HOME » NEWS » State » KARNATAKA CM BS YEDIYURAPPA HITS BACK TO SIDDARAMAIAH IN KARNATAKA ASSEMBLY SESSION TODAY SCT

BS Yediyurappa: ಸಿದ್ದರಾಮಯ್ಯನವರೇ, ಒಂದು ದಿನ ನೀವೇ ನನ್ನ ಕೆಲಸವನ್ನು ಹೊಗಳುತ್ತೀರಿ; ಸಿಎಂ ಯಡಿಯೂರಪ್ಪ

Karnataka Assembly Session: ಸವಾಲುಗಳೇ ನನ್ನನ್ನು ಗಟ್ಟಿಗೊಳಿಸುತ್ತಿದೆ. ಹಲವು ವರ್ಷಗಳಿಂದ ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಲೇ ಇದ್ದೇನೆ. ಆ ಸವಾಲುಗಳ ನಡುವೆ 4ನೇ ಬಾರಿ ಸಿಎಂ ಆಗಿದ್ದೇನೆ. ಪ್ರತಿಯೊಂದು ಸವಾಲುಗಳನ್ನು ಸ್ವಯಂ ಶಕ್ತಿಯಿಂದ ಎದುರಿಸಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

news18-kannada
Updated:February 5, 2021, 11:45 AM IST
BS Yediyurappa: ಸಿದ್ದರಾಮಯ್ಯನವರೇ, ಒಂದು ದಿನ ನೀವೇ ನನ್ನ ಕೆಲಸವನ್ನು ಹೊಗಳುತ್ತೀರಿ; ಸಿಎಂ ಯಡಿಯೂರಪ್ಪ
ಸಿದ್ದರಾಮಯ್ಯ-ಯಡಿಯೂರಪ್ಪ.
  • Share this:
ಬೆಂಗಳೂರು (ಫೆ. 5): ವಿಧಾನಸಭಾ ಅಧೀವೇಶನದ ಕೊನೆಯ ದಿನವಾದ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯನವರ ನಡುವೆ ಸಾಕಷ್ಟು ಚರ್ಚೆ, ವಾದಗಳು ನಡೆದವು. ಆಗ, ಸಿದ್ದರಾಮಯ್ಯನವರೇ ನೀವು ಏನು ಹೇಳುತ್ತಿದ್ದೀರೋ ಅದನ್ನೆಲ್ಲವನ್ನು ನಾನು ಮಾಡುತ್ತೇನೆ. ನೀವೇ ಒಂದು ದಿನ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಆ ರೀತಿ ನೀವು ತೃಪ್ತಿ ಪಡೋ ರೀತಿ ನಾನು ಅಭಿವೃದ್ಧಿ ಕೆಲಸ ಮಾಡುತ್ತೇನೆ ನೋಡಿ ಎಂದು ನಗುತ್ತಲೇ ಸಿದ್ದರಾಮಯ್ಯನವರಿಗೆ ಸಿಎಂ ಯಡಿಯೂರಪ್ಪ ಉತ್ತರಿಸಿದ್ದಾರೆ.

ಸವಾಲುಗಳನ್ನು ಎದುರಿಸಲು ನನಗೆ ಎಲ್ಲಿಲ್ಲದ ಉತ್ಸಾಹ. ಸವಾಲುಗಳೇ ನನ್ನನ್ನು ಗಟ್ಟಿಗೊಳಿಸುತ್ತಿದೆ. ಹಲವು ವರ್ಷಗಳಿಂದ ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಲೇ ಇದ್ದೇನೆ. ಆ ಸವಾಲುಗಳ ನಡುವೆ 4ನೇ ಬಾರಿ ಸಿಎಂ ಆಗಿದ್ದೇನೆ. ಈಗಲೂ ನನ್ನೆದರು ದೊಡ್ಡ ಸವಾಲುಗಳಿವೆ. ಪ್ರತಿಯೊಂದು ಸವಾಲುಗಳನ್ನು ಸ್ವಯಂ ಶಕ್ತಿಯಿಂದ ಎದುರಿಸಿಕೊಂಡು ಬಂದಿದ್ದೇನೆ. ಅಧಿಕಾರ ಸಿಕ್ಕಾಗ, ಹಳೆಯದ್ದನ್ನೆಲ್ಲಾ ಮರೆತು ದ್ವೇಷದ ರಾಜಕಾರಣ ಮರೆತು, ಒಳ್ಳೆಯದನ್ನು ಮಾಡಬೇಕು ಎಂಬುದು ರಾಜಧರ್ಮ ಎಂದು ನಾನು ಭಾವಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭಾ ಅಧಿವೇಶನದಲ್ಲಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಮನಸಿಗೆ ಬಂದಂತೆ ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಅವರಿಂದ ಅಭಿವೃದ್ಧಿ ಬಗ್ಗೆ ಮಾತ್ರ ಟೀಕೆ ಬಗ್ಗೆ ನಿರೀಕ್ಷೆ ಮಾಡಿದ್ದೆ. ಆದರೆ ಅವರು ಸರ್ಕಾರದ ಬಗ್ಗೆಯೂ ಮಾತನಾಡಿದ್ದಾರೆ. ಹೀಗಾಗಿ, ನಾನು ಅನಿವಾರ್ಯವಾಗಿ ಈ ಬಗ್ಗೆ ಮಾತಾಡಬೇಕಾಗಿದೆ. ಮೈತ್ರಿ ಸರ್ಕಾರದಲ್ಲಿ ಯಾವ ರೀತಿಯ ಆಡಳಿತ ನಡೆಯಿತು ಎಂದು ನಾನು ಹೊಸದಾಗಿ ಹೇಳಬೇಕಿಲ್ಲ. ಮೈತ್ರಿ ಸರ್ಕಾರದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದೆ, ಅನೇಕ ಕಿರುಕುಳದಿಂದ ನಾನು ತೊಂದರೆ ಅನುಭವಿಸಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲದೆ ಇದ್ದರೂ ಜೆಡಿಎಸ್ ಜೊತೆ ಕಾಂಗ್ರೆಸ್ ಸರ್ಕಾರ ಮಾಡಿದರು. ಬಿಜೆಪಿಗೆ ಅಧಿಕಾರ ಸಿಗಬಾರದು ಎಂಬ ಕಾರಣಕ್ಕೆ ಸರ್ಕಾರ ಮಾಡಿದರು. ಆದರೆ, ಕೊನೆಗೆ ಕುಮಾರಸ್ವಾಮಿಯವರಿಗೆ ಅಧಿಕಾರ ಮಾಡಲು ಬಿಡದೆ ಎಷ್ಟು ತೊಂದರೆ ಕೊಟ್ಟರು ಎಂಬುದನ್ನು ನಾವು ನೋಡಿದ್ದೇವೆ. ಸರ್ಕಾರದ ರಚನೆ ವೇಳೆ ನಾನು ಮಂತ್ರಿ ಮಂಡಲ ಮಾಡೋಕೆ ಆಗಿರಲಿಲ್ಲ. ಆಗ ರಾಜ್ಯದಲ್ಲಿ ಭೀಕರ ನೆರೆ ಹಾವಳಿ ಉಂಟಾಗಿತ್ತು. ಆದರೂ ನಾನೊಬ್ಬನೇ ಓಡಾಡಿ ಪ್ರವಾಹ ಪರಿಹಾರ ಕಾರ್ಯಗಳನ್ನು ದೇವರು ಮೆಚ್ಚುವ ರೀತಿ ಕೆಲಸ ಮಾಡಿದ್ದೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಬಸವಕಲ್ಯಾಣಕ್ಕೆ ಇಡೀ ದೇಶದ ಜನರು ಬಂದು ಹೋಗಬೇಕು. ಭವ್ಯ ಅನುಭವ ಮಂಟಪ ಆಗಬೇಕು ಎಂಬುದು ಅಲ್ಲಿರುವ ಜನರ ಆಪೇಕ್ಷೆಯಾಗಿದೆ. ಅದಕ್ಕೆ ಈಗಾಗಲೇ 200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸುಮಾರು 500ರಿಂದ 600 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದೆ. ಇನ್ನೂ ಎರಡು ವರ್ಷಗಳಲ್ಲಿ ಪೂರ್ಣ ಆಗಲಿದೆ. ನಮ್ಮ ಆಳ್ವಿಕೆಯಲ್ಲಿಯೇ ಇದನ್ನು ಲೋಕಾರ್ಪಣೆ ಮಾಡುತ್ತೇವೆ ಎಂದ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ ಕುಮಾರಸ್ವಾಮಿಗೆ ಆತಿಥ್ಯ ನೀಡಿದ ಬಿಜೆಪಿ ಮುಖಂಡನಿಗೆ ಪಕ್ಷದಿಂದ ಉಚ್ಛಾಟನೆ ಶಾಕ್..!

ಕಾಂಗ್ರೆಸ್​ನವರಿಗೆ ಹೀನಾಯ ಪರಿಸ್ಥಿತಿ ಬಂದಿರೋದು ಲೋಕಸಭೆ ಚುನಾವಣೆಯಿಂದ. ಉಪ‌ ಚುನಾವಣೆಯಲ್ಲೂ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ. ಈ ಹಿಂದೆ ಠೇವಣಿ ಕಳೆದುಕೊಂಡ ಕ್ಷೇತ್ರದಲ್ಲಿ ಶಿರಾದಲ್ಲಿ ದೊಡ್ಡ ಅಂತರದಿಂದ ಗೆದ್ದಿದ್ದೇವೆ. ನಿಮಗೆ ಇನ್ನು ಎಲ್ಲಿಯೂ ಕೂಡ ಗೆಲ್ಲುವುದಕ್ಕೆ ಬಿಡುವುದಿಲ್ಲ ಎಂದು ಈಗಾಗಲೇ ಕಾಂಗ್ರೆಸ್​ನವರಿಗೆ ಹೇಳಿದ್ದೆವು. ಅದರಂತೆ ಮುಂದೆ ಬರುವ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಮ್ಮ ಸರ್ಕಾರ ಇದ್ದಾಗ ಹೆಬ್ಬಾಳ ಬಿಟ್ಟು ಎಲ್ಲಾ ಕ್ಷೇತ್ರವನ್ನು ಗೆದ್ದಿದ್ದೇವೆ. ಸುಮ್ಮನೆ ಅವೆಲ್ಲವನ್ನೂ ಏನೂ ಹೇಳಬೇಡಿ. ಅಧಿಕಾರದಲ್ಲಿ ಇದ್ದಾಗ ಯಾವ ರೀತಿ ಗೆಲ್ತಾರೆ ಎಂದು ಗೊತ್ತಿದೆ. ನಾವು ಅಧಿಕಾರ ಇದ್ದಾಗ ನೀವು ಉಪ ಚುನಾವಣೆಗಳಲ್ಲಿ ಸೋತಿಲ್ವಾ? ಎಂದು ಪ್ರಶ್ನಿಸಿದ್ದಾರೆ.ಸಿದ್ದರಾಮಯ್ಯನವರ ಮಾತಿಗೆ ಮತ್ತೆ ತಿರುಗೇಟು ನೀಡಿದ ಸಿಎಂ ಯಡಿಯೂರಪ್ಪ, ಇತ್ತೀಚಿನ ಚುನಾವಣೆ ಯಲ್ಲಿ ದಯನೀಯ ಸೋಲು ಕಂಡಿದ್ದೀರಿ. ಈ ಚುನಾವಣೆಯಿಂದ ಕಾಂಗ್ರೆಸ್ ನಾಯಕತ್ವ ಕಳೆದುಕೊಂಡಿದೆ ಎಂದು ಗೊತ್ತಾಗುತ್ತಿದೆ ಎಂದಿದ್ದಾರೆ.

ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಹಾಗಿದ್ದರೆ ಸರ್ಕಾರ ವಿಸರ್ಜನೆ ಮಾಡಿ ಬನ್ನಿ. ಎಲ್ಲರೂ ಮತ್ತೆ ಚುನಾವಣೆಗೆ ಹೋಗೋಣ ಎಂದಿದ್ದಾರೆ. ಈ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ ಉಂಟಾಯಿತು.
Published by: Sushma Chakre
First published: February 5, 2021, 11:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories