HOME » NEWS » State » KARNATAKA COUNCIL ELECTION LAXMAN SAVADI WINS AS EXPECTED BUT 7 MLAS VOTES ARE INVALID1 MAK

ವಿಧಾನ ಪರಿಷತ್ ಚುನಾವಣೆ; ನಿರೀಕ್ಷೆಯಂತೆ ಡಿಸಿಎಂ ಲಕ್ಷ್ಮಣ ಸವದಿಗೆ ಗೆಲುವು, ಡಿಸಿಎಂ ಸ್ಥಾನ ಭದ್ರ

ಬಿಜೆಪಿ ಶಾಸಕರ ಪೈಕಿ ಅನಾರೋಗ್ಯ ಪೀಡಿತ ಶಾಸಕ ರಾಮದಾಸ್​ ಹೊರತುಪಡಿಸಿ ಉಳಿದ ಎಲ್ಲಾ ಶಾಸಕರೂ ಮತದಾನ ಮಾಡಿದ್ದಾರೆ. ನಿರೀಕ್ಷೆಯಂತೆಯೇ ಲಕ್ಷ್ಮಣ ಸವದಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ಈ ಮತದಾನದ ಪೈಕಿ 7 ಜನ ಶಾಸಕರ ಮತಗಳು ಅಸಿಂಧು ಆಗಿದೆ. 

MAshok Kumar | news18-kannada
Updated:February 17, 2020, 6:07 PM IST
ವಿಧಾನ ಪರಿಷತ್ ಚುನಾವಣೆ; ನಿರೀಕ್ಷೆಯಂತೆ ಡಿಸಿಎಂ ಲಕ್ಷ್ಮಣ ಸವದಿಗೆ ಗೆಲುವು, ಡಿಸಿಎಂ ಸ್ಥಾನ ಭದ್ರ
ಡಿಸಿಎಂ ಲಕ್ಷ್ಣಣ್ ಸವದಿ
  • Share this:
ಬೆಂಗಳೂರು (ಫೆಬ್ರವರಿ 17); ಬಹು ನಿರೀಕ್ಷೆಯ ರಾಜ್ಯ ವಿಧಾನ ಪರಿಷತ್ ಚುನಾವಣೆ ಇಂದು ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಡಿಸಿಎಂ ಲಕ್ಷ್ಮಣ ಸವದಿ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಆದರೆ, ಈ ಚುನಾವಣೆಯಲ್ಲಿ ಮತ ಚಲಾಯಿಸಿದ 7 ಶಾಸಕರ ಮತಗಳು ಅಸಿಂಧು ಆಗಿರುವ ಘಟನೆಯೂ ನಡೆದಿದೆ.

ರಾಜ್ಯದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಮ್ಮ ಸ್ಥಾನದಲ್ಲಿ ಮುಂದುವರೆಯಲು ಈ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ಇಂದಿನ ವಿಧಾನ ಪರಿಷತ್ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಮೈತ್ರಿ ಅಭ್ಯರ್ಥಿ ಅನಿಲ್ ಕುಮಾರ್​ ನಿನ್ನೆಯೇ ತಮ್ಮ ನಾಮಪತ್ರವನ್ನು ಹಿಂಪಡೆದ ಕಾರಣ ಕಾಂಗ್ರೆಸ್​ ಹಾಗೂ ಬಿಜೆಪಿ ಶಾಸಕರು ಮತ ಚಲಾಯಿಸಲು ಇಂದು ವಿಧಾನ ಪರಿಷತ್​ ಸಭೆಗೆ ಹಾಜರಾಗಿರಲಿಲ್ಲ.

ಬಿಜೆಪಿ ಶಾಸಕರ ಪೈಕಿ ಅನಾರೋಗ್ಯ ಪೀಡಿತ ಶಾಸಕ ರಾಮದಾಸ್​ ಹೊರತುಪಡಿಸಿ ಉಳಿದ ಎಲ್ಲಾ ಶಾಸಕರೂ ಮತದಾನ ಮಾಡಿದ್ದಾರೆ. ನಿರೀಕ್ಷೆಯಂತೆಯೇ ಲಕ್ಷ್ಮಣ ಸವದಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ಈ ಮತದಾನದ ಪೈಕಿ 7 ಜನ ಶಾಸಕರ ಮತಗಳು ಅಸಿಂಧು ಆಗಿದೆ.  ಚಲಾವಣೆಯಾದ 120 ಮತಗಳ ಪೈಕಿ 113 ಮತಗಳು ಸವದಿ ಪರವಾಗಿ ಚಲಾವಣೆಯಾಗಿದ್ದು, 7 ಮತಗಳು ಅಸಿಂಧು ಎಂದು ಘೋಷಿಸಲಾಗಿದೆ.

 

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಿಷತ್ ಸದಸ್ಯ ರಿಷ್ವಾನ್ ಅರ್ಹದ್ ಶಿವಾಜಿ ನಗರದಿಂದ ಶಾಸಕರಾಗಿ ಆಯ್ಕೆಯಾದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿತ್ತು.

ಇದನ್ನೂ ಓದಿ : ಕಂಬಳ ವೀರ ಶ್ರೀನಿವಾಸ್​ ಗೌಡಗೆ ಚೆಕ್​ ರಹಿತ ಖಾಲಿ ಕವರ್​ ನೀಡಿ ಪೋಟೋಗೆ ಪೋಸ್ ಕೊಟ್ಟ​ ಸಿ.ಟಿ. ರವಿ, ಹೆಬ್ಬಾರ್​
Youtube Video
First published: February 17, 2020, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories