ಶಾಸಕ ಗುಬ್ಬಿ ಶ್ರೀನಿವಾಸ್ (Gubbi MLA Srinivas) ದೊಡ್ಡ ವ್ಯಕ್ತಿ. ಅವರಿಗೆ ದುಡ್ಡು (Money) ತಗೊಂಡು ವೋಟು (Vote) ಹಾಕುವ ಯೋಗ್ಯತೆಯಿದ್ದು, ಎಲ್ಲೆಲ್ಲೋ ಇದ್ದವನ್ನು ಕರೆದುಕೊಂಡು ಬಂದು ಕುಮಾರಣ್ಣ (HD Kumaraswamy) ಮಂತ್ರಿ ಮಾಡಿದರು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ (Former Minister HD Revanna) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪ ಕುಮಾರಸ್ವಾಮಿ ಯೋಗ್ಯತೆ ಇಲ್ಲ. ನಿನ್ನೆ ಮತದಾನದ ವೇಳೆ ಶ್ರೀನಿವಾಸ್ ಗೆ ಎಷ್ಟು ದುಡ್ಡು ಕೊಟ್ಟಿದ್ದೀನಿ ಅಂತ ಅಲ್ಲಿ ಒಬ್ಬರು ಹೇಳಿದರು. ದುಡ್ಡು ತೆಗೆದುಕೊಂಡು ಮತದಾನ ಮಾಡಿದ್ದಾರೆ ಎಂದು ಆರೋಪಿಸಿದರು. ನನಗೆ ವೋಟು ಯಾರಿಗೂ ಹಾಕಿಲ್ಲ ಅಂತ ತೋರಿಸಿದರು. ಅಂತಹವರ ಬಗ್ಗೆ ನಾನು ಮಾತನಾಡಲು ಹೋಗಲ್ಲ. ದೇವರೇ ಅವರಿಗೆ ಶಿಕ್ಷೆ ಕೊಡುವ ಕಾಲ ಬರುತ್ತೆ ಈಗ ಸಮಯ ಸರಿ ಇಲ್ಲ ಎಂದು ಕಿಡಿಕಾರಿದರು.
ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಎಚ್.ಡಿ.ರೇವಣ್, ಕಾಂಗ್ರೆಸ್‌ನ ಮುಖಂಡರು ಮೊದಲೇ ಯಡಿಯೂರಪ್ಪ ಅವರ ಬಳಿ ಮಾತನಾಡಿ ಲೆಹರ್ ಸಿಂಗ್ ಮತ ಹಾಕಲು ತೀರ್ಮಾನ ಮಾಡಿದ್ರು.
ಹಾಸನದಲ್ಲಿ ಬಿಜೆಪಿ ಗೆದ್ದಿದ್ದು ಕಾಂಗ್ರೆಸ್ ನಿಂದ
ಪಾಪದ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಸೋಲಿಸಿದ್ರು. ಕಳೆದ ವಿಧಾನಸಭೆ ಚುನಾವಣೆ ವೇಳೆ ಹಾಸನಕ್ಕೆ ರಾಹುಲ್ ಗಾಂಧಿ ಕರೆಸಿ ಎ ಟೀಂ ಬೀ ಟಿಂ ಅಂತ ಹೇಳಿಸಿ ಹಾಸನದ ಮುಸ್ಲಿಮರನ್ನು ಗೊಂದಲಕ್ಕೀಡು ಮಾಡಿ ಬಿಜೆಪಿ ಗೆಲ್ಲೋ ಹಾಗೆ ಮಾಡಿದ್ರು.
ಇದನ್ನೂ ಓದಿ: Kodi Swamiji: ಕೊರೊನಾ ಕೊನೆಯಾಗೋದು ಯಾವಾಗ? ಜಲಪ್ರಳಯದ ಬಗ್ಗೆ ಕೋಡಿ ಮಠದ ಶ್ರೀಗಳ ಸ್ಫೋಟಕ ಭವಿಷ್ಯ
ಆಮೇಲೆ ಬಿ ಟೀಂ ಅಂದವರು, ನಮ್ಮ ಮನೆ ಬಳಿ ಬಂದು ನಮ್ಮ ಪಾದಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. ದಯಮಾಡಿ ನೀವು ಸಹಕಾರ ಕೊಡಿ ಅಂದ್ರು. ನಾಚಿಕೆಯಾಗಬೇಕು ಇವರಿಗೆ, ಕಾಂಗ್ರೆಸ್ ಇದೆಯಾ ರಾಜ್ಯದಲ್ಲಿ? ಇವತ್ತು ಬಿಜೆಪಿ ಮೂರನೇ ಅಭ್ಯರ್ಥಿ ಗೆಲ್ಲಲು, ಮುಸ್ಲಿಂ ಅಭ್ಯರ್ಥಿ ಸೋಲಲು, ಜೆಡಿಎಸ್ ಅಭ್ಯರ್ಥಿ ಸೋಲಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾರಣ ಎಂದು ಈಶ್ವರಪ್ಪ ಹೇಳಿದ್ದಾರೆ ಎಂದರು.
ಕರ್ನಾಟಕಕ್ಕೆ ಸಮರ್ಪಣೆ
ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ಕಾಂಗ್ರೆಸ್ ನ ಪಾದದಡಿಯಲ್ಲಿದೆ. ಸೋನಿಯಾ ಗಾಂಧಿ ಕಾಂಗ್ರೆಸ್, ಕರ್ನಾಟಕ ಕಾಂಗ್ರೆಸ್‌ನ ಪಾದದಡಿಯಿದೆ. ರಾಷ್ಟ್ರೀಯ ಕಾಂಗ್ರೆಸ್ ನ್ನು ಕರ್ನಾಟಕ ಕಾಂಗ್ರೆಸ್ ನ ಪಾದಕ್ಕೆ ಸಮರ್ಪಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಸಭೆ ಚುನಾವಣೆ ಮತದಾನದ ವೇಳೆ ಕಾಂಗ್ರೆಸ್-ಬಿಜೆಪಿಯವರು ಸೇರಿಕೊಂಡು ನಮ್ಮನ್ನು ಆಟ ಆಡಿಸಬೇಕು ಅಂತ ನನ್ನ ಮತ ಅಸಿಂಧುಗೊಳಿಸಲು ಮನವಿ ಮಾಡಿದರು. ನಾನು ಪಕ್ಷದ ಏಜೆಂಟ್ ರಿಗೆ ತೋರಿಸಿಯೇ ಡಬ್ಬಕ್ಕೆ ಹಾಕಿದ್ದೆ, ಏನಾದರು ಇದ್ದರೆ ಅಲ್ಲೇ ಹೇಳಬೇಕಿತ್ತು ಎಂದರು.
ಉಗ್ರಪ್ಪನನ್ನು ಬೆಳೆಸಿದ್ದು ದೇವೇಗೌಡರು
ನಂತರ ಡಿ.ಕೆ.ಶಿವಕುಮಾರ್ ಅವರು ಶ್ರೀನಿವಾಸ್ ಯಾರಿಗೂ ವೋಟು ಹಾಕಿಲ್ಲ ಅಂದ್ರು. ನನ್ನ ಕೈಯಲ್ಲಿ ಒಂದು ಪೇಪರ್ ಇತ್ತು, ಅದನ್ನು ಇಟ್ಕಂಡು ಎರಡು ಪಕ್ಷದವರು ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದರು. ಕೇಂದ್ರ ಚುನಾವಣಾ ಅಧಿಕಾರಿ ಎರಡು ಪಕ್ಷದವರನ್ನು ಕರೆದು ಮಾನ ಮರ್ಯಾದೆ ಇದ್ರೆ ಇಂತಹದ್ದಕ್ಕೆ ಕೈಹಾಕಬೇಡಿ ಅಂತ ಮುಖಕ್ಕೆ ಉಗಿದು ಎಂಡಾಸ್‌ಮೆಂಟ್ ಕೊಟ್ಟು ಕಳುಹಿಸಿದರು.
ಇದನ್ನೂ ಓದಿ: C M Ibrahim: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ: ಇಬ್ಬರು ಶಾಸಕರಿಗೆ ನೋಟಿಸ್- ಸಿ ಎಂ ಇಬ್ರಾಹಿಂ
ಉಗ್ರಪ್ಪ ಅಂತ ಎಲ್ಲೋ ಇದ್ದ, ಅವನನ್ನು ಕರೆದುಕೊಂಡು ಬಂದು ದೇವೇಗೌಡರು ಯಾವ ರೀತಿ ಬೆಳೆಸಿದ್ರು ಅಂತ ಗೊತ್ತಿದೆ ನನಗೆ. ಉಗ್ರಪ್ಪನನ್ನು ದೇವೇಗೌಡರು ಎಂಎಲ್‌ಸಿ ಮಾಡಿದ್ರು. ಎಂಪಿ ಚುನಾವಣೆಯಲ್ಲಿ ನಾವೆಲ್ಲ ಸೇರಿ ಮತ ಹಾಕ್ಸಿದ್ದಕ್ಕೆ ಉಗ್ರಪ್ಪ ಗೆದ್ದಿದ್ದು ಎಂದು ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ