ಬೆಂಗಳೂರು: ಯಾರಾಗ್ತಾರೆ ಕರ್ನಾಟಕದ ಸಿಎಂ (Karnataka Next CM) ಎಂಬ ಪ್ರಶ್ನೆಗೆ ಕಾಂಗ್ರೆಸ್ (Congress) ಉತ್ತರ ಹುಡುಕುತ್ತಿದೆ. ಈಗಾಗಲೇ ದೆಹಲಿ ತಲುಪಿರುವ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ತಮ್ಮ ಬೆಂಬಲಿಗರ ಸಂಖ್ಯೆಯನ್ನು ಹೈಕಮಾಂಡ್ ಮುಂದೆ ಇರಿಸಿದ್ದಾರಂತೆ. ಇತ್ತ ಮತ್ತೋರ್ವ ಸ್ಪರ್ಧಿಯಾಗಿರುವ ಡಿಕೆ ಶಿವಕುಮಾರ್ (DK Shivakumar) ಅನಾರೋಗ್ಯ ಹಿನ್ನೆಲೆ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾರೆ. ಆದ್ರೆ ಡಿಕೆ ಶಿವಕುಮಾರ್ ಸೋದರ, ಸಂಸದ ಡಿಕೆ ಸುರೇಶ್ (DK Suresh) ದೆಹಲಿಯಲ್ಲಿದ್ದು, ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಜೊತೆ ಸಿಎಂ ಆಯ್ಕೆ ಬಗ್ಗೆ ಚರ್ಚೆ ನಡೆಸಿದ್ದು, ಪಕ್ಷ ಉಳಿಯಬೇಕು, ಬೆಳೆಯಬೇಕು ಅಂದ್ರೆ ಡಿಕೆಶಿ ಸಿಎಂ ಮಾಡಿ ಎಂದು ಒತ್ತಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ದೆಹಲಿಗೆ ಬಂದ ಬಳಿಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಜೊತೆಯಾಗಿ ಕೂರಿಸಿಕೊಂಡು ಸಭೆ ನಡೆಸಿ ಸಂಜೆ ವೇಳೆಗೆ ಸಿಎಂ ಹೆಸರನ್ನು ಮಲ್ಲಿಕಾರ್ಜುನ ಖರ್ಗೆ ಅವರೇ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಇನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಡಿಕೆ ಶಿವಕುಮಾರ್ ಭೇಟಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಎಂ ಆಯ್ಕೆ ಸಭೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗುವ ಸಾಧ್ಯತೆಗಳಿವೆ.
ಇನ್ನು ಸಿಎಂ ಆಯ್ಕೆಯ ಪ್ರಕ್ರಿಯೆಗೆ ಡಿಕೆ ಶಿವಕುಮಾರ್ ಟ್ವಿಸ್ಟ್ ನೀಡಿದ್ದಾರೆ. ಸಿದ್ದರಾಮಯ್ಯ ಹೆಸರು ಅಂತಿಮವಾಗಿಲ್ಲ. ಎಲ್ಲಾ ಕಡೆಯೂ ರೂಮರ್ಸ್ ಹಬ್ಬಿಸಲಾಗಿದೆ ಎಂದು ಹೇಳುವ ಮೂಲಕ ತಾವು ಕಣದಿಂದ ಹಿಂದೆ ಸರಿದಿಲ್ಲ ಎಂಬ ಸಂದೇಶವನ್ನುಡ ಡಿಕೆ ಶಿವಕುಮಾರ್ ರವಾನಿಸಿದ್ದಾರೆ.
ಇದನ್ನೂ ಓದಿ: Bhavani Revanna: ಎಲೆಕ್ಷನ್ ಮುಗಿದ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದ ಭವಾನಿ ರೇವಣ್ಣ
ಎಲ್ಲ ಕಡೆ ಗಾಸಿಪ್ ಹಬ್ಬಿದೆ. ಜನರು, ಮಾಧ್ಯಮಗಳು ಗಾಸಿಪ್ ಹಬ್ಬಿಸಿದ್ದಾರೆ. ಬೇರೆ ಪಕ್ಷಗಳು ಕೂಡ ಗಾಸಿಪ್ ಹಬ್ಬಿಸಿವೆ. ಇವೆಲ್ಲಾ ಗಾಸಿಪ್ಗಳ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಇನ್ನೂ ಮುಖ್ಯಮಂತ್ರಿ ಆಯ್ಕೆಯಾಗಿಲ್ಲ ಎಂದಿದ್ದಾರೆ ಡಿಕೆ ಶಿವಕುಮಾರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ