ರಾಜ್ಯದಲ್ಲಿ ಸದ್ಯಕ್ಕೆ ಜಿಮ್ ಮತ್ತು ಈಜುಕೊಳ ತೆರೆಯುವುದಿಲ್ಲ; ಸಚಿವ ಸಿ.ಟಿ. ರವಿ ಸ್ಪಷ್ಟನೆ

ಕಾಂಗ್ರೆಸ್ ಸರ್ಕಾರ ಇದ್ದಾಗ ಹಾಸಿಗೆ, ದಿಂಬು ಹಗರಣದಲ್ಲಿ ಕೋಟ್ಯಾಂತರ ಹಣ ಲೂಟಿ ಮಾಡಿದ್ದಾರೆ. ಸುಳ್ಳನ್ನೇ ಮನೆದೇವರನ್ನಾಗಿ ಮಾಡಿಕೊಂಡ ಕಾಂಗ್ರೆಸ್​ನವರು ಬರೀ ಸುಳ್ಳುಗಳನ್ನೇ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಸಚಿವ ಸಿ.ಟಿ. ರವಿ ಟೀಕಿಸಿದ್ದಾರೆ.

news18-kannada
Updated:July 8, 2020, 1:12 PM IST
ರಾಜ್ಯದಲ್ಲಿ ಸದ್ಯಕ್ಕೆ ಜಿಮ್ ಮತ್ತು ಈಜುಕೊಳ ತೆರೆಯುವುದಿಲ್ಲ; ಸಚಿವ ಸಿ.ಟಿ. ರವಿ ಸ್ಪಷ್ಟನೆ
ಸಿ.ಟಿ. ರವಿ
  • Share this:
ಬೆಂಗಳೂರು (ಜು. 8):  ರಾಜ್ಯದಲ್ಲಿ ಜಿಮ್ ಮತ್ತು ಈಜುಕೊಳ ಸದ್ಯಕ್ಕೆ ತೆರೆಯುವ ವಿಚಾರ ಇಲ್ಲ ಎಂದು ಪ್ರವಾಸೋದ್ಯಮ ಹಾಗೂ ಕೀಡಾ ಸಚಿವ ಸಿಟಿ ರವಿ ತಿಳಿಸಿದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಹೋಟೆಲ್ ಉದ್ಯಮಿದಾರರು ಸಿಎಂ ಬಳಿ ಚರ್ಚೆ ಮಾಡಿದ್ದಾರೆ. ಜಿಮ್ ಹಾಗೂ ಈಜುಕೊಳ ತೆರೆಯುವ ಬಗ್ಗೆ ಸೂಕ್ತ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಶಾಲೆಗಳ ಪ್ರಾರಂಭ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಮಿತಿ ವರದಿ ಕೊಟ್ಟಿದೆ. ತಜ್ಞರ ಜೊತೆ ಸಮಾಲೋಚನೆ ನಡೆಸಿ ಪೋಷಕರ ಅಭಿಪ್ರಾಯ ಸಂಗ್ರಹ ಮಾಡಬೇಕು. ನಂತರ ಈ ಬಗ್ಗೆ ಶಿಕ್ಷಣ ಸಚಿವರು ನಿರ್ಧಾರ ಮಾಡಬೇಕು. ಹಲವು ಮುಖಗಳಲ್ಲಿ ಇದನ್ನು ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ತೀವ್ರಗೊಂಡ ಕೊರೋನಾ: ನಾಳೆ ಕೋವಿಡ್​​​ ಕೇರ್​​ ಸೆಂಟರ್​​ಗಳಿಗೆ ಸಿಎಂ ಯಡಿಯೂರಪ್ಪ ಭೇಟಿ, ಪರಿಶೀಲನೆ

ಶಾಲೆಗಳ ಪ್ರಾರಂಭ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಮಿತಿ ವರದಿ ಕೊಟ್ಟಿದೆ. ತಜ್ಞರ ಜೊತೆ ಸಮಾಲೋಚನೆ ನಡೆಸಿ ಪೋಷಕರ ಅಭಿಪ್ರಾಯ ಸಂಗ್ರಹ ಮಾಡಬೇಕು. ನಂತರ ಈ ಬಗ್ಗೆ ಶಿಕ್ಷಣ ಸಚಿವರು ನಿರ್ಧಾರ ಮಾಡಬೇಕು. ಹಲವು ಮುಖಗಳಲ್ಲಿ ಇದನ್ನು ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದರು.

ಕೋವಿಡ್ ವಿಚಾರದಲ್ಲಿ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಟಾಂಗ್ ನೀಡಿದ ಸಚಿವ ಸಿ.ಟಿ. ರವಿ, ಕಾಂಗ್ರೆಸ್ ಸರ್ಕಾರ ಇದ್ದಾಗ ಹಾಸಿಗೆ, ದಿಂಬು ಹಗರಣದಲ್ಲಿ ಕೋಟ್ಯಾಂತರ ಹಣ ಲೂಟಿ ಮಾಡಿದ್ದಾರೆ. ಅವರಿಗೆ ಇಂತಹದ್ದೇ ಕಾಣುತ್ತಾ? ಎಂದು ಪ್ರಶ್ನಿಸಿದರು. ಸುಳ್ಳನ್ನೇ ಮನೆದೇವರನ್ನಾಗಿ ಮಾಡಿಕೊಂಡ ಕಾಂಗ್ರೆಸ್ ನವರು ಬರೀ ಇಂತಹ ಸುಳ್ಳುಗಳನ್ನೇ ಹೇಳಿಕೊಂಡು ತಿರುಗುತ್ತಿದ್ದಾರೆ. ಕೊರೊನಾ ಬಂದ ಹೊಸತರಲ್ಲಿ ಸರ್ಜಿಕಲ್ ಮಾಸ್ಕ್​ಗಳು ಮಾತ್ರ ಇದ್ದವು. ಅಂತಹ ಸಂದರ್ಭದಲ್ಲಿ ಬೇರೆ ಕಡೆಯಿಂದ ಮಾಸ್ಟರ್ ಮತ್ತು ಪಿಪಿಇ ಕಿಟ್ ಖರೀದಿ ಮಾಡುವುದು ಅನಿವಾರ್ಯವಾಗಿತ್ತು, ಇದರಲ್ಲಿ ಹುಳುಕು ಹುಡುಕುವುದು ಸರಿಯಲ್ಲ ಎಂದರು.

Published by: Sushma Chakre
First published: July 8, 2020, 1:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading