ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸುಲಭವಾಗಿ 135 ಸ್ಥಾನಗಳನ್ನೇನೋ ಗೆದ್ದು ಬೀಗಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್‌ಗೆ (Congress high command) ನಿಜವಾದ ಚಾಲೆಂಜ್ ಇದೀಗ ಶುರುವಾಗಿದೆ. ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ (DK Shivakumar) ಪಟ್ಟು ಹಿಡಿದಿದ್ದಾರೆ. ಪರಿಣಾಮ ಹೈಕಮಾಂಡ್‌ಗೆ ಭಾರೀ ಟೆನ್ಶನ್ ಶುರುವಾಗಿದೆ. ಇಂದು ಬೆಂಗಳೂರಿನ (Bengaluru) ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ (legislative party meeting) ನಡೆಯಿತು. ಆದರೆ ಕೇವಲ ಶಾಸಕರ ಅಭಿಪ್ರಾಯ ಸಂಗ್ರಹಿಸಿರುವ ಕೇಂದ್ರದ ವೀಕ್ಷಕರು ಅಂತಿಮ ತೀರ್ಮಾವನ್ನು ಹೈಕಮಾಂಡ್‌ಗೆ ಬಿಟ್ಟಿದ್ದಾರೆ. ಹೀಗಾಗಿ ಕರ್ನಾಟಕ ಸಿಎಂ (Karnataka CM) ಆಯ್ಕೆಯ ಚೆಂಡು ದೆಹಲಿ (Delhi) ಅಂಗಳ ತಲುಪಿದೆ. ಇದೀಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರಿಗೂ ರಾಹುಲ್ ಗಾಂಧಿ (Rahul Gandhi) ಹಾಗೂ ಸೋನಿಯಾ ಗಾಂಧಿ (Sonia Gandhi) ಬುಲಾವ್ ಕಳುಹಿಸಿದ್ದಾರೆ. ಹೀಗಾಗಿ ಕರ್ನಾಟಕ ಸಿಎಂ ಆಯ್ಕೆ ದೆಹಲಿಯಲ್ಲೇ ನಡೆಯುವುದು ಪಕ್ಕಾ ಆಗಿದೆ.
ಖಾಸಗಿ ಹೋಟೆಲ್‌ನಲ್ಲಿ ಸಿಎಲ್‌ಪಿ ಮೀಟಿಂಗ್
ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೀಟಿಂಗ್ ನಡೆಯಿತು. ಈ ವೇಳೆ ರಂದೀಪ್ ಸುರ್ವೇವಾಲ ಜೊತೆಗೆ ಕೇಂದ್ರದಿಂದ ವೀಕ್ಷಕರು ಬಂದಿದ್ದರು. ಈ ವೇಳೆ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಯ್ತು. ಡಿನ್ನರ್ ಬಳಿಕ ಪ್ರತ್ಯೇಕವಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಯ್ತು.
ಸಿದ್ದರಾಮಯ್ಯ ಹಾಗೂ ಬೆಂಬಲಿಗರು ಇಂದೇ ಘೋಷಿಸುವಂತೆ ಪಟ್ಟು ಹಿಡಿದರು. ಅಂತಿಮವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷರ ನಿರ್ಧಾರಕ್ಕೆ ಬಿಡಲು ಕಾಂಗ್ರೆಸ್ ಶಾಸಕಾಂಗ ಪಕ್ಷವು ಸರ್ವಾನುಮತದಿಂದ ನಿರ್ಧರಿಸಲಾಯ್ತು.
ದೆಹಲಿಯಲ್ಲಿ ಕರ್ನಾಟಕ ಸಿಎಂ ಆಯ್ಕೆ
ಇನ್ನು ಅಭಿಪ್ರಾಯ ಸಂಗ್ರಹಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಕಳಿಸಲಾಗುತ್ತದೆ. ನಾಳೆ ಹೈಕಮಾಂಡ್ ಅಂಗಳದಲ್ಲಿ ಕರ್ನಾಟಕ ಸಿಎಂ ಯಾರಾಗುತ್ತಾರೆ ಎಂಬ ಬಗ್ಗೆ ಘೋಷಿಸುವ ಸಾಧ್ಯತೆ ಇದೆ. ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರಿಗೂ ದೆಹಲಿಗೆ ಬರುವಂತೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ.
ಸಿದ್ದು-ಡಿಕೆಶಿ ಅಭಿಮಾನಿಗಳಿಂದ ‘ಸಿಎಂ’ ಘೋಷಣೆ
ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿರುವ ಖಾಸಗಿ ಹೋಟೆಲ್ ಹೊರಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬೆಂಬಲಿಗರು ತಮ್ಮ ನಾಯಕರ ಪರ ಘೋಷಣೆಗಳನ್ನು ಕೂಗಿದ್ದಾರೆ. ಡಿಕೆಶಿ ಪರ ಅಭಿಮಾನಿಗಳು ಡಿಕೆ ಡಿಕೆ ಎಂದು ಕೂಗಿದರೆ, ಸಿದ್ದರಾಮಯ್ಯರ ಅಭಿಮಾನಿಗಳು ಸಿದ್ದು ಸಿದ್ದು ಎಂದು ಘೋಷಣೆ ಕೂಗುತ್ತಿದ್ದರು.
ಇದನ್ನೂ ಓದಿ: Congress ಗೆಲುವಿಗೆ ಕಾರಣ ಸಿದ್ದು-ಡಿಕೆಶಿಯೂ ಅಲ್ಲ, ರಾಹುಲ್-ಖರ್ಗೆಯೂ ಅಲ್ಲ! ರಣತಂತ್ರದ ಹಿಂದಿರೋದು ಇವರೇ!
‘ಕಳಂಕ ಹೊತ್ತವರು ಸಿಎಂ ಆಗಬಾರದು!’
ಡಿಕೆ ಶಿವಕುಮಾರ್ ಪರ ಒಕ್ಕಲಿಗ ಸಮುದಾಯದ ಶ್ರೀಗಳು ಬ್ಯಾಟಿಂಗ್ ಮಾಡುತ್ತಿದ್ದಂತೆ ಇತ್ತ ಸಿದ್ದರಾಮಯ್ಯ ಪರ ಕುರುಬ ಸಮಾಜದ ಶ್ರೀಗಳು ಬ್ಯಾಟಿಂಗ್ ನಡೆಸಿದ್ದಾರೆ. ಸಿದ್ದರಾಮಯ್ಯ ಅವರನ್ನ ಸಿಎಂ ಮಾಡುವಂತೆ ತಿಂಥಣಿ ಕಾಗಿನೆಲೆ ಶಾಖಾ ಮಠ ಶ್ರೀಗಳು ಒತ್ತಾಯ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ