• Home
 • »
 • News
 • »
 • state
 • »
 • Karnataka Dam Water Level: ಆಲಮಟ್ಟಿ ಡ್ಯಾಂನಲ್ಲಿ 1 ಲಕ್ಷ ಕ್ಯೂಸೆಕ್ಸ್​ ದಾಟಿದ ಒಳಹರಿವು; ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ

Karnataka Dam Water Level: ಆಲಮಟ್ಟಿ ಡ್ಯಾಂನಲ್ಲಿ 1 ಲಕ್ಷ ಕ್ಯೂಸೆಕ್ಸ್​ ದಾಟಿದ ಒಳಹರಿವು; ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ

ಆಲಮಟ್ಟಿ

ಆಲಮಟ್ಟಿ

124.80 ಗರಿಷ್ಟ ಅಡಿ ಎತ್ತರದ KRS ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಹರಿದು ಬರುತ್ತಿದ್ದು,ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ‌. ಈಗಾಗಲೇ ಜಲಾಶಯದ ನೀರಿನ‌ ಮಟ್ಟ116 ಅಡಿ ದಾಟಿದೆ. ಇದೇ ರೀತಿ ನೀರಿನ‌ಮಟ್ಟ ಹೆಚ್ಚಾದ್ರೆ ಇನ್ನೆರಡು ಮೂರು ದಿನದಲ್ಲಿ ಜಲಾಶಯ ಭರ್ತಿಯಾಗಲಿದೆ.

ಮುಂದೆ ಓದಿ ...
 • Share this:

  ಬೆಂಗಳೂರು (ಆಗಸ್ಟ್​ 8): ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಭಾರೀ ಮಳೆ ಆಗುತ್ತಿದೆ. ಹೀಗಾಗಿ, ಹಳ್ಳ-ಕೊಳ್ಳ, ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಜಲಾಶಯಗಳ ಒಳ ಹರಿವು ಕೂಡ ಹೆಚ್ಚುತ್ತಿದೆ. ಮೈಸೂರು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. 124.80 ಗರಿಷ್ಟ ಅಡಿ ಎತ್ತರದ KRS ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಹರಿದು ಬರುತ್ತಿದ್ದು,ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ‌. ಈಗಾಗಲೇ ಜಲಾಶಯದ ನೀರಿನ‌ ಮಟ್ಟ116 ಅಡಿ ದಾಟಿದೆ. ಇದೇ ರೀತಿ ನೀರಿನ‌ಮಟ್ಟ ಹೆಚ್ಚಾದ್ರೆ ಇನ್ನೆರಡು ಮೂರು ದಿನದಲ್ಲಿ ಜಲಾಶಯ ಭರ್ತಿಯಾಗಲಿದೆ.


  ಇನ್ನು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಲಿಂಗನಮಕ್ಕಿ ಡ್ಯಾಂನಲ್ಲೂ ಒಳ ಹರಿವು ಹೆಚ್ಚಾಗಿದೆ. ಘಟಪ್ರಭಾ, ಮಲಪ್ರಭಾಮ ಹೇಮಾವತಿ ಭಾಗದಲ್ಲೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.  ಚಿಕ್ಕಮಗಳೂರು, ಶೃಂಗೇರಿ ಭಾಗದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಇಂದಿನ ಜಲಾಶಯಗಳ ಮಟ್ಟದ ಬಗ್ಗೆ ಇಲ್ಲಿದೆ ಮಾಹಿತಿ.


  ಲಿಂಗನಮಕ್ಕಿ ಜಲಾಶಯ


  ಗರಿಷ್ಠ ಮಟ್ಟ-554.4 ಮೀಟರ್​
  ಇಂದಿನ ಮಟ್ಟ- 544.36 ಮೀಟರ್​
  ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ
  ಇಂದಿನ ನೀರು ಸಂಗ್ರಹ- 64.39 ಟಿಎಂಸಿ
  ಇಂದಿನ ಒಳಹರಿವು- 72,97006 ಕ್ಯೂಸೆಕ್ಸ್​
  ಇಂದಿನ ಹೊರ ಹರಿವು- 00 ಕ್ಯೂಸೆಕ್ಸ್​


  ವರಾಹಿ ಜಲಾಶಯ
  ಗರಿಷ್ಠ ಮಟ್ಟ-594.36 ಮೀಟರ್​
  ಇಂದಿನ ಮಟ್ಟ- 579.92 ಮೀಟರ್​
  ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
  ಇಂದಿನ ನೀರು ಸಂಗ್ರಹ-9.80  ಟಿಎಂಸಿ
  ಇಂದಿನ ಒಳಹರಿವು- 46,558  ಕ್ಯೂಸೆಕ್ಸ್​
  ಇಂದಿನ ಹೊರ ಹರಿವು- 0 ಕ್ಯೂಸೆಕ್ಸ್​


  ಹಾರಂಗಿ ಜಲಾಶಯ
  ಗರಿಷ್ಠ ಮಟ್ಟ-871.42 ಮೀಟರ್​
  ಇಂದಿನ ಮಟ್ಟ- 870.18 ಮೀಟರ್​
  ಗರಿಷ್ಠ ಸಾಮರ್ಥ್ಯ- 8.50 ಟಿಎಂಸಿ
  ಇಂದಿನ ನೀರು ಸಂಗ್ರಹ-6.58 ಟಿಎಂಸಿ
  ಇಂದಿನ ಒಳಹರಿವು- 9,744  ಕ್ಯೂಸೆಕ್ಸ್​
  ಇಂದಿನ ಹೊರ ಹರಿವು- 13,400 ಕ್ಯೂಸೆಕ್ಸ್​


  ಹೇಮಾವತಿ ಜಲಾಶಯ
  ಗರಿಷ್ಠ ಮಟ್ಟ-890.63 ಮೀಟರ್​
  ಇಂದಿನ ಮಟ್ಟ- 887.70 ಮೀಟರ್​
  ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
  ಇಂದಿನ ನೀರು ಸಂಗ್ರಹ- 27.94  ಟಿಎಂಸಿ
  ಇಂದಿನ ಒಳಹರಿವು- 48,956 ಕ್ಯೂಸೆಕ್ಸ್​
  ಇಂದಿನ ಹೊರ ಹರಿವು- 1,400 ಕ್ಯೂಸೆಕ್ಸ್​


  ಕೆಆರ್​ಎಸ್​ ಜಲಾಶಯ​
  ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
  ಇಂದಿನ ನೀರು ಸಂಗ್ರಹ- 27,94 ಟಿಎಂಸಿ
  ಇಂದಿನ ಒಳಹರಿವು- 48,956 ಕ್ಯೂಸೆಕ್ಸ್​
  ಇಂದಿನ ಹೊರ ಹರಿವು- 1400 ಕ್ಯೂಸೆಕ್ಸ್​


  ಕಬಿನಿ ಜಲಾಶಯ
  ಗರಿಷ್ಠ ಮಟ್ಟ-696.16 ಮೀಟರ್​
  ಇಂದಿನ ಮಟ್ಟ- 694.54 ಮೀಟರ್​
  ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
  ಇಂದಿನ ನೀರು ಸಂಗ್ರಹ-5.96 ಟಿಎಂಸಿ
  ಇಂದಿನ ಒಳಹರಿವು- 45,612 ಕ್ಯೂಸೆಕ್ಸ್​
  ಇಂದಿನ ಹೊರ ಹರಿವು- 50,600 ಕ್ಯೂಸೆಕ್ಸ್​


  ತುಂಗಾ ಜಲಾಶಯ
  ಗರಿಷ್ಠ ಮಟ್ಟ-497.74 ಮೀಟರ್​
  ಇಂದಿನ ಮಟ್ಟ- 492.48.82  ಮೀಟರ್​
  ಗರಿಷ್ಠ ಸಾಮರ್ಥ್ಯ- 100ಟಿಎಂಸಿ
  ಇಂದಿನ ನೀರು ಸಂಗ್ರಹ- 46.56 ಟಿಎಂಸಿ
  ಇಂದಿನ ಒಳಹರಿವು- 81,218 ಕ್ಯೂಸೆಕ್ಸ್​
  ಇಂದಿನ ಹೊರ ಹರಿವು- 8,225 ಕ್ಯೂಸೆಕ್ಸ್​


  ಘಟಪ್ರಭಾ ಜಲಾಶಯ
  ಗರಿಷ್ಠ ಮಟ್ಟ-662.94 ಮೀಟರ್​
  ಇಂದಿನ ಮಟ್ಟ- 657.82  ಮೀಟರ್​
  ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
  ಇಂದಿನ ನೀರು ಸಂಗ್ರಹ- 37.96 ಟಿಎಂಸಿ
  ಇಂದಿನ ಒಳಹರಿವು- 48.840 ​ಕ್ಯೂಸೆಕ್ಸ್
  ಇಂದಿನ ಹೊರ ಹರಿವು- 122 ಕ್ಯೂಸೆಕ್ಸ್​


  ಮಲಪ್ರಭಾ ಜಲಾಶಯ
  ಗರಿಷ್ಠ ಮಟ್ಟ-633.83 ಮೀಟರ್​
  ಇಂದಿನ ಮಟ್ಟ- 631.01 ಮೀಟರ್​
  ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
  ಇಂದಿನ ನೀರು ಸಂಗ್ರಹ- 25.56 ಟಿಎಂಸಿ
  ಇಂದಿನ ಒಳಹರಿವು- 35,400 ಕ್ಯೂಸೆಕ್ಸ್​
  ಇಂದಿನ ಹೊರ ಹರಿವು- 664 ಕ್ಯೂಸೆಕ್ಸ್​


  ಆಲಮಟ್ಟಿ ಜಲಾಶಯ
  ಗರಿಷ್ಠ ಮಟ್ಟ-519.63ಮೀಟರ್​
  ಇಂದಿನ ಮಟ್ಟ- 517.81ಮೀಟರ್​
  ಗರಿಷ್ಠ ಸಾಮರ್ಥ್ಯ- 123.081 ಟಿಎಂಸಿ
  ಇಂದಿನ ನೀರು ಸಂಗ್ರಹ- 95.58 ಟಿಎಂಸಿ
  ಇಂದಿನ ಒಳಹರಿವು- 1,51,598 ಕ್ಯೂಸೆಕ್ಸ್​
  ಇಂದಿನ ಹೊರ ಹರಿವು-1,75,672

  Published by:Rajesh Duggumane
  First published: