ಅವಿಭಕ್ತ ಕುಟುಂಬದ ಆಸ್ತಿ ವಿವರ ಕೊಟ್ಟಿದ್ದೆ: ಎಡಿಆರ್ ವರದಿ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ


Updated:February 13, 2018, 4:36 PM IST
ಅವಿಭಕ್ತ ಕುಟುಂಬದ ಆಸ್ತಿ ವಿವರ ಕೊಟ್ಟಿದ್ದೆ: ಎಡಿಆರ್ ವರದಿ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

Updated: February 13, 2018, 4:36 PM IST
ಹರೀಶ್ ಕಾಕೋಳು, ನ್ಯೂಸ್ 18 ಕನ್ನಡ

ಕಲ್ಬುರ್ಗಿ(ಫೆ.13): ಎಡಿಆರ್ ಸರ್ವೆಯಲ್ಲಿ ಸಿಎಂ ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತ ಮುಖ್ಯಮಂತ್ರಿ ಎಂದು ವರದಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನಾನೇ ನಮ್ಮ ಮನೆಯ ಯಜಮಾನ, ಕಳೆದ ಚುನಾವಣೆಯಲ್ಲಿ ಅವಿಭಕ್ತ ಕುಟುಂಬದ ಒಟ್ಟು ಆಸ್ತಿಯನ್ನು ಘೋಷಿಸಿದ್ದೆ. ಅಣ್ಣ, ತಮ್ಮಂದಿರ ಎಲ್ಲ ಅಸ್ತಿಯನ್ನ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದ್ದೆ. ಹೀಗಾಗಿ, ಹೆಚ್ಚು ಆಸ್ತಿ ಇರುವುದಾಗಿ ಕಂಡುಬಂದಿದೆ. ಈಗ ಕುಟುಂಬದ ಆಸ್ತಿಯನ್ನ ವಿಭಜಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದೇ ಸಂದರ್ಭ ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಟಾರ್ಗೆಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಆಸ್ತಿ ಎಷ್ಟಿದೆ ಎಂಬುದನ್ನ ಹೇಳಲಿ ಎಂದು ಒತ್ತಾಯಿಸಿದ್ಧಾರೆ. ರಾಹುಲ್ ಗಾಂಧಿ ಜವಾರಿ ಕೋಳಿ ತಿಂದು ನರಸಿಂಹಸ್ವಾಮಿ ದೇಗುಲಕ್ಕೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಬುದ್ಧಿ ಇಲ್ಲದೆ ಮಾತನಾಡುತ್ತಾರೆ. ವೆಜ್ ತಿನ್ನಬೇಕೋ ನಾನ್ ವೆಜ್ ತಿನ್ನಬೇಕೋ ಅನ್ನೋದು ಅವರ ಹ್ಯಾಬಿಟ್. ರಾಹುಲ್ ಗಾಂಧಿ ಮಾಂಸ ತಿಂದಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಅದು ಅವರಿಗೆ ಬಿಟ್ಟ ವಿಚಾರ. ಆದರೆ, ಅವರೇ ತಿಂದಿಲ್ಲ ಎಂದು ಹೇಳಿರುವಾಗ ವಿವಾದವೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ಸಂದರ್ಭ, ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಮೋದಿ ನೂರು ಸಾರಿ ಬರಲಿ, ನಮಗೇನೂ ತೊಂದರೆ ಇಲ್ಲ. ಅವರದ್ದು ಒಂದು ರಾಜಕೀಯ ಪಾರ್ಟಿ, ಬರ್ತಾರೆ ಹೋಗುತ್ತಾರೆ. 10 ಪರ್ಸೆಂಟ್ ಸರ್ಕಾರ ಎಂದು ಟೀಕಿಸುವ ನರೇಂದ್ರಮೋದಿ ದಾಖಲೆಗಳಿದ್ದರೆ ಬಿಡುಗಡೆಯಾಗಲಿ ಎಂದು ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿ ಸೆಕೆಂಡ್ ರೌಂಡ್ ಪ್ರವಾಸ ಮುಂಬೈ-ಕರ್ನಾಟಕದಲ್ಲಿ ನಡೆಯಲಿದೆ. ಫೆಬ್ರವರಿ ೨೪, ೨೫,೨೬ ರಂದು ಪ್ರವಾಸ ಕೈಗೊಳುತ್ತಾರೆ. ರಾಹುಲ್ ಪ್ರವಾಸದಿಂದ ನಮಗೆ ಲಾಭ ಆಗುತ್ತೆ. ಅವರು ಅಧ್ಯಕ್ಷರಾದ ಮೇಲೆ ಗುಜರಾತ್ ಚುನಾವಣೆಯಲ್ಲಿ ನಮಗೆ ಬಲ ಬಂದಿದೆ ಎಂದು ಅವರು ತಿಳಿಸಿದ್ದಾರೆ.

 
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ