ಭಿನ್ನಮತ ಶಮನಕ್ಕೆ ಸಿಎಂ ಮಾಸ್ಟರ್ ಪ್ಲಾನ್; ಅಸಮಾಧಾನಿತರಿಗೆ ನಿಗಮ ಮಂಡಳಿ ಸ್ಥಾನ

ಬಂಡಾಯ ಶಮನಕ್ಕೆ ಮುಂದಾಗಿರುವ ಬಿಎಸ್‌ವೈ ದೀರ್ಘ ಅವಧಿಯ ನಂತರ ಮತ್ತೆ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಮೂಲಗಳ ಪ್ರಕಾರ ಜುಲೈ ತಿಂಗಳಲ್ಲಿ ಸಂಪುಟ ವಿಸ್ತರಿಸಲಿರುವ ಬಿಎಸ್‌ವೈ ಸಂಪುಟದಿಂದ ಮೂವರಿಗೆ ಕೋಕ್‌ ನೀಡಿ ಆ ಸ್ಥಾನವನ್ನು ಭಿನ್ನಮತೀಯರ ಸ್ಟ್ರಾಂಗ್‌ ಲೀಡರ್‌ಗಳಿಗೆ ನೀಡಲಿದ್ದಾರಂತೆ.

ಸಿಎಂ ಬಿ.ಎಸ್‌. ಯಡಿಯೂರಪ್ಪ.

ಸಿಎಂ ಬಿ.ಎಸ್‌. ಯಡಿಯೂರಪ್ಪ.

 • Share this:
  ಬೆಂಗಳೂರು (ಜೂನ್ 11); ಬಿಜೆಪಿ ಪಕ್ಷದ ಒಳಗೆ ಭುಗಿಲೆದ್ದಿರುವ ಭಿನ್ನಮತ ಶಮನಕ್ಕೆ ಮುಂದಾಗಿರುವ ಸಿಎಂ ಬಿ.ಎಸ್‌. ಯಡಿಯೂರಪ್ಪ, ಜೂನ್‌ ತಿಂಗಳ ಅಂತ್ಯದ ಒಳಗಾಗಿ ಸಂಪುಟ ವಿಸ್ತರಣೆ ಮಾಡಿ, ಮೂರು ಜನರಿಗೆ ಕೋಕ್‌ ನೀಡಲಿದ್ದಾರೆ. ಆ ಮೂರು ಸ್ಥಾನವನ್ನು ಅಸಮಾಧಾನಿತ ನಾಯಕರುಗಳ ಲೀಡರ್‌ಗಳಿಗೆ ಹಾಗೂ ಉಳಿದ ಅಸಮಾಧಾನಿತರುಗಳಿಗೆ ನಿಗಮ-ಮಂಡಳಿ ಸ್ಥಾನ ನೀಡಲಿದ್ದಾರೆ ಎನ್ನಲಾಗುತ್ತಿದೆ. 

  ಬಿ.ಎಸ್.‌ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ವಹಿಸಿದ ದಿನದಿಂದ ಪಕ್ಷದಲ್ಲಿ ಭಿನ್ನಮತೀಯರ ದ್ವನಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಉಮೇಶ್‌ ಕತ್ತಿ, ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಸೇರಿದಂತೆ ಅನೇಕ ನಾಯಕರು ತೆರೆಯ ಮರೆಯಲ್ಲೇ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಅಲ್ಲದೆ, ತಮ್ಮದೇ ಒಂದು ಗುಂಪು ಕಟ್ಟಿಕೊಂಡು ಬಿಎಸ್‌ವೈ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ.

  ಹೀಗಾಗಿ ಈ ಬಂಡಾಯ ಶಮನಕ್ಕೆ ಮುಂದಾಗಿರುವ ಬಿಎಸ್‌ವೈ ದೀರ್ಘ ಅವಧಿಯ ನಂತರ ಮತ್ತೆ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಮೂಲಗಳ ಪ್ರಕಾರ ಜುಲೈ ತಿಂಗಳಲ್ಲಿ ಸಂಪುಟ ವಿಸ್ತರಿಸಲಿರುವ ಬಿಎಸ್‌ವೈ ಸಂಪುಟದಿಂದ ಮೂವರಿಗೆ ಕೋಕ್‌ ನೀಡಿ ಆ ಸ್ಥಾನವನ್ನು ಭಿನ್ನಮತೀಯರ ಸ್ಟ್ರಾಂಗ್‌ ಲೀಡರ್‌ಗಳಿಗೆ ನೀಡಲಿದ್ದಾರಂತೆ.

  ಅಲ್ಲದೆ, ಈಗಾಗಲೇ ಖಾಲಿ ಉಳಿದಿರುವ ನಿಗಮ ಮಂಡಳಿ ಪಟ್ಟಿ ಮಾಡಿಕೊಂಡಿರುವ ಬಿಎಸ್‌ವೈ ಅಸಮಾಧಾನಿತರ ಗುಂಪಿನಲ್ಲಿ ಕಾಣಿಸಿಕೊಂಡಿರುವ ಶಾಸಕರಿಗೆ ಹಂಚಲಿದ್ದಾರೆ ಈ ಮೂಲಕ ಭಿನ್ನಮತೀರ ಚಟುವಟಿಕೆಯನ್ನು ಹತ್ತಿಕ್ಕಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

  ಇದನ್ನೂ ಓದಿ : Weather Forecast: ಹವಾಮಾನ ಮುನ್ಸೂಚನೆ: ಮುಂದಿನ ಕೆಲ ದಿನ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

  ಶತಾಯಗತಾಯ ಸಿಎಂ ಖುರ್ಚಿಯನ್ನು ಉಳಿಸಿಕೊಳ್ಳಲೇಬೇಕು ಎಂದು ಮಾಸ್ಟರ್‌ ಪ್ಯ್ಲಾನ್‌ ರೂಪಿಸಿರುವ ಬಿಎಸ್‌ವೈ ಈಗಾಗಲೇ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್‌ ಅನುಮತಿ ಕೇಳಿದ್ದಾರೆ. ಹೈಕಮಾಂಡ್ ಅನುಮತಿ ನೀಡುತ್ತಿದ್ದಂತೆ ಸಂಪುಟ ವಿಸ್ತರಣೆಯಾಗಲಿದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
  First published: