HOME » NEWS » State » KARNATAKA CM BS YEDIYURAPPA IN ANOTHER TROUBLE AFTER LEADERSHIP CHANGE DEBATE WHICH IS THE NEW CASE SCT

BS Yediyurappa: ಬಿ.ಎಸ್. ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ; ಸಿಎಂ ಕುರ್ಚಿಗೆ ಕಂಟಕ ತರುತ್ತಾ ಹಳೇ ಕೇಸ್?

Karnataka CM BS Yediyurappa | ಸಿಎಂ ಯಡಿಯೂರಪ್ಪನವರಿಗೆ ಮತ್ತೊಮ್ಮೆ ಸಂಕಷ್ಟ ತಂದಿಟ್ಟಿರುವ ವಿಷಯವಾದರೂ ಯಾವುದು? ಯಡಿಯೂರಪ್ಪ ಸಿಕ್ಕಿಬಿದ್ದಿದ್ದೆಲ್ಲಿ? ಇಲ್ಲಿದೆ ಪೂರ್ತಿ ಮಾಹಿತಿ...

news18-kannada
Updated:June 15, 2021, 12:36 PM IST
BS Yediyurappa: ಬಿ.ಎಸ್. ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ; ಸಿಎಂ ಕುರ್ಚಿಗೆ ಕಂಟಕ ತರುತ್ತಾ ಹಳೇ ಕೇಸ್?
ಸಿಎಂ ಯಡಿಯೂರಪ್ಪ
  • Share this:
ನವದೆಹಲಿ (ಜೂನ್ 15): ಕರ್ನಾಟಕದಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಗದ್ದಲದಿಂದ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಸಮಸ್ಯೆಯಿಂದ ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಕೆಳಗಿಳಿಯೋದು ಖಚಿತವೆಂಬ ಮಾತೂ ಕೇಳಿಬರುತ್ತಿವೆ. ಹಾಗಾದರೆ, ಯಡಿಯೂರಪ್ಪನವರಿಗೆ ಮತ್ತೊಮ್ಮೆ ಸಂಕಷ್ಟ ತಂದಿಟ್ಟಿರುವ ವಿಷಯವಾದರೂ ಯಾವುದು? ಯಡಿಯೂರಪ್ಪ ಸಿಕ್ಕಿಬಿದ್ದಿದ್ದೆಲ್ಲಿ? ಇಲ್ಲಿದೆ ಪೂರ್ತಿ ಮಾಹಿತಿ...

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮತ್ತೊಂದು ಸಂಕಟ ಶುರುವಾಗಿದ್ದು, ಇದೇ ಸಮಸ್ಯೆ ಸಿಎಂ ಯಡಿಯೂರಪ್ಪ ಕುರ್ಚಿಗೆ ಕಂಟಕ ತರುತ್ತಾ? ಎಂಬ ಅನುಮಾನವೂ ಹೆಚ್ಚಾಗಿದೆ. ಹಳೆಯ ಕೇಸ್​ನಿಂದ ಸಿಎಂ ಯಡಿಯೂರಪ್ಪನವರಿಗೆ ಹೊಸ ಸಮಸ್ಯೆ ಶುರುವಾಗಿದೆ. ಅಧಿಕಾರ ದುರುಪಯೋಗ ಮಾಡಿಕೊಂಡ‌ ಗುರುತರ ಆರೋಪ ಎದುರಿಸುತ್ತಿರುವ ಸಿಎಂ ಯಡಿಯೂರಪ್ಪನವರಿಗೆ ಆ ಹಳೇ ಕೇಸ್​ ಸಂಕಷ್ಟ ತಂದಿರುವ ಸಾಧ್ಯತೆ ಹೆಚ್ಚಾಗಿದೆ.

ಸಿಎಂ ಕುಟುಂಬದ ವಿರುದ್ಧ ಅಕ್ರಮ‌ ಹಣ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಮತ್ತವರ ಕುಟುಂಬದವರ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ದೂರು ನೀಡಿದ್ದಾರೆ. ಇಂದು ನವದೆಹಲಿಯ ಇಡಿ ಕಚೇರಿಗೆ ತೆರಳಿರುವ ಟಿ.ಜೆ. ಅಬ್ರಹಾಂ, PMLA (ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್) ಅಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: BS Yediyurappa: ಅರುಣ್​​ಸಿಂಗ್​ ಆಗಮನಕ್ಕೂ ಮುನ್ನ ಬಿಎಸ್​ವೈ ಭೇಟಿಯಾದ ಆಪ್ತ ಬಣ; ಕುತೂಹಲ ಮೂಡಿಸಿದ ಸಭೆ

ಸದ್ಯ ಯಡಿಯೂರಪ್ಪ ಮತ್ತವರ ಕುಟುಂಬದವರ ವಿರುದ್ದ ದೂರು ನೀಡಿರುವ ಅಬ್ರಹಾಂ ಅವರ ಆರೋಪದ ಪ್ರಕಾರ, ಸಿಎಂ ಯಡಿಯೂರಪ್ಪ ಅವರೇ ಆರೋಪಿ ನಂಬರ್ 1. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಆರೋಪಿ ನಂಬರ್ 2. ಯಡಿಯೂರಪ್ಪನವರ ಮೊಮ್ಮಗ ಶಶಿಧರ ಮರಡಿ ಆರೋಪಿ ನಂಬರ್ 3. ಯಡಿಯೂರಪ್ಪನವರ ಮಗಳು ಪದ್ಮಾವತಿಯವರ ಅಳಿಯ ಸಂಜಯ್ ಆರೋಪಿ ನಂಬರ್ 4. ಡೆವೆಲಪರ್ ಚಂದ್ರಕಾಂತ್ ರಾಮಲಿಂಗಂ ಆರೋಪಿ ನಂಬರ್ 5. ಯಡಿಯೂರಪ್ಪನವರ ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ ಆರೋಪಿ ನಂಬರ್ 6. ಒಟ್ಟು 6 ಜನರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಟಿ.ಜೆ ಅಬ್ರಹಾಂ ದೂರು ನೀಡಿದ್ದಾರೆ.

ದೂರು ರಿಜಿಸ್ಟರ್ ಆದರೆ ಸಂಕಟಗಳ ಸರಮಾಲೆ ಶುರುವಾಗುವ ಸಾಧ್ಯತೆಯಿದೆ. ಯಡಿಯೂರಪ್ಪ ಅವರೇ A-1 ಆರೋಪಿ ಆಗಿರುವುದರಿಂದ ಅವರ ಸಿಎಂ ಕುರ್ಚಿಗೂ ಕಂಟಕವಾಗಬಹುದು. ಯಡಿಯೂರಪ್ಪ ಮತ್ತು ಇತರೆ ಆರೋಪಿಗಳನ್ನು ವಿಚಾರಣೆಗೆ ಕರೆಯಬಹುದು. ಸಮನ್ಸ್ ನೀಡಿದರೆ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಮುಂದುವರೆಯುವುದು ಕಷ್ಟ ಎನ್ನಲಾಗುತ್ತಿದೆ.

ಇದನ್ನೂ ಓದಿ: Bangalore: ಬೆಂಗಳೂರು ಪ್ರವೇಶಿಸುವವರಿಗೆ ಗಡಿಯಲ್ಲೇ ಕೋವಿಡ್ ಟೆಸ್ಟ್!; ಬಿಬಿಎಂಪಿಯಿಂದ ಹೊಸ ಪ್ಲಾನ್Yಇನ್ನು, ನಾಯಕತ್ವ ಬದಲಾವಣೆ ಸಂಬಂಧ ಯಡಿಯೂರಪ್ಪನವರ ಪರ-ವಿರೋಧಿ ಬಣದ ನಡುವಿನ ಗಲಾಟೆ ಬಗೆಹರಿಯದಿರುವ ಕಾರಣ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈ ವಾರ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಅರುಣ್ ಸಿಂಗ್ ಅವರಿಗೆ ಒತ್ತಡ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ರಾಜ್ಯಕ್ಕೆ ಆಗಮಿಸಲಿರುವ ಅರುಣ್ ಸಿಂಗ್ ಅವರನ್ನು ಭೇಟಿಯಾಗಲು ಯಡಿಯೂರಪ್ಪ ಪರ ಬಣದವರು ಸಿದ್ಧತೆ ಮಾಡಿಕೊಂಡಿದ್ದಾರೆ. ಅತ್ತ ಅರವಿಂದ್ ಬೆಲ್ಲದ್ ಕೂಡ ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ಭೇಟಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅರವಿಂದ್ ಬೆಲ್ಲದ್ ಅವರೇ ಕರ್ನಾಟಕದ ಮುಂದಿನ ಸಿಎಂ ಎಂಬ ಚರ್ಚೆಗಳು ನಡೆಯುತ್ತಿವೆ.
Youtube Video

ಆದರೆ, ಸದ್ಯಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ ಎಂದಿರುವ ಬಿಜೆಪಿ ಹೈಕಮಾಂಡ್ ಕರ್ನಾಟಕದ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ಶಮನಗೊಳಿಸುವ ಅರುಣ್ ಸಿಂಗ್ ಅವರನ್ನು ಕಳುಹಿಸಿದ್ದಾರೆ. ಹೈಕಮಾಂಡ್ ಭರವಸೆಯಿಂದ ಕೊಂಚ ನಿರಾಳವಾಗಿರುವ ಯಡಿಯೂರಪ್ಪನವರಿಗೆ ಹಳೇ ಕೇಸ್​ನಿಂದ ಮತ್ತೆ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ.

(ವರದಿ: ಧರಣೀಶ್ ಬೂಕನಕೆರೆ)
Published by: Sushma Chakre
First published: June 15, 2021, 12:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories