ರಮೇಶ್ ಜಾರಕಿಹೊಳಿ ಮುಂದಿನ ನಡೆಯೇನು?; ದಾರಿ ಕಾಣದೆ ಕಂಗಾಲಾದ ಗೋಕಾಕ್ ಶಾಸಕ

ಕಾಂಗ್ರೆಸ್​ ನಾಯಕರು ಈಗ ರೆಸಾರ್ಟ್​​ ರಾಜಕರಣ ಆರಂಭಿಸುವ ಮೂಲಕ ಬಿಜೆಪಿಯ ಆಪರೇಷನ್​ ಕಮಲ ಪ್ಲ್ಯಾನ್​ಗೆ ತಿರುಗೇಟು ನೀಡಿದ್ದಾರೆ ಕೈ ನಾಯಕರು. ಹಾಗಾಗಿ, ರಾಜೀನಾಮೆ ನೀಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಅವರು ಕೂಡ ಹೇಳುತ್ತಿಲ್ಲವಂತೆ.

Rajesh Duggumane | news18
Updated:January 19, 2019, 11:48 AM IST
ರಮೇಶ್ ಜಾರಕಿಹೊಳಿ ಮುಂದಿನ ನಡೆಯೇನು?; ದಾರಿ ಕಾಣದೆ ಕಂಗಾಲಾದ ಗೋಕಾಕ್ ಶಾಸಕ
ರಮೇಶ್​ ಜಾರಕಿಹೊಳಿ, ಬಿ ನಾಗೇಂದ್ರ, ಮಹೇಶ್​, ಉಮೇಶ್​​ ಜಾಧವ್​
Rajesh Duggumane | news18
Updated: January 19, 2019, 11:48 AM IST
ಬೆಂಗಳೂರು (ಜ.19): ಕರ್ನಾಟಕದಲ್ಲಿ ರೆಸಾರ್ಟ್​​ ರಾಜಕಾರಣ ಜೋರಾಗಿದೆ. ಬಿಜೆಪಿ ಶಾಸಕರು ರೆಸಾರ್ಟ್​​ ರಾಜಕಾರಣ ಆರಂಭಿಸಿದ ಬೆನ್ನಲ್ಲೇ ಕಾಂಗ್ರೆಸ್​​ ಕೂಡ ಇದೇ ಮಾರ್ಗ ಅನುಸರಿಸಿದೆ. ಸದ್ಯ ಈಗಲ್​ಟನ್​ ರೆಸಾರ್ಟ್​​ನಲ್ಲಿ ಕಾಂಗ್ರೆಸ್​ ಶಾಸಕರು ತಂಗಿದ್ದು, ಪಕ್ಷದ ಮುಂದಿನ ನಡೆಯ ಬಗ್ಗೆ ಅಲ್ಲಿಯೇ ಚರ್ಚೆ ಮಾಡಲಿದ್ದಾರಂತೆ. ಇಂದು ಮಧ್ಯಾಹ್ನ ರೆಸಾರ್ಟ್​​ನಲ್ಲಿ ಔತಣಕೂಟ ಏರ್ಪಡಿಸಲಾಗಿದೆ.

ಇನ್ನು, ಬಿಜೆಪಿ ಶಾಸಕರು ಹರಿಯಾಣದ ಗುರುಗ್ರಾಮದ ಐಟಿಸಿ ಭಾರತ್​ ರೆಸಾರ್ಟ್​​ನಿಂದ ವಾಪಸಾಗುತ್ತಿದ್ದಾರೆ. ಈ ಮಧ್ಯೆ, ಅತೃಪ್ತ ಶಾಸಕ ರಮೇಶ್​ ಜಾರಕಿಹೊಳಿ ಮುಂದೇನು ಮಾಡಬೇಕು ಎಂಬುದು ತೋಚದೆ ಕಂಗಾಲಾಗಿದ್ದಾರೆ. ಶುಕ್ರವಾರ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ಕರೆದಿತ್ತು. ಆದರೆ, ರಮೇಶ್​ ಜಾರಕಿಹೊಳಿ ಸೇರಿ ನಾಲ್ಕು ಶಾಸಕರು ಸಿಎಲ್​ಪಿ ಸಭೆಯಲ್ಲಿ  ಪಾಲ್ಗೊಂಡಿರಲಿಲ್ಲ. ಈ ಮೂಲಕ ಪಕ್ಷದ ವಿರುದ್ಧ ಬಂಡಾಯ ಎದ್ದಿರುವುದಾಗಿ ಅವರು ಮತ್ತೊಮ್ಮೆ ಸಾಬೀತು ಮಾಡಿದ್ದರು. ಸಭೆಯಲ್ಲಿ ಪಾಲ್ಗೊಳ್ಳದ ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. 

ಇದನ್ನೂ ಓದಿ: ಬಂದ ದಾರಿಗೆ ಸುಂಕವಿಲ್ಲ; ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರುತ್ತಿದ್ದಂತೆ ಮನೆಯತ್ತ ಹೊರಟ ಬಿಜಿಪಿ ಶಾಸಕರು!

ಕಾಂಗ್ರೆಸ್​ ಶಾಸಕರು ರೆಸಾರ್ಟ್​ಗೆ ತೆರಳಿದ ಬಳಿಕ ಅತೃಪ್ತ ಶಾಸಕರು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ರಾಜೀನಾಮೆ ನೀಡಬೇಕೋ ಅಥವಾ ನೀಡಬಾರದೋ ಎಂಬ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಬೆಂಗಳೂರಿಗೆ ತೆರಳಿದರೆ, ಕಾಂಗ್ರೆಸ್​​ ಹಿರಿಯ ನಾಯಕರು ರಾಜೀನಾಮೆ ನೀಡದಂತೆ ಒತ್ತಾಯಿಸಿ ಜಾರಕಿಹೊಳಿ ಅವರ ಮನವೊಲಿಸುವ ಪ್ರಯತ್ನ ಮಾಡುವ ಸಾಧ್ಯತೆ ಇದೆ. ಇನ್ನು, ಅವರಿಗೆ ತಮ್ಮ ಕ್ಷೇತ್ರಕ್ಕೂ ಹೋಗಲು ಸಾಧ್ಯವಾಗುತ್ತಿಲ್ಲ. ಇದು ಅವರನ್ನು ಚಿಂತೆಗೀಡು ಮಾಡಿದೆಯಂತೆ.

ಸದ್ಯ, ರಾಜ್ಯದಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಕಾಂಗ್ರೆಸ್​ ನಾಯಕರು ಈಗ ರೆಸಾರ್ಟ್​​ ರಾಜಕರಣ ಆರಂಭಿಸುವ ಮೂಲಕ ಬಿಜೆಪಿಯ ಆಪರೇಷನ್​ ಕಮಲ ಪ್ಲ್ಯಾನ್​ಗೆ ತಿರುಗೇಟು ನೀಡಿದ್ದಾರೆ ಕೈ ನಾಯಕರು. ಹಾಗಾಗಿ, ರಾಜೀನಾಮೆ ನೀಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಅವರು ಕೂಡ ಹೇಳುತ್ತಿಲ್ಲವಂತೆ. ಹಾಗಾಗಿ ಮುಂದೇನು ಮಾಡಬೇಕು ಎನ್ನುವ ಚಿಂತೆಯಲ್ಲಿ ಅತೃಪ್ತರಿದ್ದಾರೆ.

ಇದನ್ನೂ ಓದಿ: ರೆಸಾರ್ಟ್ ರಾಜಕಾರಣ: ಕಾಂಗ್ರೆಸ್ ನಾಯಕರಿಗೆ ನಿದ್ದೆಗೆಡಿಸಿದ ಬಂಡಾಯ ಶಾಸಕರ ರಾಜೀನಾಮೆ ವಿಚಾರ; ಡಿಕೆಶಿ ಹೆಗಲಿಗೆ ಹೊಸ ಜವಾಬ್ದಾರಿ
Loading...

ಪಕ್ಷೇತರ ಶಾಸಕರು ಮುಂಬೈನಲ್ಲಿ ಪ್ರತ್ಯಕ್ಷ!: 

ಮುಂಬೈನ ಹೋಟೆಲ್​ಗೆ ಪಕ್ಷೇತರ ಶಾಸಕರು ಪತ್ತೆ ಆಗಿದ್ದಾರೆ. ಕಾಂಗ್ರೆಸ್​ನ ಇಬ್ಬರು ಶಾಸಕರು ಹಾಗೂ ಪಕ್ಷೇತರರು ಈಗ ಮುಂಬೈ ಹೋಟೆಲ್​ಗೆ ಆಗಮಿಸಿದ್ದರು. ನಾಲ್ಕು ಶಾಸಕರ ಆಗಮನದಿಂದ ರಮೇಶ್​ ಜಾರಕಿಹೊಳಿ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಪಕ್ಷೇತರ ಶಾಸಕರಾದ ನಾಗೇಶ ಹಾಗೂ ಶಂಕರ್ ಹೊಟೇಲ್​ಗೆ ವಾಪಸಾಗಿದ್ದಾರೆ. ಕೋರ್ಟ್ ಕಾರಣ ಹೇಳಿ ಬೆಂಗಳೂರಿಗೆ ತೆರಳಿದ್ದ ಬಿ.ನಾಗೇಂದ್ರ ಹಾಗೂ ಚಿಂಚೊಳ್ಳಿ ಶಾಸಕ ಉಮೇಶ ಜಾಧವ್ ಮರಳಿ ಮುಂಬೈಗೆ ಬಂದಿದ್ದಾರೆ. 

First published:January 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626