• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Rahul Gandhi: ನಮ್ಮ ಜೊತೆಯಲ್ಲಿದ್ದಿದ್ದು ಸತ್ಯ ಮತ್ತು ಬಡವರು ಮಾತ್ರ: ಕನ್ನಡಿಗರಿಗೆ 'ರಾಗಾ' ಧನ್ಯವಾದ

Rahul Gandhi: ನಮ್ಮ ಜೊತೆಯಲ್ಲಿದ್ದಿದ್ದು ಸತ್ಯ ಮತ್ತು ಬಡವರು ಮಾತ್ರ: ಕನ್ನಡಿಗರಿಗೆ 'ರಾಗಾ' ಧನ್ಯವಾದ

ರಾಹುಲ್ ಗಾಂಧಿ

ರಾಹುಲ್ ಗಾಂಧಿ

Congress: ಕರ್ನಾಟಕಕ್ಕೆ ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಸರ್ಕಾರವನ್ನು ಕಾಂಗ್ರೆಸ್ ನೀಡಲಿದೆ. ನಿಮ್ಮೆಲ್ಲರ ಪ್ರೀತಿಗೆ ನನ್ನ ಧನ್ಯವಾದಗಳು ಎಂದು ಹೇಳಿ ರಾಹುಲ್ ಗಾಂಧಿ  ತಮ್ಮ ಮಾತು ಮುಗಿಸಿದರು.

 • News18 Kannada
 • 5-MIN READ
 • Last Updated :
 • Karnataka, India
 • Share this:

ಬೆಂಗಳೂರು: ಪ್ರಮಾಣ ವಚನ ಕಾರ್ಯಕ್ರಮದ (Oath Taking Ceremony) ಬಳಿಕ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಮಾತನಾಡಿ ಎಲ್ಲರಿಗೂ ಶುಭಕೋರಿದರು. ಕರ್ನಾಟಕ (Karnataka) ರಾಜ್ಯದ ಜನತೆ ನನ್ನ ಕಡೆಯಿಂದ ಧನ್ಯವಾದಗಳನ್ನು ತಿಳಿಸುತ್ತೇನೆ. ಕಳೆದ ಐದು ವರ್ಷಗಳಲ್ಲಿ ನೀವು ಅನುಭವಿಸಿದ ಕಷ್ಟ ನಿಮಗೆ ಗೊತ್ತಿದೆ. ಕರುನಾಡಿನ ಜನರು ನಮ್ಮ ಪರವಾಗಿ ನಿಂತು ಅಧಿಕಾರ ನೀಡಿದ್ದಕ್ಕೆ ಧನ್ಯವಾದಗಳು. ನಮ್ಮ ಜೊತೆಯಲ್ಲಿ  ಸತ್ಯ ಮತ್ತು ಬಡವರಿದ್ದರು. ಆದರೆ ಬಿಜೆಪಿ (BJP) ಜೊತೆ ಶ್ರೀಮಂತರು, ಪೊಲೀಸರಿದ್ದರು. ಇಂದು ಭ್ರಷ್ಟಾಚಾರ, ಅಹಂಕರ, ದ್ವೇಷ ರಾಜಕಾರಣಕ್ಕೆ ಇಂದು ಕರ್ನಾಟಕದ ಜನರು ಉತ್ತರ ನೀಡಿದ್ದಾರೆ. ಕಾಂಗ್ರೆಸ್​ಗೆ (Congress) ಮತ ನೀಡುವ ಮೂಲಕ ಕರ್ನಾಟಕದ ಜನರು ರಾಜ್ಯದಲ್ಲಿ ಪ್ರೀತಿಯ ಅಂಗಡಿಗಳನ್ನು ತೆರೆದಿದ್ದಾರೆ.


ನಾವು ನಿಮಗೆ ಚುನಾವಣೆಗೂ ಮೊದಲು ಐದು ಗ್ಯಾರಂಟಿಗಳನ್ನ ನೀಡಿದ್ದೇವೆ. ಕೆಲವೇ ಗಂಟೆಗಳಲ್ಲಿಯೇ ಮೊದಲು ಕ್ಯಾಬಿನೆಟ್ ಸಭೆ ನಡೆಯಲಿದ್ದು, ನಮ್ಮ ಘೋಷಣೆಗಳು ಕಾನೂನುಗಳಾಗಿ ಬರಲಿವೆ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಕಾಂಗ್ರೆಸ್​ ಜನತೆಯ ಸರ್ಕಾರವಾಗಿದ್ದು, ಮನಸ್ಸುಪೂರ್ವಕವಾಗಿ ರಾಜ್ಯಕ್ಕಾಗಿ ಕೆಲಸ ಮಾಡುತ್ತಾರೆ.


ಇದನ್ನೂ ಓದಿ:  Siddaramaiah Oath Ceremony: ಇಂದಿನಿಂದ ಜೋಡೆತ್ತಿನ ಪರ್ವ; ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್


ಕರ್ನಾಟಕಕ್ಕೆ ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಸರ್ಕಾರವನ್ನು ಕಾಂಗ್ರೆಸ್ ನೀಡಲಿದೆ. ನಿಮ್ಮೆಲ್ಲರ ಪ್ರೀತಿಗೆ ನನ್ನ ಧನ್ಯವಾದಗಳು ಎಂದು ಹೇಳಿ ರಾಹುಲ್ ಗಾಂಧಿ  ತಮ್ಮ ಮಾತು ಮುಗಿಸಿದರು.
ರಾಹುಲ್ ಗಾಂಧಿ ಅವರ ಬಳಿಕ ಮಾತನಾಡಿದ ನೂತನ ಸಿಎಂ ಸಿದ್ದರಾಮಯ್ಯ ಪದಗ್ರಹಣ  ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಐದು  ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಹೇಳಿದರು.

First published: