ಗುಂಡ್ಲುಪೇಟೆಯಲ್ಲಿ ಸಾಮೂಹಿಕ ಆತ್ಮಹತ್ಯೆ; ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾವು

ನಿನ್ನೆ ರಾತ್ರಿ ಮೈಸೂರಿನ ದಟ್ಟಗಳ್ಳಿಯಿಂದ ಗುಂಡ್ಲುಪೇಟೆಗೆ ಈ ಐವರು ಬಂದಿದ್ದರು. ನಂದಿ ಲಾಡ್ಜ್​ನಲ್ಲಿ ರೂಂ ಬುಕ್ ಮಾಡಿಕೊಂಡಿದ್ದ ಓಂಪ್ರಕಾಶ್​ ಕುಟುಂಬ ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದರು. ಇಂದು ಮುಂಜಾನೆ ಗುಂಡ್ಲುಪೇಟೆಯ ಹೊರವಲಯದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Sushma Chakre | news18
Updated:August 16, 2019, 9:20 AM IST
ಗುಂಡ್ಲುಪೇಟೆಯಲ್ಲಿ ಸಾಮೂಹಿಕ ಆತ್ಮಹತ್ಯೆ; ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾವು
ಸಾಂದರ್ಭಿಕ ಚಿತ್ರ
Sushma Chakre | news18
Updated: August 16, 2019, 9:20 AM IST
ಗುಂಡ್ಲುಪೇಟೆ (ಆ. 16): ಹಣೆಗೆ ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. 

ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾದ ಇವರು ಹಣಕಾಸಿನ ತೊಂದರೆಯಿಂದ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. 37 ವರ್ಷದ ಓಂಪ್ರಕಾಶ್, ಪತ್ನಿ ನಿಖಿತಾ, ಮಗ ಆರ್ಯ ಕೃಷ್ಣ, ತಾಯಿ ಹೇಮಲತಾ, ತಂದೆ ನಾಗರಾಜ ಭಟ್ಟಾಚಾರ್ಯ ಸಾವನ್ನಪ್ಪಿದ್ದಾರೆ. ತಲೆಗೆ ಶೂಟ್ ಮಾಡಿಕೊಂಡು ಐವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡಾಟಾ ಬೇಸ್, ಅನಿಮೇಷನ್ ಕಂಪನಿ ನಡೆಸುತ್ತಿದ್ದ ಓಂಪ್ರಕಾಶ್ ಅವರಿಗೆ ಡಾಟಾ ಬೇಸ್ ಕಂಪನಿಯಿಂದ ಕೋಟ್ಯಂತರ ರೂ. ನಷ್ಟವಾಗಿತ್ತು. ಬಳಿಕ ಅನಿಮೇಷನ್ ಕಂಪನಿ ನಡೆಸುತ್ತಿದ್ದರು. ಅದರಲ್ಲೂ ನಷ್ಟವಾಗಿತ್ತು ಎನ್ನಲಾಗಿದೆ. ಮಧ್ಯರಾತ್ರಿ ಸ್ನೇಹಿತರಿಗೆ ಕರೆ ಮಾಡಿದ್ದ ಓಂ ಪ್ರಕಾಶ್ , ನಾನು ಜೀವನದಲ್ಲಿ ಸೋತಿದ್ದೇನೆ, ನಂಬಿದವರು ಕೈಕೊಟ್ಟರು. ಗುಂಡ್ಲುಪೇಟೆ ಬಳಿ ಕಾರು ನಿಲ್ಲಿಸಿದ್ದೇವೆ. ಅದನ್ನು ತಗೊಂಡು ಹೋಗಿ ಎಂದು ಹೇಳಿದ್ದರು.

ರಾಜ್ಯದಲ್ಲಿ ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 62, ಕಾಣೆಯಾದವರು 14; ನೆರೆಯಿಂದಾದ ನಷ್ಟದ ಬಗ್ಗೆ ಇಲ್ಲಿದೆ ಮಾಹಿತಿ

ಮೂಲತಃ ತುಮಕೂರಿನವರಾದ ಇವರು 3 ದಿನದ ಹಿಂದೆ ರಾತ್ರಿ ಮೈಸೂರಿನ ದಟ್ಟಗಳ್ಳಿಯಿಂದ ಗುಂಡ್ಲುಪೇಟೆಗೆ ಈ ಐವರು ಬಂದಿದ್ದರು. ನಂದಿ ಲಾಡ್ಜ್​ನಲ್ಲಿ ರೂಂ ಬುಕ್ ಮಾಡಿಕೊಂಡಿದ್ದ ಓಂಪ್ರಕಾಶ್​ ಕುಟುಂಬ ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದರು. ಇಂದು ಮುಂಜಾನೆ ಗುಂಡ್ಲುಪೇಟೆಯ ಹೊರವಲಯದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತನಿಖೆಯ ನಂತರ ತಿಳಿಯಬೇಕಾಗಿದೆ.

 

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...