ರಾಜ್ಯಪಾಲರು, ಡಿಸಿಎಂ ಸೇರಿ ಹಲವರನ್ನು ಭೇಟಿಯಾಗಿದ್ದ ಸಿಎಂ ಯಡಿಯೂರಪ್ಪ; ಟ್ರಾವೆಲ್ ಹಿಸ್ಟರಿ ಬಗ್ಗೆ ಇಲ್ಲಿದೆ ವಿವರ

CM BS Yediyurappa Travel History: ಕಾರು ಚಾಲಕರು, ಮನೆಯ ಸಿಬ್ಬಂದಿ ಜೊತೆಗೂ ಬಿ.ಎಸ್​. ಯಡಿಯೂರಪ್ಪ ಸಂಪರ್ಕಕ್ಕೆ ಬಂದಿದ್ದಾರೆ. ಈಗ ಅವರನ್ನೂ ಕೂಡ ಕ್ವಾರಂಟೈನ್​ ಮಾಡಲಾಗಿದೆ ಎನ್ನಲಾಗಿದೆ.

news18-kannada
Updated:August 3, 2020, 8:05 AM IST
ರಾಜ್ಯಪಾಲರು, ಡಿಸಿಎಂ ಸೇರಿ ಹಲವರನ್ನು ಭೇಟಿಯಾಗಿದ್ದ ಸಿಎಂ ಯಡಿಯೂರಪ್ಪ; ಟ್ರಾವೆಲ್ ಹಿಸ್ಟರಿ ಬಗ್ಗೆ ಇಲ್ಲಿದೆ ವಿವರ
ಬಿಎಸ್ ಯಡಿಯೂರಪ್ಪ
  • Share this:
ಬೆಂಗಳೂರು (ಆ.3): ಕೊರೋನಾ ವೈರಸ್ ರಾಜ್ಯಕ್ಕೆ ಕಾಲಿಟ್ಟಾಗಿನಿಂದಲೂ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೂ ಕೊರೋನಾ ಅಂಟಿದೆ. ಕಳೆದ ಒಂದು ವಾರದಿಂದ ಯಡಿಯೂರಪ್ಪ ಅವರು ರಾಜ್ಯ ಪಾಲರು, ಗೃಹ ಸಚಿವರನ್ನು ಸೇರಿ ಅನೇಕರನ್ನು ಭೇಟಿಯಾಗಿದ್ದು, ಈಗ ಅವರನ್ನು ಕ್ವಾರಂಟೈನ್​ನಲ್ಲಿಡಲಾಗಿದೆ.

ಕೊರೋನಾ ಪಾಸಿಟಿವ್​ ವರದಿ ಬಂದ ಬಗ್ಗೆ ಭಾನುವಾರ ಬಿಎಸ್​ವೈ ಟ್ವೀಟ್​ ಮಾಡಿದ್ದರು. ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನ ಎಂದು ಹೇಳಿದ್ದರು. ಹೀಗಾಗಿ ಅವರ ಟ್ರಾವೆಲ್​ ಹಿಸ್ಟರಿಯನ್ನು ಪರೀಕ್ಷಿಸಿ ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್​ ಮಾಡಲಾಗಿದೆ.

ಸಿಎಂ ಬಿಎಸ್​ವೈ ಶುಕ್ರವಾರ ರಾಜ್ಯಪಾಲ ವಜುಭಾಯಿ ವಾಲ ಅವರನ್ನು ಭೇಟಿ ಯಾಗಿ ಮಾತುಕತೆ ನಡೆಸಿದ್ದರು. ಅದೇ ದಿನ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್​ ಅವರನ್ನು ಯಡಿಯೂರಪ್ಪ ಭೇಟಿ ಮಾಡಿದ್ದರು.

ಇನ್ನು ಹೆಚ್ ಎಸ್ ಆರ್ ಲೇಔಟ್​​ನಲ್ಲಿ ನಡೆದ ಕಾರ್ಯಕ್ರಮಕ್ಕೂ ಸಿಎಂ ತೆರಳಿದ್ದರು. ಕಿಯೋನಿಕ್ಸ್ ವೇರ್ ಹೌಸಿಂಗ್ , ಇನ್ ಕ್ಯೂಬೇಷನ್ ಮತ್ತು ಸ್ಟಾರ್ಟಪ್ ಸಂಸ್ಥೆಗಳ ಸೌಲಭ್ಯಕ್ಕಾಗಿ ನಿರ್ಮಿಸಲಾದ ನೂತನ ಕಟ್ಟಡವನ್ನು ಅವರು ಉದ್ಘಾಟನೆ ಮಾಡಿದ್ದರು. ಅವರು ಅಂದು ಸಭೆಯನ್ನು ಉದ್ದೇಶಿಸಿ ಭಾಷಣ ಕೂಡ ಮಾಡಿದ್ದರು. ಅಂದು ಆ ಕಾರ್ಯಕ್ರಮಕ್ಕೆ ಕೆಲ ಗಣ್ಯರು ಕೂಡ ಭಾಗವಹಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: BSY - ಅಧಿಕಾರಿಗಳ ಜೊತೆ ಇಂದಿನ ಸಿಎಂ ಸಭೆ ರದ್ದು; ಚಿತ್ರರಂಗದ ಗಣ್ಯರಿಂದ ಸಿಎಂ ಬದಲು ಡಿಸಿಎಂ ಭೇಟಿ

ಶುಕ್ರವಾರ ವರಮಹಾಲಕ್ಷ್​ಮಿ ಪೂಜೆ ಇತ್ತು. ಹೀಗಾಗಿ ಪುತ್ರ ವಿಜಯೇಂದ್ರ ಮನೆಗೆ ಭೇಟಿ ನೀಡಿ, ಹಬ್ಬದ ಊಟ ಸವಿದು ಬಂದಿದ್ದರು. ಸಂಜೆ ಕಸ್ತೂರಿ ರಂಗನ್ ಅವರನ್ನು ಭೇಟಿ ಮಾಡಿದ್ದರು. ಶನಿವಾರ ಬಕ್ರೀದ್ ಇದ್ದ ಕಾರಣ ಸಿಎಂ ಅಂದು ಮನೆಯಲ್ಲೇ ಉಳಿದುಕೊಂಡಿದ್ದರು. ಇನ್ನು ಭಾನುವಾರ ರಜೆ. ಹೀಗಾಗಿ ಅಂದು ಸಿಎಂ ಮನೆಯಲ್ಲಿಯೇ ಉಳಿದಿದ್ದರು.
ಇದರ ಜೊತೆ ಕಾರು ಚಾಲಕರು, ಮನೆಯ ಸಿಬ್ಬಂದಿ ಜೊತೆಗೂ ಬಿಎಸ್​ವೈ ಸಂಪರ್ಕಕ್ಕೆ ಬಂದಿದ್ದಾರೆ. ಈಗ ಅವರನ್ನೂ ಕೂಡ ಕ್ವಾರಂಟೈನ್​ ಮಾಡಲಾಗಿದೆ ಎನ್ನಲಾಗಿದೆ.
Published by: Rajesh Duggumane
First published: August 3, 2020, 7:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading