Congress Padayatre: ಕಾಂಗ್ರೆಸ್ ಪಾದಯಾತ್ರೆಗಿಂದು 2ನೇ ದಿನ.. ಹೆಜ್ಜೆ ಇಟ್ಟ ಮೇಲೆ ಹಿಂದೆ ಇಡೋ ಮಾತೇ ಇಲ್ಲ ಎಂದ ಕನಕಪುರ `ಬಂಡೆ’!

ಉಪಹಾರ ಬಳಿಕ ಬೆಳಗ್ಗೆ 8.30ಕ್ಕೆ ಪಾದಯಾತ್ರೆ ಆರಂಭವಾಗಿದೆ. ಮಧ್ಯಾಹ್ನ 1 ಗಂಟೆಗೆ ಪಾದಯಾತ್ರೆ ಮಾದಪ್ಪನದೊಡ್ಡಿಗೆ ತಲುಪುತ್ತದೆ. ಮಾದಪ್ಪನದೊಡ್ಡಿ, ಕರಿಯಣ್ಣನದೊಡ್ಡಿಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಇನ್ನು ಸಂಜೆ ಹೊತ್ತಿಗೆ ಕನಕಪುರ ನಗರ ತಲುಪುತ್ತದೆ.

2ನೇ ದಿನದ ಕಾಂಗ್ರೆಸ್​ ಪಾದಯಾತ್ರೆ

2ನೇ ದಿನದ ಕಾಂಗ್ರೆಸ್​ ಪಾದಯಾತ್ರೆ

  • Share this:
ಮೇಕೆದಾಟು(Mekedatu) ಯೋಜನೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ(Congress Padaytre) ಆರಂಭಿಸಿದೆ. ನಿನ್ನೆ ಆರಂಭವಾಗದ ಪಾದಯಾತ್ರೆ ಜನವರಿ 19ರ ವರೆಗೆ ನಡೆಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಸಂಗಮದಿಂದ ಬೆಂಗಳೂರಿನವರೆಗೆ ಕಾಂಗ್ರೆಸ್ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತಾ ದಿನಕ್ಕೆ 15 ಕಿಲೋಮೀಟರ್ ನಡೆಯುತ್ತಿದ್ದಾರೆ. ಇಂದು ಎರಡನೇ ದಿನದ ಪಾದಯಾತ್ರೆ(2nd Day of Padayatre) ಆರಂಭವಾಗಿದೆ. ಉಪಹಾರ ಬಳಿಕ ಬೆಳಗ್ಗೆ 8.30ಕ್ಕೆ ಪಾದಯಾತ್ರೆ ಆರಂಭವಾಗಿದೆ. ಮಧ್ಯಾಹ್ನ 1 ಗಂಟೆಗೆ ಪಾದಯಾತ್ರೆ ಮಾದಪ್ಪನದೊಡ್ಡಿಗೆ ತಲುಪುತ್ತದೆ. ಮಾದಪ್ಪನದೊಡ್ಡಿ, ಕರಿಯಣ್ಣನದೊಡ್ಡಿಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಇನ್ನು ಸಂಜೆ ಹೊತ್ತಿಗೆ ಕನಕಪುರ ನಗರ ತಲುಪುತ್ತದೆ. ಕನಕಪುರ ಟೌನ್‌(Kanakapura Town)ನಲ್ಲೇ ನಾಯಕರು ವಾಸ್ತವ್ಯ ಹೂಡಲಿದ್ದಾರೆ.ನೀರಿಗಾಗಿ ನಮ್ಮ ನಡಿಗೆ.. ಜಲಕ್ಕಾಗಿ ನಮ್ಮ ಹೋರಾಟ.. ಮೇಕೆದಾಟು ಅನುಷ್ಠಾನಕ್ಕಾಗಿ ನಮ್ಮ ಪಾದಯಾತ್ರೆ.. ಮುಂದಿಟ್ಟ ಹೆಜ್ಜೆಯನ್ನ ಯಾವುದೇ ಕಾರಣಕ್ಕೂ ಹಿಂದಿಡಲ್ಲ ಅಂತಾ ಕೈ ನಾಯಕರು ಕಿಲೋಮೀಟರ್​​ಗಟ್ಟಲೇ ನಡೆದುಕೊಂಡು ಹೋಗಲಿದ್ದಾರೆ. ಇಂದು ದೊಡ್ಡಆಲಹಳ್ಳಿಯಿಂದ ಕನಕಪುರವರೆಗೂ ಅಂದ್ರೆ 16 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದೆ. ಆದ್ರೆ, ನಿನ್ನೆ ಜ್ವರದಿಂದ ಬಳಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಎರಡನೇ ದಿನದ ಕಾಲ್ನಡಿಗೆಯಲ್ಲಿ ಮತ್ತೆ ಭಾಗಿಯಾಗ್ತಾರಾ? ಇಲ್ವಾ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲದೇ ಡಿಕೆಶಿ ನಿ್ನ್ನೆ ಸಂಜೆ ವೇಳೆಗೆ ಬಹಳಷ್ಟು ದಣಿದಿದ್ದರೂ ಕೂಡ, ಇಂದು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

2ನೇ ದಿನ ಪಾದಯಾತ್ರೆಗೂ ಮುನ್ನ ಡಿಕೆಶಿ ಪೂಜೆ!

2ನೇ ದಿನ ಪಾದಯಾತ್ರೆ ಆರಂಭಕ್ಕೂ ಮುನ್ನ ಡಿಕೆಶಿ ವಾಸ್ತವ್ಯ ಹೂಡಿದ್ದ ಮನೆಯಲ್ಲೇ ಪೂಜೆ ಮಾಡಿದ್ದಾರೆ. ದೊಡ್ಡ ಆಲಹಳ್ಳಿಯ ಮನೆಯಲ್ಲಿ ಪೂಜೆ ಮಾಡಿ ನಂತರ ಪಾದಯಾತ್ರೆ ಆರಂಭಿಸಿದ್ದಾರೆ. ಇನ್ನೂ ಇಂದು ಸಾಹಿತಿ ಚಂಪಾ ನಿಧನರಾದ ಹಿನ್ನೆಲೆ ಪಾದಯಾತ್ರೆ ಆರಂಭಕ್ಕೂ ಮೊದಲು ಒಂದು ನಿಮಿಷ ಮೌನಾಚರಣೆ ಮಾಡಿದ್ದಾರೆ. ಇದಾದ ಬಳಿಕ ಪಾದಯಾತ್ರೆ ಆರಂಭಿಸಿದರು. ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಿದೆ. ಎರಡನೇ ದಿನದ ಪಾದಯಾತ್ರೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಿಂದ  ಆರಂಭವಾಗಿದೆ. ಇನ್ನೂ ಪಾದಯಾತ್ರೆ ಮಧ್ಯೆ ಡಿಕೆಶಿ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಮಾರ್ಗ ಮಧ್ಯೆ ಕಬ್ಬಿನ ಹಾಲು ಕುಡಿದರು.

ಇದನ್ನು ಓದಿ : ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar

ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ ಎಂದ ಡಿಕೆಶಿ!

ಪಾದಯಾತ್ರೆಗೂ ಮುನ್ನ ಮಾತನಾಡಿದ ಡಿಕೆಶಿ ಸಿದ್ದು ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ಇಂದು ಸಂಜೆ ಪಾದಯಾತ್ರೆಗೆ ಬರುವುದಾಗಿ ಹೇಳಿದರು. ಆದರೆ ನಾನೇ ಇಂದು ಬರಬೇಡಿ ಎಂದು ಹೇಳಿದ್ದೇನೆ. ನಾಳೆ ಬೆಳಗ್ಗೆ ಪಾದಯಾತ್ರೆಗೆ ಬರುವಂತೆ ಹೇಳಿದ್ದೇನೆ ಅಂತ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ನಾನು ಒಂದು ಹೆಜ್ಜೆ ಇಟ್ಟ ಮೇಲೆ ಹಿಂದೆ ಇಡುವುದಿಲ್ಲ. ಹೆಜ್ಜೆ ಇಡುವುದಕ್ಕೂ ಮುನ್ನವೇ ಚರ್ಚೆ ಮಾಡುತ್ತೇನೆ. ಕಾಂಗ್ರೆಸ್ ನಾಯಕರು ಚರ್ಚೆ ಮಾಡಿ ನಿರ್ಧರಿಸಿದ್ದೇವೆ. ಪಾದಯಾತ್ರೆ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಮೇಕೆದಾಟು ಪಾದಯಾತ್ರೆ ಅರ್ಧದಲ್ಲೇ ಸುಸ್ತಾದ ಸಿದ್ದರಾಮಯ್ಯ.. 4 ಕಿ.ಮೀ ನಡೆದು ಕಾರಿನಲ್ಲಿ ವಾಪಸ್​!

ಹೆಣ್ಮಕ್ಳೆ ಸ್ಟ್ರಾಂಗು ಗುರೂ!

ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆಯ ನಡಿಗೆಯಲ್ಲಿ ಕೈ ಮಹಿಳಾ ಶಾಸಕಿಯರೇ ಸ್ಟ್ರಾಂಗ್. ಹೌದು, ಎಲ್ಲರಿಗಿಂತ ಮೊದಲೆ ನಡಿಗೆಯಲ್ಲಿ ಶಾಸಕಿಯರು ಮುಂದಿದ್ದಾರೆ. ಬೆಳಗಾವಿ ಭಾಗದ ಶಾಸಕಿಯ ರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ನಾಯಕರನ್ನು ಹಿಂದಕ್ಕೆ ಹಾಕಿ ಮುಂದೆ ಹೋಗುತ್ತಿದ್ದಾರೆ. ಈಗಾಗಲೇ ನಿನ್ನೆ ಒಂದೇ ದಿನಕ್ಕೆ ಸಾಕಾಗಿ ಕೆಲವು ನಾಯಕರು ಬೆಂಗಳೂರಿಗೆ ವಾಪಸ್​ ಆಗಿದ್ದಾರೆ. ಆದರೆ, ಮಹಿಳಾ ಶಾಸಕಿಯರು ಮಾತ್ರ ಎಲ್ಲರಿಗಿಂತ ಪಾದಯಾತ್ರೆಯಲ್ಲಿ ಮುಂದಿದ್ದಾರೆ.

 
Published by:Vasudeva M
First published: