• Home
 • »
 • News
 • »
 • state
 • »
 • ಕರ್ನಾಟಕದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಸಿಎಂ ಪಟ್ಟ? ಬಿಎಸ್​ವೈ ಉತ್ತರಾಧಿಕಾರಿಯಾಗಿ ಜೋಷಿ!

ಕರ್ನಾಟಕದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಸಿಎಂ ಪಟ್ಟ? ಬಿಎಸ್​ವೈ ಉತ್ತರಾಧಿಕಾರಿಯಾಗಿ ಜೋಷಿ!

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಜೋಶಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕರ್ನಾಟಕದ ಇತರೇ ಪಕ್ಷದ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಮಾಜಿ ಕಾಂಗ್ರೆಸ್ ಸಂಸದ ಪ್ರೊಫೆಸರ್ ಐ.ಜಿ.ಸನದಿ ಮಾತನಾಡಿ, ಜೋಶಿ ಅವರು ದಿವಂಗತ ಅನಂತ್ ಕುಮಾರ್ ಅವರ ಗರಡಿಯಲ್ಲಿ ಪಳಗಿದವರು, ಅಲ್ಲದೇ ಪ್ರಧಾನಮಂತ್ರಿ ಮೋದಿ ಅವರಿಗೆ ಇವರನ್ನು ಕಂಡರೆ ಅಚ್ಚು-ಮೆಚ್ಚು, ಬಿಜೆಪಿ ಅತ್ಯಂತ ನಿಷ್ಟಾವಂತ ಕಾರ್ಯಕರ್ತ.

ಮುಂದೆ ಓದಿ ...
 • Share this:

  ಸೋಮವಾರ ರಾಜೀನಾಮೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉತ್ತರಾಧಿಕಾರಿನ್ನಾಗಿ ಯಾರನ್ನು ಮಾಡಬಹುದು ಎನ್ನುವ ವಿಚಾರದ ಕುರಿತು, ಬಿಜೆಪಿ ಹೈಕಮಾಂಡ್​ಗೆ ಇನ್ನೂ ಗೊಂದಲವಿದ್ದು ಯಾರನ್ನು ಪಟ್ಟಕ್ಕೆ ಕೂರಿಸಲಿದ್ದಾರೆ ಎನ್ನುವುದು ಮಾತ್ರ ಚಿದಂಬರ ರಹಸ್ಯವಾಗಿ ಉಳಿಸಿದೆ. ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿರುವ ಬಿಜೆಪಿ ಹೈಕಮಾಂಡ್​ ಕೊನೆಯ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಬಹುದು ಎಂದು ಹೇಳಲಾಗುತ್ತಿದೆ.


  ಹಲವಾರು ಹೆಸರುಗಳು ಗಿರಕಿ ಹೊಡೆಯುತ್ತಿದ್ದರೂ, ಸಿಎಂ ರೇಸ್​ನಲ್ಲಿ ಇಬ್ಬರು ಹೆಸರುಗಳು ಮುಂಚೂಣಿಯಲ್ಲಿವೆ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.


  1988 ರ ನಂತರ ಕರ್ನಾಟಕದಲ್ಲಿ ಬ್ರಾಹ್ಮಣ ಸಮುದಾಯದವರು ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿಲ್ಲ ಆದ ಕಾರಣ ಜೋಶಿಯವರನ್ನು ಸಿಎಂ ಮಾಡಬಹುದು ಎನ್ನುವ ಮಾತುಸಹ ಇದೆ, ಆದರೆ ಒಕ್ಕಲಿಗ ಸಮುದಾಯದ ಸಿ.ಟಿ. ರವಿ ಅವರ ನೇಮಕದಿಂದ ಪಕ್ಷವು ದಕ್ಷಿಣ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಕಷ್ಟು ಕೊಡುಗೆಯಾಗುತ್ತದೆ ಎನ್ನುವ ಅಭಿಪ್ರಾಯವೂ ಸಹ ಬಿಜೆಪಿ ಕೇಂದ್ರ ನಾಯಕರಲ್ಲಿ ಇದೆ ಎಂದು ಹೇಳಲಾಗುತ್ತಿದೆ.


  ಲಿಂಗಾಯತ ಸಮುದಾಯದ ಬಲಿಷ್ಠ ನಾಯಕ ಯಡಿಯೂರಪ್ಪ ಅವರನ್ನು ಈಗಾಗಲೇ ಕೆಳಗೆ ಇಳಿಸಲಾಗಿದೆ. ಈ ಮೂಲಕ ಬಿಜೆಪಿ ಒಂದಷ್ಟು ಗೇಮ್​ ಪ್ಲಾನ್​ ಮಾಡಿಕೊಂಡೆ ಆಟಕ್ಕೆ ಇಳಿದಂತೆ ಕಾಣುತ್ತಿದೆ. ಲಿಂಗಾಯಿತರ ಬದಲಾಗಿ ಲಿಂಗಾಯಿತರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕು ಎನ್ನುವ ಮಾತುಗಳು ಪಕ್ಷದ ಒಳಗಿಂದ ಕೇಳಿ ಬರುತ್ತಿದ್ದರೂ ಸಹ ಮತ್ತೆ ಅದೇ ಸಮುದಾಯದ ಮುಖ್ಯಮಂತ್ರಿಯನ್ನು ಪಟ್ಟಕ್ಕೆ ಕೂರಿಸುವುದನ್ನು ಹೈಕಮಾಂಡ್​​ ಅಷ್ಟಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಹಾಗೂ ಈ ಸಾಧ್ಯತೆ ಕಿರಿದಾಗಿದೆ ಎಂದು ಹೇಳಬಹುದು.


  ಈ ಬದಲಾವಣೆಯ ಬಗ್ಗೆ ಯಾರೂ ಕೂಡ ನನ್ನ ಬಳಿ ಮಾತನಾಡಲಿಲ್ಲ ಮತ್ತು ಬಿಎಸ್ ಯಡಿಯೂರಪ್ಪ ಅವರ ಬಳಿ ಹೈಕಮಾಂಡ್​ ರಾಜೀನಾಮೆ ಕೆಳಿದೆಯೋ ಇಲ್ಲವೋ ಅದು ಸಹ ನನಗೆ ಗೊತ್ತೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಶನಿವಾರ ಹೇಳಿದ್ದರು. ಈ ರೀತಿಯ ಮಾಧ್ಯಮ ಸೃಷ್ಟಿಸಿರುವ ಊಪಾಪೋಹ ಮತ್ತು ಕಾಲ್ಪನಿಕ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ಒತ್ತಿ ಜೋಶಿ ಒತ್ತಿ ಹೇಳಿದ್ದರು, “ಬಿಜೆಪಿಯಲ್ಲಿ ಯಾವುದೇ ಹೈಕಮಾಂಡ್​ ಸಂಸ್ಕೃತಿ ಅನ್ನುವುದು ಇಲ್ಲ ಆದರೆ ರಾಷ್ಟ್ರೀಯ ನಾಯಕತ್ವವಿದೆ. ನಾವು ಕಾಲಕಾಲಕ್ಕೆ ವಿಭಿನ್ನ ನಾಯಕತ್ವವನ್ನು ನಮ್ಮ ಪಕ್ಷದ ಒಳಗೆ ನೋಡಿದ್ದೇವೆ. ರಾಜನಾಥ್ ಸಿಂಗ್ ಇದ್ದರು, ನಂತರ ನಿತಿನ್ ಗಡ್ಕರಿ ಬಂದರು, ಅವರ ನಂತರ ಅಮಿತ್ ಶಾ ಮತ್ತು ಈಗ ಜೆ ಪಿ ನಡ್ಡಾ ಇದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ನಮ್ಮಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಸರ್ವೋಚ್ಚ ನಾಯಕರು ಇದ್ದಾರೆ. ಅವರು ಎಲ್ಲವನ್ನು ನಿರ್ಧರಿಸುತ್ತಾರೆ. "


  ಜೋಶಿ 2004 ರಿಂದ  ಧಾರವಾಡದ ಸಂಸದರಾಗಿದ್ದಾರೆ. ಜುಲೈ 2012 ರಿಂದ ಜನವರಿ 2016 ರವರೆಗೆ ಅವರು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.


  ಜೋಶಿ ಅವರನ್ನೇನಾದರೂ ಮುಖ್ಯಮಂತ್ರಿ ಎಂದು ಘೋಷಿಸಿದರೆ, ಎಸ್.ಆರ್. ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ನಂತರ ಹುಬ್ಬಳ್ಳಿ ಭಾಗದ ಮೂರನೇ ರಾಜಕಾರಣಿ ಇವರಾಗಲಿದ್ದಾರೆ.


  ಬಿಜೆಪಿ ಮುಖಂಡ ಉಮೇಶ್ ದುಶಿ ಅವರು ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಹೇಳಿಕೆಯಂತೆ,  ಈ ಕ್ಷೇತ್ರದಲ್ಲಿ ಸುಮಾರು 85,000 ಮತಗಳು ಜೋಶಿಯವರ ಸಮುದಾಯದ್ದೇ, ಆದರೆ ಅವರ ಗೆಲುವಿನ ಅಂತರವು 2019 ರ ಚುನಾವಣೆಯಲ್ಲಿ 2 ಲಕ್ಷಕ್ಕಿಂತ ಹೆಚ್ಚಾಗಿದೆ. ಅಂದರೆ ಇವರು ಕೇವಲ ಬ್ರಾಹ್ಮಣ ಮತಗಳನ್ನು ಮಾತ್ರ ನಂಬಿಕೊಂಡಿಲ್ಲ ಎನ್ನುವುದು ಲೆಕ್ಕಾಚಾರ. ನಮ್ಮ ಜೋಶಿಯವರನ್ನು ಸಿಎಂ ಆಗಿ ನೇಮಕ ಮಾಡಲಾಗುತ್ತದೆಯೇ ಎಂಬುದು ಪಕ್ಷದ ಸ್ಥಳೀಯ ಘಟಕಕ್ಕೆ ಇನ್ನೂ ತಿಳಿದಿಲ್ಲ ಎಂದು ಅವರು ಹೇಳಿದರು.


  ಇದನ್ನೂ ಓದಿ: Mirabai Chanu: ಒಲಿಂಪಿಕ್ಸ್​​ನಲ್ಲಿ ಬೆಳ್ಳಿ ಗೆದ್ದಿರುವ ಮೀರಾಬಾಯಿ ಚಾನುಗೆ ಚಿನ್ನದ ಪದಕ ಸಿಗುವ ಸಾಧ್ಯತೆ.. ರೋಚಕ ಟ್ವಿಸ್ಟ್​​​


  ಜೋಶಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕರ್ನಾಟಕದ ಇತರೇ ಪಕ್ಷದ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಮಾಜಿ ಕಾಂಗ್ರೆಸ್ ಸಂಸದ ಪ್ರೊಫೆಸರ್ ಐ.ಜಿ.ಸನದಿ ಮಾತನಾಡಿ, ಜೋಶಿ ಅವರು ದಿವಂಗತ ಅನಂತ್ ಕುಮಾರ್ ಅವರ ಗರಡಿಯಲ್ಲಿ ಪಳಗಿದವರು, ಅಲ್ಲದೇ ಪ್ರಧಾನಮಂತ್ರಿ ಮೋದಿ ಅವರಿಗೆ ಇವರನ್ನು ಕಂಡರೆ ಅಚ್ಚು-ಮೆಚ್ಚು, ಬಿಜೆಪಿ ಅತ್ಯಂತ ನಿಷ್ಟಾವಂತ ಕಾರ್ಯಕರ್ತ ಹಾಗೂ ತಮ್ಮ ಬದ್ದತೆ ಮತ್ತು ತ್ಯಾಗದಿಂದ ಪಕ್ಷದಲ್ಲಿ ಒಳ್ಳೆಯ ಹೆಸರು ಮಾಡಿರುವ ಜೋಷಿ ಅವರನ್ನೇ ಹೈಕಮಾಂಡ್​ ಮುಖ್ಯಮಂತ್ರಿ ಮಾಡುತ್ತದೆಯೇ?


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: