• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Politics: ಸಿಎಂ ಆದ ಬೆನ್ನಲ್ಲೇ ಬಿಜೆಪಿಗೆ ಮೊದಲ ಶಾಕ್ ಕೊಟ್ಟ ಸಿದ್ದರಾಮಯ್ಯ!

Karnataka Politics: ಸಿಎಂ ಆದ ಬೆನ್ನಲ್ಲೇ ಬಿಜೆಪಿಗೆ ಮೊದಲ ಶಾಕ್ ಕೊಟ್ಟ ಸಿದ್ದರಾಮಯ್ಯ!

New Delhi: Congress leader Siddaramaiah arrives at the residence of party president Mallikarjun Kharge for a meeting, in New Delhi, Tuesday, May 16, 2023. (PTI Photo/Kamal Kishore)(PTI05_16_2023_000139B)

New Delhi: Congress leader Siddaramaiah arrives at the residence of party president Mallikarjun Kharge for a meeting, in New Delhi, Tuesday, May 16, 2023. (PTI Photo/Kamal Kishore)(PTI05_16_2023_000139B)

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಪ್ರಮುಖ ನಿರ್ಧಾರದಲ್ಲಿ ಗಂಭೀರ ರಾಜಕೀಯ ಪರಿಣಾಮಗಳನ್ನು ಬೀರಬಹುದು, ಸೋಮವಾರ, ಹಿಂದಿನ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಮಂಜೂರು ಮಾಡಿದ ಎಲ್ಲಾ ಯೋಜನೆಗಳನ್ನು ನಿಲ್ಲಿಸಿ ಅವುಗಳನ್ನು ಪರಿಶೀಲನೆಗೆ ಒಳಪಡಿಸಿದರು.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು(ಮೇ.23): ಕರ್ನಾಟಕದಲ್ಲಿ ಅಧಿಕಾರ ಸ್ವೀಕರಿಸಿದ ತಕ್ಷಣ ಸಿಎಂ ಸಿದ್ದರಾಮಯ್ಯ (CM Siddaramaiah) ಕಾರ್ಯಪ್ರವೃತ್ತರಾಗಿರುವುದು ಕಂಡು ಬರುತ್ತಿದೆ. ಹಿಂದಿನ ಬಿಜೆಪಿ ಸರಕಾರ ಆರಂಭಿಸಿದ್ದ ಬಾಕಿ ಇರುವ ಎಲ್ಲಾ ಕಾಮಗಾರಿಗಳಿಗೆ ಕಡಿವಾಣ ಹಾಕಿದ್ದಾರೆ. ಇದರೊಂದಿಗೆ ಹಣ ಬಿಡುಗಡೆಗೂ ನಿರ್ಬಂಧ ಹೇರಲಾಗಿದೆ. ಇತ್ತೀಚೆಗಷ್ಟೇ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Elerctions)  ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದುಕೊಂಡು ರಾಜ್ಯದಲ್ಲಿ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡಿರುವುದು ಗಮನಾರ್ಹ. 66 ಸ್ಥಾನಗಳನ್ನು ಪಡೆದ ಬಿಜೆಪಿ ಅಧಿಕಾರದಿಂದ ಹೊರಬಿದ್ದಿದೆ. ಮೇ 20 ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತು ಡಿಕೆ ಶಿವಕುಮಾರ್ (DK Shivakumar) ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆಂಬುವುದು ಉಲ್ಲೇಖನೀಯ.


ಇನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ಹೊರಡಿಸಲಾದ ಆದೇಶದಂತೆ, “ಹಿಂದಿನ ಸರ್ಕಾರವು ಕೈಗೊಂಡ ಎಲ್ಲಾ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ಮತ್ತು ನಿಗಮಗಳು/ಮಂಡಳಿಗಳು/ಇಲಾಖೆಗಳ ಎಲ್ಲಾ ಮುಂದಿನ ಬಿಡುಗಡೆ/ಪಾವತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಬೇಕು. ಪ್ರಾರಂಭಿಸದಿರುವುನ್ನೂ ತಡೆಹಿಡಿಯಬೇಕು ಎನ್ನಲಾಗಿದೆ. ಸಿಎಂಒ ಪ್ರಕಾರ, ಬಿಜೆಪಿಯಿಂದ ಮಂಜೂರಾದ ಹಲವಾರು ಕಾಮಗಾರಿಗಳಿಗೆ ಪಾವಿತ್ರ್ಯತೆ ಇಲ್ಲ ಮತ್ತು ಯಾವುದೇ ಅನುಮೋದನೆ ಇಲ್ಲ ಎಂದು ಶಾಸಕರು ಮತ್ತು ಜನರು ನೀಡಿದ ದೂರಿನ ಆಧಾರದ ಮೇಲೆ ಸಿದ್ದರಾಮಯ್ಯ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.


ಇದನ್ನೂ ಓದಿ: Hindutva Vs BJP: ಸೋತ ಬಿಜೆಪಿಗೆ ಮತ್ತೊಂದು ಶಾಕ್, ಹಿಂದೂ ಮಹಾಸಭಾದಿಂದ ವಾರ್ನಿಂಗ್, ನಳಿನ್​ಗೆ ನಡುಕ!


"ಕೆಲವು ಸಂದರ್ಭಗಳಲ್ಲಿ ಆದೇಶಕ್ಕೂ ಮೊದಲೇ ಪಾವತಿಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಇತರ ಸಂದರ್ಭಗಳಲ್ಲಿ ಯಾವುದೇ ಕಾಮಗಾರಿ ನಡೆಯದೆಕೇವಲ ಕಾಗದದ ಮೇಲೆ ಮಾತ್ರ ಕೆಲಸಗಳಾಗಿದೆ ಎಂದು ತೋರಿಸಲಾಗಿದೆ. ಸಿಎಂ ಅವೆಲ್ಲವನ್ನೂ ಪರಿಶೀಲನೆಗೆ ಒಳಪಡಿಸಿದ್ದಾರೆ. ಎಲ್ಲವೂ ಸರಿ ಇದ್ದರಷ್ಟೇ ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂದು ಸಿಎಂಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಜೆಪಿಯಿಂದ ಮಂಜೂರಾದ ಬಹುತೇಕ ಹೊಸ ಕಾಮಗಾರಿಗಳು ಚುನಾವಣಾ ಆಯೋಗ ಹೊರಡಿಸಿದ ಮಾದರಿ ನೀತಿ ಸಂಹಿತೆಯ ನಂತರ ಆರಂಭಿಸಲಾಗಿದೆ ಎಂದು ಹೇಳಲಾಗಿದೆ.
ಮೊದಲ ಅಧಿವೇಶನ


ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 16ನೇ ಕರ್ನಾಟಕ ವಿಧಾನಸಭೆಯ ಮೊದಲ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಹೊಸದಾಗಿ ಆಯ್ಕೆಯಾದ ಎಲ್ಲ ಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮೂರು ದಿನಗಳ ಅಧಿವೇಶನದಲ್ಲಿ 224 ಪ್ರತಿನಿಧಿಗಳ ಪ್ರಮಾಣ ವಚನ 

top videos


  ವಿಧಾನಸಭೆ ಅಧಿಕಾರಿಗಳ ಪ್ರಕಾರ, ಈ ಮೂರು ದಿನಗಳ ಅಧಿವೇಶನದಲ್ಲಿ ಹೊಸದಾಗಿ ಚುನಾಯಿತರಾದ ಎಲ್ಲಾ 224 ಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಅಧಿವೇಶನದ ಎರಡನೇ ದಿನ ಯು. ಟಿ. ಖಾದರ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ.

  First published: