ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕಾರ್ ಮೇಲೆ ಮೊಟ್ಟೆ ಎಸೆತ (Egg Thrown) ಖಂಡಿಸಿ ಕಾಂಗ್ರೆಸ್ ಮಡಿಕೇರಿ ಚಲೋ (Madikeri Chalo) ಮೂಲಕ ಪ್ರತಿಭಟನೆ (protest) ನಡೆಸಲು ಮುಂದಾಗಿತ್ತು. ಆದ್ರೆ ಕಾಂಗ್ರೆಸ್ ಪ್ಲ್ಯಾನ್‌ಗೆ (Congress Plan) ಠಕ್ಕರ್ ನೀಡಿರುವ ಬಿಜೆಪಿ (BJP) ನಾಳೆಯಿಂದ 4 ದಿನ ಕೊಡಗಿನಲ್ಲಿ ನಾಲ್ಕು ದಿನ ನಿಷೇಧಾಜ್ಞೆ ಹಾಕಿದೆ. ನಿಷೇಧಾಜ್ಞೆ ಹಿನ್ನೆಲೆ ಮಡಿಕೇರಿ ಚಲೋಗೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ. ನಿಷೇಧಾಜ್ಞೆ ವಿಧಿಸಿರೋದಕ್ಕೆ ಜಿಲ್ಲಾಡಳಿತ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರಣ ನೀಡಿದೆ. ಕೊಡಗು ಜಿಲ್ಲೆಯಲ್ಲಿ (Kodagu District) ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಆಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸೆಕ್ಷನ್ 144 (Section 144) ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ದಾರಿ ಆಗಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ (Virajapete MLA KG Bopaiah) ಹೇಳಿಕೆ ನೀಡಿದ್ದಾರೆ.
ಕೊಡಗಿನಲ್ಲಿ ನಿಷೇಧಾಜ್ಞೆ
ಆಗಸ್ಟ್ 24ರ ಬೆಳಗ್ಗೆ 6 ಗಂಟೆಯಿಂದ ಆಗಸ್ಟ್ 27ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೊಡಗಿನಲ್ಲಿ 3 ದಿನ ಮದ್ಯ ಮಾರಾಟಕ್ಕೂ ನಿಷೇಧ (Liquor Sale Ban) ಹಾಕಲಾಗಿದೆ.
ಕೊಡಗು ಜಿಲ್ಲೆಗೆ PFI ಎಂಟ್ರಿಯಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆಯಂತೆ. ಈಗಾಗಲೇ PFI ಸದಸ್ಯರು (PFI Activist) ಬಂದು ತಂಗಿರುವ ಬಗ್ಗೆಯೂ ಮಾಹಿತಿ ಸಿಕ್ಕಿರುವ ಹಿನ್ನೆಲೆ ಮೂರು ದಿನ ನಿಷೇಧಾಜ್ಞೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಎರಡೂ ಪಕ್ಷಗಳ ಕಾರ್ಯಕ್ರಮ ರದ್ದು ಮಾಡುವಂತೆ ಸಲಹೆ ನೀಡಲಾಗಿದೆ.
ಕಾಂಗ್ರೆಸ್ ಮೈಸೂರಿನಿಂದ ಪಾದಯಾತ್ರೆಗೆ ಪ್ಲ್ಯಾನ್ ಮಾಡಿಕೊಂಡಿತ್ತು. ಆ.26ಕ್ಕೆ ಎಸ್‌ಪಿ ಕಚೇರಿ ಮುತ್ತಿಗೆಗೆ ಕರೆ ನೀಡಲಾಗಿತ್ತು. ಈ ಪ್ರತಿಭಟನೆಯಲ್ಲಿ ಪಕ್ಷದ ಎಲ್ಲಾ ಶಾಸಕರು, ಸಂಸದರು ಹಾಜರಿಗೆ ಕರೆ ನೀಡಲಾಗಿತ್ತು. ಮೊಟ್ಟೆ ಪ್ರಕರಣ ಖಂಡಿಸಿ SP ಕಚೇರಿ ಬಳಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸಿತ್ತು. ಈ ಪ್ರತಿಭಟನೆಯಲ್ಲಿ ಸುಮಾರು 1 ಲ ಕ್ಷ ಜನರನ್ನು ಸೇರಿಸಲು ಕಾಂಗ್ರೆಸ್ ಮುಂದಾಗಿತ್ತು.
ಇದನ್ನೂ ಓದಿ: Siddaramaiah: ಮನೆಯಲ್ಲಿ ಏನಾದ್ರೂ ತಿನ್ನಿ, ದೇವಸ್ಥಾನಕ್ಕೆ ಹೋಗುವಾಗ ಶಿಷ್ಟಾಚಾರ ಪಾಲಿಸಿ: ಪ್ರತಾಪ್ ಸಿಂಹ
ಸರ್ಕಾರದ ನಿಷೇಧಾಜ್ಞೆ ಅಸ್ತ್ರ
ಮಡಿಕೇರಿ ಚಲೋ ಬೆನ್ನಲ್ಲೇ ಬಿಜೆಪಿ ಜಾಥಾ ಆಯೋಜಿಸಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ಕೊಡಗಿನಲ್ಲಿ ಶಾಂತಿ ಸುವ್ಯವಸ್ಥೆ ಭಂಗ ಆತಂಕ ಎದುರಾಗಿತ್ತು. ಒಂದು ವೇಳೆ ಗಲಭೆಗಳಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ಮತ್ತೊಂದೆಡೆ ಇಷ್ಟು ಪ್ರಮಾಣದ ಜನರು ಸೇರಿದ್ರೆ ಕಾಂಗ್ರೆಸ್ ಶಕ್ತಿ ಹೆಚ್ಚಾಗಬಹುದು ಎಂಬ ಆತಂಕ ಬಿಜೆಪಿ ಅಂಗಳದಲ್ಲಿ ಮನೆ ಮಾಡಿತ್ತು ಎಂದು ತಿಳಿದು ಬಂದಿದೆ. ಈ ಕಾರಣಗಳಿಂದ ಸರ್ಕಾರದ ನಿಷೇಧಾಜ್ಞೆ ಅಸ್ತ್ರ ಪ್ರಯೋಗಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಡಿಕೇರಿಯಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ
ಕೋಲಾರದ KGFನಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ (Home Minister Araga Jnanendra), ಮಡಿಕೇರಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಅಲ್ಲಿನ ಜನತೆಯ ಶಾಂತಿ ನೆಮ್ಮದಿ ಮುಖ್ಯ. ಶಾಂತಿ ಕದಡುವ ಕೆಲಸ ಆಗಬಾರದು ಎಂದು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಮಡಿಕೇರಿಯಲ್ಲಿ ನಮ್ಮವರ ಪ್ರತಿಭಟನೆಗೂ ಅವಕಾಶವಿಲ್ಲ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನವರೇ ಸಾರ್ಕರ್ (Veer Savarkar) ವಿಚಾರ ಮೊದಲು ಚರ್ಚೆಗೆ ತೆಗೆದುಕೊಂಡು ಬಂದರ. ಸಾವರ್ಕರ್ ಫೋಟೋ ಮುಸ್ಲಿಂ ಕೇರಿಯಲ್ಲಿ ಹಾಕಿದ್ದು ಯಾಕೆಂದು ಪ್ರಶ್ನಿಸಿದ್ರು. ಸಾವರ್ಕರ್ ಒಬ್ಬರು ಗೌರವಾನ್ವಿತ ಸ್ವಾತಂತ್ರ್ಯ ಹೋರಾಟಗಾರ. ಅವರು ಬ್ರಿಟಿಷರ ಬೂಟು ನೆಕ್ಕಿದ್ರು ಎಂದು ಆರೋಪಿಸಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ