• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • KCDC: ಕೊನೆಗೂ ಕದ ಮುಚ್ಚಿದ ಕೆಸಿಡಿಸಿ ಘಟಕ, ಕಸದ ಬೆಟ್ಟದಿಂದ ಸಾರ್ವಜನಿಕರಿಗೆ ಮುಕ್ತಿ!

KCDC: ಕೊನೆಗೂ ಕದ ಮುಚ್ಚಿದ ಕೆಸಿಡಿಸಿ ಘಟಕ, ಕಸದ ಬೆಟ್ಟದಿಂದ ಸಾರ್ವಜನಿಕರಿಗೆ ಮುಕ್ತಿ!

ಕಸದ ಬೆಟ್ಟದಿಂದ ಸಾವರ್ಜನಿಕರಿಗೆ ಮುಕ್ತಿ

ಕಸದ ಬೆಟ್ಟದಿಂದ ಸಾವರ್ಜನಿಕರಿಗೆ ಮುಕ್ತಿ

ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಘಟಕದ ಬಾಗಿಲು ಬರೋಬ್ಬರಿ 50 ವರ್ಷಗಳ ಬಳಿಕ ಕೊನೆಗೂ ಬಂದ್ ಆಗಿದೆ . ಸೋಮಸುಂದರ ಪಾಳ್ಯದ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಘಟಕವನ್ನು ಅಧಿಕೃತವಾಗಿ ಬಂದ್ ಮಾಡಲಾಗಿದೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೊಮ್ಮನಹಳ್ಳಿ(ಏ.28): ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರತಿಷ್ಠಿತ ಎಚ್ ಎಸ್ ಆರ್ ಬಡಾವಣೆ ಸಮೀಪವೇ ಕಾರ್ಯಚರಿಸುತ್ತಿದ್ದ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಘಟಕದ (Karnataka Compost Development Corporation) ಬಾಗಿಲು ಬರೋಬ್ಬರಿ 50 ವರ್ಷಗಳ ಬಳಿಕ ಕೊನೆಗೂ ಬಂದ್ ಆಗಿದೆ . ಸೋಮಸುಂದರ ಪಾಳ್ಯದ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಘಟಕವನ್ನು ಅಧಿಕೃತವಾಗಿ ಬಂದ್ ಮಾಡಲಾಗಿದೆ.


ಇದನ್ನೂ ಓದಿ: Geetha Shivarajkumar: 'ತೆನೆ' ಬಿಟ್ಟು 'ಕೈ' ಹಿಡಿತಾರೆ ಗೀತಾ ಶಿವರಾಜಕುಮಾರ್! ನಾಳೆ ಕಾಂಗ್ರೆಸ್‌ ಸೇರ್ಪಡೆ ಸಾಧ್ಯತೆ


ಬೆಂಗಳೂರು ನಗರದ 198 ವಾರ್ಡ್ಗಳಲ್ಲಿ ಉತ್ಪತ್ತಿಯಾಗುತ್ತಿದ್ದ ಕಸ ಮತ್ತು ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಿ ಮರು ಬಳಕೆ ಮಾಡುವ ಸಲುವಾಗಿ ಬೊಮ್ಮನಹಳ್ಳಿ ಸಮೀಪದ ಸೋಮಸುಂದರಪಾಳ್ಯದ ಕೆರೆ ಬಳಿ ಕೆಸಿಡಿಸಿ ಘಟಕವನ್ನು 1975 ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಅಂದಿನಿಂದ ಬೆಂಗಳೂರು ನಗರದ ಎಲ್ಲಾ ವಾರ್ಡ್ ಗಳ ಕಸವನ್ನು ಇಲ್ಲಿ ಸಂಗ್ರಹಿಸಿ ಬಳಿಕ ಯಂತ್ರಗಳ ನೆರವಿನಿಂದ ಪ್ಲಾಸ್ಟಿಕ್ ಕವರ್, ಹಾನಿಕಾರಕ ತ್ಯಾಜ್ಯವನ್ನು ಪ್ರತ್ಯೇಕಿಸಿ ಸಾವಯವ ಗೊಬ್ಬರ ತಯಾರಿಸಿ ರೈತರಿಗೆ ಕಡಿಮೆ ಬೆಲೆಗೆ ವಿತರಣೆ ಮಾಡಲಾಗುತ್ತಿತ್ತು.
ಆದರೆ ದಿನಕಳೆದಂತೆ ಕೆಸಿಡಿಸಿಯಲ್ಲಿನ ಬೆಟ್ಟದಂತಹ ಕಸದ ರಾಶಿಯಿಂದ ಹೊರ ಬರುತ್ತಿದ್ಸ ದುರ್ವಾಸನೆಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಹೌರಾಣಾಗಿದ್ದರು. ಕೆಟ್ಟ ವಾಸನೆಯಿಂದಾಗಿ ಎಚ್ಎಸ್ಆರ್ ಬಡಾವಣೆ, ಸೋಮಸುಂದರಪಾಳ್ಯ, ಹೊಸಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಜನವಸತಿ ಪ್ರದೇಶದ ವಾಸಿಗಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಇಷ್ಟಾದರೂ ಕೆಸಿಡಿಸಿ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ದುರ್ವಾಸನೆಯಿಂದಾಗಿ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಹಲವು ಬಾರಿ ಪ್ರತಿಭಟನೆ ನಡೆಸಿ ವ್ಯಾಪಕವಾಗಿ ವಿರೋ  ವ್ಯಕ್ತಪಡಿಸಿದ್ದರು.
ಈ ವೇಳೆ ಶಾಸಕರು ಕೆಸಿಡಿಸಿ ಘಟಕವನ್ನು ಬಂದ್ ಮಾಡಿಸುವ ಭರವಸೆ ನೀಡಿದ್ದರು. ಅಂತಿಮವಾಗಿ ಸತೀಶ್ ರೆಡ್ಡಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದು,  ಅದರ ಫಲವಾಗಿ  ಕೆಸಿಡಿಸಿ ಘಟಕದ ಕದ ಬಂದ್ ಆಗಿದೆ. ಈ ಬಗ್ಗೆ ಮಾತನಾಡಿದ ಶಾಸಕರು ಕಳೆದ ಹಲವು ವರ್ಷಗಳಿಂದ ಕೆಸಿಡಿಸಿ ಘಟಕ ಬಂದ್ ಮಾಡಲು ನಿರಂತರ ಹೋರಾಟ ನಡೆಸಿದ್ದು , ಅಧಿಕಾರಿಗಳು ದುರ್ವಾಸನೆ ಬರದಂತೆ ಕ್ರಮ ವಹಿಸಲಾಗುವುದು ಎಂದು ಹಲವು ಬಾರಿ ಭರವಸೆ ನೀಡಿ ಮಾತಿಗೆ ತಪ್ಪಿದ್ದರು . ಸಾಲದಕ್ಕೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದರು . ಆದ್ರೆ ನಿರಂತರ ಹೋರಾಟದ ಫಲವಾಗಿ ಇದೀಗ ಕೆಸಿಡಿಸಿ ಘಟಕ ಬಂದ್ ಮಾಡಲಾಗಿದ್ದು , ಲಾರಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು .

top videos


  -ಆದೂರು ಚಂದ್ರು, ನ್ಯೂಸ್ 18 ಕನ್ನಡ

  First published: