ಬರ ಪರಿಹಾರ ಅನುದಾನ ಬಿಡುಗಡೆಯಲ್ಲಿ ಕೇಂದ್ರ ಸರ್ಕಾರದಿಂದ ತಾರತಮ್ಯ; ಸಿಎಂ ಆರೋಪ

ಮಹಾರಾಷ್ಟ್ರದ ಮತದಾರರ ಓಲೈಕೆ ಮಾಡಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಅಗತ್ಯಬಿದ್ದರೆ ಮತ್ತೊಮ್ಮೆ ಪ್ರಧಾನಿ ಬಳಿ ನಿಯೋಗ  ಹೋಗಿ ಅವರ ಗಮನ ಸೆಳೆಯುತ್ತೇವೆ. ಅನ್ಯಾಯ ಸರಿಪಡಿಸಲು ಕೋರುತ್ತೇವೆ

ಸಿಎಂ ಕುಮಾರಸ್ವಾಮಿ

ಸಿಎಂ ಕುಮಾರಸ್ವಾಮಿ

  • News18
  • Last Updated :
  • Share this:
ಕೃಷ್ಣ ಜಿ.ವಿ 

ಬೆಂಗಳೂರು (ಜ.30): ರಾಜ್ಯದ ಬರ ಪರಿಸ್ಥಿತಿ ಕುರಿತು ಕೇಂದ್ರಕ್ಕೆ ಮನದಟ್ಟು ಮಾಡಿಕೊಟ್ಟರು, ಬರ ಪರಿಹಾರ ಅನುದಾನ ಬಿಡುಗಡೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ತರತಾಮ್ಯ ಮಾಡಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ಭಾಗಗಳಲ್ಲಿ ಜನರು ಬರದಿಂದ ತತ್ತರಿಸಿದ್ದಾರೆ. ರಾಜ್ಯದ ಬರ ಪರಿಸ್ಥಿತಿ ಅವಲೋಕಿಸಿ ಕೇಂದ್ರಕ್ಕೆ ನಿಯೋಗ ಕಳುಹಿಸಲಾಗಿತು. ಇಲ್ಲಿನ ಪರಿಸ್ಥಿತಿಯನ್ನು ಅವರಿಗೆ ತಿಳಿಸುವ ಕಾರ್ಯ ಕೂಡ ನಡೆದಿದೆ. ಆದರೆ, ಕೇಂದ್ರ ಮಾತ್ರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದೆ. ಕೇಂದ್ರದ ಈ ಕ್ರಮ ನೋವುಂಟು ಮಾಡಿದೆ  ಎಂದರು.

ರಾಜ್ಯಕ್ಕಿಂತ ಪಕ್ಕದ ಮಹಾರಾಷ್ಟ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯಕ್ಕೆ 949 ಕೋಟಿ ಹಾಗು ಮಹಾರಾಷ್ಟ್ರಕ್ಕೆ 4750 ಕೋಟಿ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದ ಮತದಾರರ ಓಲೈಕೆ ಮಾಡಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಅಗತ್ಯಬಿದ್ದರೆ ಮತ್ತೊಮ್ಮೆ ಪ್ರಧಾನಿ ಬಳಿ ನಿಯೋಗ  ಹೋಗಿ ಅವರ ಗಮನ ಸೆಳೆಯುತ್ತೇವೆ. ಅನ್ಯಾಯ ಸರಿಪಡಿಸಲು ಕೋರುತ್ತೇವೆ ಎಂದರು.

ಕರ್ನಾಟದ ಬರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರ ಅಕ್ಟೋಬರ್​ನಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಿತು. ಈ ಹಿನ್ನಲೆಯಲ್ಲಿ ರಾಜ್ಯಕ್ಕೆ ಆಗಮಿಸಿದ ಕೇಂದ್ರ ಸರ್ಕಾರದ 10 ಹಿರಿಯ ಅಧಿಕಾರಿಗಳು ಮೂರು ತಂಡ ರಾಜ್ಯದಲ್ಲಿ ಬರ ಅಧ್ಯಯನ ನಡೆಸಿತು.

ಇದನ್ನು ಓದಿ: ಅರಮನೆ ಮೈದಾನದಲ್ಲಿಂದು ಜೆಡಿಎಸ್​ ಕಾರ್ಯಕಾರಿಣಿ ಸಭೆ; ಲೋಕಸಭಾ ಚುನಾವಣೆ ಸಿದ್ಧತೆ ಚರ್ಚೆ

ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅಮಿತಾಬ್​ ಗೌತಬ್​ ನೇತೃತ್ವದ ತಂಡ ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿದರೆ, ಡಾ ,ಹೇಶ್​ ನೇತೃತ್ವದ ತಂಡ ಧಾರವಾಡ ,ಬೆಳಗಾವಿ, ಬಾಗಲಕೋಟೆಜಿಲ್ಲೆಗಳಲ್ಲ ಹಾಗೂ ,ಮಾನಸ್​ ಚೌಧರಿ ನೇತೃತವದ ತಂಡ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲ ಬರ ಅಧ್ಯಯನ ನಡೆಸಿತು. ಬಳಿಕ ಬೆಂಗಳೂರಿನಲ್ಲಿ ಸಭೆ ನಡೆಸಿ ಕೇಂದ್ರಕ್ಕೆಸಮಗ್ರ ವರದಿ ನೀಡಿತು.

ಸಂಪೂರ್ಣ ಮದ್ಯ ನಿಷೇಧ ಅಸಾಧ್ಯ:

ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರ ವಿಧಾನಸೌಧ ಮುತ್ತಿಗೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸಂಪೂರ್ಣ ಮಧ್ಯ ನಿಷೇಧ ಸಾಧ್ಯವಿಲ್ಲ. ರಾಜ್ಯಕ್ಕೆ ಅತಿ ಹೆಚ್ಚು ಆದಾಯದ ಮೂಲವಾಗಿದೆ. ಅಬಕಾರಿಯನ್ನು ಏಕಾಏಕಿ ನಿಷೇಧಿಸಲು ಸಾಧ್ಯವಿಲ್ಲ ಎಂದರು.

ಈ ಹಿಂದೆ ನಾನು ಸಿಎಂ ಆಗಿದ್ದಾಗ ಸಾರಾಯಿ ನಿಷೇಧ ಮಾಡಿದ್ದೆ. ಈಗ ಏಕಾಏಕಿ ಮದ್ಯ ನಿಷೇಧ ಮಾಡಲು ಸಾಧ್ಯ ಇಲ್ಲ. ಈ ಬಗ್ಗೆ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಬೇಕಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.

First published: