HOME » NEWS » State » KARNATAKA CORONA CASE RAISING 17 THOUSAND CASES RECORDED TODAY SESR

Karnataka Corona: ರಾಜ್ಯದಲ್ಲಿ ಕೊರೋನಾ ಸ್ಪೋಟ; ಏರಿಕೆಯಾಗುತ್ತಿದೆ ಸಾವಿನ ಸಂಖ್ಯೆ

ರಾಜ್ಯದಲ್ಲಿ ಈವರೆಗೆ 13,270 ಸೋಂಕಿತರು ಸಾವನ್ನಪ್ಪಿದ್ದು, 1,19,160 ಸಕ್ರಿಯ ಕೊರೋನಾ ಪ್ರಕರಣಗಳು ದಾಖಲಾಗಿವೆ.

news18-kannada
Updated:April 17, 2021, 7:29 PM IST
Karnataka Corona: ರಾಜ್ಯದಲ್ಲಿ ಕೊರೋನಾ ಸ್ಪೋಟ; ಏರಿಕೆಯಾಗುತ್ತಿದೆ ಸಾವಿನ ಸಂಖ್ಯೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಏ. 17): ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆ ಕಂಡಿದೆ. ಇಂದು ರಾಜ್ಯದಲ್ಲಿ 17, 489 ಹೊಸ ಸೋಂಕು ಪ್ರಕರಣ ದಾಖಲಾಗುವ ಮೂಲಕ ಆತಂಕ ಮೂಡಿಸಿದೆ. ಕಳೆದ 24 ಗಂಟೆಯೊಳಗೆ 80 ಸೋಂಕಿತರು ಸಾವನ್ನಪ್ಪಿದ್ದಾರೆ. ಇದಲರಲ್ಲಿ ಆತಂಕದ ವಿಷಯ ಎಂದರೇ ರಾಜ್ಯ ರಾಜಧಾನಿಯಲ್ಲಿ 11 ಸಾವಿರ ಕೋವಿಡ್​ ಪ್ರಕರಣ ದಾಖಲಾಗಿದ್ದು, 43 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ಸಾವಿನ ಸಂಖ್ಯೆ ಏರಿಕೆ ಕಾಣುತ್ತಿದ್ದಂತೆ ಚಿತಾಗಾರದ ಮುಂದೆ ಸೋಂಕಿತರ ಅಂತ್ಯಕ್ರಿಯೆಗೆ ಆಂಬುಲನ್ಸ್​ಗಳು ಸಾಲುಗಟ್ಟಿರುವ ದೃಶ್ಯಗಳು ಕೂಡ ಕಂಡು ಬಂದಿದೆ.

ರಾಜ್ಯದಲ್ಲಿ ಈವರೆಗೆ 13,270 ಸೋಂಕಿತರು ಸಾವನ್ನಪ್ಪಿದ್ದು, 1,19,160 ಸಕ್ರಿಯ ಕೊರೋನಾ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಲ್ಲಿ 87,724 ಸಕ್ರಿಯ ಪ್ರಕರಣ ಗಳಿವೆ. ಇನ್ನು ಕೆಲ ಜಿಲ್ಲೆಗಳಲ್ಲಿ ಕೂಡ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ. ಕಲಬುರ್ಗಿ 560 , ತುಮಕೂರು 507, ಬೀದರ್​​ 359,ಬಳ್ಳಾರಿ 355, ದಕ್ಷಿಣ ಕನ್ನಡ 309, ವಿಜಯಪುರ 281 ಪ್ರಕರಣ ದಾಖಲಾಗಿವೆ

ಸಭೆ ಕರೆದ ಸಚಿವ ಅಶೋಕ್​:

ಬೆಂಗಳೂರಿನಲ್ಲಿ ಕೊರೊನಾ ಕೇಸ್​ ಹೆಚ್ಚಳವಾಗುತ್ತಿರುವ ಹಿನ್ನಲೆ ಸಚಿವರುಗಳು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಸೋಂಕು ನಿಯಂತ್ರಣದ ಹಿನ್ನಲೆ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರುವ ಕುರಿತು ಕಂದಾಯ ಸಚಿವ ಆರ್​ ಅಶೋಕ್​ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಏ. 19ರ ಸೋಮವಾರ ಬೆಂಗಳೂರಿನ ಶಾಸಕರು, ಸಂಸದರು, ಸಚಿವರು, ರಾಜ್ಯಸಭಾ ಸದಸ್ಯರ ತುರ್ತು ಸಭೆ ಕರೆಯಲಾಗಿದೆ. ಸಿಎಂ ನಿರ್ದೇಶನ ಹಿನ್ನೆಲೆ ಜನಪ್ರತಿನಿಧಿಗಳ ಸಭೆ ಕರೆಯಲಾಗಿದ್ದು, ಕರೊನಾ ನಿಯಂತ್ರಣ, ನಿರ್ವಹಣೆ, ಆಸ್ಪತ್ರೆ ಬೆಡ್ ಕೊರತೆ, ಆಂಬುಲೆನ್ಸ್ ಸಮಸ್ಯೆ, ವ್ಯಾಕ್ಸಿನೇಷನ್ ಬಗ್ಗೆ ಜನ ಪ್ರತಿನಿಧಿಗಳು ಚರ್ಚೆ ನಡೆಸಲಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ ಯಾವುದೇ ಜಾತ್ರೆಗಳಿಗೆ ಅವಕಾಶವಿಲ್ಲ; ಮದುವೆಗೆ ಪಾಸ್​ ಕಡ್ಡಾಯ: ಆರ್​ ಅಶೋಕ್

ರಾಜ್ಯಪಾಲರಿಗೆ ಮಾಹಿತಿ:

ರಾಜ್ಯದಲ್ಲಿ ಈ ಮಟ್ಟಿನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯದ ಪ್ರಸಕ್ತ ಕೋವಿಡ್ ಪರಿಸ್ಥಿತಿ ಬಗ್ಗೆ ಆರೋಗ್ಯ ಸಚಿವ ಕೆ ಸುಧಾಕರ್​ ರಾಜ್ಯಪಾಲರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾರೆ. ಈ ವೇಳೆ ಈವರೆಗೂ ತೆಗೆದುಕೊಂಡಿರೋ ಕ್ರಮದ ಬಗ್ಗೆ ತಿಳಿಸಿದ್ದಾರೆ.ರಾಜಧಾನಿಯಲ್ಲಿ ಸೋಂಕು ಹೆಚ್ಚಳದ ಹಿನ್ನಲೆ ವಿಧಾನಸೌಧಕ್ಕೆ ಸಾರ್ವಜನಿಕರ ನಿರ್ಬಂಧ ವಿಧಿಸಲಾಗಿದೆ. ವಿಕಾಸಸೌಧ, ಎಂಎಸ್ ಬಿಲ್ಡಿಂಗ್​ಗೂ ಸಾರ್ವಜನಿಕರ ಪ್ರವೇಶವಿಲ್ಲವಾಗಿದ್ದು, ತುರ್ತಾಗಿ ಭೇಟಿಗಾಗಿ ಪೂರ್ವಾನುಮತಿ ಕಡ್ಡಾಯವಾಗಿದೆ.

ಜಿಲ್ಲೆಗಳಲ್ಲಿ ಕಠಿಣ ನಿಯಮ: 

ಬೆಂಗಳೂರು ಹೊರತುಪಡಿಸಿ, ಉಳಿದ ಜಿಲ್ಲೆಗಳಿಗೆ ಇಂದು ಕಠಿಣ ನಿಯಮ ಜಾರಿ ಮಾಡಲಾಗಿದೆ. ಜನರು ಗುಂಪು ಸೇರದ ರೀತಿ ಕ್ರಮ ವಹಿಸಲು ಡಿಸಿಗಳಿಗೆ ಜವಬ್ದಾರಿ ನೀಡಲಾಗಿದೆ. ಈಗಿರುವ ಸೋಂಕಿನ ಪ್ರಮಾಣಕ್ಕಿಂತ ಮತ್ತೆ ಸೋಂಕು ಹೆಚ್ಚಾಗಬಾರದು. ಈ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಖಡಕ್ ಸೂಚನೆ ನೀಡಲಾಗಿದೆ. ಪರಿಸ್ಥಿತಿ ನಿರ್ವಹಣೆಗೆ ಕೊವೀಡ್ ನಿರ್ವಹಣೆಗೆ ಎಷ್ಟು ಹಣ ಬೇಕಾದರೂ ಬಿಡುಗಡೆ ಮಾಡ್ತೀವಿ. ಆದರೆ ಯಾವುದೇ ಕಾರಣಕ್ಕೂ ಸಮಸ್ಯೆ ಅಂತೂ ಆಗಬಾರದು ಎಂದು ಸಚಿವರುಗಳು ಸೂಚಿಸಿದ್ದಾರೆ. ಅಲ್ಲದೇ ವೈದ್ಯಕೀಯ ಸೌಲಭ್ಯ ಕೊರೆಯಾಗದಂತೆ ಬೆಡ್ ಸೇರಿದಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.
Published by: Seema R
First published: April 17, 2021, 7:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories