Siddaramaiah: ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಸಿದ್ದು ಪೋಸ್ಟರ್‌ಗೆ​​​ ಮಸಿ!

ಸಿದ್ದರಾಮಯ್ಯ ಪೋಸ್ಟರ್​ಗೆ ಮಸಿ

ಸಿದ್ದರಾಮಯ್ಯ ಪೋಸ್ಟರ್​ಗೆ ಮಸಿ

ರಾಜಧಾನಿಯ ಫ್ರೀಡಂ ಪಾರ್ಕ್ ರಸ್ತೆಯಲ್ಲಿ ಹಾಕಿದ್ದ ಪೋಸ್ಟರ್​​ಗಳಲ್ಲಿ ಇಂಗ್ಲಿಷ್ ಮಾತ್ರ ಬಳಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ಮಂಜು ಕನ್ನಡಿಗ ಎಂಬಾತ ಪೋಸ್ಟರ್ ಹಾರಿದು ಹಾಕಿದ್ದಾರೆ ಎನ್ನಲಾಗಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಮೇ 19ರ ಶನಿವಾರ ಮಧ್ಯಾಹ್ನ 12:30ಕ್ಕೆ ಸಿದ್ದರಾಮಯ್ಯ (Siddaramaiah), ಡಿ.ಕೆ.ಶಿವಕುಮಾರ್ (DK Shivakumar)​​​ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಶನಿವಾರದ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್​ನ (Congress) ಘಟಾನುಘಟಿಗಳು ಆಗಮಿಸಲಿದ್ದಾರೆ. ಈ ನಡುವೆ ಸಿಎಂ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ (Oath Taking Ceremony) ಬರದ ಸಿದ್ಧತೆ ನಡೆಸಲಾಗಿದೆ. ರಾಜಧಾನಿ ಬೆಂಗಳೂರಿನ (Bengaluru) ಪ್ರಮುಖ ರಸ್ತೆಗಳಲ್ಲಿ ನೂತನ ಸಿಎಂಗೆ ಶುಭ ಕೋರಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಈ ನಡುವೆಯೇ ಸಿದ್ದರಾಮಯ್ಯ ಅವರ ಪೋಸ್ಟರ್​ಗೆ ಮಸಿ ಹಾಕಿದ್ದು, ಬ್ಯಾನರ್ ಹರಿದಿರುವ ಘಟನೆ ಫ್ರೀಡಂ ಪಾರ್ಕ್ ರಸ್ತೆಯಲ್ಲಿ ನಡೆದಿದೆ.


ಪೋಸ್ಟರ್​ನಲ್ಲಿ ಕನ್ನಡ ಬಳಸದಾ ಹಿನ್ನೆಲೆ ಮಸಿ!


ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಸಿದ್ದರಾಮಯ್ಯ ಪೋಸ್ಟರ್​​ಗೆ ಮಸಿ ಹಾಕಿದ್ದು, ಯೂಥ್​ ಕಾಂಗ್ರೆಸ್ ಅಧ್ಯಕ್ಷ ನಳಪಾಡ್​ ಶುಭಾಶಯ ಕೋರಿ ಹಾಕಿದ್ದ ಪೋಸ್ಟರ್​​​ ಕನ್ನಡ ಅಭಿಮಾನಿಗಳು ಮಸಿ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪೋಸ್ಟರ್​​ನಲ್ಲಿ ಕನ್ನಡ ಬಳಸದ ಹಿನ್ನೆಲೆಯಲ್ಲಿ ಕನ್ನಡ ಅಭಿಮಾನಿಗಳು ಮಸಿ ಹಾಕಿ, ಪೋಸ್ಟರ್​​ಗಳನ್ನು ಕಿತ್ತೊಗೆದಿದ್ದಾರೆ.




ಇದನ್ನೂ ಓದಿ: DK Shivakumar: ಸಿಎಂ ಇಲ್ಲ ಎಂದರೆ ಏನು ಬೇಡ ಅಂತಿದ್ದ ‘ಬಂಡೆ’ ಕರಗಿದ್ದೇಕೆ? ಹೈಕಮಾಂಡ್ ಮುಂದಿಟ್ಟ ಬೇಡಿಕೆಗಳೇನು?

top videos


    ರಾಜಧಾನಿಯ ಫ್ರೀಡಂ ಪಾರ್ಕ್ ರಸ್ತೆಯಲ್ಲಿ ಹಾಕಿದ್ದ ಪೋಸ್ಟರ್​​ಗಳಲ್ಲಿ ಇಂಗ್ಲಿಷ್ ಮಾತ್ರ ಬಳಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ಮಂಜು ಕನ್ನಡಿಗ ಎಂಬಾತ ಪೋಸ್ಟರ್ ಹಾರಿದು ಹಾಕಿದ್ದಾರೆ ಎನ್ನಲಾಗಿದೆ. ಇತ್ತ ಘಟನೆ ಬೆನ್ನಲ್ಲೇ ಪೋಸ್ಟರ್​ಗೆ ಮಸಿ ಬೆಳೆದ ವ್ಯಕ್ತಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಆಕ್ರೋಶ ಹೊರ ಹಾಕಿರುವ ವ್ಯಕ್ತಿ, ಕನ್ನಡವನ್ನೇ ಬಳಕೆ ಮಾಡಿಲ್ಲ ಎಂದು ಪೋಸ್ಟರ್ ಹರಿದು ಮಸಿ ಬಳಿದು ಆಕ್ರೋಶ ಹೊರ ಹಾಕಿದ್ದಾರೆ.

    First published: