• Home
  • »
  • News
  • »
  • state
  • »
  • ಕರ್ನಾಟಕ ಇನ್ಮೇಲೆ ಶತಾಯುಷಿಗಳ ನಾಡು; ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿದ್ದಾರೆ 100 ವರ್ಷ ಬಾಳಿದವರು!

ಕರ್ನಾಟಕ ಇನ್ಮೇಲೆ ಶತಾಯುಷಿಗಳ ನಾಡು; ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿದ್ದಾರೆ 100 ವರ್ಷ ಬಾಳಿದವರು!

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ನಾವು ಇಂದು ಪುಸ್ತಕಗಳಲ್ಲಿ ಓದುವ ಅದೆಷ್ಟೋ ವಿಚಾರಗಳನ್ನ ಕಣ್ಣಾರೆ ಕಂಡು ಅನುಭವಿಸಿದ ಪೀಳಿಗೆ ಇದು. ಇಂಥಾ ಇಳಿವಯಸ್ಸಿನಲ್ಲೂ ತಮ್ಮ ಪಾಡಿಗೆ ತಾವು ನೆಮ್ಮದಿಯಾಗೇ ಬದುಕುವ ಇವರೆಲ್ಲಾ ಹೇಳೋದು ಒಂದೇ ಮಾತು... ಆರೋಗ್ಯ ಒಂದು ಚೆನ್ನಾಗಿರ್ಬೇಕು ನೋಡಿ, ವಯಸ್ಸು ಎಷ್ಟಾದ್ರೂ ಚಿಂತೆಯಿಲ್ಲ ಅಂತ. ಇಂಥಾ ಹಿರಿಯರ ಬದುಕಿನ ಮೇಲೆ ಡಾಕ್ಯುಮೆಂಟರಿ ಮಾಡಿದ್ದ ಶರ್ಮಿಳಾ ಅರವಿಂದ್ ಬಳಿ ಎಲ್ಲಾ ಹಿರಿಯರೂ ಹೇಳಿದ್ದು ಇದೇ ಮಾತನ್ನ.

ಮುಂದೆ ಓದಿ ...
  • Share this:

26,314...ಇದು ಈ ವರ್ಷ ಅಂದ್ರೆ 2020-21ನೇ ಇಸವಿಯಲ್ಲಿ ಕರ್ನಾಟಕದಲ್ಲಿ ಇರೋ ಶತಾಯುಷಿಗಳ ಸಂಖ್ಯೆ...ಅಂದ್ರೆ ಸೆಂಚುರಿ ಬಾರಿಸಿದ ಹಿರಿಯರ ಸಂಖ್ಯೆ 26 ಸಾವಿರದ ಗಡಿ ದಾಟಿದೆ... ದೂರದ ಜಪಾನ್ ದೇಶದಲ್ಲಿ 100 ವರ್ಷಕ್ಕೆ ಮೇಲ್ಪಟ್ಟವ್ರ ಸಂಖ್ಯೆ ಅತೀ ಹೆಚ್ಚಿದೆ ಅನ್ನೋದನ್ನ ಓದಿದಾಗೆಲ್ಲಾ ಹೊಟ್ಟೆಕಿಚ್ಚು ಪಟ್ಟುಕೊಳ್ತಿದ್ದವ್ರು ಈ ವಿಚಾರ ತಿಳಿದು ಸಮಾಧಾನಪಟ್ಟುಕೊಳ್ಬಹುದು... ಅಂದ್ಹಾಗೆ ಈ ವರದಿ ಕೊಟ್ಟಿರೋದ್ಯಾರು? ಶತಾಯುಷಿಗಳು ಹೆಚ್ಚಾಗಿದ್ಹೇಗೆ ? ಬೇರೆ ವಯಸ್ಸಿನವ್ರು ಎಷ್ಟಿದ್ದಾರೆ? ಇಲ್ಲಿದೆ ಫುಲ್ ಡೀಟೆಲ್ಸ್...


ನೀವೇನಾದ್ರೂ 100 ಅಥವಾ ಅದಕ್ಕಿಂತ ಜಾಸ್ತಿ ವರ್ಷ ಬದುಕಬೇಕು ಅನ್ನೋ ಟಾರ್ಗೆಟ್ ಇಟ್ಟಕೊಂಡಿದ್ರೆ ಕರ್ನಾಟಕ ನಿಮ್ಗೆ ಬೆಸ್ಟ್ ಪ್ಲೇಸ್. ಯಾಕಂದ್ರೆ ಈ ವರ್ಷ ನಮ್ಮ ರಾಜ್ಯದಲ್ಲಿ ಬರೋಬ್ಬರಿ 26314 ಶತಾಯುಷಿಗಳು ಆರಾಮಾಗಿ ಬದುಕುತ್ತಿದ್ದಾರೆ. ಈ ಅಂಕಿ ಅಂಶಗಳನ್ನು ನೀಡಿರೋದು ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಡೈರಕ್ಟರೇಟ್ ಆಫ್ ಎಕನಾಮಿಕ್ಸ್ ಅಂಡ್ ಸ್ಟಾಟಿಸ್ಟಿಕ್ಸ್ ಪ್ಲಾನಿಂಗ್ ಪ್ರೋಗ್ರಾಮಿಂಗ್ ಮಾನಿಟರಿಂಗ್ ಅಂಡ್ ಸ್ಟಾಟಿಸ್ಟಿಕ್ಸ್ ಇಲಾಖೆ. ಇಷ್ಟೇ ಅಲ್ಲ ಕರ್ನಾಟಕದಲ್ಲಿ ಈ ವರ್ಷ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರೋರು ಯುವಜನರಂತೆ...ಅಂದ್ರೆ 20ರಿಂದ 24 ವರ್ಷ ವಯಸ್ಸಿನವ್ರು...ಇವರ ಪ್ರಮಾಣ ಅತೀ ಹೆಚ್ಚಿರೋದು ಅಂದ್ರೆ ಒಟ್ಟಾರೆ ಜನಸಂಖ್ಯೆಯಲ್ಲಿ 2020-21ರಲ್ಲಿ ಶೇಕಡಾ 9.91ರಷ್ಟು ಬರೀ ಇದೇ ವಯಸ್ಸಿನವ್ರು ಇರ್ತಾರೆ ಎನ್ನುವುದನ್ನು ಈ ರಿಪೋರ್ಟ್ ಹೇಳಿದೆ.


ನಮ್ಮ ಸುತ್ತಲಿನ ಜಗತ್ತಿನಲ್ಲಿ ಸಣ್ಣ ಪುಟ್ಟ ವಯಸ್ಸಿಗೇ ನಾನಾ ಖಾಯಿಲೆಗಳಿಂದ ಬಳಲುವವರನ್ನು ನೋಡ್ತಿರ್ತೀವಿ. ಅನೇಕರು ಬಹಳ ಸಣ್ಣ ವಯಸ್ಸಿಗೇ ಸಾವನ್ನಪ್ಪುತ್ತಾರೆ. ಅಂಥಾದ್ರಲ್ಲಿ 100 ವರ್ಷ ಮತ್ತು ಅದಕ್ಕಿಂತ ಹೆಚ್ಚು ಬದುಕುವವರು ಏನು ಬಯಸ್ತಾರೆ, ಅವ್ರು ಹೇಗೆ ಇಷ್ಟು ವರ್ಷಗಳವರಗೆ ಬದುಕಿದ್ರು ಅನ್ನೋದು ತಿಳೀಬೇಕಾದ್ರೆ ಅವ್ರ ಬಳಿಯೇ ಕೇಳ್ಬೇಕು.


ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ, ನಿವೃತ್ತ ಲೋಕಾಯುಕ್ತ ಜಸ್ಟೀಸ್ ವೆಂಕಟಾಚಲಯ್ಯ, ಸಿದ್ಧಗಂಗಾ ಶ್ರೀಗಳು, ಸಾಲುಮರದ ತಿಮ್ಮಕ್ಕ, ನಿಘಂಟು ತಜ್ಞ ಜಿ ವೆಂಕಟಸುಬ್ಬಯ್ಯ ಹೀಗೆ ನಮಗೆ ಪರಿಚಿತವಿರುವ ಶತಾಯುಷಿಗಳೇ ಅನೇಕರಿದ್ದಾರೆ. ಇವರಲ್ಲಿ ಕೆಲವರು ಇಂದಿಗೂ ಬದುಕಿದ್ದರೆ, ಮತ್ತೆ ಕೆಲವರು ಅಸುನೀಗಿದ್ದಾರೆ. ಆದ್ರೆ ಎಲ್ಲರೂ ಸೆಂಚುರಿ ಬಾರಿಸಿದವರೇ.


ನಾವು ಇಂದು ಪುಸ್ತಕಗಳಲ್ಲಿ ಓದುವ ಅದೆಷ್ಟೋ ವಿಚಾರಗಳನ್ನ ಕಣ್ಣಾರೆ ಕಂಡು ಅನುಭವಿಸಿದ ಪೀಳಿಗೆ ಇದು. ಇಂಥಾ ಇಳಿವಯಸ್ಸಿನಲ್ಲೂ ತಮ್ಮ ಪಾಡಿಗೆ ತಾವು ನೆಮ್ಮದಿಯಾಗೇ ಬದುಕುವ ಇವರೆಲ್ಲಾ ಹೇಳೋದು ಒಂದೇ ಮಾತು... ಆರೋಗ್ಯ ಒಂದು ಚೆನ್ನಾಗಿರ್ಬೇಕು ನೋಡಿ, ವಯಸ್ಸು ಎಷ್ಟಾದ್ರೂ ಚಿಂತೆಯಿಲ್ಲ ಅಂತ. ಇಂಥಾ ಹಿರಿಯರ ಬದುಕಿನ ಮೇಲೆ ಡಾಕ್ಯುಮೆಂಟರಿ ಮಾಡಿದ್ದ ಶರ್ಮಿಳಾ ಅರವಿಂದ್ ಬಳಿ ಎಲ್ಲಾ ಹಿರಿಯರೂ ಹೇಳಿದ್ದು ಇದೇ ಮಾತನ್ನ...


ಇವರೆಲ್ಲಾ ಮೊದಲಿನಿಂದಲೂ ಕಷ್ಟಜೀವಿಗಳು. ಸಣ್ಣ ವಯಸ್ಸಿನಲ್ಲೇ ದುಡಿಮೆ ಆರಂಭಿಸಿದವ್ರು. ಎಲ್ಲಕ್ಕಿಂತ ಹೆಚ್ಚಾಗಿ ಇದ್ದುದರಲ್ಲೇ ಅತ್ಯುತ್ತಮವಾದ ಆಹಾರ ಮತ್ತು ಜೀವನಶೈಲಿ ರೂಢಿಸಿಕೊಂಡವರು. ಇಂದಿಗೂ ಇವರಲ್ಲಿ ಅನೇಕರು ರಾಗಿ ಮುದ್ದೆ, ಸಾರು ತಿನ್ನುತ್ತಾ ವಾಕಿಂಗ್ ಹೋಗುತ್ತಾ, ಆಗಾಗ ಸಭೆ ಸಮಾರಂಭಗಳಿಗೂ ಹಾಜರಿ ಹಾಕುತ್ತಾ ತಮ್ಮ ವಯಸ್ಸು 100 ದಾಟಿದೆ ಅನ್ನೋದನ್ನೇ ಮರೆತು ನೆಮ್ಮದಿಯ ಬದುಕು ನಡೆಸ್ತಿದ್ದಾರೆ.


ಈಗಿನ ಜನಾಂಗದ ಆಹಾರ ಪದ್ಧತಿ, ಜೀವನಶೈಲಿ ಎಲ್ಲವೂ ಹದಗೆಟ್ಟಿದೆ ಎನ್ನುವುದನ್ನು ವೈದ್ಯಕೀಯ ಕ್ಷೇತ್ರ ಹೇಳುತ್ತಲೇ ಬಂದಿದೆ. ಸಾಲದ್ದಕ್ಕೆ ಹಿಂದಿನಂತೆ ಸ್ವಚ್ಛ ಗಾಳಿ, ನೀರು ಕೂಡಾ ಈಗ ಕಷ್ಟವೇ. ಅಂಥಾದ್ರಲ್ಲಿ ಈ ಹಿರಿಯರಂತೆ ಶತಾಯುಷಿಗಳಾಗೋ ಭಾಗ್ಯ ಈಗಿನ ಯುವಜನತೆಗೆ ಇರುತ್ತಾ ಅನ್ನೋ ಪ್ರಶ್ನೆ ಸಹಜವಾಗೇ ಕಾಡುತ್ತದೆ. ಅವರಂತೆ ಚುರುಕಾದ, ಸಿಂಪಲ್ ಜೀವನಶೈಲಿ ರೂಢಿಸಿಕೊಂಡರೆ ಕೇವಲ 2020-21 ಮಾತ್ರವಲ್ಲದೇ ಮುಂದಿನ ಹಲವಾರು ವರ್ಷ ಶತಾಯುಷಿಗಳ ಸಂಖ್ಯೆ ಕರ್ನಾಟಕದಲ್ಲಿ ಏರುತ್ತಲೇ ಹೋಗಬಹುದು. ಇದೆಲ್ಲಾ ಏನೇ ಇದ್ರೂ ಅತೀ ಹೆಚ್ಚು ಶತಾಯುಷಿಗಳನ್ನು ಹೊಂದಿರೋ ಜಪಾನೀಯರನ್ನು ಕಂಡು ಹೊಟ್ಟೆಕಿಚ್ಚು ಪಡುತ್ತಿದ್ದವ್ರೆಲ್ಲಾ ಈ ವರದಿಯನ್ನ ನೋಡಿ ಸ್ವಲ್ಪವಾದ್ರೂ ಸಮಾಧಾನಪಟ್ಟುಕೊಳ್ಳಬಹುದು.


ಇದನ್ನೂ ಓದಿ : ದೆಹಲಿ ಕೋಮು ಗಲಭೆ ಪೂರ್ವ ನಿಯೋಜಿತವೇ?; ಗೃಹ ಸಚಿವ ಅಮಿತ್ ಶಾ ವಿರುದ್ಧ ಅನುಮಾನ ವ್ಯಕ್ತಪಡಿಸಿರುವ ಕಾಂಗ್ರೆಸ್

Published by:MAshok Kumar
First published: