ಬೆಂಗಳೂರು: ಸರ್ಕಾರದ ವಿರುದ್ಧ (Karnataka BJP Government) ಕಾಂಗ್ರೆಸ್ ಸಮರ (Congress) ಸಾರಿದ್ದು, ಇಂದು ಬೆಂಗಳೂರಿನ (Bengaluru) ಹಲವೆಡೆ ಬೃಹತ್ ಪ್ರತಿಭಟನೆಗೆ (Protest) ಮುಂದಾಗಿದೆ. ನಗರದ 300 ಸ್ಥಳಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಯಲಿದೆ. 200 ಸಿಗ್ನಲ್, 25 ಮೆಟ್ರೋ ಸ್ಟೇಷನ್ (Metro Station), 26 ಫ್ಲೈಓವರ್ಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಟ್ರಿನಿಟಿ ಸರ್ಕಲ್ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ, ಪೊಲೀಸ್ ಇಲಾಖೆ ಯಾವುದೇ ಅನುಮತಿ ನೀಡಿಲ್ಲ. ಆಯಾ ವಿಭಾಗದ ಡಿಸಿಪಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು (Bengaluru Police) ಪ್ರತಿಭಟನೆಗೆ ಅವಕಾಶ ನೀಡದಂತೆ ಖಡಕ್ ಆದೇಶ ನೀಡಿದ್ದಾರೆ. ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಆಯುಕ್ತರು (Police Commissioner ) ಸೂಚಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಿಂದ ಬೆಂಗಳೂರಿನ ಹೃದಯ ಭಾಗಕ್ಕೆ ಬರುವವರಿಗೆ ಟ್ರಾಫಿಕ್ ಸಮಸ್ಯೆ (Bengaluru Traffic) ಎದುರಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಪ್ರತಿಭಟನೆಗೆ ಖಾಕಿ ಹೈಅಲರ್ಟ್
ಕಾಂಗ್ರೆಸ್ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡದಿರುವುದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ KSRP ತುಕಡಿ ನಿಯೋಜಿಸಲಾಗಿದೆ. ಅಲ್ಲದೇ ಪ್ರತಿಭಟನೆ ನಡೆಸುವವರನ್ನ ಸ್ಥಳದಲ್ಲೇ ವಶಕ್ಕೆ ಪಡೆಯುವಂತೆ ಸೂಚನೆ ನೀಡಿದ್ದಾರೆ. ನಗರದಾದ್ಯಂತ ಎಲ್ಲಾ ಡಿವಿಷನ್ಗಳು ಸೇರಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ: Zameer Ahmed Khan: ರಾಜ್ಯ ಕಾಂಗ್ರೆಸ್ ಸೋಲಿಸಲು 500 ಕೋಟಿ ರೂಪಾಯಿ ಡೀಲ್! ನಾನವನಲ್ಲ ನಾನವನಲ್ಲ ಎಂದ ಜಮೀರ್
ಕೋಲಾರದಲ್ಲಿ ಸಿದ್ದು ರಣಕಹಳೆ!
ಇತ್ತ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ಅತ್ತ ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಬಲಪ್ರದರ್ಶನ ಮಾಡಲಿದ್ದಾರೆ. ಕೋಲಾರದಲ್ಲಿ ಇಂದು ಕಾಂಗ್ರೆಸ್ ಬಲ ಪ್ರದರ್ಶನ ನಡೆಯಲಿದ್ದು. ಕ್ಷೇತ್ರ ಘೋಷಣೆ ಬಳಿಕ ಸಿದ್ದರಾಮಯ್ಯ ಮೊದಲ ಸಮಾವೇಶ ನಡೆಸುತ್ತಿದ್ದಾರೆ.
ಸುಮಾರು 60 ಸಾವಿರಕ್ಕೂ ಹೆಚ್ಚು ಜನ ಸೇರಿಸಲು ಕಾಂಗ್ರೆಸ್ ನಾಯಕರು ಪ್ಲ್ಯಾನ್ ಮಾಡಿದ್ದಾರೆ. ಪ್ರಜಾಧ್ವನಿ ಸಮಾವೇಶಕ್ಕೆ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಸಿದ್ದರಾಮಯ್ಯನವರ 100 ಅಡಿ ಎತ್ತರದ ಕಟೌಟ್ ಸಿದ್ಧಪಡಿಸಲಾಗಿದೆ. ಇದೇ ವೇಳೆ ಟೀಕೆ ಮಾಡುತ್ತಿರುವ ಎಲ್ಲಾ ಬಿಜೆಪಿ-ಜೆಡಿಎಸ್ ನಾಯಕರಿಗೂ ಸಿದ್ದರಾಮಯ್ಯ ಉತ್ತರ ಕೊಡುವ ನಿರೀಕ್ಷೆ ಇದೆ. ಸಮಾವೇಶದ ನಂತರ ಸಿದ್ದರಾಮಯ್ಯನವರು ರಮೇಶ್ಕುಮಾರ್, ಕೆ.ಹೆಚ್ ಮುನಿಯಪ್ಪ ಸೇರಿದಂತೆ ಹಲವು ಸ್ಥಳೀಯ ನಾಯಕರೊಂದಿಗೆ ಚರ್ಚೆ ಮಾಡಲಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯ ವಾಸಕ್ಕೆ ಮನೆಯೂ ಸಿದ್ಧ
ಇನ್ನು ಕೋಲಾರದಲ್ಲಿ ಸಿದ್ದರಾಮಯ್ಯ ವಾಸಕ್ಕಾಗಿ ಮನೆ ಫಿಕ್ಸ್ ಮಾಡಲಾಗಿದೆ. ಕೋಲಾರ ಹೊರವಲಯದ ಕೋಗಿಲಹಳ್ಳಿ ಗ್ರಾಮದಲ್ಲಿ ಸಿದ್ದರಾಮಯ್ಯ ಹೊಸ ಮನೆ ಮಾಡಿದ್ದಾರೆ. ತೋಟದ ಮಧ್ಯೆ ಈ ಮನೆ ಇದ್ದು, ಬರೋಬ್ಬರಿ ಒಂದು ಎಕರೆ ಇದೆ.
ಈ ಮನೆ ಕೋಲಾರ ನಗರದ ಕುರುಬರ ಪೇಟೆ ನಿವಾಸಿ ಶಂಕರ್ ಅವರಿಗೆ ಸೇರಿದೆ. ತಿಂಗಳಿಗೆ 20 ಸಾವಿರ ರೂಪಾಯಿಯಂತೆ ಮನೆ ಬಾಡಿಗೆಗೆ ಮಾತುಕತೆ ಆಗಿದ್ಯಂತೆ. ನೆಲಮಹಡಿಯಲ್ಲಿ ಹಾಲ್, ಡೈನಿಂಗ್ ಹಾಲ್, 2 ರೂಮು, ದೇವರ ಮನೆ, ಕಿಚನ್ ಇದ್ದು, ಮೊದಲ ಅಂತಸ್ತಿನಲ್ಲಿ ಒಂದು ಪ್ರತ್ಯೇಕ ರೂಮು, ಸಭೆ ಸಮಾರಂಭ ಮಾಡಲು 20 ಗುಂಟೆ ಸ್ಥಳ ಇದ್ಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ