• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Loan waiver: ಸಿಎಂ ಆಶ್ವಾಸನೆ ಕೊಟ್ಟಿದ್ದಾರೆ, ಸಾಲ ಕಟ್ಟಲ್ಲ ಅಂತ ಮಹಿಳೆಯರ ಪಟ್ಟು!

Loan waiver: ಸಿಎಂ ಆಶ್ವಾಸನೆ ಕೊಟ್ಟಿದ್ದಾರೆ, ಸಾಲ ಕಟ್ಟಲ್ಲ ಅಂತ ಮಹಿಳೆಯರ ಪಟ್ಟು!

ಸಾಲ ಕಟ್ಟಲ್ಲ ಅಂತ ಮಹಿಳೆಯರ ಪಟ್ಟು!

ಸಾಲ ಕಟ್ಟಲ್ಲ ಅಂತ ಮಹಿಳೆಯರ ಪಟ್ಟು!

ಸ್ತ್ರೀ ಶಕ್ತಿ ಸಂಘಗಳು ಡಿಸಿಸಿ ಬ್ಯಾಂಕ್​ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡೋದಾಗಿ ಸಿದ್ದರಾಮಯ್ಯ ಮತ್ತು ಎಂಎಲ್​​ಸಿ ನಸೀರ್ ಅಹಮದ್ ಭರವಸೆ ನೀಡಿದ್ದರು ಅಂತ ಅಧಿಕಾರಿಗಳಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.

 • News18 Kannada
 • 3-MIN READ
 • Last Updated :
 • Kolar, India
 • Share this:

ಕೋಲಾರ: ರಾಜ್ಯ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಕೊಟ್ಟಿರುವ 5 ಗ್ಯಾರಂಟಿಗಳನ್ನ ಬಗೆಹರಿಸಿದರೆ ಸಾಕು ಅಂತಿರುವಾಗ ಕಾಂಗ್ರೆಸ್​ (Congress) ಸರ್ಕಾರಕ್ಕೆ ಮತ್ತೊಂದು ಭರವಸೆಯ ತಲೆನೋವು ಶುರುವಾಗಿದೆ. ಡಿಸಿಸಿ ಬ್ಯಾಂಕ್‌ನಿಂದ (DCC Bank) ನೀಡಿದ್ದ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನೆಲ್ಲಾ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು. ಈಗ ಕೋಲಾರ (Kolar) ತಾಲೂಕಿನ ಕ್ಯಾಲನೂರು ಗ್ರಾಮದಲ್ಲಿ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸಿದ್ದರಾಮಯ್ಯ ಮತ್ತು MLC ನಸೀರ್ ಅಹಮದ್ ನಮಗೆ ಆಶ್ವಾಸನೆ ಕೊಟ್ಟಿದ್ದಾರೆ. ಸಾಲ ತೀರಿಸಲ್ಲ ಅಂತ ವಸೂಲಾತಿಗೆ ಬಂದ ಬ್ಯಾಂಕ್ ಸಿಬ್ಬಂದಿಯನ್ನ (Bank Employee) ವಾಪಾಸ್ ಕಳಿಸಿದ್ದಾರೆ.


ಆಗಿದ್ದೇನು?


ಇಂದು ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಕೋಲಾರ ತಾಲೂಕಿನ ಕ್ಯಾಲನೂರು ಗ್ರಾಮದ ಸ್ತ್ರೀ ಶಕ್ತಿ ಸಂಘಗಳಲ್ಲಿ ಸಾಲ ಪಡೆದಿದ್ದ ಮಹಿಳೆಯರಿಗೆ ಸಾಲ ವಾಪಸ್ ಕಟ್ಟಲು ಆಗಮಿಸಿದ್ದರು. ಆದರೆ ಈ ವೇಳೆ ಬ್ಯಾಂಕ್ ಅಧಿಕಾರಿಗಳಿಗೆ ಸಾಲ ವಾಪಸ್ ಕೊಟ್ಟುವುದಿಲ್ಲ ಎಂದು ಉತ್ತರಿಸಿದ ಮಹಿಳೆಯರು, ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಮತ್ತು ಎಂಎಲ್​​ಸಿ ನಸೀರ್ ಅಹಮದ್ ಅವರು ನಮಗೆ ಆಶ್ವಾಸನೆ ಕೊಟ್ಟಿದ್ದಾರೆ.
ಇದನ್ನೂ ಓದಿ: Congress Guarantee: ಗೊಂದಲದ ಗೂಡಾಗಿದೆ ‘ಗೃಹಲಕ್ಷ್ಮಿ’ ಗ್ಯಾರಂಟಿ! ಗಂಡ-ಮಕ್ಕಳು ತೆರಿಗೆ ಕಟ್ಟಿದರೆ ಸಿಗಲ್ಲ ₹2 ಸಾವಿರ!


ಸ್ತ್ರೀ ಶಕ್ತಿ ಸಂಘಗಳು ಡಿಸಿಸಿ ಬ್ಯಾಂಕ್​ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡೋದಾಗಿ ತಿಳಿಸಿದ್ದಾರೆ ಅಂತ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಬ್ಯಾಂಕ್ ಅಧಿಕಾರಿಗಳು, ನಮಗೆ ಸರ್ಕಾರದಿಂದ ಅಂತಹ ಯಾವುದೇ ಆದೇಶ ಬಂದಿಲ್ಲ. ಆದ್ದರಿಂದ ನೀವು ಸಾಲ ಮರುಪಾವತಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಆದರೆ ಮಹಿಳೆ ಮಾತಿಗೆ ಉತ್ತರಿಸಲಾಗದೆ ಅಧಿಕಾರಿಗಳು ವಾಪಸ್ ಆಗಿದ್ದಾರೆ. ಇದರೊಂದಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಂದು ಭರವಸೆಯ ತಲೆನೋವು ಶುರುವಾದಂತೆ ಕಾಣುತ್ತಿದೆ.

First published: