ಗೋ ಹತ್ಯೆ ನಿಷೇಧ ಎಫೆಕ್ಟ್; ಬೆಳಗಾವಿಯ ಮೃಗಾಲಯದ ಸಿಂಹಗಳಿಗೆ ದನದ ಮಾಂಸದ ಬದಲು ಚಿಕನ್ ಊಟ!

ಬೆಳಗಾವಿಯ  ರಾಣಿ ಚೆನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ಇದೀಗ ಮೂರು ಸಿಂಹಗಳು ಬಂದಿದ್ದು, ಶೀಘ್ರದಲ್ಲಿಯೇ ಹುಲಿ, ಚಿರತೆ ಹಾಗೂ ಕರಡಿ ಸಹ ಬರಲಿವೆ.

ಬೆಳಗಾವಿ ಮೃಗಾಲಯದಲ್ಲಿರುವ ಸಿಂಹ

ಬೆಳಗಾವಿ ಮೃಗಾಲಯದಲ್ಲಿರುವ ಸಿಂಹ

  • Share this:
ಬೆಳಗಾವಿ (ಮಾ.3): ಕರ್ನಾಟಕದಲ್ಲಿ ಗೋ ಹತ್ಯೆಯ ಪರಿಣಾಮ ಕಾಡು ಪ್ರಾಣಿಗಳ ಮೇಲೂ ಉಂಟಾಗಿದೆ. ಬೆಳಗಾವಿಯ ರಾಣಿ ಚೆನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ಬಂದಿರುವ ಮೂರು ಸಿಂಹಗಳಿಗೆ ಇದೀಗ ಕೋಳಿ ಮಾಂಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ನೀಡುತ್ತಿದ್ದಾರೆ. ಕಾಡು ಪ್ರಾಣಿಗಳಿಗೆ ದನದ ಮಾಂಸ ಬಳಕೆಗೆ ಅವಕಾಶ ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಬೆಳಗಾವಿಯ  ರಾಣಿ ಚೆನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ಇದೀಗ ಮೂರು ಸಿಂಹಗಳು ಬಂದಿದ್ದು, ಶೀಘ್ರದಲ್ಲಿಯೇ ಹುಲಿ, ಚಿರತೆ ಹಾಗೂ ಕರಡಿ ಸಹ ಬರಲಿವೆ.

ಬೆಳಗಾವಿಯ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ಇದೀಗ ಹೊಸ ಕಳೆ ಬಂದಿದ್ದು, ಜನರನ್ನು ಆಕರ್ಷಿಸಲು ಸಿದ್ಧವಾಗಿದೆ.  ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡು ಇರುವ ಭೂತರಾಮನಹಟ್ಟಿ ಬಳಿ ಇರೋ ಸಂಗ್ರಹಾಲಯಕ್ಕೆ ಮೂರು ಸಿಂಹಗಳನ್ನು ತಂದು ಬಿಡಲಾಗಿದೆ. ಇನ್ನು, ಕೆಲವೇ ದಿನಗಳಲ್ಲಿ ಮೈಸೂರಿನಿಂದ ಹುಲಿ, ಚಿರತೆ ಹಾಗೂ ಚಿತ್ರದುರ್ಗದಿಂದ ಕರಡಿಗಳನ್ನು ಸಹ ತಂದು ಬಿಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಪ್ರಾಣಿ ಸಂಗ್ರಹಾಲಯದಲ್ಲಿ ನಿನ್ನೆ ಶಾಸಕ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮೈಸೂರು ಮೃಗಾಲಯದ ಮಾದರಿಯಲ್ಲಿ ಬೆಳಗಾವಿಯ ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಇದರಿಂದ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಲಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಜನತೆ ಮೈಸೂರಿಗೆ ಪ್ರಾಣಿ ವೀಕ್ಷಣೆಗೆ ಹೋಗುವುದು ತಪ್ಪಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Ramesh Jarkiholi: ಸಚಿವ ರಮೇಶ್​ ಜಾರಕಿಹೊಳಿ ರಾಸಲೀಲೆ ಪ್ರಕರಣ; ನಾಳೆ ಕಾಂಗ್ರೆಸ್​ ಮುಖಂಡರಿಂದ ಮಹತ್ವದ ಸುದ್ದಿಗೋಷ್ಠಿ

ಭೂತರಾಮನಹಟ್ಟಿಯಲ್ಲಿರುವ ಮೃಗಾಲಯಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ಸಿಂಹವನ್ನು ತರಲು ಪ್ರಸ್ತಾವನೆ ಸಲ್ಲಿಸಿದ್ದೆವು. ಅದು ಈಗ ಸಾಕಾರಗೊಂಡಿದೆ. ಸಿಂಹವನ್ನು ನೋಡಲು ಈ ಭಾಗದ ಜನರು ಮೊದಲು ಮೈಸೂರಿಗೆ ಹೋಗುವ ಪರಿಪಾಠವಿತ್ತು. ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರದ ಜನರು ಇಲ್ಲಿ ಬಂದ ಸಿಂಹಗಳನ್ನು ನೋಡಬಹುದಾಗಿದೆ.  ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ  ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೆಳಗಾವಿಯ ರಾಣಿ ಚನ್ನಮ್ಮ ಮೃಗಾಲಯದಿಂದ  ಪ್ರವಾಸೋದ್ಯಮ ಇಲಾಖೆಗೆ ಮಹತ್ವ ಬರಲಿದೆ. ಮುಂದೆ ಇದೊಂದು ಐತಿಹಾಸಿಕ ಪ್ರವಾಸೋದ್ಯಮ  ತಾಣವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಮೊದಲ ಹಂತದಲ್ಲಿ ಎರಡು ವರ್ಷದಲ್ಲಿ 16 ಕೋಟಿ  ವೆಚ್ಚದಲ್ಲಿ ಪ್ರಾಣಿ ಸಂಗ್ರಹಾಲಯವನ್ನು ಅಭಿವೃದ್ದಿಗೊಳಿಸಲಾಗಿದೆ. ಈಗಾಗಲೇ ಮೂರು ಸಿಂಹಗಳನ್ನು ತರಲಾಗಿದೆ. ಚಿರತೆ, ಹುಲಿ ಸೇರಿ ಅನೇಕ ಪ್ರಾಣಿಗಳು ಆಗಮಿಸಲಿವೆ. ಇನ್ನು ಎರಡು ವಾರದಲ್ಲಿ ಹುಲಿ ಸಫಾರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಸಫಾರಿಗೆ ಅನುಕೂಲವಾಗುವ ವಾಹನಗಳ ಪೂರೈಕೆಗೆ ಬೇಡಿಕೆ ಇಡಲಾಗುವುದು ಎಂದು ತಿಳಿಸಿದರು.

ಈ ಪ್ರಾಣಿಗಳಿಗೆ ಕುಡಿಯುವ ನೀರಿನ ಸಲುವಾಗಿ ಮಾರ್ಕಂಡೇಯ ನದಿಯ ನೀರನ್ನು ತಂದು ಕೆರೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಬೇಸಿಗೆಯ ಸಂದರ್ಭದಲ್ಲಿಯೂ ವ್ಯವಸ್ಥಿತವಾಗಿ ನೀರು ಸರಬರಾಜು ಮಾಡಲಾಗುವುದು ಎಂದರು.  ಮೈಸೂರು ಮೃಗಾಲಯದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುವುದು. ಮೈಸೂರು ಮೃಗಾಲಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜಾಗೆ ಭೂತರಾಮನಟ್ಟಿಯಲ್ಲಿದೆ ಎಂದು ತಿಳಿಸಿದರು.

ಸಿಸಿಎಫ್  ಬಸವರಾಜ್ ಪಾಟೀಲ್ ಮಾತನಾಡಿ, ಪ್ರಾಣಿಗಳ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಝೂ ಆಫ್ ಮೂಲಕ ಸಾರ್ವಜನಕರು ಪ್ರಾಣಿಗಳ ದತ್ತು ಪಡೆಯಬಹುದಾಗಿದೆ. ಹುಲಿ, ಸಿಂಹಗಳ ದತ್ತು ಪಡೆಯಲು ಒಂದು ವರ್ಷಕ್ಕೆ 1 ಲಕ್ಷ ರೂ. ಹಾಗೂ  ಇತರ ಪ್ರಾಣಿ, ಪಕ್ಷಿ ಪ್ರಾಣಿಗಳಿಗೆ 7,500 ರೂ. ನಿಗದಿ ಪಡಿಸಲಾಗವುದು ಎಂದು ಮಾಹಿತಿ ನೀಡಿದರು.
Published by:Sushma Chakre
First published: