ಬೆಂಗಳೂರು: ರಾಜಕೀಯ ಪಕ್ಷಗಳಿಂದ (Political Parties) ಮತ ಸೆಳೆಯಲು ಎಷ್ಟು ಕಾರ್ಯತಂತ್ರ ಅಗತ್ಯವೋ ಅಷ್ಟೂ ಕಾರ್ಯತಂತ್ರಗಳು ಭರ್ಜರಿಯಾಗಿ ನಡೆಯುತ್ತಿವೆ. ಅಭಿವೃದ್ಧಿ ಕೆಲಸದ (Development Works) ವಿಚಾರದಲ್ಲಿ ವೋಟು (Vote) ಕೇಳುವ ಕಾರ್ಯತಂತ್ರ ಬದಿಗಿಟ್ಟು, ಈಗ ಭರವಸೆಯ ಮೂಲಕ ಮತ ಬೇಟೆಗೆ ಸಜ್ಜಾಗಿದ್ದಾರೆ. ಕರ್ನಾಟಕ ರಾಜ್ಯ ವಿಧಾಸಭೆ ಚುನಾವಣೆಗೆ (Karnataka Legislative Assembly Election) ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ (Vijaya Sankalpa Yatra), ಕಾಂಗ್ರೆಸ್ ಪ್ರಜಾಧ್ವನಿ (Praja Dhwani Yatra) ಹಾಗೂ ಜೆಡಿಎಸ್ ಪಂಚರತ್ನಯಾತ್ರೆಯಲ್ಲಿ (Pancharatna Yatra) ಮುಳುಗಿವೆ. ಜೊತೆಗೆ ಮತ ಸೆಳೆಯುವ ನಿಟ್ಟಿನಲ್ಲಿ ಉಚಿತ ಯೋಜನೆಗಳ (Free Schemes) ಘೋಷಣೆ ಕೂಡ ಭರ್ಜರಿಯಾಗಿ ನಡೆಯುತ್ತಿದೆ.
ಉಚಿತ ಘೋಷಣೆಗಳ ಜೊತೆ ಏಟು ಎದಿರೇಟು
ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಉಚಿತ. ಗೃಹಿಣಿಯರಿಗೆ ಮಾಸಿಗೆ 2 ಸಾವಿರ ರೂಪಾಯಿ ಮಾಸಾಶನ ಘೋಷಣೆ ಬೆನ್ನಲ್ಲೇ ಇದೀಗ ಭೂರಹಿತ ಎಸ್ಸಿ-ಎಸ್ಟಿ ಸಮುದಾಯಗಳ ಕುಟುಂಬಗಳಿಗೆ ಭೂಮಿ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸೇರಿ ಹಲವು ಘೋಷಣೆಗಳನ್ನ ಘೋಷಿಸಲು ಸಿದ್ಧತೆ ಮಾಡಿಕೊಂಡಿದ್ದು, ಈ ಮೂಲಕ ಭರ್ಜರಿ ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳೋ ಯತ್ನದಲ್ಲಿದೆ.
ಇದನ್ನೂ ಓದಿ: Siddaramaiah: ಮಹಿಳೆಯರನ್ನು ಅಡಿಯಾಳಾಗಿ ನೋಡುವ ಮನುಸ್ಮೃತಿ ಮೇಲೆ ಬಿಜೆಪಿಗೆ ಒಲವು! ಸಿದ್ದರಾಮಯ್ಯ ಆರೋಪ
ಕಾಂಗ್ರೆಸ್ ಪ್ರಣಾಳಿಕೆ ಪ್ಲಾನ್?
ಎಸ್ಟಿ, ಎಸ್ಸಿ ಸಮುದಾಯಕ್ಕೆ ಕೃಷಿ ಜಮೀನು ನೀಡುವ ಚಿಂತನೆಯಲ್ಲಿರುವ ಕಾಂಗ್ರೆಸ್ ನಾಯಕರು, ಜಮೀನು ರಹಿತ ಕುಟುಂಬಕ್ಕೆ 2 ಎಕರೆ ಭೂಮಿ ನೀಡಲು ಚಿಂತನೆ ನಡೆದಿದೆ ಎನ್ನಲಾಗಿದೆ. 1 ರಿಂದ 5ರವರೆಗಿನ ವಿದ್ಯಾರ್ಥಿಗಳಿಗೆ 150 ರೂಪಾಯಿ ಸ್ಕಾಲರ್ ಶಿಪ್, 6-10ನೇ ತರಗತಿ ವರೆಗಿನ ಮಕ್ಕಳಿಗೆ 300 ರೂಪಾಯಿ ಸ್ಕಾಲರ್ ಶಿಪ್, ತಾಯಿ ಹೆಸರಲ್ಲಿ ಅಕೌಂಟ್, ನೇರವಾಗಿ ಹಣ ಜಮೆಗೆ ಪ್ಲಾನ್ ಮಾಡಿಕೊಂಡಿದ್ದಾರೆ.
ಅಲ್ಲದೆ ಕೇಂದ್ರ ನಿಲ್ಲಿಸಿರುವ ವಿದ್ಯಾರ್ಥಿ ವೇತನ ನೀಡುವ ಭರವಸೆ, ವಸತಿ ರಹಿತ 5 ಲಕ್ಷ ರೂಪಾಯಿ ಕುಟುಂಬಗಳಿಗೆ ಮನೆ, ಐರಾವತ ಯೋಜನೆಯಡಿ 10,000 ಯುವಕರಿಗೆ ಉದ್ಯೋಗ ಹಾಗೂ 2, 3, 4 ವ್ಹೀಲರ್ ವಾಹನ ಖರೀದಿಗೆ ಸಬ್ಸಿಡಿ, ಸಹಾಯಧನ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದ್ದೆಯಂತೆ.
ಕಾಂಗ್ರೆಸ್ ಪ್ರಣಾಳಿಕೆಗೆ ಬಿಜೆಪಿ, ಜೆಡಿಎಸ್ ವ್ಯಂಗ್ಯವಾಡಿವೆ. ಇದೆಲ್ಲ ಬೋಗಸ್ ಅಂತ ಟೀಕೆ ಮಾಡಿದ್ದಾರೆ. ವಿದ್ಯುತ್ ಶಕ್ತಿಯನ್ನು 200 ಯೂನಿಟ್, ಶಕ್ತಿ ಯೋಜನೆಗಳನ್ನು ಜಾರಿ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಈ ಎರಡು ಯೋಜನೆಗಳಿಗೆ ಎಷ್ಟು ಹಣ ಖರ್ಚಾಗುತ್ತದೆ ಎಂದು ನೀವೇ ಲೆಕ್ಕ ಹಾಕಿದರೆ ಮಾಡಿ.
ಇದನ್ನೂ ಓದಿ: D K Shivakumar: ಸಿಎಂ ಕುರ್ಚಿ ಮೇಲೆ ಡಿಕೆ ಶಿವಕುಮಾರ್ ಕಣ್ಣು! ಸಭೆಯಲ್ಲಿ ಹೊರಬಂತು ಡಿಕೆ ಮನದಾಸೆ
ಈ ಎರಡು ಯೋಜನೆಗಳಿಗೆ ಮಾತ್ರ ಸುಮಾರು 20-25 ಸಾವಿರ ರೂಪಾಯಿ ಕೊಡಬೇಕಾಗುತ್ತದೆ. ಈಗ ಅಭಿವೃಧ್ಧಿ ಯೋಜನೆಗಳಿಗ ಹಣವನ್ನು ಎಲ್ಲಿಂದ ತರುತ್ತೀರಿ ನೀವೇ ಹೇಳಿ. ಜನರನ್ನು ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಒಟ್ಟಾರೆ ಚುನಾವಣೆ ಸಮೀಪಿಸ್ತಿದ್ದಂತೆ, ಪಕ್ಷಗಳಿಂದ ಮತಸೆಳೆಯೋ ಕಸರತ್ತು ಶುರುವಾಗಿದ್ದು, ಇದು ಕೇವಲ ಘೋಷಣೆ ಮಾತ್ರ ಸೀಮಿತವಾಗದೆ, ಗೆದ್ದಮೇಲೆ ಕಾರ್ಯಗತವಾಗುತ್ತಾ ಕಾದುನೋಡಬೇಕು.
ಇನ್ನು, ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಕೊಪ್ಪಳಕ್ಕೆ ಬಂದಿದೆ. ಗವಿಮಠಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ, ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದ್ರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ