• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬಿಜೆಪಿ ಸರ್ಕಾರವೀಗ ಹರಿದ ಬನಿಯನ್​ನಂತಾಗಿದೆ, ಎತ್ತ ಎಳೆದರೂ ಮೈ ಕಾಣುತ್ತಿದೆ!; ಕಾಂಗ್ರೆಸ್ ಲೇವಡಿ

ಬಿಜೆಪಿ ಸರ್ಕಾರವೀಗ ಹರಿದ ಬನಿಯನ್​ನಂತಾಗಿದೆ, ಎತ್ತ ಎಳೆದರೂ ಮೈ ಕಾಣುತ್ತಿದೆ!; ಕಾಂಗ್ರೆಸ್ ಲೇವಡಿ

ಬಿ.ಎಸ್ ಯಡಿಯೂರಪ್ಪ

ಬಿ.ಎಸ್ ಯಡಿಯೂರಪ್ಪ

ಬಿಜೆಪಿ ಸರ್ಕಾರ, ಸಿಎಂ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಸರಣಿ ಟ್ವೀಟ್​ಗಳನ್ನು ಮಾಡಿರುವ ಕಾಂಗ್ರೆಸ್, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸ್ಥಿತಿ ಎಷ್ಟೇ ಎಳೆದರೂ ಮೈ ಮುಚ್ಚದ "ಹರಿದ ಬನಿಯನ್"ನಂತಾಗಿದೆ! ಅತ್ತ ಎಳೆದರೆ ಇತ್ತ ತೋರುತ್ತದೆ, ಇತ್ತ ಎಳೆದರೆ ಅತ್ತ ತೋರುತ್ತದೆ! ಎಂದು ಲೇವಡಿ ಮಾಡಿದೆ.

ಮುಂದೆ ಓದಿ ...
  • Share this:

ಬೆಂಗಳೂರು (ಏ. 1): ಬಿಜೆಪಿ ಸರ್ಕಾರದ ಸ್ವಜನಪಕ್ಷಪಾತ, ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್​ನವರು ಆರೋಪಿಸಿದಾಗ ಯಾರೂ ನಂಬಿರಲಿಲ್ಲ. ಈಗ ಬಿಜೆಪಿಯ ಸಚಿವರೇ ಅದಕ್ಕೆ ಸಾಕ್ಷಿ ಒದಗಿಸಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರ ದೂರನ್ನು ಮುಂದಿಟ್ಟುಕೊಂಡು ಯಡಿಯೂರಪ್ಪನವರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದೆ. ಬಿಜೆಪಿ ಸರ್ಕಾರದ ಪರಿಸ್ಥಿತಿ ಈಗ ಹರಿದ ಬನಿಯನ್​ನಂತಾಗಿದೆ. ಅತ್ತ ಎಳೆದರೆ ಈ ಕಡೆ ಬಯಲಾಗುತ್ತದೆ, ಇತ್ತ ಎಳೆದರೆ ಆ ಕಡೆ ಮಾನ ಹೋಗುತ್ತದೆ ಎಂಬಂತಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.


ಬಿಜೆಪಿ ಸರ್ಕಾರ, ಸಿಎಂ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಸರಣಿ ಟ್ವೀಟ್​ಗಳನ್ನು ಮಾಡಿರುವ ಕಾಂಗ್ರೆಸ್, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸ್ಥಿತಿ ಎಷ್ಟೇ ಎಳೆದರೂ ಮೈ ಮುಚ್ಚದ "ಹರಿದ ಬನಿಯನ್"ನಂತಾಗಿದೆ! ಬಿಜೆಪಿ ಸರ್ಕಾರ ಈಗ "ಹರಿದ ಬನಿಯನ್"ನಂತಾಗಿದೆ. ಅತ್ತ ಎಳೆದರೆ ಇತ್ತ ತೋರುತ್ತದೆ, ಇತ್ತ ಎಳೆದರೆ ಅತ್ತ ತೋರುತ್ತದೆ! ಎಂಬಂತಹ ಪರಿಸ್ಥಿತಿ ಬಿಜೆಪಿಯದ್ದಾಗಿದೆ ಎಂದು ಲೇವಡಿ ಮಾಡಿದೆ.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದುದನ್ನು ಕಾಂಗ್ರೆಸ್ ಎತ್ತಿ ಹಿಡಿದಾಗ ಬಿಜೆಪಿ ರಾಜಕೀಯ ದುರುದ್ದೇಶವೆಂದು ತಿಪ್ಪೆ ಸಾರಿಸುತ್ತಿತ್ತು. ಆದರೆ ಸ್ವತಃ ಬಿಜೆಪಿ ಶಾಸಕರೇ ಇತ್ತೀಚಿಗೆ ತಮಗಾದ ಅನ್ಯಾಯ ವ್ಯಕ್ತಪಡಿಸುತ್ತಿದ್ದಾರೆ. ಯತ್ನಾಳ್ ಬಹಿರಂಗವಾಗಿ ಬಿಜೆಪಿಯ ಬಂಡವಾಳ ಬಿಚ್ಚಿಟ್ಟಿದ್ದರು, ಈಗ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.


ಈ ಸರ್ಕಾರ ಬಿಜೆಪಿ ಪಕ್ಷದ ರಾಜಕೀಯ ವ್ಯಭಿಚಾರಕ್ಕೆ ಹುಟ್ಟಿದ "ಅನೈತಿಕ ಕೂಸು" ಎಂಬುದರಲ್ಲಿ ಅನುಮಾನವಿಲ್ಲ. "ಆಪರೇಷನ್ ಕಮಲ"ಎನ್ನುವ ಅನಿಷ್ಟ ಪದ್ಧತಿಯನ್ನು ಹುಟ್ಟುಹಾಕಿ ಶಾಸಕರನ್ನು ಐಟಿ, ಇಡಿ ಬೆದರಿಕೆ, ಹನಿಟ್ರಾಪ್ ಬ್ಲಾಕ್​ಮೇಲ್, ಹಣದ ಆಮಿಷ ಎಲ್ಲವನ್ನೂ ಬಳಸಿಕೊಂಡಿದ್ದು ಒಂದೊಂದಾಗಿ ಬಯಲಾಗುತ್ತಿವೆ. ಇದರೊಂದಿಗೆ ಯಡುಯೂರಪ್ಪ ಮುಕ್ತ ಕರ್ನಾಟಕ ನಿರ್ಮಾಣವಾಗುವ ಕಾಲವೂ ಸನ್ನಿಹಿತವಾಗಿದೆ ಎಂದು ಕಾಂಗ್ರೆಸ್ ಭವಿಷ್ಯ ನುಡಿದಿದೆ.


ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದಲ್ಲಿನ ಎಲ್ಲಾ ಅನಾಚಾರಗಳನ್ನೂ ಜಗತ್ತಿಗೆ ತಿಳಿಸಿದ್ದರು. ಬಿಜೆಪಿ ಸಚಿವ ಮಾಧುಸ್ವಾಮಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ನಡೆಯ ವಿರುದ್ಧ ಹರಿಹಾಯ್ದಿದ್ದರು. ಇದೀಗ ಬಿಜೆಪಿಯದ್ದೇ ಸಚಿವ ಕೆ.ಎಸ್. ಈಶ್ವರಪ್ಪ ಸಿಎಂ ಯಡಿಯೂರಪ್ಪನವರ ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರವನ್ನ ಬಯಲು ಮಾಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.


ರೇಪಿಸ್ಟ್ ಜನತಾ ಪಾರ್ಟಿಯ ಹೊಸ ನೀತಿಯ ಪ್ರಕಾರ ಸಂತ್ರಸ್ತೆಯ ಸಹಾಯಕ್ಕೆ ನಿಲ್ಲುವವರು ತಪ್ಪಿತಸ್ಥರು!, ಆರೋಪಿಯ ರಕ್ಷಣೆಗೆ ನಿಲ್ಲುವ ಬಿಜೆಪಿಗರು ಸುಭಗರು! ಇದ್ಯಾವ ನ್ಯಾಯ? ಎಂದು ಕಾಂಗ್ರೆಸ್ ಟೀಕಿಸಿದೆ. ಇದರ ಜೊತೆಗೆ ರೇಪಿಸ್ಟ್​ ರಮೇಶ್ ಜಾರಕಿಹೊಳಿ ಎಲ್ಲಿದ್ದೀಯಪ್ಪ #RapistRameshYellidiyappa ಎಂಬ ಹ್ಯಾಷ್​ಷ್ಯಾಗ್​ ಹಾಕಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ರಮೇಶ್ ಜಾರಕಿಹೊಳಿಯ ಕಾಲೆಳೆದಿದೆ.

Published by:Sushma Chakre
First published: