ಸಿಎಲ್​ಪಿ ಸಭೆ ರಹಸ್ಯ ಬಯಲು; ಕೈಪಾಳಯದಲ್ಲಿ ಸಿದ್ದರಾಮಯ್ಯ ಹಾಗೂ ಇತರರ ಮಧ್ಯೆ ಕದನ? ವಿಪಕ್ಷ ಸ್ಥಾನಕ್ಕಾಗಿ ಉ. ಕರ್ನಾಟಕದ ಮುಖಂಡರೊಬ್ಬರ ಪರ ಖರ್ಗೆ ಲಾಬಿ

ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಅಧಿಕಾರ ಅನುಭವಿಸಿದ್ದಾರೆ. ವಿಪಕ್ಷ ನಾಯಕನಾಗಿಯೂ ಕೆಲಸ ಮಾಡಿದ್ದಾರೆ. ಅವರಿಗೆ ಇಷ್ಟು ವರ್ಷ ಅಧಿಕಾರ ಕೊಟ್ಟಿದ್ದು ಸಾಕು. ಬೇರೆಯವರೆಗೂ ಅವಕಾಶ ಕೊಡಿ ಎಂದು ಹಿರಿಯ ಮುಖಂಡರುಗಳು ಸೋನಿಯಾ ಗಾಂಧಿ ಬಳಿ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ.

news18-kannada
Updated:September 19, 2019, 6:22 PM IST
ಸಿಎಲ್​ಪಿ ಸಭೆ ರಹಸ್ಯ ಬಯಲು; ಕೈಪಾಳಯದಲ್ಲಿ ಸಿದ್ದರಾಮಯ್ಯ ಹಾಗೂ ಇತರರ ಮಧ್ಯೆ ಕದನ? ವಿಪಕ್ಷ ಸ್ಥಾನಕ್ಕಾಗಿ ಉ. ಕರ್ನಾಟಕದ ಮುಖಂಡರೊಬ್ಬರ ಪರ ಖರ್ಗೆ ಲಾಬಿ
ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಬೆಂಗಳೂರು(ಸೆ. 19): ಮೂಲ ಕಾಂಗ್ರೆಸ್ಸಿಗರು ನಿನ್ನೆ ದೆಹಲಿಯಲ್ಲಿ ರಹಸ್ಯ ಸಭೆ ನಡೆಸಿದ ಸುದ್ದಿಯನ್ನು ನ್ಯೂಸ್18 ಕನ್ನಡ ಎಕ್ಸ್​ಕ್ಲೂಸಿವ್ ಆಗಿ ಬಿತ್ತರಿಸಿತ್ತು. ಈ ಸಭೆಯ ಅಜೆಂಡಾಗೆ ಪೂರಕವಾಗಿ ಇನ್ನಷ್ಟು ಮಾಹಿತಿ ಹೊರಬಿದ್ದಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಿಎಲ್​ಪಿ ಸಭೆಯ ರಹಸ್ಯ ಈಗ ಬೆಳಕಿಗೆ ಬಂದಿದೆ. ನೆರೆ ಪರಿಹಾರದ ಹೆಸರಿನಲ್ಲಿ ಕರೆಯಲಾಗಿದ್ದ ಆ ಸಭೆಯ ಮೂಲ ಉದ್ದೇಶವೇ ಬೇರೆ ಇತ್ತು. ಕರ್ನಾಟಕದ ಕಾಂಗ್ರೆಸ್ ಪವರ್ ಪೈಪೋಟಿಯ ಒಂದು ಭಾಗವಾಗಿ ಈ ಸಿಎಲ್​ಪಿ ಸಭೆ ನಡೆದಿರುವುದು ಗೊತ್ತಾಗಿದೆ.

ನಿನ್ನೆ ಜಿ. ಪರಮೇಶ್ವರ್, ಬಿ.ಕೆ. ಹರಿಪ್ರಸಾದ್, ರಾಜೀವ್ ಗೌಡ ಸೇರಿದಂತೆ ಹಲವು ಮೂಲ ಕಾಂಗ್ರೆಸ್ಸಿಗ ಮುಖಂಡರು ಸಭೆ ನಡೆಸಿ ಸಿದ್ದರಾಮಯ್ಯ ಅವರ ಪವರ್ ಕಟ್ ಮಾಡುವ ಬಗ್ಗೆ ಕಾರ್ಯತಂತ್ರ ರೂಪಿಸಿದ್ದರೆನ್ನಲಾಗಿದೆ. ಜಿ. ಪರಮೇಶ್ವರ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಸಿದ್ದರಾಮಯ್ಯ ವಿರುದ್ಧ ಕೆಲವಾರು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು. ಪರಮೇಶ್ವರ್ ಅವರೊಬ್ಬರಷ್ಟೇ ಅಲ್ಲ ಇನ್ನೂ ಕೆಲ ಕಾಂಗ್ರೆಸ್ ಹಿರಿಯರು ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಿರುವುದು ಗಮನಾರ್ಹ.

ಇದನ್ನೂ ಓದಿ: ಸುಪ್ರೀಂನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ವಕೀಲರಾಗಿ ಒಡಿಶಾ ಮೂಲದ ಶುಭ್ರಂಶು ಪಢಿ ನೇಮಕ; ರಾಜ್ಯ ಸರ್ಕಾರದ ನಡೆಗೆ ಕನ್ನಡಿಗರು ಕಿಡಿ

ಸಿದ್ದರಾಮಯ್ಯ ವಿರುದ್ಧ ಸೋನಿಯಾ ಗಾಂಧಿ ಅವರ ಬಳಿ ದೂರು ಕೊಟ್ಟವರಲ್ಲಿ ಜಿ. ಪರಮೇಶ್ವರ್, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಕೆಹೆಚ್ ಮುನಿಯಪ್ಪ ಅವರು ಪ್ರಮುಖರು. ಸಿದ್ದರಾಮಯ್ಯ ಐದು ವರ್ಷ ಸಿಎಂ ಆದರು. ವಿಪಕ್ಷ ನಾಯಕನೂ ಆದರು. ಅವರಿಗೆ ಅಧಿಕಾರ ಕೊಟ್ಟಿದ್ದು ಸಾಕು. ಬೇರೆಯವರೆಗೂ ಅವಕಾಶ ಕೊಡಿ ಎಂದು ಈ ಹಿರಿಯ ಮುಖಂಡರು ವರಿಷ್ಠರ ಬಳಿ ವಾದಿಸಿದ್ದಾರೆನ್ನಲಾಗಿದೆ.

ಸದ್ಯಕ್ಕೆ ಸಿದ್ದರಾಮಯ್ಯ ಅವರು ವಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಕೈಗೆ ವಿಪಕ್ಷ ಸ್ಥಾನ ಸಿಗದಂತೆ ಮಾಡುವುದು ಈ ನಾಯಕರ ಪ್ರಯತ್ನವಾಗಿದೆ. ಜಿ. ಪರಮೇಶ್ವರ್ ಅವರೂ ಕೂಡ ವಿಪಕ್ಷ ಸ್ಥಾನಕ್ಕಾಗಿ ವರಿಷ್ಠರ ಬಳಿ ಲಾಬಿ ಮಾಡುತ್ತಿದ್ದಾರೆ. ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೊಬ್ಬ ಹಿರಿಯ ಮುಖಂಡ ಹೆಚ್.ಕೆ. ಪಾಟೀಲ್ ಪರವಾಗಿ ಲಾಬಿ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರಿಗೆ ವಿಪಕ್ಷ ಸ್ಥಾನ ದಕ್ಕದಂತೆ ಮಾಡುವುದು ಕೆಲ ಮೂಲ ಕಾಂಗ್ರೆಸ್ಸಿಗರ ಗುರಿಯಾಗಿದ್ದಂತಿದೆ.

ಇದನ್ನೂ ಓದಿ: ಮೈಸೂರು ದಸರಾ 2019: ಪ್ರವಾಸಿ ಸ್ಥಳಗಳ ಭೇಟಿಗೆ ವಿಶೇಷ ಪ್ಯಾಕೇಜ್​ ಘೋಷಿಸಿದ ಕೆಎಸ್​​ಆರ್​​ಟಿಸಿ

ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹೈಕಮಾಂಡ್​ಗೂ ತಲೆನೋವಾಗಿದೆ. ಸಿದ್ದರಾಮಯ್ಯಗೆ ವಿಪಕ್ಷ ಸ್ಥಾನ ನೀಡಿದರೆ ಆಂತರಿಕ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಳ್ಳಬಹುದು. ಸಿದ್ದರಾಮಯ್ಯ ಅವರ ಬದಲು ಬೇರೊಬ್ಬರಿಗೆ ಆ ಸ್ಥಾನ ನೀಡಿದರೆ ಸಿದ್ದರಾಮಯ್ಯ ಮುನಿಸಿಕೊಂಡು ಪಕ್ಷ ಸಂಘಟನೆಯ ಕೆಲಸದಿಂದ ದೂರ ಸರಿಯಬಹುದು. ಇವೆಲ್ಲ ವಿಚಾರಗಳನ್ನ ಮನಸಲ್ಲಿಟ್ಟುಕೊಂಡು ವರಿಷ್ಠರು ರಾಜ್ಯದ ಶಾಸಕರಲ್ಲಿ ರಹಸ್ಯವಾಗಿ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಲು ನಿರ್ಧರಿಸಿದೆ.ಆದರೆ, ಹೈಕಮಾಂಡ್​ನ ಈ ರಹಸ್ಯ ಅಭಿಪ್ರಾಯ ಸಂಗ್ರಹಣೆಯ ವಿಚಾರವು ಹೈಕಮಾಂಡ್​ನ ಮೂಲಗಳಿಂದಲೇ ಸಿದ್ದರಾಮಯಕ್ಕೆ ಸೋರಿಕೆಯಾಗಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ. ವಿಪಕ್ಷ ಸ್ಥಾನ ತನ್ನ ಕೈ ತಪ್ಪದಂತೆ ನೋಡಿಕೊಳ್ಳಲು ಅವರು ವಿವಿಧ ಪ್ಲಾನ್ ರೂಪಿಸುತ್ತಿದ್ದಾರೆನ್ನಲಾಗಿದೆ. ಹೀಗಾಗಿಯೇ ಸಿದ್ದರಾಮಯ್ಯ ಅವರು ನೆರೆ ಪರಿಸ್ಥಿತಿ ಅವಲೋಕಿಸುವ ಹೆಸರಿನಲ್ಲಿ ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ಶಾಸಕರು ಒಗ್ಗಟ್ಟಿನಿಂದ ತನ್ನ ಬೆನ್ನ ಹಿಂದಿದ್ದಾರೆ ಎಂಬ ಸಂದೇಶವನ್ನು ಹೈಕಮಾಂಡ್​ಗೆ ತಲುಪಿಸುವುದು ಸಿದ್ದರಾಮಯ್ಯ ಅವರ ಲೆಕ್ಕಾಚಾರವಾಗಿತ್ತು.

ಒಟ್ಟಾರೆಯಾಗಿ, ಕಾಂಗ್ರೆಸ್​ನೊಳಗಿನ ಈ ಆಂತರಿಕ ಕದನದಲ್ಲಿ ಗೆಲುವು ಸಿದ್ದರಾಮಯ್ಯ ಅವರಿಗೆ ಸಿಗುತ್ತಾ, ಅಥವಾ ಮೂಲ ಕಾಂಗ್ರೆಸ್ಸಿಗರ ಗುಂಪಿಗೆ ಒಲಿಯುತ್ತಾ ಎಂದು ಕಾದುನೋಡಬೇಕು.

(ವರದಿ: ಚಿದಾನಂದ ಪಟೇಲ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: September 19, 2019, 6:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading