ಇಂದು ದಾವೋಸ್​ನಿಂದ ಸಿಎಂ ಬಿಎಸ್ ಯಡಿಯೂರಪ್ಪ ವಾಪಸ್​​​; ಪೂರ್ಣಗೊಳ್ಳಲಿದೆಯಾ ಕ್ಯಾಬಿನೆಟ್​ ವಿಸ್ತರಣೆ ಕಸರತ್ತು?

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಮಾಲೋಚನೆ ನಡೆಸಲು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆ ಸಿಎಂ ಸಮಯ ಕೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಎಂ ಮತ್ತೆ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

  • Share this:
ಬೆಂಗಳೂರು(ಜ.24): ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನವು ಮುಕ್ತಾಯವಾಗಿದ್ದು, ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ದಾವೋಸ್​ನಿಂದ ಭಾರತಕ್ಕೆ ವಾಪಸ್ ಆಗಲಿದ್ದಾರೆ. ಬಿಎಸ್​ವೈ ಆರ್ಥಿಕ  ಸಮ್ಮೇಳನದಲ್ಲಿ ಭಾಗಿಯಾಗಲು  ಕಳೆದ ಭಾನುವಾರ ದಾವೋಸ್​​ಗೆ ತೆರಳಿದ್ದರು. ಇಂದು ಮಧ್ಯಾಹ್ನ ಬೆಂಗಳೂರಿಗೆ ಬಂದಿಳಿಯಲಿರುವ ಸಿಎಂ, ಡಾಲರ್ಸ್​ ಕಾಲೋನಿಯ ತಮ್ಮ ನಿವಾಸದಲ್ಲಿಯೇ ವಿರಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಗೆ ಈಗ ಕಾಲ ಕೂಡಿ ಬರಲಿದೆ ಎನ್ನಲಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿದ್ದರು. ಸಿಎಂ ಬಿಎಸ್​ವೈ ದಾವೋಸ್​ ಪ್ರವಾಸ ಮುಗಿದ ಬಳಿಕ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಶಾ ಹೇಳಿದ್ದರು. ಅಂತೆಯೇ ಸಿಎಂ ಕೂಡ ದಾವೋಸ್​ಗೆ ತೆರಳುವ ಮುನ್ನ ಅಲ್ಲಿಂದ ಮರಳಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದರು.

ಮಂಗಳೂರು ಬಾಂಬ್​ ಪತ್ತೆ ಪ್ರಕರಣ; ಇಂದು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ವರದಿ ಸಲ್ಲಿಕೆ

ಸದ್ಯ, ಯಡಿಯೂರಪ್ಪ ಇಂದು ವಿದೇಶ ಪ್ರವಾಸದಿಂದ ಮರಳಲಿದ್ದಾರೆ. ಹೀಗಾಗಿ ಇದು ಸಚಿವಾಕಾಂಕ್ಷಿಗಳು ಸಿಎಂ ಬಿಎಸ್​ವೈ ಅವರನ್ನು ಭೇಟಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಮಾಲೋಚನೆ ನಡೆಸಲು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆ ಸಿಎಂ ಸಮಯ ಕೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿಎಂ ಮತ್ತೆ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಬಳಿಕ ನೂತನ ಶಾಸಕರೊಂದಿಗೆ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಯಡಿಯೂರಪ್ಪನವರಿಗೆ ಕ್ಯಾಬಿನೆಟ್​ ವಿಸ್ತರಣೆಯೇ ದೊಡ್ಡ ಟೆನ್ಷನ್​ ಆಗಿದ್ದು, ಅರ್ಹರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಎಲ್ಲರನ್ನೂ ಮಂತ್ರಿ ಮಾಡಿ ಎಂದು ಅರ್ಹರು ಹೇಳುತ್ತಿದ್ದಾರೆ. ಸೋತವರಿಗೂ ಮಂತ್ರಿಗಿರಿ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಸಚಿವ ಸ್ಥಾನ ಬರೀ 6 ಅಥವಾ 9 ಮಂದಿಗೆ ಎನ್ನಲಾಗುತ್ತಿದೆ. ಸಿಎಂಗೆ ಒಂದು ಕಡೆ ಅರ್ಹರ ಋಣ, ಮತ್ತೊಂದೆಡೆ ಹೈಕಮಾಂಡ್​​ ಆದೇಶ. ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಬಿಎಸ್​ವೈಗೆ ಈಗ ಸಚಿವ ಸಂಪುಟ ವಿಸ್ತರಣೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Corona Virus: ಚೀನಾದಲ್ಲಿ ಮಹಾಮಾರಿ ಕರೋನಾ ವೈರಸ್​ಗೆ 25 ಬಲಿ; ಬೆಂಗಳೂರಿಗರಿಗೂ ಕಾಡಿದ ಆತಂಕ

ಗೆದ್ದ ಎಲ್ಲರನ್ನೂ ಮಂತ್ರಿ  ಮಾಡುವುದು ಕಷ್ಟ ಎಂದು ಹೈ ಕಮಾಂಡ್ ಸಿಎಂ ಯಡಿಯೂರಪ್ಪನವರಿಗೆ ಗೆರೆ ಎಳೆದಿದೆಯಂತೆ. ಹೀಗಾಗಿ ಬಿಎಸ್​ವೈ ಹೈಕಮಾಂಡ್​ ಆದೇಶಕ್ಕೆ ದಿಕ್ಕೆಟ್ಟು ಕೂತಿದ್ದಾರೆ. 11 ಶಾಸಕರಲ್ಲಿ ಯಾರಿಗೆ ಸಿಗಲಿದೆ ಮಂತ್ರಿಭಾಗ್ಯ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಇದೇ ಕಾರಣಕ್ಕೆ ಸಂಪುಟ ವಿಸ್ತರಣೆ ಪದೇ ಪದೇ ವಿಳಂವವಾಗುತ್ತಿದೆ ಎನ್ನಲಾಗಿದೆ.

ಇದೇ ಸಮಯದಲ್ಲಿ ದೆಹಲಿ ವಿಧಾನಸಭಾ ಚುನಾವಣೆ ಇದೆ. ಹೀಗಾಗಿ ಹೈಕಮಾಂಡ್​​ ಸಂಪುಟ ವಿಸ್ತರಣೆಗೆ ಅನುಮತಿ ನೀಡುವ ಸಾಧ್ಯತೆ ಕಡಿಮೆ. ಈ ಚುನಾವಣೆ ಮುಗಿಯುವವರೆಗೂ  ಕ್ಯಾಬಿನೆಟ್​​ ವಿಸ್ತರಣೆ ಇಲ್ಲ. ಫೆಬ್ರವರಿ 11ರ ಬಳಿಕಷ್ಟೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎನ್ನುತ್ತಿವೆ ಮೂಲಗಳು.  ಇನ್ನೊಂದೆಡೆ ರಮೇಶ್​ ಜಾರಕಿಹೊಳಿ ತಂಡ ಸಿಎಂ ಬಿಎಸ್​ವೈ ಫೆಬ್ರವರಿ 1ಕ್ಕೆ ಡೆಡ್​ಲೈನ್​ ನೀಡಿದೆ. ಈಗ ಸಿಎಂ ಯಡಿಯೂರಪ್ಪ ತ್ರಿಶಂಕು ಸ್ಥಿತಿಯಲ್ಲಿದ್ದರೆ, ಅರ್ಹರು ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

 
First published: