• Home
  • »
  • News
  • »
  • state
  • »
  • Karnataka Dams Water Level: ರಾಜ್ಯದ ಯಾವ ಆಣೆಕಟ್ಟಿನಲ್ಲಿ ಎಷ್ಟು ನೀರಿದೆ? ಇಲ್ಲಿದೆ ಲೇಟೆಸ್ಟ್ ಮಾಹಿತಿ

Karnataka Dams Water Level: ರಾಜ್ಯದ ಯಾವ ಆಣೆಕಟ್ಟಿನಲ್ಲಿ ಎಷ್ಟು ನೀರಿದೆ? ಇಲ್ಲಿದೆ ಲೇಟೆಸ್ಟ್ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ.

  • News18 Kannada
  • Last Updated :
  • Bangalore [Bangalore], India
  • Share this:

    ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿ, ಚಳಿ ಕೂಡ ಆರಂಭವಾಗಿದೆ. ಆದರೆ ಮೂರು ದಿನಗಳಿಂದ ಬೆಂಗಳೂರಿನಲ್ಲಿ (Bengaluru Rains) ಮಾತ್ರ ಬಿಟ್ಟು ಬಿಡದೇ ಮಳೆ ಸುರಿಯುತ್ತಲೇ ಇದೆ. ಇನ್ನು ಹಲವೆಡೆ ಮೋಡ ಕವಿದ (Karnataka Weather Update) ವಾತಾವರಣವಿದ್ದು, ರಾಜ್ಯದ ಕೆಲ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ವರದಿ ಮಾಡಿದೆ. ಈ ವರ್ಷ ವರುಣನ ಕೃಪೆ ರಾಜ್ಯದ ಮೇಲೆ ಉತ್ತಮವಾಗಿದ್ದು, ಈ ಹಿನ್ನೆಲೆಯಿಂದಾಗಿ ಜಲಾಶಯಗಳು (Karnataka Dams Water Level) ತುಂಬಿ ಹರಿದಿವೆ. ಸ್ವಲ್ಪ ದಿನದ ಹಿಂದೆ ಮಳೆ ಪ್ರಮಾಣ ಇಳಿಕೆಯಾಗಿದ್ದರಿಂದ, ಸಹಜವಾಗಿಯೇ ಜಲಾಶಯಗಳ ಒಳಹರಿವಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದ್ದು ಅದರಂತೆ ಹೊರಹರಿವಿನ ಪ್ರಮಾಣದಲ್ಲೂ ನಿಧಾನವಾಗಿ ಇಳಿಕೆಯಾಗಿತ್ತು.


    ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಅನುಕೂಲವಾಗಲಿದೆ.


    ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿ
    ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್‌‌‌‌‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ.


    ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. .


    ಪ್ರಸ್ತುತ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ. (2-11-2022 ರಂತೆ)
    ಕೆಆರ್​ಎಸ್​ ಜಲಾಶಯ - KRS Dam
    ಗರಿಷ್ಠ ಮಟ್ಟ - 124.80 ಅಡಿ
    ಒಟ್ಟು ಸಾಮರ್ಥ್ಯ - 49.45 ಟಿಎಂಸಿ
    ಇಂದಿನ ನೀರಿನ ಮಟ್ಟ - 48.87 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 49.45 ಟಿಎಂಸಿ
    ಇಂದಿನ ಒಳಹರಿವು - 4,705 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 6,432 ಕ್ಯೂಸೆಕ್ಸ್​


    ತುಂಗಭದ್ರಾ ಜಲಾಶಯ - Tungabhadra Dam
    ಗರಿಷ್ಠ ನೀರಿನ ಮಟ್ಟ - 1,633 ಅಡಿ
    ಒಟ್ಟು ಸಾಮರ್ಥ್ಯ- 105.79 ಟಿಎಂಸಿ
    ಇಂದಿನ ನೀರಿನ ಮಟ್ಟ - 104.3೦ ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 99.78 ಟಿಎಂಸಿ
    ಇಂದಿನ ಒಳಹರಿವು - 7,333 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 8,727 ಕ್ಯೂಸೆಕ್ಸ್​


    ಕಬಿನಿ ಜಲಾಶಯ - Kabini Dam
    ಗರಿಷ್ಠ ನೀರಿನ ಮಟ್ಟ - 2,284 ಅಡಿ
    ಒಟ್ಟು ಸಾಮರ್ಥ್ಯ - 19.52 ಟಿಎಂಸಿ
    ಇಂದಿನ ನೀರಿನ ಮಟ್ಟ - 18.10 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 19.52 ಟಿಎಂಸಿ
    ಇಂದಿನ ಒಳಹರಿವು - 679 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 2,050 ಕ್ಯೂಸೆಕ್ಸ್​


    ಆಲಮಟ್ಟಿ ಜಲಾಶಯ - Almatti Dam
    ಗರಿಷ್ಠ ಮಟ್ಟ - 1,704 ಅಡಿ
    ಒಟ್ಟು ಸಾಮರ್ಥ್ಯ - 123.08 ಟಿಎಂಸಿ
    ಇಂದಿನ ನೀರಿನ ಮಟ್ಟ- 123.08 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 112.29 ಟಿಎಂಸಿ
    ಇಂದಿನ ಒಳಹರಿವು- 10,109 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 10,109 ಕ್ಯೂಸೆಕ್ಸ್​


    ಭದ್ರಾ ಜಲಾಶಯ - Bhadra Dam
    ಗರಿಷ್ಠ ಮಟ್ಟ - 657.73 ಮೀಟರ್
    ಒಟ್ಟು ಸಾಮರ್ಥ್ಯ - 71.54 ಟಿಎಂಸಿ
    ಇಂದಿನ ನೀರಿನ ಮಟ್ಟ- 70.62 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 71.22 ಟಿಎಂಸಿ
    ಇಂದಿನ ಒಳಹರಿವು- 3,363 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 2,762 ಕ್ಯೂಸೆಕ್ಸ್​


    ಘಟಪ್ರಭಾ ಜಲಾಶಯ - Ghataprabha Dam
    ಗರಿಷ್ಠ ಮಟ್ಟ - 662.91 ಮೀಟರ್
    ಒಟ್ಟು ಸಾಮರ್ಥ್ಯ - 51.00 ಟಿಎಂಸಿ
    ಇಂದಿನ ನೀರಿನ ಮಟ್ಟ- 51 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 48.60 ಟಿಎಂಸಿ
    ಇಂದಿನ ಒಳಹರಿವು - 349 ಕ್ಯೂಸೆಕ್ಸ್​​
    ಇಂದಿನ ಹೊರಹರಿವು - 185 ಕ್ಯೂಸೆಕ್ಸ್


    ಮಲಪ್ರಭಾ ಜಲಾಶಯ - Malaprabha Dam
    ಗರಿಷ್ಠ ಮಟ್ಟ-633.80 ಮೀಟರ್
    ಒಟ್ಟು ಸಾಮರ್ಥ್ಯ - 37.73 ಟಿಎಂಸಿ
    ಇಂದಿನ ನೀರಿನ ಮಟ್ಟ - 37.73 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 35.77 ಟಿಎಂಸಿ
    ಇಂದಿನ ಒಳಹರಿವು - 394 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 394 ಕ್ಯೂಸೆಕ್ಸ್​


    ಹೇಮಾವತಿ ಜಲಾಶಯ - Hemavathi Dam
    ಗರಿಷ್ಠ ಮಟ್ಟ - 2,922 ಅಡಿ​
    ಒಟ್ಟು ಸಾಮರ್ಥ್ಯ - 37.10 ಟಿಎಂಸಿ
    ಇಂದಿನ ನೀರಿನ ಮಟ್ಟ- 35.75 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 26.36 ಟಿಎಂಸಿ
    ಇಂದಿನ ಒಳಹರಿವು - 919 ಕ್ಯೂಸೆಕ್ಸ್​​
    ಇಂದಿನ ಹೊರಹರಿವು - 3,092 ಕ್ಯೂಸೆಕ್ಸ್​


    ವರಾಹಿ ಜಲಾಶಯ - Varahi Dam
    ಗರಿಷ್ಠ ಮಟ್ಟ - 594.36 ಮೀಟರ್
    ​ಒಟ್ಟು ಸಾಮರ್ಥ್ಯ - 31 ಟಿಎಂಸಿ
    ಇಂದಿನ ನೀರಿನ ಮಟ್ಟ- 21.74 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 18.33 ಟಿಎಂಸಿ
    ಇಂದಿನ ಒಳಹರಿವು - 49 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 759 ಕ್ಯೂಸೆಕ್ಸ್​


    ಇದನ್ನೂ ಓದಿ: Gold Silver Price Today: ಪವಿತ್ರ ಏಕಾದಶಿಯಂದು ಕುಸಿದ ಬೆಳ್ಳಿ-ಬಂಗಾರ ಬೆಲೆ!


    ಹಾರಂಗಿ ಜಲಾಶಯ - Harangi Dam
    ಗರಿಷ್ಠ ಮಟ್ಟ - 871.38 ಮೀಟರ್
    ಒಟ್ಟು ಸಾಮರ್ಥ್ಯ - 8.50 ಟಿಎಂಸಿ
    ಇಂದಿನ ನೀರಿನ ಮಟ್ಟ- 6.59 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 7.94 ಟಿಎಂಸಿ
    ಇಂದಿನ ಒಳಹರಿವು - 661 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 1,862 ಕ್ಯೂಸೆಕ್ಸ್​​


    ಲಿಂಗನಮಕ್ಕಿ ಜಲಾಶಯ - Linganamakki Dam
    ಗರಿಷ್ಠ ಮಟ್ಟ - 554.44 ಮೀಟರ್
    ಒಟ್ಟು ಸಾಮರ್ಥ್ಯ - 151.75 ಟಿಎಂಸಿ
    ಇಂದಿನ ನೀರಿನ ಮಟ್ಟ- 129.84 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 136.6 ಟಿಎಂಸಿ
    ಇಂದಿನ ಒಳಹರಿವು - 1,001 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 6,619 ಕ್ಯೂಸೆಕ್ಸ್


    ಸೂಪಾ ಜಲಾಶಯ - Supa Dam
    ಗರಿಷ್ಠ ಮಟ್ಟ- 564.00 ಮೀಟರ್
    ಒಟ್ಟು ಸಾಮರ್ಥ್ಯ - 145.33 ಟಿಎಂಸಿ
    ಇಂದಿನ ನೀರಿನ ಮಟ್ಟ- 103.62 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ- 113.20 ಟಿಎಂಸಿ
    ಇಂದಿನ ಒಳಹರಿವು - 1,001 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 6,619 ಕ್ಯೂಸೆಕ್ಸ್​


    ಇದನ್ನೂ ಓದಿ: Kambala Calendar: ಕಂಬಳ ಸೀಸನ್ ಶುರು! ಇಲ್ಲಿದೆ ನೋಡಿ ಟೈಮ್​ ಟೇಬಲ್


    ನಾರಾಯಣಪುರ ಜಲಾಶಯ - Narayanapura Dam
    ಗರಿಷ್ಠ ಮಟ್ಟ - 492.25 ಮೀಟರ್
    ಒಟ್ಟು ಸಾಮರ್ಥ್ಯ - 33.31 ಟಿಎಂಸಿ
    ಇಂದಿನ ನೀರಿನ ಮಟ್ಟ- 32.98 ಟಿಎಂಸಿ
    ಕಳೆದ ವರ್ಷ ನೀರಿನ ಮಟ್ಟ - 29.70 ಟಿಎಂಸಿ
    ಇಂದಿನ ಒಳಹರಿವು - 8,566 ಕ್ಯೂಸೆಕ್ಸ್​
    ಇಂದಿನ ಹೊರಹರಿವು - 12,399 ಕ್ಯೂಸೆಕ್ಸ್

    Published by:ಗುರುಗಣೇಶ ಡಬ್ಗುಳಿ
    First published: