HOME » NEWS » State » KARNATAKA CORONAVIRUS SIDDARAMAIAH AND CONGRESS STARTED LEKKA KODI CAMPAIGN IN TWITTER AGAINST BJP SCT

Lekka Kodi: ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ; ಟ್ವಿಟ್ಟರ್​ನಲ್ಲಿ ಕಾಂಗ್ರೆಸ್ ಅಭಿಯಾನ ಶುರು

ಕೊರೋನಾ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಖರ್ಚು ಮಾಡಿದ ಹಣದ ಲೆಕ್ಕ ಕೇಳುವುದು ಜನರ ಹಕ್ಕು, ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ ಎನ್ನುವ ಮೂಲಕ ಕಾಂಗ್ರೆಸ್ ಟ್ವಿಟ್ಟರ್​ನಲ್ಲಿ ಲೆಕ್ಕ ಕೊಡಿ ಎಂಬ ಅಭಿಯಾನ ಆರಂಭಿಸಿದೆ.

news18-kannada
Updated:July 11, 2020, 3:40 PM IST
Lekka Kodi: ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ; ಟ್ವಿಟ್ಟರ್​ನಲ್ಲಿ ಕಾಂಗ್ರೆಸ್ ಅಭಿಯಾನ ಶುರು
ಸಿದ್ದರಾಮಯ್ಯ
  • Share this:
ಬೆಂಗಳೂರು (ಜು. 11): ರಾಜ್ಯ ಸರ್ಕಾರ  ಕೊರೊನಾ ನಿಯಂತ್ರಣದ ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ. ಇದಕ್ಕಾಗಿ ಈಗಾಗಲೇ ಟ್ವಿಟ್ಟರ್​ನಲ್ಲಿ #LekkaKodi ಎಂಬ ಹ್ಯಾಶ್​ಟ್ಯಾಗ್​ನಡಿ ಕಾಂಗ್ರೆಸ್ ಅಭಿಯಾನ ಶುರು ಮಾಡಿದೆ. 

ಲೆಕ್ಕ ಕೇಳುವುದು ರಾಜ್ಯದ ಜನತೆಯ ಹಕ್ಕು , ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ ಎನ್ನುವ ಮೂಲಕ ಕೊರೋನಾ ಬಂದ ದಿನದಿಂದ ರಾಜ್ಯ ಸರ್ಕಾರ ಎಷ್ಟು ಹಣ ಖರ್ಚು ಮಾಡಿದೆ.  ಕೊರೋನಾ ಬಂದ ದಿನದಿಂದ ರಾಜ್ಯ ಸರ್ಕಾರ ಎಷ್ಟು ಹಣ ಖರ್ಚು ಮಾಡಿದೆ ಜೊತೆಗೆ  ಕೇಂದ್ರದಿಂದ ಎಷ್ಟು ಹಣ ಬಂದಿದೆ ತಿಳಿಸಬೇಕು ಎಂದಿದ್ದಾರೆ.  ಅಷ್ಟೇ ಅಲ್ಲದೇ ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಹಣ ಖರ್ಚು ಮಾಡಿದೆ . ಮುಖ್ಯವಾಗಿ ಕೊರೋನಾ ಗೆ ಬಳಕೆ ಮಾಡುವ   ಪಿಪಿಇ ಕಿಟ್, ಟೆಸ್ಟ್‌ ಕಿಟ್, ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳ ಸೇರಿದಂತೆ ಮುಂತಾದಗಳ ಮಾರುಕಟ್ಟೆ ದರ ಎಷ್ಟಿದೆ? ಮೇಲಿನ ವಸ್ತುಗಳನ್ನು ಸರ್ಕಾರ ಎಷ್ಟು ಹಣ ಕೊಟ್ಟು ಖರೀದಿ ಮಾಡಿದೆ ಸಹ ತಿಳಿಸುವಂತೆ ವಿ , ಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೋನಾ ಹೆಚ್ಚಳಕ್ಕೆ ಕಾಂಗ್ರೆಸ್​ ನಾಯಕರೇ ಕಾರಣ; ಸಚಿವ ಬಿ.ಸಿ. ಪಾಟೀಲ್ ಆರೋಪ

ಆ ವಸ್ತುಗಳನ್ನು ಯಾವ ಯಾವ ಕಂಪನಿಗಳಿಂದ ಖರೀದಿ ಮಾಡಿದ್ದೀರಿ? ಲಾಕ್ ಡೌನ್ ಟೈಂನಲ್ಲಿ ಎಷ್ಟು ಫುಡ್ ಕಿಟ್ ಮತ್ತು ಫುಡ್ ಪ್ಯಾಕೇಟ್ ಕೊಟ್ಟಿದ್ದೀರಿ? ಯಾರಿಗೆ ಕೊಟ್ಟಿದ್ದೀರಿ ಎಷ್ಟು ಹಣ ಖರ್ಚು ಆಗಿದೆ ಎಂಬುದನ್ನು ತಾಲ್ಲೂಕು , ವಾಡ್೯ ವಾರು ಲೆಕ್ಕ ಕೇಳಿದ್ದಾರೆ ಸಿದ್ದರಾಮಯ್ಯ. ವಲಸೆ ಕಾರ್ಮಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಎಷ್ಟು ಫುಡ್ ಕಿಟ್ ಕೊಟ್ಟಿದ್ದೀರಿ ಅದಕ್ಕೆ ಎಷ್ಟು ಖರ್ಚು ಆಗಿದೆ  ಏನೇನು ಕೊಟ್ಟಿದ್ದೀರಿ ಇವುಗಳ ಮಾಹಿತಿ ನೀಡಬೇಕು ಎಂದಿದ್ದಾರೆ. ಸಂಕಷ್ಟದಲ್ಲಿದ್ದ ಜನರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ  ಘೋಷಿಸಿರುವ  ಪ್ಯಾಕೇಜ್​ಗಳು ಯಾವುವು? ಎಂದಿದ್ದಾರೆ.ಇದುವರೆಗೆ ಯಾವ ಯಾವ ವೃತ್ತಿಯವರಿಗೆ ಎಷ್ಟು ಹಣ ಬಿಡುಗಡೆಯಾಗಿದೆ? ಜೊತೆಗೆ, ಯಾವ ಯಾವ ಸಮುದಾಯಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ?  ಕೊರೋನಾ ಸಂತ್ರಸ್ತರ ಆರೈಕೆಗೆ ಎಷ್ಟು ಹಣಕಾಸು ಖರ್ಚು ಮಾಡಿದ್ದೀರಿ. ಎಲ್ಲದರ ಸಂಪೂರ್ಣವಾದ ಲೆಕ್ಕ ಜನರಿಗೆ  ಕೊಡಿ ಅಂತ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ. ಲೆಕ್ಕ ಕೇಳುವುದು ಜನರ ಹಕ್ಕು, ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಈಗಾಗಲೇ ಕರ್ನಾಟಕ ಕಾಂಗ್ರೆಸ್, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಲೆಕ್ಕಕೊಡಿ ಅಭಿಯಾನವನ್ನು ಶುರು ಮಾಡಿದ್ದಾರೆ.
Published by: Sushma Chakre
First published: July 11, 2020, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories