜಿ ಕೇಂದ್ರದ ವ್ಯವಸ್ಥೆ ಸೇರಿದಂತೆ ಜನ ಜಾನುವಾರುಗಳ ರಕ್ಷಣೆಗೆ ಸಿದ್ಧತೆ ಮಾಡಿ ಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಅಗತ್ಯ ಬಿದ್ದರೆ ಕೇಂದ್ರದಿಂದ NDRF ಪಡೆಯನ್ನು ಕರೆಸಲು ಮೇಲಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನು  ಪ್ರವಾಹ ಆತಂಕದಿಂದ ಮುಳುಗಡೆ ಗ್ರಾಮಗಳನ್ನು ಗುರ್ತಿಸಿ ಜನರನ್ನು‌ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಿ ಅಗತ್ಯ ಮುನ್ನೇಚ್ಚರಿಕೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ  ಮಂಡ್ಯ ಜಿಲ್ಲೆಯ ಜೀವನಾಡಿ KRS ಜಲಾಶಯ ತುಂಬ್ತಿರೋದು ಒಂದುಕಡೆ ಜಿಲ್ಲೆಗೆ ಸಂತಸ ವಿಷಯವಾದ್ರು,ಡ್ಯಾಂನ ಕೆಳಭಾಗದ ಜನರಲ್ಲಿ  ಕಾವೇರಿ ನದಿಯ ಪ್ರವಾಹ ಭೀತಿಯ ಆತಂಕವನ್ನು ಉಂಟು ಮಾಡ್ತಿರೋದಂತು ಸುಳ್ಳಲ್ಲ.
Published by: Rajesh Duggumane
First published: August 8, 2020, 7:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading