BJP ಲಂಚಾವತಾರ, ಪಿಡಿಒ ಆಫೀಸ್​​ ಗೋಡೆ ತಟ್ಟಿದ್ರೆ ಕಾಸು, ಕಾಸು ಅಂತದೆ: ಡಿಕೆಶಿ

ಪ್ರತಿಯೊಂದರಲ್ಲೂ ಲಂಚ ತಾಂಡವ ಆಡುತ್ತಿದೆ, ಪ್ರತೀ ತಾಪಂ. ಪಂಚಾಯ್ತಿ, ಪಿಡಿಒ, PWD ಆಪೀಸಲ್ಲೂ ಲಂಚವತಾರ, ಆಫೀಸ್ಗಳಿಗೆ ಹೋಗಿ ಗೋಡೆ ತಟ್ಟಿದ್ರೆ ಸಾಕು ಕಾಸು, ಕಾಸು, ಕಾಸು ಅಂತದೆ, ಎಲ್ಲಾ ಕಂಟ್ರಾಕ್ಟಲ್ಲೂ 40% ಕಮಿಷನ್ ದಂದೆ ಎಂದು ಬಿಜೆಪಿ ಸರ್ಕಾರದ ವಿರುದ್ದ KPCC ರಾಜ್ಯಾಧ್ಯಕ್ಷ  ಲಂಚಾರೋಪ ಮಾಡಿದ್ದಾರೆ.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಚಿತ್ರದುರ್ಗ(ಏ.05): ಈಶ್ವರಪ್ಪ ದೇಶದ್ರೋಹಿ, ರಾಷ್ಟ್ರಧ್ವಜ ದ್ರೋಹಿ, ಸಂವಿಧಾನ ದ್ರೋಹಿ ಅವರಿಗೆಲ್ಲಾ ನಾನು ಪ್ರತಿಕ್ರಿಯಿಸಲ್ಲ, ಸಿಎಂ ಮಾತಿಗೆ ಉತ್ತರ ಕೊಡಬಹುದು, ರಸ್ತೇಲಿ ಹೋಗೋರಿಗೆಲ್ಲ ಉತ್ತರಿಸಲ್ಲ, ಬಿಜೆಪಿ ಸರ್ಕಾರ (BJP Govt) ಯಾವುದಾದ್ರು ಒಂದು ವರ್ಗದ ಬಗ್ಗೆ ಚಿಂತನೆ ಮಾಡಿದೆಯಾ? ಪ್ರತಿಯೊಂದರಲ್ಲೂ ಲಂಚ ತಾಂಡವ ಆಡುತ್ತಿದೆ, ಪ್ರತೀ ತಾಪಂ. ಪಂಚಾಯ್ತಿ, ಪಿಡಿಒ, PWD ಆಪೀಸಲ್ಲೂ ಲಂಚವತಾರ, ಆಫೀಸ್ಗಳಿಗೆ ಹೋಗಿ ಗೋಡೆ ತಟ್ಟಿದ್ರೆ ಸಾಕು ಕಾಸು, ಕಾಸು, ಕಾಸು ಅಂತದೆ, ಎಲ್ಲಾ ಕಂಟ್ರಾಕ್ಟಲ್ಲೂ 40% ಕಮಿಷನ್ ದಂದೆ ಎಂದು ಬಿಜೆಪಿ ಸರ್ಕಾರದ ವಿರುದ್ದ KPCC ರಾಜ್ಯಾಧ್ಯಕ್ಷ (KPCC President)  ಲಂಚಾರೋಪ (Corruption) ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರಲ್ಲಿ ನಡೆದ ಬಾಬು ಜಗಜೀವನರಾಂ ಜಯಂತಿಯಲ್ಲಿ ಭಾಷಣ ಮಾಡಿದ ಅವರು ಬಾಬು ಜಗಜೀವನರಾಮ್‌ ರಿಂದ ಎಲ್ಲಾ ಇಲಾಖೆಯ ಸೇವೆ ಆಗಿದೆ, ಅಂಬೇಡ್ಕರ್, ಜಗಜೀವನರಾಮ್ ಈ ದೇಶದ ದೊಡ್ಡ ಶಕ್ತಿ, ರೈತ, ಕಾರ್ಮಿಕ, ಸೈನಿಕ, ಶಿಕ್ಷಕ ಈ ದೇಶದ ಆಧಾರ ಸ್ತಂಭವಾಗಿದ್ದರು.ಈಗ ದೇಶ ಕಷ್ಟದಲ್ಲಿದೆ, ರಾಜ್ಯ ಸಂದಿಗ್ಧ ಸ್ಥಿತಿಯಲ್ಲಿದೆ, ದೇಶ, ರಾಜ್ಯದ ಜನರನ್ನು ಬಿಜೆಪಿಯವರು ಇಬ್ಭಾಗ ಮಾಡುತ್ತಿದ್ದಾರೆ ಎಂದಿದ್ದಾರೆ.

ಯುವಕರಿಗೆ ಉದ್ಯೋಗ ಅವಕಾಶ ಸಿಕ್ಕಿಲ್ಲ

ರೈತನ ಬೆಳೆ ಬೆಲೆ ದ್ವಿಗುಣ ಮಾಡುವ ಭರವಸೆ ಹುಸಿಯಾಗಿದೆ, ನಾಡಿನ ಯುವಕರಿಗೆ ಉದ್ಯೋಗ ಅವಕಾಶ ಸಿಕ್ಕಿಲ್ಲ, ಜಿಲ್ಲೆಯಲ್ಲಿ ಈಗಾಗಲೇ ಪವರ್ ಕಟ್ ಆರಂಭ ಆಗಿದೆ, ನಾನು ಇಂಧನ ಸಚಿವ ಆಗಿದ್ದಾಗ ಪವರ್ ಪ್ಲಾಂಟ್ ನಿರ್ಮಾಣ, ಬೆಲೆ ಗಗನಕ್ಕೇರಿದೆ, ಬಿಜೆಪಿ ಜನರ ಬಗ್ಗೆ ಚಿಂತಿಸಿಲ್ಲ, ಪ್ರತಿಯೊಂದು ಕಡೆ ಲಂಚ ತಾಂಡವ ಆಡುತ್ತಿದೆ, ಬಿಜೆಪಿ ಸರ್ಕಾರ ಯಾವುದಾದ್ರು ಒಂದು ವರ್ಗದ ಬಗ್ಗೆ ಚಿಂತನೆ ಮಾಡಿದೆಯಾ? ಎಂದು ಪ್ರಶ್ನಿಸಿದ್ದಾರೆ.

ಪ್ರತಿಯೊಂದರಲ್ಲೂ ಲಂಚ ತಾಂಡವ

ಪ್ರತಿಯೊಂದರಲ್ಲೂ ಲಂಚ ತಾಂಡವ ಆಡುತ್ತಿದೆ, ಪ್ರತೀ ತಾಪಂ. ಪಂಚಾಯ್ತಿ, ಪಿಡಿಒ, PWD ಆಪೀಸಲ್ಲೂ ಲಂಚವತಾರ, ಆಫೀಸ್ಗಳಿಗೆ ಹೋಗಿ ಗೋಡೆ ತಟ್ಟಿದ್ರೆ ಸಾಕು ಕಾಸು, ಕಾಸು, ಕಾಸು ಅಂತದೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ, ಜನರ ದುಃಖ ದುಮ್ಮಾನ ಜನರ ಮುಂದಿಡುತ್ತೇವೆ, ನಮ್ಮ ನಾಯಕರಾದ ಸಿದ್ಧರಾಮಯ್ಯ ಸಿಎಂ, ಹೆಚ್.ಅಂಜನೇಯ ಮಂತ್ರಿ ಆಗಿದ್ದಾಗ ಕ್ರಾಂತಿ ಮಾಡಿ ದಲಿತ ಸಮುದಾಯಕ್ಕೆ ವಿಶೇಷ ಆದ್ಯತೆ ನೀಡಿ ಹೆಚ್ಚಿನ ಹಣ ಮೀಸಲಿಟ್ಟರು ಎಂದಿದ್ದಾರೆ.

ಬಿಜೆಪಿ ಕಿತ್ತೆಸೆದು ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಮಾತ್ರ ಅಭಿವೃದ್ಧಿ

ಬಿಜೆಪಿ ಸರ್ಕಾರ, ಸಿಎಂ ಬೊಮ್ಮಾಯಿ ಈ ಕುರಿತು ವಿಚಾರಿಸಬೇಕು, ಬಿಜೆಪಿಯವರು ದಲಿತ ವಿರೋಧಿಗಳು, ರೈತ ಸಮುದಾಯದ ಮೇಲೆ ಗದಾಪ್ರಹಾರ ನಡೆದಿದೆ, ಟ್ಯಾಕ್ಸ್ ಹಾಕಿ ಬಡವರ ಮೇಲೆ ಪಿಕ್ ಪಾಕೆಟ್ ಒಡೆಯುತ್ತಿದ್ದೀರಿ, ಬಿಜೆಪಿ ಕಿತ್ತೆಸೆದು ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಮಾತ್ರ ಅಭಿವೃದ್ಧಿ ಎಂದು ಹೇಳಿದ್ರು.

ಇದನ್ನೂ ಓದಿ: B. J. Puttaswamy: ರಾಜಕೀಯದಿಂದ ಸನ್ಯಾಸತ್ವದ ಕಡೆಗೆ ಬಿ.ಜೆ ಪುಟ್ಟಸ್ವಾಮಿ, ಗಾಣಿಗ ಸ್ವಾಮೀಜಿಯಾಗಿ ಪಟ್ಟಾಭಿಷೇಕಕ್ಕೆ ಸಿದ್ಧತೆ

ಅಲ್ಲದೇ "ಹಿಜಾಬ್ ಬಗ್ಗೆ ಕಾಂಗ್ರೆಸ್ ನಾಯಕರು ಗಡಸುತದಿಂದ ಮಾತಾಡ್ತಿಲ್ಲ, "ಈ ಬಗ್ಗೆ ಡಿಕೆಶಿ ಸೂಚನೆ ನೀಡಿದ್ದಾರೆ" ಎಂಬ ಆರಗ ಜ್ಞಾನೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ದೇಶದಲ್ಲಿ ಅಶಾಂತಿ ಮೂಡಿಸಲು ಟ್ರ್ಯಾಪ್ ಮಾಡುತ್ತಿದೆ, ಆದ್ದರಿಂದ ಭಾವನಾತ್ಮಕವಾಗಿ ತೆಗೆದುಕೊಂಡು ಮಾತಾಡದಂತೆ ಸೂಚಿಸಿದ್ದೇನೆ. ಯಾರು ಮಾತಾಡಬೇಕು ಅವರೇ ಮಾತಾಡಬೇಕು, ಎಲ್ಲರೂ ಪ್ರತಿಕ್ರಿಯಿಸಬಾರದೆಂದು ಸೂಚನೆ ನೀಡಿದ್ದು ನಿಜ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ನಾವು ಯಾವ ಸಿಂಹಾಸನ ಇಟ್ಟುಕೊಂಡಿಲ್ಲ, ಪ್ರಜಾಪ್ರಭುತ್ವ ಪಾಲಿಸುತ್ತೇವೆ ಎಂದಿದ್ದಾರೆ.

ಈಶ್ವರಪ್ಪ ದೇಶದ್ರೋಹಿ, ಅವರಿಗೆಲ್ಲಾ ನಾನು ಪ್ರತಿಕ್ರಿಯಿಸಲ್ಲ

ಕಾಂಗ್ರೆಸ್ ಪಕ್ಷದ ಜವಬ್ದಾರಿ ಸ್ಥಾನ ನಿರ್ವಹಿಸುತ್ತಿದ್ದೇವೆ, ಈಶ್ವರಪ್ಪ ದೇಶದ್ರೋಹಿ, ರಾಷ್ಟ್ರಧ್ವಜ ದ್ರೋಹಿ, ಸಂವಿಧಾನ ದ್ರೋಹಿ ಅವರಿಗೆಲ್ಲಾ ನಾನು ಪ್ರತಿಕ್ರಿಯಿಸಲ್ಲ, ಸಿಎಂ ಮಾತಿಗೆ ಉತ್ತರ ಕೊಡಬಹುದು, ರಸ್ತೇಲಿ ಹೋಗೋರಿಗೆಲ್ಲ ಉತ್ತರಿಸಲ್ಲ, ಈಶ್ವರಪ್ಪ ವಿರುದ್ದ ವಾಗ್ದಾಳಿ ಮಾಡಿದ್ರು. ಇನ್ನೂ ಹಿರಿಯೂರಲ್ಲಿ ಫ್ಲೆಕ್ಸ್ ವಿಚಾರಕ್ಕೆ ಕೈ ಕಾರ್ಯಕರ್ತರ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಆಚಾರ ವಿಚಾರ ಪ್ರಚಾರಕ್ಕೆ ಪೈಪೋಟಿ ಇದೆ ಅಂದರೆ ಅಭಿನಂದನೆ, ಸ್ಪರ್ಧೆ ಇರಬೇಕು ಎಂದು ಸಮರ್ಥನೆ ಮಾಡಿಕೊಂಡ್ರು ಎಂದಿದ್ದಾರೆ.

ಇದನ್ನೂ ಓದಿ: Karnataka Politics: ಭಾಸ್ಕರ್ ರಾವ್ ಬಳಿಕ ಮತ್ತೊಬ್ಬ ನಿವೃತ್ತ ಅಧಿಕಾರಿ ರಾಜಕೀಯಕ್ಕೆ ಎಂಟ್ರಿ, AAP ಸೇರಲು ಕೆ. ಮಥಾಯಿ ರೆಡಿ

ಇನ್ನೂ ಅಜಾನ್ ವಿಚಾರ ಇಂದು ನಿನ್ನೆಯ ವಿಚಾರ ಅಲ್ಲ, ಧರ್ಮದ ವಿಚಾರ ಅಲ್ಲ, ಬೆಳಗ್ಗೆ ಪ್ರಾರ್ಥನೆಗಾಗಿ ಒಂದು ಇತಿಮಿತಿಯಲ್ಲಿ ಒಂದು ಕೂಗು, ಇಡೀ ಪ್ರಪಂಚದಲ್ಲಿ ಅಜಾನ್ ಬಗ್ಗೆ ದೊಡ್ಡ ಚರ್ಚೆ ಆಗಿದೆ, ನಾವು ನೀವು ಚರ್ಚೆ ಮಾಡುವ ಅಗತ್ಯ ಇಲ್ಲ, ಕಾನೂನು, ಸಂವಿಧಾನ ಇದೆ, ಪದ್ಧತಿ ಉಳಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು. ಅಲಾರಾಮ್ ಇಟ್ಟುಕೊಂಡು ಸಿಟಿ ರವಿ ಎಚ್ಚರಗೊಳ್ಳಲಿ  ಟಾಂಗ್ ನೀಡಿ,ಪ್ರಧಾನಿ, ಗೃಹ ಸಚಿವರಿಗೆ ಅವರು ಈ ಬಗ್ಗೆ ಕೇಳಲಿ, ಕಾನೂನು ಇದ್ದರೆ ಬೇಕಿದ್ದರೆ ಜಡ್ಜ್ ಮೆಂಟ್ ಮಾಡಿಸಲು ಹೇಳಿ  ಎಂದು ಟಾಂಗ್ ನೀಡಿದ್ರು. ಬಳಿಕ ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡಿದರು.
Published by:Divya D
First published: