ಶಿವಮೊಗ್ಗ (ಜು. 13): ಕೊರೋನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ನಿಜಕ್ಕೂ ಶ್ಲಾಘನೀಯ. ಸೀಲ್ ಡೌನ್ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಮಾಹಿತಿ ಪಡೆದು, ಸರ್ಕಾರಕ್ಕೆ ಸೂಕ್ತ ಮಾಹಿತಿ ರವಾನೆ ಮಾಡುವ ಆಶಾ ಕಾರ್ಯಕರ್ತೆಯರ ಕೆಲಸ ಪ್ರಶಂಸನೀಯ. ಇಂತಹ ಆಶಾ ಕಾರ್ಯಕರ್ತೆಯರ ಸೇವೆಯನ್ನು ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ಈಗ ಗುರುತಿಸಿದೆ.
ಆಶಾ ಕಾರ್ಯಕರ್ತೆಯರಲ್ಲಿ ಅತ್ಯುತ್ತಮ ಆಶಾ ಕಾರ್ಯಕರ್ತೆಯರನ್ನು ಆಯ್ಕೆ ಮಾಡುವ ಮೂಲಕ ಅವರಲ್ಲಿ ಕೆಲಸದ ಚಿಲುಮೆ , ಉತ್ಸಾಹ, ಜವಾಬ್ದಾರಿ ಮತ್ತಷ್ಟು ಹೆಚ್ಚಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಈ ಕೊರೋನಾ ಮಹಾಮಾರಿ ದೇಶಕ್ಕೆ ಕಾಲಿಟ್ಟ ಸಮಯದಿಂದ ಇಲ್ಲಿಯವರೆಗೆ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸೇವೆ ಮರೆಯಲು ಸಾಧ್ಯವೇ ಇಲ್ಲ. ಸೀಲ್ ಡೌನ್ ಪ್ರದೇಶಗಳಿಗೆ ಭೇಟಿ ನೀಡಿ ಕೆಲಸ ಮಾಡಿ ಸರ್ಕಾರದದಿಂದ, ಸಮಾಜದಿಂದ ಭೇಷ್ ಎನಿಸಿಕೊಂಡಿದ್ದಾರೆ ಇವರು.
ಆಶಾ ಕಾರ್ಯಕರ್ತೆಯರು ಮನೆ, ಮನೆಗೆ ಭೇಟಿ ನೀಡುವಾಗ ಅಪಾಯ ಸ್ವಲ್ಪ ಹೆಚ್ಚು. ಇಂತಹ ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ಹಲವಾರು ಸಂಘ, ಸಂಸ್ಥೆಗಳು ಗುರುತಿಸಿ ಗೌರವಿಸಿವೆ, ಅವರ ಕೆಲಸವನ್ನು ಶ್ಲಾಘಿಸಿದ್ದಾರೆ. ಕೊರೋನಾ ಸವಾಲನ್ನು ಮೆಟ್ಟಿ ನಿಂತು ಆಶಾ ಕಾರ್ಯಕರ್ತರು, ವಾರಿಯರ್ ಪದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿದ್ದಾರೆ. ಇಂತಹ ವಾರಿಯರ್ ಆಗಿರುವ ಶಿವಮೊಗ್ಗದ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೇಂದ್ರ ಸರ್ಕಾರ ಗೌರವಿಸಿ ಅಭಿನಂದಿಸಿದೆ.
ಇದನ್ನೂ ಓದಿ: ಶ್ರೀರಾಮುಲು ಆಪ್ತ ಮಹೇಶ್ ರೆಡ್ಡಿ ಸಾವು ಪ್ರಕರಣ; ಅನುಮಾನಗಳಿಗೆ ಸಿಕ್ಕಿಲ್ಲ ಇನ್ನೂ ಉತ್ತರ
ಶಿವಮೊಗ್ಗದ ತುಂಗಾನಗರ ಬಡಾವಣೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಅನ್ನಪೂರ್ಣ ಅತ್ಯುತ್ತಮ ಆಶಾ ಕಾರ್ಯಕರ್ತೆ ಹಾಗೂ ಇವರ ಕಾರ್ಯ ಇತರರಿಗೆ ಸ್ಫೂರ್ತಿ ಎಂದು ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ಗುರುತಿಸಿ ಗೌರವಿಸಿದೆ. 2015ರಿಂದ ಕಾರ್ಯ ನಿರ್ವಹಿಸುತ್ತಿರುವ ಇವರು, ಶಿವಮೊಗ್ಗದ ಕೊರೋನಾದ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ತುಂಗಾನಗರ ಬಡಾವಣೆಯ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಲಂ ಪ್ರದೇಶವಾಗಿರುವ ಇಲ್ಲಿ ಕೆಲಸ ಮಾಡೋದು ಅಷ್ಟು ಸುಲಭವಲ್ಲ. ಇಲ್ಲಿಯ ನಿವಾಸಿಗಳಿಗೆ ತಿಳುವಳಿಕೆ ನೀಡುವುದು, ಅವರಿಗೆ ಮಾರ್ಗದರ್ಶನ ಕೊಡೋದು ಸ್ವಲ್ಪ ಕಷ್ಟ ಕೆಲಸ . ಅದರ ನಡುವೆಯೂ ಅವರ ಮನವೊಲಿಸಿ ಕೋವಿಡ್ ಬಗ್ಗೆ ತಿಳಿವಳಿಕೆ ನೀಡಲು ಬಹಳ ಶ್ರಮ ಪಟ್ಟು ಕೆಲಸ ಮಾಡಿದ್ದಾರೆ ಅನ್ನಪೂರ್ಣ.
ಇದನ್ನೂ ಓದಿ: ಕೊಡಗಿನಲ್ಲಿ ಕೊರೋನಾ ಆರ್ಭಟ: ಒಂದೇ ದಿನ 15 ಮಂದಿಗೆ ಸೋಂಕು
ಅನ್ನಪೂರ್ಣ ಹಗಲಿರುಳು ಎನ್ನದೆ ತನ್ನ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ಸರ್ಕಾರ ಸಹ ಈಗ ಗೌರವಿಸಿದೆ. ತುಂಗಾ ನಗರ ಬಡಾವಣೆಯಲ್ಲಿ ಕಳೆದ ಹಲವು ದಿನಗಳಿಂದ ಅನೇಕ ಕಂಟೈನ್ಮೆಂಟ್ ಜೋನ್ ಗಳು ಇವೆ. ಸೀಲ್ ಡೌನ್ ಮಾಡಲು ಹೋದ ಸಮಯದಲ್ಲಿ ಇಲ್ಲಿ ಜನ ತುಂಬಾ ಕಿರಿ ಕಿರಿ ಮಾಡುತ್ತಿದ್ದರು. ಅವರಿಗೆಲ್ಲ ಮನವರಿಕೆ ಮಾಡಿ, ಸೀಲ್ ಡೌನ್ ಮಾಡದಿದ್ದರೆ ನಿಮ್ಮ ಜೀವಕ್ಕೆ ತೊಂದರೆಯಾಗುತ್ತದೆ ಇಲ್ಲದ್ದಿದ್ದರೆ ನಿಮ್ಮ ಜೀವ ಕಾಪಾಡಲು ಆಗುವುದಿಲ್ಲ ಎಂದು ಅವರಿಗೆ ತಿಳುವಳಿಕೆ ನೀಡುವಲ್ಲಿ ಇವರು ಶ್ರಮಿಸಿದ್ದಾರೆ. ಅನ್ನಪೂರ್ಣ ಅವರು, ತಮ್ಮ ಕೆಲಸಕ್ಕೆ ಸಮಯ ನಿಗದಿ ಮಾಡಿಕೊಳ್ಳದೆ, ರಾತ್ರಿಯಾಗಲಿ, ಹಗಲಾಗಲಿ ಆರೋಗ್ಯ ಕೇಂದ್ರದಿಂದ ಕರೆ ಬಂದ ತಕ್ಷಣ ಕೆಲಸಕ್ಕೆ ಹಾಜರಾಗಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ