ನಾಳೆ ದೆಹಲಿಗೆ ಬಿಎಸ್​ವೈ; ಎರಡು ದಿನದಲ್ಲಿ ಸಂಪುಟ ವಿಸ್ತರಣೆ ಖಚಿತ, ಉಮೇಶ್ ಕತ್ತಿಗೂ ಸಚಿವ ಸ್ಥಾನ

ಬೆಳಗಾವಿಯಲ್ಲಿ ಗೆದ್ದ ಎಲ್ಲಾ ಶಾಸಕರೂ ಸಚಿವರಾಗಲಿದ್ದಾರೆ. ಉಪ ಚುನಾವಣೆಯಲ್ಲಿದ್ದ ಗೆದ್ದವರ ಪೈಕಿ ಒಂದಿಬ್ಬರನ್ನು ಮಾತ್ರ ಕೈಬಿಡುವ ಸಾಧ್ಯತೆ ಇದೆ. ಉಳಿದಂತೆ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಉಮೇಶ್ ಸಹ ಮಂತ್ರಿಯಾಗಲಿದ್ದಾರೆ ಎಂದು ಸಿಎಂ ಬಿಎಸ್​ವೈ ತಿಳಿಸಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

  • Share this:
ಬೆಳಗಾವಿ (ಜನವರಿ 29); ಎರಡು ದಿನದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ, ಉತ್ತರ ಕರ್ನಾಟಕದ ಪ್ರಾಭಾವಿ ನಾಯಕ ಉಮೇಶ್​ ಕತ್ತಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಸ್ಮಾರ್ಟ್ ಸಿಟಿಯ ಕಂಟ್ರೋಲ್ ಕಮಾಂಡ್ ಸೆಂಟರ್ ಉದ್ಘಾಟಿಸಿ ಬಳಿಕ ಮಾತನಾಡಿರುವ ಬಿ.ಎಸ್.​ ಯಡಿಯೂರಪ್ಪ, "ನಾನು ನಾಳೆ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಿದ್ದೇನೆ. ಇನ್ನೂ ಎರಡು ದಿನದಲ್ಲಿ ಎಲ್ಲವೂ ಅಂತಿಮವಾಗಲಿದೆ.

ಬೆಳಗಾವಿಯಲ್ಲಿ ಗೆದ್ದ ಎಲ್ಲಾ ಶಾಸಕರೂ ಸಚಿವರಾಗಲಿದ್ದಾರೆ. ಉಪ ಚುನಾವಣೆಯಲ್ಲಿದ್ದ ಗೆದ್ದವರ ಪೈಕಿ ಒಂದಿಬ್ಬರನ್ನು ಮಾತ್ರ ಕೈಬಿಡುವ ಸಾಧ್ಯತೆ ಇದೆ. ಉಳಿದಂತೆ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಉಮೇಶ್ ಸಹ ಮಂತ್ರಿಯಾಗಲಿದ್ದಾರೆ. ಆದರೆ, ಯಾರಿಗೂ ಡಿಸಿಎಂ ಪಟ್ಟ ನೀಡುವ ಪ್ರಶ್ನೆಯೇ ಇಲ್ಲ. ಇನ್ನೂ ಪ್ರಸ್ತುತ ಸಂಪುಟದಲ್ಲಿರುವ ಯಾರನ್ನೂ ಕೈಬಿಡುವ ಪ್ರಶ್ನೆಯೂ ಇಲ್ಲ" ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಕೊನೆಗೂ ಕಾವೇರಿ ನಿವಾಸ ಖಾಲಿ ಮಾಡಿದ ಸಿದ್ದರಾಮಯ್ಯ; ತನ್ನ ಅದೃಷ್ಟದ ಬಂಗಲೆಗೆ ಶಿಫ್ಟ್
First published: