• Home
  • »
  • News
  • »
  • state
  • »
  • Karnataka Dams Water Level: ನವೆಂಬರ್ ಬಂದರೂ ಕಡಿಮೆಯಾಗಿಲ್ಲ ಜಲಾಶಯಗಳ ಹರಿವು, ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಂತಿದೆ

Karnataka Dams Water Level: ನವೆಂಬರ್ ಬಂದರೂ ಕಡಿಮೆಯಾಗಿಲ್ಲ ಜಲಾಶಯಗಳ ಹರಿವು, ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಂತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Dam Water Level: ಸಾಮಾನ್ಯವಾಗಿ ನವೆಂಬರ್ ಎರಡನೇ ವಾರದಲ್ಲಿ ಜಲಾಶಯಗಳ ಒಳ ಹರಿವು ಕಡಿಮೆಯಾಗಿ, ನೀರಿನ ಸಂಗ್ರಹ ಕಡಿಮೆಯಾಗುತ್ತಿತ್ತು. ಆದರೆ ಈ ವರ್ಷ ಚೆನ್ನಾಗಿ ಮಳೆಯಾಗಿರುವ ಕಾರಣ ಜಲಾಶಯಗಳು ಭರ್ತಿಯಾಗಿವೆ.

  • Share this:

ರಾಜ್ಯದಲ್ಲಿ ಚಳಿಗಾಲ (Winter) ಬಂದರೂ ಮಳೆಮೋಡ, ಮಳೆ (Rain) ವಾತಾವರಣ ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ. ಬೆಂಗಳೂರು (Bengaluru) ಸೇರಿ ಕೆಲ ಜಿಲ್ಲೆಗಳಲ್ಲಿ ಮಳೆ ಆಗುತ್ತಿತ್ತು. ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಮಳೆ ಎಫೆಕ್ಟ್‌ ಎನ್ನಲಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಮಂಜು ಆವರಿಸಿ ಚಳಿ ಇದ್ದರೆ, ಇನ್ನೂ ಮಳೆ ವಾತಾವರಣ ಇದೆ. ಆದರೆ ಇಂದಿನಿಂದ ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಚಳಿ ವಾತಾವರಣ ಏರಿಕೆಯಾಗಲಿದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ. ಸಾಮಾನ್ಯವಾಗಿ ನವೆಂಬರ್ (November) ಎರಡನೇ ವಾರದಲ್ಲಿ ಜಲಾಶಯಗಳ (Dams) ಒಳ ಹರಿವು ಕಡಿಮೆಯಾಗಿ, ನೀರಿನ ಸಂಗ್ರಹ ಕಡಿಮೆಯಾಗುತ್ತಿತ್ತು. ಆದರೆ ಈ ವರ್ಷ ಚೆನ್ನಾಗಿ ಮಳೆಯಾಗಿರುವ ಕಾರಣ ಜಲಾಶಯಗಳು ಭರ್ತಿಯಾಗಿವೆ.


ಈ ವರ್ಷ ವರುಣನ ಕೃಪೆ ರಾಜ್ಯದ ಮೇಲೆ ಉತ್ತಮವಾಗಿದ್ದು, ಈ ಹಿನ್ನೆಲೆಯಿಂದಾಗಿ ಜಲಾಶಯಗಳು ತುಂಬಿ ಹರಿದಿವೆ.  ರಾಜ್ಯದ ಬಹುತೇಕ ಜಲಾಶಯಗಳು ಈ ವರ್ಷ ಭರ್ತಿಯಾಗಿದ್ದು, ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಅನುಕೂಲವಾಗಲಿದೆ.


ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದಲ್ಲದೆ ಕೆಲ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. .


ಪ್ರಸ್ತುತ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ. (15 -11-2022 ರಂತೆ)
ಕೆಆರ್​ಎಸ್​ ಜಲಾಶಯ - KRS Dam
ಗರಿಷ್ಠ ಮಟ್ಟ - 124.80 ಅಡಿ
ಒಟ್ಟು ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ - 47.73 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 49.45 ಟಿಎಂಸಿ
ಇಂದಿನ ಒಳಹರಿವು - 5,021 ಕ್ಯೂಸೆಕ್ಸ್​
ಇಂದಿನ ಹೊರಹರಿವು - 7,031 ಕ್ಯೂಸೆಕ್ಸ್​


ತುಂಗಭದ್ರಾ ಜಲಾಶಯ - Tungabhadra Dam
ಗರಿಷ್ಠ ನೀರಿನ ಮಟ್ಟ - 1,633 ಅಡಿ
ಒಟ್ಟು ಸಾಮರ್ಥ್ಯ- 105.79 ಟಿಎಂಸಿ
ಇಂದಿನ ನೀರಿನ ಮಟ್ಟ - 99.35 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 97.89 ಟಿಎಂಸಿ
ಇಂದಿನ ಒಳಹರಿವು - 4,240 ಕ್ಯೂಸೆಕ್ಸ್​
ಇಂದಿನ ಹೊರಹರಿವು - 8,309 ಕ್ಯೂಸೆಕ್ಸ್​


ಕಬಿನಿ ಜಲಾಶಯ - Kabini Dam
ಗರಿಷ್ಠ ನೀರಿನ ಮಟ್ಟ - 2,284 ಅಡಿ
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಮಟ್ಟ - 16.35 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 19.50 ಟಿಎಂಸಿ
ಇಂದಿನ ಒಳಹರಿವು - 605 ಕ್ಯೂಸೆಕ್ಸ್​
ಇಂದಿನ ಹೊರಹರಿವು - 1,500 ಕ್ಯೂಸೆಕ್ಸ್​


ಆಲಮಟ್ಟಿ ಜಲಾಶಯ - Almatti Dam
ಗರಿಷ್ಠ ಮಟ್ಟ - 1,704 ಅಡಿ
ಒಟ್ಟು ಸಾಮರ್ಥ್ಯ - 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 122.48 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 105.72 ಟಿಎಂಸಿ
ಇಂದಿನ ಒಳಹರಿವು- 0 ಕ್ಯೂಸೆಕ್ಸ್​
ಇಂದಿನ ಹೊರಹರಿವು - 2,037 ಕ್ಯೂಸೆಕ್ಸ್​


ಭದ್ರಾ ಜಲಾಶಯ - Bhadra Dam
ಗರಿಷ್ಠ ಮಟ್ಟ - 657.73 ಮೀಟರ್
ಒಟ್ಟು ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 68.39 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 70.91 ಟಿಎಂಸಿ
ಇಂದಿನ ಒಳಹರಿವು- 264 ಕ್ಯೂಸೆಕ್ಸ್​
ಇಂದಿನ ಹೊರಹರಿವು - 3,238 ಕ್ಯೂಸೆಕ್ಸ್​


ಘಟಪ್ರಭಾ ಜಲಾಶಯ - Ghataprabha Dam
ಗರಿಷ್ಠ ಮಟ್ಟ - 662.91 ಮೀಟರ್
ಒಟ್ಟು ಸಾಮರ್ಥ್ಯ - 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 51 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 45.05 ಟಿಎಂಸಿ
ಇಂದಿನ ಒಳಹರಿವು - 190 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 190 ಕ್ಯೂಸೆಕ್ಸ್


ಮಲಪ್ರಭಾ ಜಲಾಶಯ - Malaprabha Dam
ಗರಿಷ್ಠ ಮಟ್ಟ-633.80 ಮೀಟರ್
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಮಟ್ಟ - 36.39 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 33.39 ಟಿಎಂಸಿ
ಇಂದಿನ ಒಳಹರಿವು - 0 ಕ್ಯೂಸೆಕ್ಸ್​
ಇಂದಿನ ಹೊರಹರಿವು - 1,558 ಕ್ಯೂಸೆಕ್ಸ್​


ಹೇಮಾವತಿ ಜಲಾಶಯ - Hemavathi Dam
ಗರಿಷ್ಠ ಮಟ್ಟ - 2,922 ಅಡಿ​
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 33.50 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 25.73 ಟಿಎಂಸಿ
ಇಂದಿನ ಒಳಹರಿವು - 755 ಕ್ಯೂಸೆಕ್ಸ್​​
ಇಂದಿನ ಹೊರಹರಿವು - 2,800 ಕ್ಯೂಸೆಕ್ಸ್​


ಇದನ್ನೂ ಓದಿ: ಬಸ್ ಶೆಲ್ಟರ್ ವಿವಾದಕ್ಕೆ ನಾಟಕೀಯ ತಿರುವು; ಸ್ವಾಮೀಜಿ, ಪ್ರಧಾನಿ, ಸಿಎಂ ಫೋಟೋ ಅಳವಡಿಕೆ


ವರಾಹಿ ಜಲಾಶಯ - Varahi Dam
ಗರಿಷ್ಠ ಮಟ್ಟ - 594.36 ಮೀಟರ್
​ಒಟ್ಟು ಸಾಮರ್ಥ್ಯ - 31 ಟಿಎಂಸಿ
ಇಂದಿನ ನೀರಿನ ಮಟ್ಟ- 20.61 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 18.04 ಟಿಎಂಸಿ
ಇಂದಿನ ಒಳಹರಿವು - 69 ಕ್ಯೂಸೆಕ್ಸ್​
ಇಂದಿನ ಹೊರಹರಿವು - 1,289 ಕ್ಯೂಸೆಕ್ಸ್​


ಹಾರಂಗಿ ಜಲಾಶಯ - Harangi Dam
ಗರಿಷ್ಠ ಮಟ್ಟ - 871.38 ಮೀಟರ್
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 5.21 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 8.05 ಟಿಎಂಸಿ
ಇಂದಿನ ಒಳಹರಿವು - 201 ಕ್ಯೂಸೆಕ್ಸ್​
ಇಂದಿನ ಹೊರಹರಿವು - 680 ಕ್ಯೂಸೆಕ್ಸ್​​


ಲಿಂಗನಮಕ್ಕಿ ಜಲಾಶಯ - Linganamakki Dam
ಗರಿಷ್ಠ ಮಟ್ಟ - 554.44 ಮೀಟರ್
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 123.09 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 133.9 ಟಿಎಂಸಿ
ಇಂದಿನ ಒಳಹರಿವು - 94 ಕ್ಯೂಸೆಕ್ಸ್​
ಇಂದಿನ ಹೊರಹರಿವು - 5,549 ಕ್ಯೂಸೆಕ್ಸ್


ಸೂಪಾ ಜಲಾಶಯ - Supa Dam
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ - 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 101.81 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 110.86 ಟಿಎಂಸಿ
ಇಂದಿನ ಒಳಹರಿವು - 0 ಕ್ಯೂಸೆಕ್ಸ್​
ಇಂದಿನ ಹೊರಹರಿವು - 2,245 ಕ್ಯೂಸೆಕ್ಸ್​


ಇದನ್ನೂ ಓದಿ: ವಾಹನ ಕಳ್ಳತನವಾದರೆ ಹೆದರಬೇಡಿ, ಸುಲಭವಾಗಿ ಹೀಗೆ ಆನ್​ಲೈನ್​ನಲ್ಲೇ FIR ದಾಖಲಿಸಿ!


ನಾರಾಯಣಪುರ ಜಲಾಶಯ - Narayanapura Dam
ಗರಿಷ್ಠ ಮಟ್ಟ - 492.25 ಮೀಟರ್
ಒಟ್ಟು ಸಾಮರ್ಥ್ಯ - 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 25.69 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 29.61 ಟಿಎಂಸಿ
ಇಂದಿನ ಒಳಹರಿವು - 623 ಕ್ಯೂಸೆಕ್ಸ್​
ಇಂದಿನ ಹೊರಹರಿವು - 9,547 ಕ್ಯೂಸೆಕ್ಸ್

Published by:Sandhya M
First published: